Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಭೂಮಿ ಮೇಲೆಯೇ ಚಂದ್ರನ ಸೃಷ್ಟಿಸಿದ ಬಾಹ್ಯಾಕಾಶ ಸಂಸ್ಥೆ..! ಎಲ್ಲಿ? ಏಕೆ ಗೊತ್ತಾ?
ಮಾನವ ಎಷ್ಟು ಬುದ್ದಿವಂತ ಅನ್ನೋದನ್ನ ಸಾಬೀತು ಮಾಡುತ್ತಲೇ ಇರುತ್ತಾನೆ. ಆತನ ಕೈಯಿಂದ ಈ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದೇ ಇಲ್ಲ ಎನ್ನುವಂತಹ ಸ್ಥಿತಿಯೂ ಇದೆ. ಏಕೆಂದರೆ ಆತನಿಂದ ಎಲ್ಲವೂ ಸಾಧ್ಯ. ಭೂಮಿಯನ್ನೇ ಬಿಟ್ಟು ಹೊರ ಜಗತ್ತಿನಲ್ಲಿ ಜೀವಿಸುವುದನ್ನು ಕೂಡ ಆತ ಮುಂದೊಂದು ದಿನ ಮಾಡುವುದರಲ್ಲಿ ಸಂಶಯವಿಲ್ಲ. ಹಾಗೆ ಸೂರ್ಯನನ್ನು ಕೂಡ ತಲುಪುವ ಶಕ್ತಿ ಆತನಿಗಿದೆ.
ಹಾಗೆ ಇಡೀ ವಿಜ್ಞಾನಿಗಳು ಅತ್ಯಂತ ಕುತೂಹಲದಿಂದ ವೀಕ್ಷಿಸುವ ಚಂದ್ರನ ಕುರಿತು ಅವರ ಅಧ್ಯಯನ ನಡೆಯುತ್ತಲೇ ಇರುತ್ತೆ. ಚಂದ್ರನ ಮೇಲೆ ಮತ್ತೆ ಮಾನವರನ್ನು ಇಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಚಂದ್ರನ ಕುರಿತ ಅಧ್ಯಯನ ನಿರಂತರವಾಗಿರಲಿದೆ, ಆದರೆ ಭೂಮಿಗೆ ಇರುವ ಒಂದೇ ಒಂದು ಚಂದ್ರನ ನಾವು ಮರುಸೃಷ್ಟಿ ಮಾಡಿದರೆ ಹೇಗೆ?

ಚಂದ್ರನ ಹೋಲುವ ಮತ್ತೊಂದು ಚಂದ್ರನನ್ನು ತಯಾರಿಸಲು ವಿಜ್ಞಾನಿಗಳ ತಂಡ ಮುಂದಾಗಿದೆ. ಯುರೋಪಿಯನ್ ವಿಜ್ಞಾನಿಗಳ ತಂಡ ಭೂಮಿಯ ಮೇಲೆ ಚಂದ್ರನನ್ನು ಸೃಷ್ಟಿಸಲು ಮುಂದಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಮತ್ತು ಜರ್ಮನ್ ಏರೋಸ್ಪೇಸ್ ಸೆಂಟರ್ ಒಟ್ಟು ಸೇರಿ ಲುನಾ ಅನಲಾಗ್ ಫೆಸಿಲಿಟಿಯನ್ನು ಸೃಷ್ಟಿಸಿದೆ.
ಜರ್ಮನಿಯ ಕಲೋನ್ ಬಳಿ ಈ ಕೃತಕ ಚಂದ್ರನಲ್ಲಿ 900 ಟನ್‌ಗಳಷ್ಟು ಪುಡಿ ಮಾಡಲಾಗಿರುವ ಜ್ವಾಲಾಮುಖಿಯ ಬಂಡೆಗಳನ್ನು ಹಾಕಲಾಗಿದೆ. ಇದು ಚಂದ್ರನ ಮೇಲಿನ ಅನುಭವ ನೀಡಲಿದೆ. ಹಾಗೆ ಚಂದ್ರನ ಮೇಲೆ ಭೂಮಿಗಿಂತಲೂ ಕಡಿಮೆ ಗುರುತ್ವಾಕರ್ಷಣಾ ಬಲವಿದ್ದು ಅದೇ ಸ್ಥಿತಿಯನ್ನು ಇಲ್ಲಿಯೂ ಉಂಟು ಮಾಡಲು ವಿಜ್ಞಾನಿಗಳು ಚಲಿಸುವ ಸೀಲಿಂಗ್-ಮೌಂಟೆಡ್ ಟ್ರಾಲಿಗಳನ್ನು ಬಳಸಲು ಯೋಜಿಸಿದ್ದಾರೆ, ಅದು ರೋವರ್‌ಗಳು ಅಥವಾ ಗಗನಯಾತ್ರಿಗಳ ಚಲನವಲನಗಳನ್ನು ಟ್ರ್ಯಾಕ್ ಮಾಡಬಹುದು, ಚಂದ್ರನ ಮೇಲೆ ಅವರು ಎದುರಿಸುವ ಅನುಭವವನ್ನು ಇಲ್ಲಿಯೂ ಸೃಷ್ಟಿಸುತ್ತದೆ.
