Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವದ ಹಲವು ಭಾಗದಲ್ಲಿ ಸೂರ್ಯಗ್ರಹಣ ಗೋಚರ..! ಕತ್ತಲು ಆವರಿಸಿದ್ದ ಕಂಡು ನಿಬ್ಬೆರಗಾದ ಜನ
ನಿನ್ನೆ ವಿಶ್ವದ ಹಲವು ಭಾಗದಲ್ಲಿ ಸಂಪೂರ್ಣ ಸೂರ್ಯಗ್ರಹಣ ಉಂಟಾಗಿತ್ತು. ಭಾರತ ಸೇರಿ ಏಷ್ಯಾ ಖಂಡದ ರಾಷ್ಟ್ರಗಳ ಹೊರತುಪಡಿಸಿ ಉಳಿದಂತೆ ಬಹುತೇಕ ಯೂರೋಪ್ ಭಾಗದ ರಾಷ್ಟ್ರಗಳು ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿವೆ. ಈ ಸೂರ್ಯಗ್ರಹಣವನ್ನು ವಿಶ್ವದಾಧ್ಯಂತ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಆಕಾಶದಲ್ಲಿ ಉಂಟಾದ ವಿಸ್ಮಯ ಕಂಡು ಜನರು ನಿಬ್ಬೆರಗಾದರು. ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಉಂಟಾಗುತ್ತದೆ. ಈ ವೇಳೆ ಚಂದ್ರನ ನೆರಳು ಭೂಮಿಯ ಮೇಲೆ ಬೀಳಲಿದೆ. ಮೆಕ್ಸಿಕೋದ ಮೇಲಿನಿಂದ ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದರಿಂದ ಆರಂಭಗೊಂಡು ಕೆನಡಾದ ಮೂಲಕ ಹಾದು ಹೋಗುತ್ತದೆ.

ಚಂದ್ರನ ನೆರಳು ಮೆಕ್ಸಿಕೋದ ಪೆಸಿಫಿಕ್ ಕರಾವಳಿಯನ್ನು ಸ್ಥಳೀಯ ಸಮಯ 11:07 ಕ್ಕೆ (1807 GMT) ಸಂಪೂರ್ಣ ಕತ್ತಲೆಯಲ್ಲಿ ಮುಳುಗಿಸಿತು ಮತ್ತು ಒಂದು ಗಂಟೆಯೊಳಗೆ ಕೆನಡಾದ ಅಟ್ಲಾಂಟಿಕ್ ಕರಾವಳಿಯ ಮೇಲೆ ಸಾಗರದತ್ತ ಸಾಗಿತ್ತು.
ಮೆಕ್ಸಿಕೋ ನಗರದಲ್ಲಿ ಸಾವಿರಾರು ಜನರು ಈ ಅಪರೂಪದ ಸೂರ್ಯಗ್ರಹಣ ವೀಕ್ಷಿಸಲು ಒಂದೇಡೆ ಸೇರಿದ್ದರು. ಈ ಯುರೋಪ್ ಭಾಗಕ್ಕೆ ಮುಂದಿನ ಸಂಪೂರ್ಣ ಸೂರ್ಯಗ್ರಹಣವು 2044ಕ್ಕೆ ಸಂಭವಿಸಲಿದೆ. ಹೀಗಾಗಿ ಈ ವಿಸ್ಮಯ ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಜನ ನೆರೆದಿದ್ದರು. ಆವರು ಸುರಕ್ಷತಾ ಮಾನದಂಡಗಳ ಮೂಲಕ ಸಂಪೂರ್ಣ ಸೂರ್ಯ ಗ್ರಹಣವನ್ನು ವೀಕ್ಷಿಸಿದ್ದಾರೆ.
