Latest Updates
-
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ!
ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
ನೀವು ಯಶ್ ನಟನೆಯ ಕೆಜಿಎಫ್ ಸಿನಿಮಾ ನೋಡಿದರೆ ಅದರಲ್ಲಿ ಎಲ್ ಡೊರಾಡೊ ಸಿಟಿ ಹೆಸರು ಕೇಳರ್ತಿರಿ. ಎಲ್ ಡೊರಾಡೊ ಅಂದ್ರೆ ಸಿಟಿ ಆಫ್ ಗೋಲ್ಡ್. ಇಡೀ ನಗರ ಚಿನ್ನದಿಂದ ತುಂಬಿತ್ತು ಎನ್ನು ಕಾಲ್ಪನಿಕ ಕಥೆ ಅದು. ಆ ನಗರದ ಹೆಸರು ಎಲ್ ಡೊರಾಡೊ. ದಕ್ಷಿಣ ಅಮೆರಿಕದಲ್ಲಿ ಈ ಎಲ್ ಡೊರಾಡೊ ಸಿಟಿ ಇತ್ತು ಎಂದು ನಂಬಲಾಗಿತ್ತು. ಆದ್ರೆ ಇಂದಿಗೂ ಈ ಸಿಟಿಯ ಬಗ್ಗೆ ಹಲವು ಕಥೆಗಳು ಕಥೆಗಳಾಗಿಯೇ ಉಳಿದಿದೆ.
ಆದ್ರೆ ನಿಮಗೆ ಸಮುದ್ರದ ಎಲ್ ಡೊರಾಡೊ ಬಗ್ಗೆ ಗೊತ್ತಿದ್ಯಾ? ಹೌದು ನಾವಿಂದು ಹೇಳ ಹೊರಟಿರೋದು ಇಂತಹ ಚಿನ್ನಗಳ ತುಂಬಿರುವ ಸಮುದ್ರದ ಎಲ್ ಡೊರಾಡೊ ಕಥೆ. ವಿಶ್ವದ ಹಲವು ದೇಶಗಳಲ್ಲಿ ಒಂದೊಂದು ವಿಚಿತ್ರ ಕಥೆಗಳಿವೆ ಅದರಲ್ಲಿ ಈ ಇಂಗ್ಲೆಂಡ್ ಹಡಗಿನ ಕಥೆಯೂ ಒಂದು.

4 ಶತಕೋಟಿ ಪೌಂಡ್‌ಗಳಷ್ಟು ಚಿನ್ನ, ಬೆಳ್ಳಿ ಹೊತ್ತಿದ್ದ ಹಡಗೊಂದು ಸಮುದ್ರದ ಪಾಲಾಗಿದ್ದು, ಈಗಲೂ ಅದರ ಹುಡುಕಾಟ ನಡೆದಿರುವುದು. ಅಚ್ಚರಿ ಎಂದರೆ ಈ ಹುಡುಕಾಟಕ್ಕೆ ಹೊಸ ಕಂಪನಿ ಎಂಟ್ರಿಕೊಟ್ಟಿದ್ದು, ಹಡಗನ್ನು ಹುಡುಕಿಯೇ ತೀರುತ್ತೇವೆ ಎಂದು ಶಪಥ ಮಾಡಿದೆ. ಹಾಗಾದ್ರೆ ಏನಿದು ಸಮುದ್ರದ ಎಲ್ ಡೊರಾಡೊ ಕಥೆ. ಎಲ್ಲಿದೆ ಹಡಗು? ಹೇಗೆ ನಾಪತ್ತೆಯಾಗಿತ್ತು ಎಂಬುದನ್ನು ತಿಳಿಯೋಣ.
ಹಡಗಿನಲ್ಲಿ ಏನಿತ್ತು..?
ಮರ್ಚೆಂಟ್ ರಾಯಲ್ ಎಂಬ ಬೃಹತ್ ಗಾತ್ರದ ಹಡಗು 1641ರಲ್ಲಿ ಸಮುದ್ರಯಾನ ಆರಂಭಿಸಿತ್ತು. ಆದರೆ ಈ ಹಡಗಿನ ತುಂಬ ಇದ್ದಿದ್ದು ಚಿನ್ನ, ಬೆಳ್ಳಿ, ಸುಮಾರು 4 ಶತಕೋಟಿ ಪೌಂಡ್ ಮೌಲ್ಯದ ಚಿನ್ನ, ಬೆಳ್ಳಿಯನ್ನು ಈ ಹಡಗು ಸಾಗಿತ್ತಿತ್ತು ಎಂದು ವರದಿಯಾಗಿದೆ.
ಫ್ಲಾಂಡರ್ಸ್ ಮೂಲಸ ಸೈನಿಕರಿಗೆ ಹಾಗೂ ಅಲ್ಲಿನ ಸರ್ಕಾರಕ್ಕೆ ಒಪ್ಪಿಸಲು ಈ ಹಡಗಿನಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ ಬೆಳ್ಳಿ ಸಾಗಿಸಲಾಗುತ್ತಿತ್ತು. ಆದರೆ ಇಂಗ್ಲೆಂಡ್ ಕಡಲ ತೀರದಿಂದ ದೂರಕ್ಕೆ ಸಾಗಿದ್ದ ಹಡಗು ಸಮುದ್ರದಲ್ಲಿ ಮುಳುಗಿತ್ತು. ಹಡಗಿನ ಕ್ಯಾಪ್ಟನ್ ಜಾನ್ ಲಿಂಬ್ರೆ ಸೇರಿದಂತೆ 40 ಜನ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು, ಆದರೆ ಹಡಗು ಮಾತ್ರ ನೀರೊಳಗೆ ಮುಳುಗಿಬಿಟ್ಟಿತ್ತು.
