Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನ21-ಡಿ5ರ ನಡುವೆ ಭೂಮಿಗೆ ಹತ್ತಿರವಾಗುತ್ತೆ ವಿಚಿತ್ರ ವಸ್ತು..! ವಿಜ್ಞಾನಿಗಳಿಗೂ ಅಚ್ಚರಿ!
ಆಗಸದಲ್ಲಿ ಎಷ್ಟೊಂದು ವಿಸ್ಮಯಗಳು ನಡೆಯುತ್ತವೆ ಅನ್ನೋದನ್ನು ನಾವು ಊಹಿಸಲು ಕೂಡ ಸಾಧ್ಯವಾಗೋದಿಲ್ಲ. ಅದ್ರಲ್ಲು ಒಂದೊಂದು ಅಚ್ಚರಿಯ ವಿದ್ಯಮಾನಗಳು ನಮಗೆ ಅಚ್ಚರಿ ತರುವುದು ಖಚಿತ. ಹಾಗೆ ಕೆಲವೊಂದು ವಿಚಾರಗಳು ವಿಜ್ಞಾನಿಗಳಿಗೂ ಅಚ್ಚರಿ ಮೂಡಿಸುತ್ತವೆ. ಅದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ತಲೆ ಕೆಡಿಸಿಕೊಳ್ಳುತ್ತಾರೆ.
ಹಾಗೆ ಈಗ ಹಾರ್ವರ್ಡ್ ವಿಜ್ಞಾನಿಯೊಬ್ಬರು ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದು, ಭೂಮಿಯ ಕಡೆಗೆ ವಿಚಿತ್ರ ವಸ್ತುವೊಂದು ವೇಗವಾಗಿ ಚಲಿಸುತ್ತಿದೆ ಎಂದಿದ್ದಾರೆ. 3I/Atlas ಎಂದು ಹೆಸರಿಸಲಾದ ಈ ವಸ್ತು ವೈಜ್ಞಾನಿಕ ಚರ್ಚೆಗೆ ನಾಂದಿ ಹಾಡಿದೆ. ಹಾರ್ವರ್ಡ್‌ನ ಪ್ರಮುಖ ಪ್ರಾಧ್ಯಾಪಕರೊಬ್ಬರು ಇದು ನಮ್ಮ ಗ್ರಹವನ್ನು ಉಳಿಸುವ ಅಥವಾ ನಾಶಮಾಡುವ ಸಾಮರ್ಥ್ಯವಿರುವ ಅನ್ಯಲೋಕದ ಬಾಹ್ಯಾಕಾಶ ನೌಕೆಯಾಗಿರಬಹುದು ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಈ ವಸ್ತುವನ್ನು ಜುಲೈ 1 2025ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಯಿತು. ಪ್ರಸ್ತುತ ಅದು ಗಂಟೆಗೆ ಅಂದಾಜು 1,35,000 ಮೈಲಿ ವೇಗದಲ್ಲಿ ಚಲಿಸುತ್ತಿದೆ. ಅಚ್ಚರಿ ವಿಚಾರ ಏನೆಂದರೆ ನಮ್ಮ ಸೌರವ್ಯೂಹದ ಒಳಗೆ ಪ್ರವೇಶಿಸಿರುವ ಹಾಗೆ ಈ ವಸ್ತು ಹಾದು ಹೋಗುತ್ತಿದೆ ಎಂದು ನಾಸಾ ಕೂಡ ತಿಳಿಸಿದ. ಇದು ಅಕ್ಟೋಬರ್ 30ರಂದು ಸೂರ್ಯನಿಗೆ ಅತ್ಯಂತ ಸಮೀಪಕ್ಕೆ ಅಂದರೆ 130 ಮಿಲಿಯನ್ ಮೈಲಿ ದೂರಕ್ಕೆ ಬರಲಿದೆ.
ಹಲವು ವರ್ಷಗಳಿಂದ ಆಕಾಶಕಾಯ, ಧೂಮಕೇತುಗಳ ಅಧ್ಯಯನ ನಡೆಸಿರುವ ಹಾರ್ವರ್ಡ್ ಖಗೋಳಶಾಸ್ತ್ರಜ್ಞ ಅವಿ ಲೋಬ್, 3I/Atlas ಕೇವಲ ಧೂಮಕೇತು ಅಥವಾ ಕ್ಷುದ್ರಗ್ರಹಕ್ಕಿಂತ ಹೆಚ್ಚಾಗಿರಬಹುದು ಎಂದು ನಂಬುತ್ತಾರೆ. ಆರ್ಥರ್ ಸಿ ಕ್ಲಾರ್ಕ್ ಅವರ ವೈಜ್ಞಾನಿಕ ಕಾಲ್ಪನಿಕ ಕ್ಲಾಸಿಕ್ 'ರೆಂಡೆಜ್ವಸ್ ವಿಥ್ ರಾಮ್ ದೊಂದಿಗೆ ಹೋಲಿಕೆ ಹೊಂದಿದೆ.