ಆರಂಭದಿಂದ ಅಂತ್ಯದವರೆಗೂ ವಿಸ್ಮಯದಂತೆ ಈ ಸೂರ್ಯಗ್ರಹಣ ಕಂಡಿದೆ. ಚಂದ್ರನ ಸಂಫೂರ್ಣವಾಗಿ ಸೂರ್ಯನ ಮುಚ್ಚಿಕೊಂಡಾಗ ಸಂಪೂರ್ಣ ಕತ್ತಲು ಆವರಿಸಿತ್ತು. ಇದು ದೀರ್ಘಕಾಲದ ಸೂರ್ಯಗ್ರಹಣವಾಗಿತ್ತು. ಇದಕ್ಕೂ ಮೊದಲು 53 ವರ್ಷದ ಹಿಂದೆ ಈ ರೀತಿ ಸೂರ್ಯಗ್ರಹಣ ಸಂಭವಿಸಿತ್ತು. ಅದನ್ನು ಬಿಟ್ಟರೆ ಇಷ್ಟು ದೀರ್ಘ ಸಮಯ ಸೂರ್ಯನನ್ನು ಚಂದ್ರನು ಆವರಿಸಿದ್ದು ಇದೇ ಮೊದಲು.
ಚಂದ್ರ ಸೂರ್ಯನನ್ನು ಆವರಿಸಿದ ಬಳಿಕ ಸೂರ್ಯನ ಸುತ್ತಲು ಉಂಗುರದ ಆಕಾರ ಮೂಡಿತ್ತು, ಕೆಲವು ಭಾಗದಲ್ಲಿ ಈ ಫೈರ್ ಆಫ್ ವಿಂಗ್ಸ್ ರೀತಿಯ ವಿದ್ಯಮಾನವು ಸಂಭವಿಸಿದೆ. ಸೂರ್ಯನ ಸುತ್ತಲು ಬೆಂಕಿಯ ಆಕಾರದಲ್ಲಿ ಬೆಳಕು ಮೂಡುತ್ತದೆ. ಇದು ದೀರ್ಘಕಾಲ ಸಂಭವಿಸುವ ಸೂರ್ಯಗ್ರಹಣದ ವೇಳೆ ಹಾಗೂ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಕಂಡು ಬರುತ್ತದೆ.
ಇನ್ನೊಂದೆಡೆ ನಾಸಾ ಸಹ ಈ ಅಪರೂಪದ ವಿದ್ಯಮಾನವನ್ನು ಸೆರೆಹಿಡಿಯಲು ಅಷ್ಟೇ ಕುತೂಹಲದಿಂದ ವ್ಯವಸ್ಥೆ ಮಾಡಿಕೊಂಡಿತ್ತು. ಅಲ್ಲದೆ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಿಂದಲೂ ಈ ಗ್ರಹಣವು ಗೋಚರವಾಗಿತ್ತು, ಈ ವಿಶೇಷ ವಿದ್ಯಮಾನದಂದು ಎಲ್ಲಾ ಖಗೋಳಶಾಸ್ತ್ರಜ್ಞರ ದೃಷ್ಟಿ ಆಕಾಶದತ್ತ ನೆಟ್ಟಿತ್ತು.
ಮೆಕ್ಸಿಕನ್ ಬೀಚ್‌ಸೈಡ್ ರೆಸಾರ್ಟ್ ಪಟ್ಟಣವಾದ ಮಜಟ್ಲಾನ್ ಉತ್ತರ ಅಮೆರಿಕಾದಲ್ಲಿ ಮೊದಲ ಪ್ರಮುಖ ವೀಕ್ಷಣಾ ಸ್ಥಳವಾಗಿತ್ತು. ಭಾಗಶಃ ಗ್ರಹಣವು ದಕ್ಷಿಣ ಟೆಕ್ಸಾಸ್‌ನಲ್ಲಿ ಮೆಕ್ಸಿಕೊದ ದಕ್ಷಿಣ ಗಡಿಯಲ್ಲಿರುವ ಈಗಲ್ ಪಾಸ್ ಬಳಿ ಪ್ರಾರಂಭವಾಯಿತು, ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗ್ರಹಣದ ಪ್ರಾರಂಭವನ್ನು ಸೂಚಿಸುತ್ತದೆ.
