Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಸಂಗೀತವೇ ಮದ್ದು! ಪ್ರತಿ ಸ್ವರದಿಂದ ನಿಮ್ಮ ಕಾಯಿಲೆ ಗುಣ; ಈ ರಾಗ ಕೇಳಿದ್ರೆ ಸಾಕು
ಆರೋಗ್ಯಕ್ಕೆ ಸಂಗೀತದ ಮದ್ದು! ಪ್ರತಿ ರಾಗವೂ ಒಂದು ಔಷಧ. ಸ್ವರಕ್ಕಿದೆ ನಿಮ್ಮ ಮನಸ್ಸು ಮತ್ತು ದೇಹವನ್ನು ಗುಣಪಡಿಸುವ ಶಕ್ತಿ. ಇದು ಆಯುರ್ವೇದದಿಂದ ವಿಜ್ಞಾನದವರೆಗೂ ಒಪ್ಪಿದ ಸತ್ಯ. ಹೌದು, ಧ್ವನಿ ಅಥವಾ ಶಬ್ದವು ಕೇವಲ ಆಲಿಸುವ ಮಾಧ್ಯಮವಲ್ಲ. ಇದು ನಮ್ಮ ದೇಹ ಮತ್ತು ಮನಸ್ಸನ್ನು ಗುಣಪಡಿಸುವ ಅಗಾಧ ಶಕ್ತಿಯನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಶಬ್ದ ಚಿಕಿತ್ಸೆಯನ್ನು (Sound Healing) ಬಳಸಲಾಗುತ್ತಿದೆ. ವೇದಗಳ ಕಾಲದಿಂದಲೂ ಮಂತ್ರಗಳನ್ನು ಪಠಿಸುವ ಮೂಲಕ ದೇಹ ಮತ್ತು ಮನಸ್ಸಿಗೆ ಶಾಂತಿ, ಸಮತೋಲನವನ್ನು ತರಲಾಗಿದೆ. ಆ ಕಾಲದಿಂದಲೂ ಇರುವ ಈ ಜ್ಞಾನವನ್ನು ಈಗ ಆಧುನಿಕ ವಿಜ್ಞಾನವೂ ಒಪ್ಪಿಕೊಂಡಿದೆ.
ಸಂಗೀತ, ನಿರ್ದಿಷ್ಟ ರಾಗಗಳು ಮತ್ತು ಕಂಪನಗಳು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ಸಂಶೋಧನೆಗಳಿಂದ ಸಾಬೀತುಗೊಂಡಿದೆ. ಪ್ರತಿಯೊಂದು ರಾಗವೂ ತನ್ನದೇ ಆದ ವಿಶಿಷ್ಟ ಕಂಪನವನ್ನು ಹೊಂದಿದೆ. ಈ ಕಂಪನಗಳು ನಮ್ಮ ಮನಸ್ಸು, ದೇಹ ಮತ್ತು ಅಂತರಂಗದ ಮೇಲೆ ನೇರ ಪರಿಣಾಮ ಬೀರುತ್ತವೆ. ನವರಸಗಳನ್ನು ಹೇಗೆ ಸಂಗೀತದ ಮೂಲಕ ಅಭಿವ್ಯಕ್ತಪಡಿಸಬಹುದೋ, ಅದೇ ರೀತಿ ನಿರ್ದಿಷ್ಟ ರಾಗಗಳನ್ನು ಕೇಳುವುದರಿಂದ ದೇಹದಲ್ಲಿನ ವಿವಿಧ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ಭಾರತೀಯ ಶಾಸ್ತ್ರೀಯ ಸಂಗೀತವು ರಾಗಗಳ ಮೂಲಕ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರಾಗಗಳು
ತಲೆನೋವಿಗೆ ಭೈರವ್
ನೀವು ತಲೆನೋವು (Headache) ಅಥವಾ ಮೈಗ್ರೇನ್‌ನಿಂದ (Migraine) ಬಳಲುತ್ತಿದ್ದರೆ, ರಾಗ ಭೈರವ್ ಅನ್ನು ಆಲಿಸುವುದು ಅಥವಾ ಕೇಳುವುದು ಸೂಕ್ತ. ಈ ರಾಗವು ಶಾಂತಗೊಳಿಸುವ ಮತ್ತು ನೋವು ನಿವಾರಿಸುವ ಗುಣಗಳನ್ನು ಹೊಂದಿದೆ. ಇದರ ಕಂಪನಗಳು ಮನಸ್ಸನ್ನು ಹಿತವಾಗಿಸುತ್ತದೆ. ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಈ ರಾಗವು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಮುಖವಾದ ರಾಗವಾಗಿದೆ. ಮುಂಜಾನೆ ಅಥವಾ ಬೆಳಗಿನ ಜಾವದಲ್ಲಿ ಹಾಡುವ ಈ ರಾಗವು ಹೊಸ ಚೈತನ್ಯವನ್ನು ನೀಡುತ್ತದೆ.

