Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕತ್ತಲಿನಲ್ಲಿಯೂ ಸೂರ್ಯ ಬಳಕು ಭೂಮಿಗೆ ತಲುಪುವಂತೆ ಮಾಡುತ್ತೆಯಂತೆ ಈ ಕಂಪನಿ
ಸೂರ್ಯನಿಗೆ ಟಾರ್ಚಾ? ಎಂದು ಹೇಳುವುದನ್ನು ಕೇಳಿರಬಹುದು, ಆದರೆ ಕ್ಯಾಲಿಪೋರ್ನಿಯಾದ ಸ್ಟಾರ್ಟ್‌ಅಪ್ ಕಂಪನಿಯೊಂದು ಸೂರ್ಯನ ಬೆಳಕನ್ನು ಮಾರಾಟ ನ ಮಾಡುವ ಯೋಜನೆಯೊಂದು ಹೊಂದಿದೆ.
ಸೂರ್ಯಾಸ್ತವಾದ ಬಳಿಕ ಸೂರ್ಯನ ಕಿರಣಗಳು ಬೀಳುವಂತೆ ಮಾಡಲು ಈ ಕಂಪನಿ ಮುಂದಾಗಿದೆ, ಅಷ್ಟಕ್ಕೂ ಸೂರ್ಯ ಮುಳುಗಿದ ಮೇಲೆ ನಿಮಗೆ ಸೂರ್ಯನ ಬೆಳಕು ಬೇಕೆಂದರೆ ಸುಮ್ಮನೆ ಸಿಗಲ್ಲ, ಅದಕ್ಕೆ ಆ್ಯಪ್ ಇದೆ ಅದರ ಮೂಲಕ ಮಾರಾಟ ಮಾಡುವ ಯೋಜನೆಯನ್ನು ಈ ಕಂಪನಿ ಹೊಂದಿದೆ.

ಈ ಸ್ಟಾರ್ಟ್ಅಪ್ ಕಂಪನಿ ಸಿಇಒ ಬೆನ್ ನ್ಯೂವಾಕ್ ಈ ಏಪ್ರಿಲ್‌ನಲ್ಲಿ ಇದರ ಬಗ್ಗೆ ಪರಿಚಯಿಸಿ ಡೆಮೋ ಕೂಡ ನೀಡಿದ್ದರು. ನಾವು ಇದನ್ನು ಸುಲಭವಾಗಿಸುವ ಪ್ರಯತ್ನದಲ್ಲಿದ್ದೇವೆ, ನಿಮ್ಮ ಜಿಪಿಎಸ್ ಮೂಲಕ ಕೋಆರ್ಡಿನೇಟ್ ಮಾಡಿ ಬೆಳಕು ನಿಡುತ್ತೇವೆ ಎಂದು ಆ ಸಿಇಒ ಹೇಳಿದ್ದಾರೆ.
ಇದೆಲ್ಲಾ ಹೇಗೆ ಸಾಧ್ಯವಾಗುತ್ತೆಯಂತೆ?
ಕನ್ನಡಿಯಂಥ ಉಪಗ್ರಹವನ್ನು ಅಳವಡಿಸಿ ಆ ಮೂಲಕಸೂರ್ಯನ ಕಿರಣಗಳನ್ನು ಸಂಗ್ರಹಿಸಿ ಅದರಿಂದ ಸೂರ್ಯಾಸ್ತವಾದ ಬಳಿಕ ಬೂಮಿಗೆ ಬೆಳಕು ಕಳುಹಿಸಲಾಗುವುದು ಎಂದು ಸ್ಟಾರ್ಟ್‌ಅಪ್ ಕಂಪನಿ ಹೇಳಿದೆ. ಕಂಪನಿ ಹಾಟ್ ಏರ್ ಬಲೂನ್‌ನಲ್ಲಿ ಕನ್ನಡಿಯಿಟ್ಟು ಡೆಮೋ ನೋಡಿ ಅದರಲ್ಲಿ ಯಶಸ್ವಿಯಾಗಿದೆ. ಈಗ ಮೊದಲಿಗೆ ಬಾಹ್ಯಾಕಾಶದಲ್ಲಿ ಈ ಕಾರ್ಯಕ್ಕೆ ಸಂಬಂಧಿಸಿದ ಉಪಗ್ರಹವನ್ನು ಕಳುಹಿಸಬೇಕು ಎಂದು ಆಲೋಚನೆ ಮಾಡಿದೆ. ಇದಕ್ಕಾಗಿ 4-5 ತಿಂಗಳು ಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.