2024 ರ ಸಂಪೂರ್ಣ ಸೂರ್ಯಗ್ರಹಣವು ಐತಿಹಾಸಿಕ ಆಕಾಶ ಘಟನೆಯಾಗಿದೆ ಏಕೆಂದರೆ ಇದು ಆಗಸ್ಟ್ 2044 ರವರೆಗೆ ಮತ್ತೆ ಯುಎಸ್‌ನಾದ್ಯಂತ ಗೋಚರಿಸುವುದಿಲ್ಲ. ಇಡೀ ಸೂರ್ಯಗ್ರಹಣವು ಉತ್ತರ ಅಮೆರಿಕಾದಾದ್ಯಂತ ತಂಪಾದ, ಮಧ್ಯಾಹ್ನವೇ ಕತ್ತಲೆ ಆವರಿಸಿತು. ಬೀದಿ ದೀಪಗಳು , ವಾಹನಗಳ ಲೈಟ್‌ಗಳು ಮಧ್ಯಾಹ್ನದ ವೇಳೆಯೇ ಹತ್ತಿಸಲಾಗಿತ್ತು. ಏಕೆಂದರೆ ಅಲ್ಲಿ ಅಷ್ಟೊಂದು ಕತ್ತಲು ಆವರಿಸಿತ್ತು. ಇಷ್ಟು ಕತ್ತಲೆ ಆವರಿಸಿದ್ದು ಕಂಡು ಜನ ನಿಬ್ಬೆರಗಾಗಿ ಆಕಾಶದತ್ತ ಮುಖ ಮಾಡಿದ್ದರು.
ಸೂರ್ಯಗ್ರಹಣ ಎಷ್ಟು ಕಾಲವಿತ್ತು
ಸೌರ ಗ್ರಹಣವು ಮೆಕ್ಸಿಕೋ, ಯುಎಸ್ ಮತ್ತು ಕೆನಡಾದ ಕೆಲವು ಸ್ಥಳಗಳಲ್ಲಿ ಒಟ್ಟು 4 ನಿಮಿಷಗಳು, 28 ಸೆಕೆಂಡುಗಳವರೆಗೆ ದೀರ್ಘವಾಗಿತ್ತು. ಉತ್ತರ ಅಮೆರಿಕಾವು ಸಂಪೂರ್ಣ ಸೂರ್ಯಗ್ರಹಣವನ್ನು ಅನುಭವಿಸುವ ಮೊದಲ ಸ್ಥಳವಾಗಿತ್ತು. ಅಪರೂಪದ ಆಕಾಶ ಘಟನೆಯನ್ನು ವೀಕ್ಷಿಸಲು ಸಾಧ್ಯವಾಗದವರು, ನಾಸಾದಿಂದ ನೇರ ಪ್ರಸಾರ ವೀಕ್ಷಿಸಿದರು.
ಮೆಕ್ಸಿಕೋದಲ್ಲಿ ಮಜಟ್ಲಾನ್ ಮತ್ತು ಟೊರಿಯನ್; ಸ್ಯಾನ್ ಆಂಟೋನಿಯೊ, ಆಸ್ಟಿನ್, ವಾಕೊ, ಫೋರ್ಟ್ ವರ್ತ್ ಮತ್ತು ಟೆಕ್ಸಾಸ್‌ನಲ್ಲಿ ಡಲ್ಲಾಸ್; ಅರ್ಕಾನ್ಸಾಸ್‌ನಲ್ಲಿ ಲಿಟಲ್ ರಾಕ್; ಮಿಸೌರಿಯಲ್ಲಿ ಸೇಂಟ್ ಲೂಯಿಸ್; ಕೆಂಟುಕಿಯಲ್ಲಿ ಲೂಯಿಸ್ವಿಲ್ಲೆ; ಇಂಡಿಯಾನಾದಲ್ಲಿ ಇಂಡಿಯಾನಾಪೊಲಿಸ್; ಓಹಿಯೋದಲ್ಲಿ ಡೇಟನ್, ಕೊಲಂಬಸ್, ಟೊಲೆಡೊ ಮತ್ತು ಕ್ಲೀವ್ಲ್ಯಾಂಡ್; ಮಿಚಿಗನ್‌ನಲ್ಲಿ ಡೆಟ್ರಾಯಿಟ್; ಪೆನ್ಸಿಲ್ವೇನಿಯಾದಲ್ಲಿ ಎರಿ; ನ್ಯೂಯಾರ್ಕ್‌ನಲ್ಲಿ ಬಫಲೋ, ರೋಚೆಸ್ಟರ್ ಮತ್ತು ಸಿರಾಕ್ಯೂಸ್; ಮತ್ತು ಕೆನಡಾದಲ್ಲಿ ಹ್ಯಾಮಿಲ್ಟನ್, ಟೊರೊಂಟೊ ಮತ್ತು ಮಾಂಟ್ರಿಯಲ್‌ನಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.



Click it and Unblock the Notifications