Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೀನಿಯರ್ ವಿದ್ಯಾರ್ಥಿ ಜೊತೆ ಜೂನಿಯರ್ ವಿದ್ಯಾರ್ಥಿನಿಯ ನೃತ್ಯ, ಕೊನೆಯ ಟ್ವಿಸ್ಟ್ ಇದೆಯಲ್ಲಾ ಹಾರ್ಟ್ ಬ್ರೇಕಿಂಗ್: ವೀಡಿಯೋ ವೈರಲ
ಕಾಲೇಜ್ ದಿನಗಳು ಪ್ರತಿಯೊಬ್ಬರ ಬದುಕಿನಲ್ಲಿ ಗೋಲ್ಡನ್ ಟೈಮ್ ಆಗಿರುತ್ತದೆ. ಕಾಲೇಜಿನಲ್ಲಿ ಓದು ಕೆಲವೊಂದು ತಮಾಷೆಯ ಪ್ರಕರಣಗಳು ನಮ್ಮ ನೆನಪಿನಲ್ಲಿ ಸದಾ ಇರುತ್ತದೆ, ಆಗಾಗ ಆ ನೆನಪುಗಳು ಸಮುದ್ರದ ಅಲೆಗಳು ತೀರಕ್ಕೆ ಬಂದು ಅಪ್ಪಳಿಸಿದಂತೆ ತುಂಬಾ ಹಿತವಾಗಿರುತ್ತದೆ. ಆಗಸ್ಟ್ 19ಕ್ಕೆ ರಕ್ಷಾ ಬಂಧನ ಆಚರಿಸಲಾಯ್ತು, ಇದೀಗ ಅದಕ್ಕೆ ಸಂಬಂಧಿಸಿದ ವೀಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಐಸ್ ಬ್ರೇಕಿಂಗ್ ವೀಡಿಯೋ ಸಕತ್ ಕ್ಯೂಟ್ ಇದೆ.

ಸೀನಿಯರ್ ವಿದ್ಯಾರ್ಥಿ ಜೊತೆ ಜೂನಿಯರ್ ವಿದ್ಯಾರ್ಥಿಯ ನೃತ್ಯ, ಕೊನೆಯ ಟ್ವಿಸ್ಟ್ ಮಾತ್ರ ಸೂಪರ್
ಸೀನಿಯರ್ ವಿದ್ಯಾರ್ಥಿ ಬಳಿ ಬಂದ ಕ್ಯೂಟ್ ಆದ ಜೂನಿಯರ್ ವಿದ್ಯಾರ್ಥಿ ಕೈ ಹಿಡಿದು ಡ್ಯಾನ್ಸ್ ಮಾಡಲಾರಂಭಿಸಿದರೆ ಯಾವ ಸಿನಿಮಾದ ಕಾಲೇಜ್ ಸೀನ್‌ಗಿಂತ ಕಡಿಮೆಯಿಲ್ಲ ಅಲ್ವಾ, ಅಲ್ಲಿದ್ದ ಗುಂಪು ಓಹೋ ಎಂದು ಚಿಯರ್ಸ್ ಮಾಡುತ್ತಿತ್ತು, ಆ ಜೋಡಿಯ ನೃತ್ಯ ತುಂಬಾನೇ ಆಕರ್ಷಕವಾಗಿತ್ತು, ಆ ವಿದ್ಯಾರ್ಥಿಗೂ ಖುಷಿಯೋ ಖುಷಿ, ಮನಸ್ಸಿನಲ್ಲಿ ಭಾವನೆಗಳು ದೀಪಾವಳಿಯಲ್ಲಿ ಹೂ ಕುಂಡಗಳನ್ನು ಸಿಡಿಸಿದಾಗ ವರ್ಣ ರಂಜಿತವಾಗಿ ಕಾಣಿಸಬಹುದೆಂಬ ಕಲ್ಪನೆ, ಅಷ್ಟರಲ್ಲಿ ಅಯ್ತು ಟುಸ್ ಪಟಾಕಿ... ಪಟಾಕಿ ಸಿಡಿದು ಸುಂದರವಾಗಿ ಫ್ಲವರ್ ಪೋಟ್ ಅಥವಾ ಕಾಮನಬಿಲ್ಲು ಮೂಡಬಹುದೆಂದಬ ನಿರೀಕ್ಷೆಯಲ್ಲಿದ್ದವನ ಎದೆಗೆ ಚುಚ್ಚಿದಂಥ ನೋವು, ಏಕೆಂದರೆ ಆ ಹುಡುಗಿ ಇವನ ಕೈ ಹಿಡಿದು ಹ್ಯಾಪಿ ರಕ್ಷಾ ಬಂಧನ ಎಂದು ಹೇಳಬೇಕೆ?
