Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಭಾರತದಲ್ಲೇ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ..! ಎಲ್ಲಿ ನಿರ್ಮಾಣವಾಗುತ್ತಿದೆ ಗೊತ್ತಾ?
ಭಾರತದಲ್ಲಿ ಪ್ರತಿಮೆಗಳಿಗೇನು ಕಡಿಮೆ ಇಲ್ಲ. ನೀವು ಹೋದಲ್ಲಿ ಬಂದಲ್ಲಿ ಪ್ರತಿಮೆಗಳ ನೋಡಬಹುದು. ಕೆಲವು ಗಾತ್ರದಲ್ಲಿ ಚಿಕ್ಕದಾಗಿದ್ದರೆ ಮತ್ತೆ ಕೆಲವು ಅತ್ಯಂತ ಎತ್ತರವಾಗಿರುತ್ತೆ. ವಿಶ್ವದ ಅತ್ಯಂತ ಎತ್ತರ ಪ್ರತಿಮೆ ಸಹ ನಮ್ಮಲ್ಲಿಯೇ ಇದೆ. ಪ್ರತಿಯೊಂದು ರಾಜ್ಯದಲ್ಲೂ ಕೆಲವು ಎತ್ತರ ಪ್ರತಿಮೆಗಳು ನಮಗೆ ನೋಡಲು ಸಿಗುತ್ತವೆ.
ಆದ್ರೆ ಭಾರತದಲ್ಲಿ ಸ್ಟ್ಯಾಚು ಆಫ್ ಲಿಬರ್ಟಿ ಕೂಡ ನಿರ್ಮಾಣವಾಗುತ್ತಿದೆ. ಅಮೆರಿಕದಲ್ಲಿರುವ ಐಕಾನಿಕ್ ಸ್ಟ್ಯಾಚು ಆಫ್ ಲಿಬರ್ಟಿ ಈಗ ಭಾರತದಲ್ಲೇ ನೋಡಬಹುದು. ಅಮೆರಿಕದ ಎತ್ತರದ ಸ್ಟ್ಯಾಚ್ಯೂ ಆಫ್ ಲಿಬರ್ಟಿಯು ನ್ಯೂಯಾರ್ಕ್‌ನ ಅತ್ಯಂತ ಪ್ರಸಿದ್ಧ ಸ್ಥಳ. ಜೊತೆಗೆ ಈ ಪ್ರತಿಮೆ ನೋಡಲು ವಿಶ್ವದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ.

ಆದರೆ ಈಗ ಪಂಜಾಬ್‌ನ ಟಾರ್ನ್ ತರನ್ ನಿವಾಸಿಗಳು, ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ಪ್ರತಿಕೃತಿಯನ್ನು ನಿರ್ಮಿಸುವ ಮೂಲಕ ನ್ಯೂಯಾರ್ಕ್ ನಗರದ ನೆನಪು ಭಾರತದಲ್ಲೇ ಮರುಕಳಿಸುವಂತೆ ಮಾಡಿದ್ಧಾರೆ. ಈಗ ನಿರ್ಮಾಣ ಹಂತದ ಈ ಪ್ರತಿಮೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಶಾಕ್ ಆಗುವುದರ ಜೊತೆಗೆ ಅಚ್ಚರಿಗೂ ಕಾರಣವಾಗಿದೆ.
ಈ ನಗರವು ಇಂತಹ ಮೂರ್ತಿಗಳಿಗೆ ಹೆಸರುವಾಸಿಯಾಗಿದೆ. ದೇಹದಾರ್ಢ್ಯಕಾರರ ಪ್ರತಿಮೆಗಳು ಮತ್ತು ಕ್ರೂಸ್ ಹಡಗುಗಳಿಂದ ಹಿಡಿದು ಆಲ್ಕೋಹಾಲ್ ಬಾಟಲಿಗಳ ಪ್ರತಿಕೃತಿಗಳವರೆಗೆ, ಈ ಹಳ್ಳಿಗಳಲ್ಲಿನ ಟೆರೇಸ್‌ಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಈಗ ಈ ಸಾಲಿಗೆ ಸ್ಟ್ಯಾಚೂ ಆಫ್ ಲಿಬರ್ಟಿ ಸಹ ಸೇರಿಕೊಂಡಿದೆ.
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಲಿಬರ್ಟಿಯ ಮೂಲ ಪ್ರತಿಮೆಯು ನ್ಯೂಯಾರ್ಕ್ ನಗರದಲ್ಲಿದೆ. ಈ ನಿಯೋಕ್ಲಾಸಿಕಲ್ ತಾಮ್ರದ ಪ್ರತಿಮೆಯು ಫ್ರಾನ್ಸ್‌ನಿಂದ ಯುನೈಟೆಡ್ ಸ್ಟೇಟ್ಸ್‌ಗೆ ಉಡುಗೊರೆಯಾಗಿ ಸಿಕ್ಕಿತ್ತು ಎಂಬ ಇತಿಹಾಸ ನಮಗೆ ತಿಳಿದಿದೆ.
ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಸಂಕೇತವಾಗಿ ಈ ಸ್ಟ್ಯಾಚೂ ಆಫ್ ಲಿಬರ್ಟಿ ತಲೆ ಎತ್ತಿ ನಿಂತಿದೆ. ಇದನ್ನು ಫ್ರೆಂಚ್ ಶಿಲ್ಪಿ ಫ್ರೆಡ್ರಿಕ್ ಆಗಸ್ಟೆ ಬಾರ್ತೊಲ್ಡಿ ವಿನ್ಯಾಸಗೊಳಿಸಿದರು, ಅದರ ಲೋಹದ ಚೌಕಟ್ಟನ್ನು ಗುಸ್ಟಾವ್ ಐಫೆಲ್ ರಚಿಸಿದ್ದಾರೆ, ಅವರು ಐಫೆಲ್ ಟವರ್ ಅನ್ನು ನಿರ್ಮಿಸಿದ ಪ್ರಸಿದ್ಧ ಫ್ರೆಂಚ್ ಸಿವಿಲ್ ಇಂಜಿನಿಯರ್ ಆಗಿದ್ದಾರೆ.
ಈ ಪ್ರತಿಮೆಯೂ 305 ಅಡಿ ಎತ್ತರವಿದ್ದು, ಅಕ್ಟೋಬರ್ 28, 1886 ರಂದು ಲೋಕಾರ್ಪಣೆಗೊಂಡಿತ್ತು. ಜುಲೈ 4, 1776 ಎಂದು ಕೆತ್ತಲಾದ ಟಾರ್ಚ್ ಮತ್ತು ಟ್ಯಾಬ್ಲೆಟ್ ಅನ್ನು ಕೈಯಲ್ಲಿ ಹಿಡಿದಿದೆ. ಅದರ ಕಿರೀಟದ ಮೇಲಿನ ಏಳು ಸ್ಪೈಕ್‌ಗಳು ಏಳು ಸಮುದ್ರಗಳು ಮತ್ತು ಖಂಡಗಳನ್ನು ಪ್ರತಿನಿಧಿಸುತ್ತವೆ.ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ಕಲ್ಪನೆಯು 1865 ರಲ್ಲಿ ಎಡ್ವರ್ಡ್ ರೆನೆ ಡಿ ಲ್ಯಾಬೌಲೆಯೊಂದಿಗೆ ಹುಟ್ಟಿಕೊಂಡಿತು ಮತ್ತು ಇದು 1924 ರಲ್ಲಿ ರಾಷ್ಟ್ರೀಯ ಸ್ಮಾರಕವಾಯಿತು.
ಇತ್ತೀಚಿಗೆ ಅಮೆರಿಕದಲ್ಲಿ ಭೂಕಂಪನ ಉಂಟಾದಾಗ ಈ ಸ್ಟ್ಯಾಚೂ ಆಫ್ ಲಿಬರ್ಟಿ ಅಲುಗಾಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 305 ಅಡಿಯ ಬೃಹತ್ ಪ್ರತಿಮೆ ಅಲುಗಾಡಿದ್ದ ಕಂಡು ಜನರು ಸಹ ಆತಂಕಗೊಂಡಿದ್ದರು. ಆದರೆ ಪ್ರತಿಮೆಗೆ ಯಾವುದೇ ಹಾನಿಯಾಗಿರಲಿಲ್ಲ.
ಈ ಪ್ರತಿಮೆಗೆ ಪ್ರತಿ ವರ್ಷ ಬರೋಬ್ಬರಿ 600 ಬಾರಿ ಸಿಡಿಲು ಬಡಿದಿದೆ
ಪ್ರತಿಮೆಯು ಪ್ರತಿ ವರ್ಷ ಸುಮಾರು 600 ಸಿಡಿಲುಗಳಿಗೆ ಮೈಯೊಡ್ಡುತ್ತದೆ. ಆದರೆ ಈವರೆಗೂ ಇದರಿಂದ ಹಾನಿಯಾಗಿಲ್ಲ. ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಶಿಲ್ಪಿ ಫ್ರೆಡ್ರಿಕ್-ಆಗಸ್ಟ್ ಬಾರ್ತೊಲ್ಡಿ ತನ್ನ ಸ್ವಂತ ತಾಯಿಯಂತೆಯೇ ಅವಳ ಮುಖವನ್ನು ರೂಪಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಆತ ತನ್ನ ತಾಯಿಯ ನೆನಪಿಗಾಗಿ ಈ ಕಲಾಕೃತಿಯ ಮುಖವು ತನ್ನ ತಾಯಿಯ ಮುಖವನ್ನೇ ಹೋಲುವಂತೆ ರಚಿಸಿದ್ದ ಎಂಬ ಕಥೆ ಇದೆ.



Click it and Unblock the Notifications