ವಿಜ್ಞಾನಿಗಳು ಜರ್ಮನಿಯ ಐಫೆಲ್ ಪ್ರದೇಶದಿಂದ ಜ್ವಾಲಾಮುಖಿಯ ಮಣ್ಣು, ಇಟಲಿಯ ಮೌಂಟ್ ಎಟ್ನಾ ಮತ್ತು ನಾರ್ವೆಯ ಬಂಡೆಗಳನ್ನು ಬಳಸಿ ಸುಮಾರು 700 ಚದರ ಮೀಟರ್ ಕೃತಕ ಚಂದ್ರನ ಮೇಲ್ಮೈಯನ್ನು ರಚಿಸಿದ್ದಾರೆ. ಚಂದ್ರನ ಮೇಲಿರುವ ಒತ್ತಡ, ಅಲ್ಲಿರುವ ಪರಿಸರ, ಅಲ್ಲಿನ ವಾತಾವರಣದಂತೆಯೇ ಇಲ್ಲಿಯೂ ಅನುಭವ ಪಡೆಯಬಹುದು.
ಹಾಗೆ ಈ ಪ್ರದೇಶದಲ್ಲಿ ಸೂರ್ಯನಂತೆ ಹೊಳೆಯುವ ವಸ್ತು, ಗಗನಯಾತ್ರಿಗಳ ಸೂಟ್ ಹಾಕಿಕೊಂಡು ನಡೆಯುವುದು, ಚಂದ್ರನಲ್ಲಿ ಅವರಿಗೆ ಎದುರಾಗುವ ಅಡೆತಡೆಗಳನ್ನು ಸಹ ಸೃಷ್ಟಿಸಲಾಗಿದೆ. ಅವರು ನಡೆಯುವಾಗ ಉಂಟಾಗುವ ಒತ್ತಡ, ಆಮ್ಲಜನಕದ ಹರಿವು ಎಲ್ಲವೂ ಕೂಡ ಚಂದ್ರನ ಮೇಲಿರುವಂತೆಯೇ ಇರಲಿದೆ. ಇದರಿಂದ ಅವರಿಗೆ ಚಂದ್ರನ ಮೇಲೆ ಇರುವ ಅನುಭವವಾಗುತ್ತದೆ.
ನಾಸಾಗೆ ಈ ಕೃತಕ ಚಂದ್ರ ಸಹಾಯಕ
ನಾಸಾ ಚಂದ್ರನ ಮೇಲೆ ಮಾನವರನ್ನು ಕಳುಹಿಸಿರುವ ಖ್ಯಾತಿ ಪಡೆದುಕೊಂಡಿದೆ. 1972ರಲ್ಲಿ ಅಪೊಲೋ 17 ಮಿಷನ್‌ನಲ್ಲಿ ಮಾನವರನ್ನು ಚಂದ್ರನ ಮೇಲೆ ಇಳಿಸಿತ್ತು, ಇದಾಗಿ ದಶಕಗಳು ಕಳೆದರು ಇಂತಹ ಮತ್ತೊಂದು ಯೋಜನೆಯನ್ನ ನಾಸಾ ಮಾಡಿರಲಿಲ್ಲ. ಆದ್ರೆ 2030ಕ್ಕೆ ಮತ್ತೆ ಮಾನವರನ್ನು ಚಂದ್ರನ ಮೇಲೆ ಇಳಿಸಲು ನಾಸಾ ತಯಾರಿ ನಡೆಸಿದೆ. ಇದಕ್ಕೆ ಈ ಕೃತಕ ಚಂದ್ರನ ಮೇಲೆ ತರಬೇತಿ ಪಡೆದಿರುವ ಗಗನಯಾತ್ರಿಗಳು ಈ ಮಿಷನ್‌ನ ಭಾಗವಾಗಬಹುದು. ಹೀಗಾಗಿ ನಾಸಾ ಕೂಡ ಈ ಯೋಜನೆಯಲ್ಲಿ ಪಾಲು ಹೊಂದಿದೆ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಕೂಡ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾಸಾ ಮತ್ತು ಇತರೆ ಪಾಲುದಾರರ ಮೇಲೆ ಹೆಚ್ಚು ಅವಲಂಬಿತವಾಗಿ. ಹೀಗಾಗಿ ಈ ಕೃತಕ ಚಂದ್ರನಲ್ಲಿ ತರಬೇತಿ ನಡೆಯುತ್ತಿದೆ. ಮುಂದೊಂದು ದಿನ ಮಾನವ ಮತ್ತೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದರೆ ಅದಕ್ಕೆ ಈ ಕೃತಕ ಚಂದ್ರನ ಕೊಡುಗೆಯೂ ಇರಲಿದೆ.



Click it and Unblock the Notifications