ಈ ವಸ್ತು ನಮಗೆ ಸಹಕಾರಿಯಾಗಿಯೂ ಇಲ್ಲವೆ ವಿನಾಶಕಾರಿಯಾಗಿಯೂ ಪರಿಣಮಿಸಬಹುದು. ಹೀಗಾಗಿ ನಾವು ಎರಡು ಸನ್ನಿವೇಶಗಳಿಗೂ ಸಿದರಾಗಿರಬೇಕು ಎಂದಿದ್ದಾರೆ. ಎಲ್ಲಾ ಅನ್ಯಲೋಕದ ವಸ್ತುಗಳು ಕೇವಲ ಬಂಡೆಗಳೆಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಲೋಬ್ ಅವರ ಲೆಕ್ಕಾಚಾರದ ಪ್ರಕಾರ ಈ ವಸ್ತುವು ನವೆಂಬರ್ 21 ಮತ್ತು ಡಿಸೆಂಬರ್ 5ರ ನಡುವೆ ಭೂಮಿಯ ಸಮೀಪ ಬರಲಿದೆ ಎಂದು ಅಂದಾಜಿಸಲಾಗಿದೆ.
ನಾಸಾ ಅಂದಾಜಿನ ಪ್ರಕಾರ ಈ ವಸ್ತುವು 20 ರಿಂದ 24 ಕಿ.ಮೀ ಗಾತ್ರ ಹೊಂದಿದ್ದೆ. ಇದು 2017ರಲ್ಲಿ ಪತ್ತೆಯಾಗಿದ್ದ ಸಿಗಾರ್ ಆಕಾರದ ಔಮುವಾಮುವಾ ಎಂಬ ವಸ್ತುವಿಗಿಂತ ಸುಮಾರು 200 ಪಟ್ಟು ದೊಡ್ಡದಾಗಿದೆ. ಹೀಗಾಗಿ ಈ ವಸ್ತು ಕುರಿತ ಚರ್ಚೆ ಹಾಗೂ ಅಧ್ಯಯನ ನಿರಂತರವಾಗಿ ನಡೆಯುತ್ತಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಕ್ರಿಸ್ ಲಿಂಟಾಟ್ ಈ ಅನ್ಯಲೋಕದ ಸಿದ್ಧಾಂತವನ್ನು ಸಂಪೂರ್ಣವಾಗಿ ಅಲ್ಲ ಗೆಳೆದಿದ್ದಾರೆ. ಇದು ಸಂಪೂರ್ಣ ಅಸಂಬದ್ದ ಎಂದು ಹೇಳಿದ್ದಾರೆ. ಆ ವಸ್ತುವನ್ನು ನಾವು ಅನ್ಯ ಗ್ರಹದ ವಸ್ತು ಅಥವಾ ನೌಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ಖಗೋಳ ಶಾಸ್ತ್ರದಲ್ಲಿ ಈವರೆಗೆ ನಡೆದಿರುವ ಹಲವು ಗಂಭೀರ ವೈಜ್ಞಾನಿಕ ಕೆಲಸವನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.
ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಪ್ರಸ್ತುತ 3I/ಅಟ್ಲಾಸ್ ಅನ್ನು ಹೊರಗಿನ ಸೌರವ್ಯೂಹದ ಧೂಮಕೇತು ಎಂದು ವರ್ಗೀಕರಿಸಿವೆ. ಇದು ಹೊಸದಾಗಿ ನಮ್ಮ ಸೌರಮಂಡಲದಲ್ಲಿ ಪತ್ತೆಯಾದ ವಸ್ತು ಎಂದು ಪರಿಗಣಿಸಬಹುದಾದರು ಅನ್ಯ ಗ್ರಹದಿಂದ ಬಂದಿರುವ ವಸ್ತು ಎಂಬ ಸಾಧ್ಯತೆಯನ್ನು ತಳ್ಳಿ ಹಾಕಿದೆ. ಸದ್ಯ ಈ ವಸ್ತು ಏನು? ಅದು ಯಾವುದರಿಂದ ಮಾಡಲ್ಪಟ್ಟಿದೆ ಎಂಬ ಕುರಿತಾಗಿ ಮತ್ತಷ್ಟು ಮಾಹಿತಿಗಳು ಹೊರಬರಬೇಕಿದೆ. ಹಾಗೆ ಇದರಿಂದ ಭೂಮಿಗೆ ಯಾವುದಾದರು ಹಾನಿ ಸಂಭವವಿದೆಯೇ ಎಂಬುದು ಕೂಡ ಮುಂದಿನ ದಿನಗಳಲ್ಲಿ ಅಧ್ಯಯನದಿಂದ ತಿಳಿದುಬರಬೇಕಿದೆ.



Click it and Unblock the Notifications