ಈ ಸುದ್ದಿ ಕೇಳಿ ಕಿಂಗ್ ಚಾರ್ಲ್ಸ್ I ನಡುಗಿ ಹೋಗಿದ್ದ, ಆತ ಇದೊಂದು ಇತಿಹಾಸ ಕಂಡ ಅತ್ಯಂತ ಘೋರ ದುರಂತ ಎಂದು ಕರೆದಿದ್ದ. ಅಂದಿನ ಕಾಲದಲ್ಲಿ ಇಷ್ಟು ದೊಡ್ಡ ಹಡಗನ್ನು ಸಮುದ್ರದಲ್ಲಿ ಹುಡುಕುವುದು ಹಾಗೂ ಅದನ್ನು ಮೇಲೆತ್ತುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಹಡಗು ಪತನಗೊಂಡಿದ್ದ ಸ್ಥಳದತ್ತ ಹತ್ತಾರು ರಕ್ಷಣ ಬೋಟ್‌ಗಳು ತೆರಳಿ ಪರಿಶೀಲನೆ ನಡೆಸಿದ್ದವು. ಆದ್ರೆ ಆಳ ಸಮುದ್ರದಲ್ಲಿದ್ದ ಹಡಗು ಕಾಣಿಸುತ್ತಿರಲಿಲ್ಲ. ಜೊತೆಗೆ ನೀರಿಗೆ ಇಳಿದು ಅದರ ಸುಳಿವು ಪತ್ತೆ ಮಾಡುವುದು ಸಹ ಕಷ್ಟವಾಗಿತ್ತು.
ನಡೆಯುತ್ತಲೇ ಇತ್ತು ಜಲಸಂಶೋಧನೆ
ಹಡಗು ಮುಳುಗಿನ ಸಮಯದಿಂದ ಇಂದಿನವರೆಗೂ ನಿರಂತರವಾಗಿ ಹುಡುಕಾಟ ನಡೆಯುತ್ತಲೇ ಇದೆ. ಆದ್ರೆ ಆ ಹಡಗಿನ ಸುಳಿವು ಮಾತ್ರ ಪತ್ತೆಯಾಗಲೇ ಇಲ್ಲ. ಅಚ್ಚರಿ ಎಂದರೆ ಸಮುದ್ರದಲ್ಲಿ ಮುಳುಗಿದ ಹಡಗಿನ ಒಂದೇ ಒಂದು ವಸ್ತುಗಳು ಸಹ ನೀರಿನಿಂದ ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ಇದೊಂದು ಸಮುದ್ರದ ನಿಗೂಢವಾಗಿ ನಿಂತಿದೆ.
2019ರಲ್ಲಿ ಸಿಕ್ಕಿತು ಮೊದಲ ಬಿಡಿಭಾಗ
ಸುಮಾರು 400 ವರ್ಷಗಳ ಹಿಂದೆ ಮುಳುಗಿದ್ದ ಈ ಹಡಗಿನ ಹುಡುಕಾಟ ನಡೆಯುತ್ತಲೇ ಇತ್ತು. ಆದ್ರೆ 2019ರಲ್ಲಿ ಅಚ್ಚರ ಎಂಬಂತೆ ಮೀನುಗಾರಿಕಾ ಬೋಟ್‌ಗೆ ಒಂದು ಆಂಕರ್ ಸಿಕ್ಕಿಬಿದ್ದಿತ್ತು. ಈ ಆಂಕರ್ 400 ವರ್ಷಗಳ ಹಿಂದೆ ಮುಳುಗಿದ್ದ ರಾಯಲ್ ಮರ್ಚೆಂಟ್ ಹಡಗಿಗೆ ಸೇರಿದ್ದಾಗಿದೆ ಎಂದು ನಂಬಲಾಗಿದೆ. ಇದು ಬಿಟ್ಟರೆ ಮತ್ತೆ ಯಾವ ಕುರುಹು ಸಹ ಪತ್ತೆಯಾಗಿರಲಿಲ್ಲ.
ಇದೀಗ ಮತ್ತೆ ಈ ಹಡಗಿನ ಪತ್ತೆಗೆ ಹುಡುಕಾಟ ನಡೆಸಲು ಹೊಸ ಕಂಪನಿ ಮುಂದೆ ಬಂದಿದೆ. ಆಧುನಿಕ ತಂತ್ರಜ್ಞಾನ ಬಳಸಿ ಸಮುದ್ರದಾಳದಲ್ಲಿ ಹುಡುಕಾಟ ನಡೆಸುವುದಾಗಿ ಮಲ್ಟಿಬೀಮ್ ಸರ್ವಿಸ್ ಕಂಪನಿ ಮುಂದೆ ಬಂದಿದೆ. ಸೋನಾರ್ ತಂತ್ರಜ್ಞಾನ ಸೇರಿದಂತೆ ಮಾನವ ರಹಿತ ಯಂತ್ರಗಳು ಸಮುದ್ರದ ಆಳದಲ್ಲಿ ಹುಡುಕಾಟ ನಡೆಸಲಿವೆಯಂತೆ. ಇದು ಅಮುದ್ರದ ಆಳದಲ್ಲಿರುವ ಅತ್ಯಂತ ದೊಡ್ಡ ನಿಧಿ ಎಂದು ಗುರುತಿಸಲಾಗಿದ್ದು, ಒಂದು ವೇಳೆ ಈ ಹಡಗು ಪತ್ತೆಯಾದರೆ ವಿಶ್ವದ ಅತೀ ದೊಡ್ಡ ನಿಧಿ ಸಂಗ್ರಹದಂತೆ ಹೆಸರಾಗಲಿದೆ.



Click it and Unblock the Notifications