Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಾಲ್ಕು ಕಾಲು, ನಾಲ್ಕು ಕೈ, ಎರಡು ತಲೆಯೊಂದಿಗೆ ವಿಚಿತ್ರ ಮಗು ಜನನ!!
ಹುಟ್ಟುವಾಗ ಮಕ್ಕಳು ವಿಭಿನ್ನ ಕಾಯಿಲೆಗಳೊಂದಿಗೆ ಜನಿಸುವ ಹಲವು ಪ್ರಕರಣಗಳ ಕುರಿತು ನಾವು ನೋಡಿದ್ದೇವೆ. ಹುಟ್ಟುವಾಗ ಮಗು ಮೂರು ಕಾಲು, ಮೂರು ಕೈ, ಎರಡು ತಲೆ ಒಟ್ಟಾಗಿ ಹುಟ್ಟುವುದು, ಒಂದು ಕಣ್ಣು, ಬಾಲದೊಂದಿಗೆ ಜನಿಸುವುದು ಹೀಗೆ ವಿಚಿತ್ರ ಮಕ್ಕಳು ಹುಟ್ಟುವುದನ್ನು ನಾವು ನೋಡಿರುತ್ತೇವೆ.
ಅದೇ ರೀತಿ ಇಲ್ಲೊಂದು ಮಗು ಸಹ ಈ ರೀತಿ ವಿಚಿತ್ರವಾಗಿ ಜನಿಸಿದೆ. ಮಗು ನಾಲ್ಕು ಕೈ, ನಾಲ್ಕು ಕಾಲು ಹಾಗೂ ಎರಡು ತಲೆಯೊಂದಿಗೆ ಜನಿಸಿದೆ ಎಂದು ತಿಳಿದುಬಂದಿದೆ. ಪಂಜಾಬ್‌ನ ಕ್ರಾನ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕಿರಾತಾಪುರ ಗ್ರಾಮದ ಕೊರಿಯನ್ ಪೂರ್ವಾ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಆದರೆ ಹುಟ್ಟಿದ ಕೆಲವೇ ಗಂಟೆಯಲ್ಲಿ ಮಗು ಮೃತಪಟ್ಟಿದೆ. ಮಗುವಿನ ತಾಯಿ, 38 ವರ್ಷದ ರಮಾ ದೇವ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ತಾಯಿ ರಮಾದೇವಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಅಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸೇರಿದ ಕೆಲವೇ ಹೊತ್ತಿನಲ್ಲಿ ಹೆರಿಗೆ ಆಗಿದೆ. ಆದರೆ ಹೇರಿಗೆಯಾದ ಬಳಿಕ ಇಡೀ ಆಸ್ಪತ್ರೆ ವೈದ್ಯರು ಶಾಕ್ ಆಗಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಭಯದಿಂದ ವಾರ್ಡ್‌ನಿಂದ ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಆಗತಾನೆ ಜನಿಸಿದ ಶಿಶುವಿಗೆ ನಾಲ್ಕು ಕೈ, ನಾಲ್ಕು ಕಾಲು, ಎರಡು ತಲೆ ಇರುವುದು ಕಂಡುಬಂದಿದೆ. ಆದರೆ ಎರಡು ಕಾಲು ಅಭಿವೃದ್ಧಿ ಆಗದೆ ಸಣ್ಣದಾಗಿತ್ತು. ಆದರೆ ಹುಟ್ಟಿದ 5 ಗಂಟೆಯ ಬಳಿಕ ಮಗು ಮೃತಪಟ್ಟಿದೆ. ಮಗುವಿಗೆ ತಾಯಿ ಹಾಲುಣಿಸುವುದು ಕಷ್ಟವಾಗಿತ್ತು. ಆದರೆ ಮಗುವಿನ ಸಾವಿಗೆ ಇದೊಂದೆ ಕಾರಣವಾಗಿಲ್ಲ. ಬದಲಿಗೆ ಇದೊಂದು ವೈದ್ಯಕೀಯ ಸಮಸ್ಯೆಯಿಂದ ಜನಿಸಿದ್ದ ಮಗುವಾಗಿದ್ದರಿಂದ ಅದರ ಸಾವಿನ ಕುರಿತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ಅಚ್ಚರಿ ಏನೆಂದರೆ ಈ ವಿಚಿತ್ರ ಮಗುವನ್ನು ನೋಡಿ ಎಲ್ಲರು ಭಯಪಟ್ಟಿದ್ದರು. ಆಸ್ಪತ್ರೆಯಲ್ಲಿ ಗೊಂದಲವೇ ಏರ್ಪಟ್ಟಿತ್ತು. ಇಚಿತ್ರ ಮಗು ಜನಿಸಿರುವುದನ್ನು ಕೇಳಿ ಮಗು ನೋಡಲು ಅಲ್ಲಿನ ಜನರು ಮುಗಿಬಿದ್ದರು. ಆದರೆ ಮನೆಯವರು ಅದರಲ್ಲೂ ಮಗುವಿನ ತಂದೆ ಸಾಮಾನ್ಯರಂತೆ ಪ್ರತಿಕ್ರಿಯಿಸಿದ್ದರು. ಏಕೆಂದರೆ ಈ ರೀತಿಯ ಪ್ರಕರಣಗಳು ಅವರ ಊರಿನಲ್ಲಿ ಮೊದಲು ನಡೆದಿದ್ದವಂತೆ.
