Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಇಂದಿನ ಸೂರ್ಯಗ್ರಹಣದ ಸಮಯ, ಸೂತಕ, ರಾಹುಕಾಲ..! ಮಾಹಿತಿ ಇಲ್ಲಿದೆ..!
ಈ ವರ್ಷ 4 ಗ್ರಹಣಗಳಿಗೆ ನಾವುಗಳು ಸಾಕ್ಷಿಯಾಗಲಿದ್ದೇವೆ. ಎರಡು ಚಂದ್ರಗ್ರಹಣ ಹಾಗೂ ಮತ್ತೆರಡು ಸೂರ್ಯಗ್ರಹಣವಾಗಿವೆ. ಈ ತಿಂಗಳ 25ರ ಹೋಳಿ ಹುಣ್ಣಿಮೆಯಂದು ಮೊದಲ ಚಂದ್ರಗ್ರಹಣ ಸಂಭವಿಸಿದರೆ, ಏಪ್ರಿಲ್ 8ರಂದು (ಇಂದು) ಸೂರ್ಯಗ್ರಹಣ ಸಂಭವಿಸುತ್ತಿದೆ. ಈ ಕುರಿತು ಬಹುಪಾಲು ಮಂದಿಗೆ ತಿಳಿದಿದೆ. ಹಿಂಧೂ ಧಾರ್ಮಿಕ ಕ್ಯಾಲೆಂಡರ್ ಪ್ರಕಾರವಾಗಿ ನಾವು ತಿಥಿ, ಸಮಯ, ಕಾಲ ನೋಡುತ್ತೇವೆ. ಜೊತೆಗೆ ಗ್ರಹಣ ಕಾಲಗಳನ್ನು ಎಲ್ಲಾ ಕ್ಯಾಲೆಂಡರ್‌ಗಳೂ ನಿಖರವಾಗಿ ಹೇಳುತ್ತವೆ.

ಸೂರ್ಯಗ್ರಹಣ ಎಂದರೇನು?
ಸೂರ್ಯಗ್ರಹಣವು ಒಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಚಂದ್ರನು ತನ್ನ ಕಕ್ಷೆಯ ಚಲನೆಯ ವೇಳೆ ಸೂರ್ಯ ಮತ್ತು ಭೂಮಿಯ ನಡುವೆ ಪ್ರವೇಶಿಸಿದಾಗ ಸಂಭವಿಸುತ್ತದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಪ್ರವೇಶಿಸಿದಾಗ ಸೂರ್ಯನ ಕಿರಣಗಳು ಕೆಲವು ಸಮಯ ಭೂಮಿಗೆ ಬರದಂತೆ ತಡೆಯುತ್ತದೆ. ಈ ಸಂದರ್ಭದಲ್ಲಿ, ಚಂದ್ರನ ನೆರಳು ಮಾತ್ರ ಭೂಮಿಯ ಮೇಲೆ ಬೀಳುತ್ತದೆ ಇದನ್ನು ಸೂರ್ಯ ಗ್ರಹಣ ಎನ್ನಲಾಗುತ್ತದೆ. ಸೂರ್ಯಗ್ರಹಣವು ಪೂರ್ಣ ಸೂರ್ಯಗ್ರಹಣ, ಭಾಗಶಃ ಗ್ರಹಣ ಮತ್ತು ಉಂಗುರ ಗ್ರಹಣ ರೂಪದಲ್ಲಿ ಸಂಭವಿಸುತ್ತದೆ.