ಅಸಿಡಿಟಿಗೆ ಖಮಾಜ್
ಅಸಿಡಿಟಿ ಅಥವಾ ಜೀರ್ಣಕ್ರಿಯೆ ಸಮಸ್ಯೆಯಿಂದ (Acidity) ಬಳಲುತ್ತಿರುವವರು ರಾಗ ಖಮಾಜ್ ಕೇಳಬಹುದು. ಈ ರಾಗವು ದೇಹವನ್ನು ಸಮತೋಲನಗೊಳಿಸಲು ಸಹಕಾರಿ. ಹಾಗೆಯೇ ಆಂತರಿಕ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರಾಗವನ್ನು ಸಂಜೆ ಅಥವಾ ರಾತ್ರಿ ಸಮಯದಲ್ಲಿ ಆಲಿಸುವುದು ಸೂಕ್ತ. ಇದು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಅನೇಕ ಸಿನಿಮಾಗಳಲ್ಲಿ ಖಮಾಜ್ ರಾಗವನ್ನು ಬಳಸಲಾಗಿದೆ.

ನಿದ್ರಾಹೀನತೆಗೆ ಭೈರವಿ
ಪ್ರಸ್ತುತ ನಿದ್ರಾಹೀನತೆಯು (Insomnia) ಸಾಮಾನ್ಯ ಸಮಸ್ಯೆಯಾಗಿದೆ. ರಾಗ ಭೈರವಿ ಅಥವಾ ಭೈರವಿ ರಾಗ ಮನಸ್ಸನ್ನು ಶಾಂತಗೊಳಿಸಿ, ಆಳವಾದ ಮತ್ತು ಗುಣಮಟ್ಟದ ನಿದ್ರೆಗೆ ಪ್ರೇರೇಪಿಸುತ್ತದೆ. ರಾತ್ರಿ ಪೂರ್ತಿ ಎಚ್ಚರವಾಗಿರುವವರಿಗೆ ಇದು ಉತ್ತಮ ಚಿಕಿತ್ಸೆಯಾಗಿದೆ. ಈ ರಾಗವನ್ನು ದಿನದ ಯಾವುದೇ ಸಮಯದಲ್ಲಿ ಆಲಿಸಬಹುದು. ವಿಶೇಷವಾಗಿ ನಿದ್ರೆಗೆ ಮುನ್ನ ಈ ರಾಗ ಕೇಳುವುದು ಸೂಕ್ತವಾಗಿದೆ.

ರಕ್ತದೊತ್ತಡಕ್ಕೆ ಭೂಪ್
ಅಧಿಕ ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು ರಾಗ ಭೂಪ್ ಅಥವಾ ಭೂಪಾ ಸಹಕಾರಿಯಾಗಿದೆ. ಈ ರಾಗವು ದೇಹಕ್ಕೆ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಇದು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ರಾಗನ್ನು ಭೋಪಾಲಿ ಅಥವಾ ಭೂಪಾಲಿ ಎಂದು ಸಹ ಕರೆಯಲಾಗುತ್ತದೆ.

ಸಂಗೀತ ಚಿಕಿತ್ಸೆ ಕೇವಲ ರಾಗಗಳಿಗೆ ಸೀಮಿತವಲ್ಲ
ಸಂಗೀತ ಚಿಕಿತ್ಸೆಯು ಕೇವಲ ರಾಗಗಳಿಗೆ ಸೀಮಿತವಾಗಿಲ್ಲ. ಟಿಬೆಟಿಯನ್ ಸಿಂಗಿಂಗ್ ಬೌಲ್ಸ್, ಗಂಟೆಗಳು, ಡ್ರಮ್ಸ್ ಮತ್ತು ಇತರೆ ಉಪಕರಣಗಳನ್ನು ಸಹ ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಉಪಕರಣಗಳಿಂದ ಹೊರಬರುವ ಕಂಪನಗಳು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ತರುತ್ತದೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿಯೂ ಶಬ್ದ ಚಿಕಿತ್ಸೆಯ ಮಹತ್ವವನ್ನು ಗುರುತಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆಯ ಭಾಗವಾಗಿ ಸಂಗೀತವನ್ನು ಆಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ರೋಗಿಗಳು ಬೇಗ ಗುಣಮುಖರಾಗಲು ಸಹಾಯವಾಗುತ್ತದೆ.
ಒಟ್ಟಾರೆ, ಶಬ್ದ ಚಿಕಿತ್ಸೆಯು ಪ್ರಾಚೀನ ಅಥವಾ ಪೂರ್ವಜರ ಜ್ಞಾನ ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನದ ಅದ್ಭುತ ಸಂಗಮವಾಗಿದೆ. ಔಷಧೀಯ ಚಿಕಿತ್ಸೆಗಳ ಜೊತೆಗೆ ಪೂರಕವಾಗಿ, ಶಬ್ದ ಚಿಕಿತ್ಸೆಯನ್ನು ಬಳಸುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಒಂದೊಂದು ಸ್ವರದಲ್ಲಿ, ಒಂದೊಂದು ಕಂಪನದಲ್ಲಿಯೂ ಸಂಗೀತ ನಿಮ್ಮನ್ನು ಗುಣಪಡಿಸಲಿದೆ. ನಿಮ್ಮ ದೈನಂದಿನ ಜೀವನದಲ್ಲಿ ಈ ರಾಗಗಳನ್ನು ಆಲಿಸುವುದರಿಂದ ದೈಹಿಕ ನೋವು ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಒಂದು ಉತ್ತಮ ಸಾಧನವಾಗಿದೆ.



Click it and Unblock the Notifications