ಕಳೆದ ನವೆಂಬರ್‌ನಲ್ಲಿ ಭಾರತದಲ್ಲಿ 30 ವರ್ಷದ ಮಹಿಳೆಯೊಬ್ಬರು ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿರುವ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂಡೋನೇಷ್ಯಾದಲ್ಲಿ ಸ್ಪೈಡರ್ ಟ್ವಿನ್ ಎಂಬ ವಿಶೇಷ ಮಕ್ಕಳ ದೊಡ್ಡ ಗುಂಪೇ ಇದೆ. ಅಲ್ಲಿ ಇಂತಹ ಅವಳಿಗಳು ಇಂದಿಗೂ ಜೀವಿಸಿದ್ದಾರೆ.
ಪ್ರಪಂಚದಾದ್ಯಂತದ ಪ್ರತಿ 1 ಮಿಲಿಯನ್ ಮಕ್ಕಳಲ್ಲಿ ಎರಡು ಮಕ್ಕಳು ಈ ಕಾಯಿಲೆಯಂದಿಗೆ ಹುಟ್ಟುತ್ತಾರೆ. ಈ ರೀತಿಯ ಪ್ರಕರಣವನ್ನು ವೈದ್ಯಕೀಯ ಭಾಷೆಯಲ್ಲಿ 'ಡಿಪ್ರೊಸೊಪಸ್' ಎಂದು ಕರೆಯಲಾಗುತ್ತದೆ. ಇದರ ಅರ್ಥ ದೇಹದ ಭಾಗಗಳು ಅಂಟಿಕೊಂಡು ಜನಿಸುವುದು.
ಈ ರೀತಿ ದೇಹ ಅಂಟಿಕೊಂಡು ಜನಿಸುವ ಮಕ್ಕಳು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯಂತೆ. ಇಲ್ಲಿಯೂ ಅದೇ ರೀತಿ ಕೇವಲ 5 ಗಂಟೆಗಳ ಕಾಲ ಮಾತ್ರ ಮಗು ಬದುಕುಳಿದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವನ್ನು ನೋಡಿ ಜನರು ಸಹ ಭಯಕ್ಕೆ ಒಳಗಾಗಿದ್ದಾರೆ. ಮಗುವಿನ ದೇಹದಲ್ಲಿ ಮತ್ತೆರಡು ಕಾಲು ಹಾಗೂ ಎರಡು ತಲೆ ಇರುವುದು ನಾವು ನೋಡಬಹುದು, ವಿಡಿಯೋದಲ್ಲಿ ಮಗುವಿನ ತಾಯಿ ಸಹ ಆರೋಗ್ಯವಾಗಿರುವುದು ಕಂಡುಬರುತ್ತದೆ. ಒಂದು ವೇಳೆ ಮಗು ಬದುಕುಳಿದಿದ್ದರೆ ಮುಂದೆ ಆ ಮಗುವಿನ ಜೀವನವೂ ತುಂಬಾನೆ ಕಷ್ಟಕರವಾಗಿರುತ್ತಿತ್ತು.



Click it and Unblock the Notifications
