Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿತೃಪಕ್ಷದ ದಿನ ಸೂರ್ಯಗ್ರಹಣ: ಈ ರಾಶಿವರಿಗೆ ಮಾತ್ರವೇ ಇದು ಅದೃಷ್ಟಕರ.! ಯಾರಿಗೆ ನೋಡಿ!
ನೀವು ಸೆಪ್ಟೆಂಬರ್ 7ರಂದು ಚಂದ್ರ ಗ್ರಹಣ ನೋಡಿದ್ದೀರಿ. ಕೆಂಪು ಚಂದ್ರ ಆಕಾಶದಲ್ಲಿ ಮೋಡಿ ಮಾಡಿದ್ದ ಈಗ 15 ದಿನಕ್ಕೆ ಸರಿಯಾಗಿ ಅಂದ್ರೆ ಮಹಾಲಯ ಅಮಾವಾಸ್ಯೆ ಎಂದೇ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಪಿತೃ ಪಕ್ಷದ ಕೊನೆಯ ದಿನದಂದು ಈ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಗ್ರಹಣವು ರಾತ್ರಿ 11 ಗಂಟೆಗೆ ಪ್ರಾರಂಭವಾಗಿ ಮರುದಿನ ಬೆಳಗಿನ ಜಾವ 3:24 ರ ವರೆಗೆ ಇರಲಿದೆ. ಅಂದರೆ ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಆದರೆ ಈ ಸಮಯದಲ್ಲಿನ ಪರಿಣಾಮಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣವನ್ನು ಬಹಳ ಅಪರೂಪದ ಹಾಗೆ ಪರಿಣಾಮಕಾರಿ ಎಂದು ಕರೆಯಲಾಗಿದೆ. ಸೂರ್ಯಗ್ರಹಣವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ, ವಿಶೇಷವಾಗಿ ಅದು ಪಿತೃಪಕ್ಷದಲ್ಲಿ ಉಂಟಾಗುತ್ತಿದೆ. ಹೀಗಾಗಿ ಗ್ರಹಣ ಸಮಯವು ಶುಭ ಹಾಗೂ ಅಶುಭ ಕಾರಣಗಳಿಗಾಗಿ ಗಮನ ಸೆಳೆದಿದೆ.

ಸೂರ್ಯನು ಕನ್ಯಾ ರಾಶಿಯಲ್ಲಿರುವಾಗ ಈ ಗ್ರಹಣ ಸಂಭವಿಸುತ್ತಿದೆ. ಈ ಸಮಯದಲ್ಲಿ ಶನಿ ಹಿಮ್ಮುಖ ಚಲನೆಯಲ್ಲಿದ್ದಾನೆ. ನ್ಯಾಯ ಮತ್ತು ಕರ್ಮದ ಅಂಶವಾದ ಶನಿಯ ಈ ಸ್ಥಾನವು ಗ್ರಹಣದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಈ ಗ್ರಹಗಳ ಸಂಯೋಜನೆಯು ಅನೇಕ ರಾಶಿ ಜನರಿಗೆ ನಿರ್ಣಾಯಕ ಸಮಯವನ್ನು ತರುತ್ತದೆ.
ಅದ್ರಲ್ಲೂ ಕೆಲವು ರಾಶಿಯವರಿಗೆ ಅನುಕೂಲಕರ ಸಮಯವನ್ನು ನೀಡಲಿದೆ. ವೃತ್ತಿಯಲ್ಲಿ ಪ್ರಗತಿ, ಹೂಡಿಕೆ, ಉಳಿತಾಯ, ದಾಂಪತ್ಯ ಸಂಬಂಧವಾಗಿ ನಿಮಗೆ ಲಾಭದಾಯಕ ದಿನಗಳಿವೆ. ಹಾಗಾದ್ರೆ ಈ ಸೂರ್ಯ ಗ್ರಹಣದ ಸಮಯದಲ್ಲಿ ಯಾರಿಗೆ ಶುಭಕರವಾಗುತ್ತದೆ. ಯಾರಲ್ಲಿ ಉತ್ತಮ ದಿನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಈ ಬಾರಿ ಸೂರ್ಯಗ್ರಹಣವು ಆದಾಯ, ಲಾಭ ಮತ್ತು ಸಾಮಾಜಿಕ ಸಂಬಂಧಗಳನ್ನು ಪ್ರತಿನಿಧಿಸುವ ವೃಷಭ ರಾಶಿಯ 11 ನೇ ಮನೆಯಲ್ಲಿ ಸಂಭವಿಸುತ್ತಿದೆ. ಇದರಿಂದ ನಿಮ್ಮ ಹಲವು ಸಮಸ್ಯೆಗಳು ನಿವಾರಣೆಯಾಗಬಹುದು. ಅದ್ರಲ್ಲೂ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಷೇರು ಖರೀದಿ, ಹೂಡಿಕೆಗಳು, ಬ್ಯಾಂಕಿಂಗ್ ಕುರಿತಾದ ವ್ಯವಹಾರದಲ್ಲಿ ಪ್ರಯೋಜನ ಪಡೆಯಬಹುದು. ಕೆಲಸಗಳು ವೇಗ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರಾಮಾಣಿಕವಾಗಿ ದಾನ ಧರ್ಮದಲ್ಲಿ ನೀವು ಭಾಗಿಯಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರ 10 ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ, ಇದನ್ನು ಕೆಲಸ ಮತ್ತು ವೃತ್ತಿಜೀವನದ ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಳೆಯ ಪರಿಚಯಸ್ಥರಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳು ಹಿಂದೆಂದಿಗಿಂತಲೂ ಲಾಭ ನೋಡಬಹುದು. ಶುಭ ಕಾರ್ಯ ಸಂಬಂಧವಾಗಿ ನೀವು ಆಲೋಚಿಸಬಹುದು. ವೃತ್ತಿ ಜೀವನ ಸಂಬಂಧವಾಗಿ ಇದ್ದ ಏರಿಳಿತಗಳು ನಿವಾರಣೆಯಾಗಲಿದೆ. ನಿಮ್ಮ ಕಠಿಣ ಪರಿಶ್ರಮಗಳು ಉತ್ತಮ ಪ್ರತಿಫಲವನ್ನು ನೀಡಲಿದೆ.
ಮಕರ ರಾಶಿ
ಮಕರ ರಾಶಿಯ 3ನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಇದು ನಿಮ್ಮ ಸಂಬಂಧದ ವಿಚಾರದಲ್ಲಿ ಪ್ರಭಾವ ಉಂಟು ಮಾಡಲಿದೆ. ಅದ್ರಲ್ಲೂ ಯಾವುದಾದರು ವಿಚಾರದಲ್ಲಿ ಅಂದರೆ ಆಸ್ತಿ, ಹಣಕಾಸು ಕುರಿತ ವಿಚಾರದಲ್ಲಿ ನಿಮ್ಮ ಸಂಬಂಧಗಳಲ್ಲಿ ಮನಸ್ತಾಪಗಳಿದ್ದರೆ ಈ ಸಮಯದಲ್ಲಿ ನಿವಾರಣೆಯಾಗುವ ಸಂಭವವಿದೆ. ಈ ದಿನದಂದು ಶನಿಯ ಸಂಚಾರದಿಂದಾಗಿ, ನೀವು ಸಾಡೇಸಾತಿಯಿಂದ ಮುಕ್ತಿ ಪಡೆಯಬಹುದು, ಇದು ದೊಡ್ಡ ಪರಿಹಾರವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ರೀತಿಯ ಪ್ರಗತಿ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