ಈ ಏಪ್ರಿಲ್ 8ರಂದು ಸಂಭವಿಸುತ್ತಿರುವ ಸೂರ್ಯಗ್ರಹಣವು ಅಪರೂಪದ ಗ್ರಹಣ ಎಂದು ಕರೆಯಲಾಗಿದೆ. ಏಕೆಂದರೆ ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಿಕೊಳ್ಳುತ್ತಾನೆ. ಇದರಿಂದ ಭೂಮಿಯ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಕತ್ತಲೆ ಆವರಿಸಿಕೊಳ್ಳಲಿದೆ. ಜೊತೆಗೆ ಚಂದ್ರ ಎಂದಿಗಿಂತ ದೊಡ್ಡದಾಗಿ ಗೋಚರವಾಗುತ್ತದೆ. ಗ್ರಹಣದ ಹಿಂದಿನ ದಿನದಂದು ಚಂದ್ರನು ಭೂಮಿಗೆ ಕೇವಲ 3,60,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು, ಇದು ಚಂದ್ರ ಅತ್ಯಂತ ಸಮೀಪಕ್ಕೆ ಬರುವ ದಿನವಾಗಿದೆ.
ಉತ್ತರ ಅಮೆರಿಕಾ ಮತ್ತು ಮಧ್ಯ ಅಮೆರಿಕದಾದ್ಯಂತ ಈ ಗ್ರಹಣ ಗೋಚರಿಸುತ್ತದೆ. ಸಂಪೂರ್ಣ ಸೂರ್ಯಗ್ರಹಣವು ಸಂಪೂರ್ಣ ಕತ್ತಲೆಯ ಹಾದಿಯಲ್ಲಿ 4 ನಿಮಿಷ ಮತ್ತು 28 ಸೆಕೆಂಡುಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣ ಸೂರ್ಯ ಗ್ರಹಣದ ಸಮಯ ಬರೋಬ್ಬರಿ 7.5 ನಿಮಿಷಗಳಾಗಿದೆ.
ಈ ಗ್ರಹಣದ ಬಳಿಕ ಆಗಸ್ಟ್ 12 2026ರಂದು ಇದೇ ರೀತಿಯ ಗ್ರಹಣ ಮತ್ತೆ ಬರಲಿದೆ. ಅಂದು ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಅಟ್ಲಾಂಟಿಕ್ ಸಾಗರದಲ್ಲಿ ಗೋಚರವಾಗಲಿದೆ.
2024ರಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಸಂಭವಿಸಲಿದೆ. ಇದಾದ 15 ದಿನಗಳಲ್ಲಿ ಚೈತ್ರ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಉಂಟಾಗಲಿದೆ. ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಮಾರ್ಚ್ 25 ರಂದು ನಡೆಯಲಿರುವ ಪೆನಂಬ್ರಾಲ್ ಚಂದ್ರಗ್ರಹಣವು ಅತ್ಯಂತ ಚಿಕ್ಕದಾದ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಅಂಚಿನಲ್ಲಿ ಹಾದುಹೋಗುತ್ತದೆ. ಇದು ಯುರೋಪ್, ಉತ್ತರ ಮತ್ತು ಪೂರ್ವ ಏಷ್ಯಾ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಿಂದ ಗೋಚರಿಸುತ್ತದೆ. ಅಂದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದಿಲ್ಲ.
ಸೂರ್ಯಗ್ರಹಣ 2024: ದಿನಾಂಕ ಮತ್ತು ಸಮಯ
ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 8, 2024 ರಂದು ಸಂಭವಿಸಲಿದೆ ಮತ್ತು ಭಾರತೀಯ ಪ್ರಮಾಣಿತ ಸಮಯದ ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 09:12 ರಿಂದ ಪ್ರಾರಂಭವಾಗುತ್ತದೆ ಮತ್ತು ಇದು ಏಪ್ರಿಲ್ 9 ಬೆಳಗಿನ ಜಾವ 2:22ರ ವರೆಗೆ ಇರುತ್ತದೆ.
ರಾಹುಕಾಲ- ಬಳಗ್ಗೆ 7:30ರಿಂದ - 9 ಗಂಟೆ
ಗುಳಿಕ ಕಾಲ-ಮಧ್ಯಾಹ್ನ 12ರಿಂದ 3 ಗಂಟೆ



Click it and Unblock the Notifications