ಅದರೆ ಸದ್ಯದಲ್ಲಿ ಇದು ನಡೆಯುವ ಕಾರ್ಯವಲ್ಲ
ಇಂಝಥದ್ದೊಂದು ಪ್ರಯತ್ನಕ್ಕೆ ಕಂಪನಿ ಮುಂದಾಗಿದೆ ನಿಜ, ಅದರೆ ಸದ್ಯದಲ್ಲಿ ಅದು ಸಾಧ್ಯನಾ? ಎಂಬ ಪ್ರಶ್ನೆ ಮೂಡುತ್ತದೆ, ಏಕೆಂದರೆ ಸೌರಮಂಡಲದಲ್ಲಿ ಉಪಗ್ರಹ ಸಹಾಯ ಅದರ ಶಕ್ತಿಯನ್ನು ಸಂಗ್ರಹಿಸಿ ಅದನ್ನು ಭೂಮಿಗೆ ಬಿಡುವುದು ಅಷ್ಟೊಂದು ಸುಲಭವಲ್ಲ.
New things to play with on the website! pic.twitter.com/NJcOjFSblf
— Ben Nowack (@bennbuilds) August 22, 2024
ಮನುಷ್ಯನಿಗೆ ಅಸಾಧ್ಯವಾದದ್ದು ಏನೂ ಇಲ್ಲ
ಹೌದು ಮನುಷ್ಯ ಬಾಹ್ಯಾಕಾಶದಲ್ಲಿ ಏನೆಲ್ಲಾ ಸಾಧನೆ ಮಾಡುತ್ತಿದ್ದಾನೆ ಎಂದು ನೊಡುತ್ತಿದ್ದೇವೆ, ಹಾಗಾಗಿ ಈ ಕಂಪನಿ ರಾತ್ರಿಯಲ್ಲಿಯೂ ಸೂರ್ಯನ ಬೆಳಕು ಬೀಳುವಂತೆ ಮಾಡುತ್ತೇವೆ ಎಂದು ಹೇಳುವಾಗ ನಕ್ಕು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ, ಅದರೆ ಇದನ್ನು ಹುಚ್ಚುತನ ಎಂದು ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ, ಇನ್ನು ಕೆಲವರು ಇದು ಈ ಶತಮಾನದಲ್ಲಿ ಆಗುವುದು ಡೌಟು ಎಂದು ಕೂಡ ಹೇಳುತ್ತಿದ್ದಾರೆ.
ಪ್ರಕೃತಿ ನಿಯಮದ ವಿರುದ್ಧ ಹೋಗುವುದು ಸರಿಯಲ್ಲ ಎಂಬುವುದು ಇನ್ನು ಕೆಲವರ ಅಭಿಪ್ರಾಯ
ಬೆಳಗ್ಗೆ ಆದರೆ ಸೂರ್ಯ ಉದಯವಾಗಬೇಕು, ಸಂಜೆ ಸೂರ್ಯಾಸ್ತವಾಗಬೇಕು ಇದು ಪ್ರಕೃತಿಯಲ್ಲಿನ ನಿಯಮ, ಹೀಗೆ ಕತ್ತಲು-ಬೆಲಕು ಆಗುವುದರಿಂದ ಭೂಮಿಗೆ ಅಷ್ಟೊಂದು ಪ್ರಯೋಜನವಿದೆ, ಆದರೆ ರಾತ್ರಿ ಹೊತ್ತಿನಲ್ಲಿ ಸುರ್ಯನ ಬೆಳಕನನ್ನು ಸಂಗ್ರಹಿಸಿ ಬಿಡುವುದರಿಂಧ ಪರಿಸರ ಮಾಲಿನ್ಯವಾಗುತ್ತದೆ ಇನ್ನು ಕೆಲವರು ಹೇಳುತ್ತಿದ್ದಾರೆ.
ಮನುಷ್ಯ ಪ್ರಗತಿಯ ಪಥದಲ್ಲಿ ಸಾಗಬೇಕು, ಆದರೆ ಪ್ರಗತಿ ಎಂದು ಮಾಡಿರುವ ಅನೇಕ ಕಾರ್ಯಗಳಿಂದ ಪ್ರಕೃತಿ ವಿಕೋಪಗಳು ಸಂಭವಿಸಿವೆ. ಉರಿ ಬಿಸಿಲು ಹೆಚ್ಚಾದಾಗ ತಡೆಯಲು ಮುನುಷ್ಯನಿಗೆ ಕಷ್ಟವಾಗುವುದು, ಇನ್ನು ರಾತ್ರಿ ಕೂಡ ಸೂರ್ಯನ ಬೆಳಕು ಭೂಮಿಗೆ ಬಿದ್ದರೆ ಭೂಮಿಯ ಉಷ್ನಾಂಶ ಕೂಡ ಹೆಚ್ಚವುದು ಅಲ್ಲವೇ?



Click it and Unblock the Notifications