ಪಾಪ ಆ ಹುಡುಗನ ಮನಸ್ಸಿಗೆ ಹೇಗಾಗಿರಬೇಡ ಎಂದು ಕೆಲವರು ಕಕಮೆಮಟ್ ಹಾಕಿದರೆ ಇನ್ನು ಕೆಲವರು ಐಸ್ ಬ್ರೇಕಿಂಗ್ ಡ್ಯಾನ್ಸ್ ಎಂದಿದ್ದಾರೆ. ಇನ್ನೊಬ್ಬರು ಪಾಪ ಕೊನೆಯಲ್ಲಿ ಅವನ ಎಕ್ಸ್‌ಪ್ರೆಷನ್ ನೋಡಿದಾಗ ಅಯ್ಯೋ ಅನಿಸಿತು ಎಂದು ಕಮೆಂಟ್ ಮಾಡಿದ್ದಾರೆ. ಕೊನೆಯಲ್ಲಿ ಅವನು ಅವಳ ಕೈ ಬಿಟ್ಟ ರೀತಿಯಿದೆಯಲ್ಲಾ..
ಇನ್ನೊಬ್ಬರಂತೂ ಪಾಪ ಅ ಹುಡುಗನಿಗೆ ಬ್ಯುಸ್‌ನೆಸ್ ಐಡಿಯಾಯೆಲ್ಲಾ ನೀಡುತ್ತಿದ್ದಾರೆ, ಅದು ಇನ್ನೂ ಫನ್ನಿ ಅನಿಸುವುದು
ಒಬ್ಬ ಯೂಸರ್ ಹೇಳುತ್ತಾರೆ, ಬ್ರೋ ದೆಶ ಬಿಟಟ್ಟು ಹೋಗಿ ಹೊಸ ಬದುಕು ಪ್ರಾರಂಭಿಸು, ಬಿಲಿಯನಿರ್ ಆಗು, ಹಣ, ಆಸ್ತಿ, ಕೀರ್ತಿ ಎಲ್ಲಾ ಸಂಪಾದಿಸು, ಆದರೆ ಮಾತ್ರ ಈ ಗಾಯ ಒಣಗಲು ಸಾಧ್ಯ. ಈ ವೈರಲ್ ಡ್ಯಾನ್ಸ್ 13 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ.
ರಕ್ಷಾ ಬಂಧನ ಕಾಲೇಜ್ ಹುಡುಗರು ತುಂಬಾ ಭಯ ಪಡುವ ದಿನ
ಪ್ರೇಮಿಗಳ ದಿನದಂದು ಕಾಲೇಜು ಹೆಣ್ಮಕ್ಕಳಿಗೆ ಸ್ವಲ್ಪ ಆತಂಕವಿರುತ್ತದೆ, ಯಾರಾದರೂ ನನಗೆ ಲವ್ ಪ್ರಪೋಸ್ ಮಾಡಿದರೇ ಎಂಬ ಆತಂಕ, ಇದಕ್ಕಿಂತ ಡಬಲ್ ಆತಂಕ ರಕ್ಷಾ ಬಂಧನದಂದು ಕಾಲೇಜು ಹುಡುಗರಿಗೆ ಇರುತ್ತದೆ. ತನ್ನ ಕ್ರಷ್ ಬಂದು ರಾಕಿ ಕಟ್ಟಿ ಕಟ್ಟಿ ಬಿಟ್ಟರೆ ಎಂಬ ಆತಂಕವದು. ಈ ಹುಡುಗ ಕೂಡ ಅಷ್ಟೇ ಅವು ಕೈ ಹಿಡಿದು ಡ್ಯಾನ್ಸ್‌ಗೆ ಕರೆದಾಗ ಖುಷಿ ಖುಷಿಯಿಂದ ಬಂದ, ಅಷ್ಟೂ ವಿದ್ಯಾರ್ಥಿಗಳ ಎದುರಿನಲ್ಲಿ ಹ್ಯಾಪಿ ರಕ್ಷಾ ಬಂಧನ ಎಂದರೆ ಅವನಿಗೆ ಎಷ್ಟು ಬೇಸರವಾಗಿರಬೇಡ ಅಲ್ವಾ?



Click it and Unblock the Notifications
