Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
Surya Grahan April 2023: ಏಪ್ರಿಲ್ 20ಕ್ಕೆ ಸಂಭವಿಸಲಿದೆ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಇದರ ಫಲ ಒಳ್ಳೆಯದು, ಯಾರಿಗಲ್ಲ
2023ರ ಮೊದಲ ಸೂರ್ಯಗ್ರಹಣ ಏಪ್ರಿಲ್ 20ಕ್ಕೆ ಸಂಭವಿಸಲಿದೆ. ಮೇಷ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಇರಲಿದ್ದು ಈ ಸಮಯ ಕೆಲ ರಾಶಿಗಳಿಗೆ ತುಂಬಾನೇ ಒಳ್ಳೆಯದು, ಇನ್ನು ಕೆಲವರು ಈ ಗ್ರಹಣದ ನಂತರ ಸ್ವಲ್ಪ ಎಚ್ಚರಿಕೆವಹಿಸಬೇಕಾಗಿದೆ.
ಏಪ್ರಿಲ್ 20 ಸೂರ್ಯಗ್ರಹಣದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ:

ಮೇಷ ರಾಶಿ
ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸಲಿದೆ. ಈ ಸೂರ್ಯಗ್ರಹಣದ ಪ್ರಭಾವದಿಂದಾಗಿ ಮೇಷ ರಾಶಿಯವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಆರೋಗ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಒಡಹುಟ್ಟಿದವರೊಂದಿಗಿನ ನಿಮ್ಮ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆದರೆ ಗ್ರಹಣದ ನಂತರ ಅಂದರೆ ಏಪ್ರಿಲ್ 22ಕ್ಕೆ ಗುರು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸುತ್ತದೆ, ನಂತರ ಸಮಸ್ಯೆಗಳು ದೂರಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಸೂರ್ಯಗ್ರಹಣ ವೃತ್ತಿ ಜೀವನದ ವಿಷಯದಲ್ಲಿ ಅನುಕೂಲಕರವಾಗಿದೆ. ಆದರೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿಬೇಕಾಗಿದೆ. ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ, ಆದರೆ ಕೆಲಸದ ಒತ್ತಡ ಅಧಿಕವಿರಲಿದೆ.
ಮಿಥುನ ರಾಶಿ
ಹೊಟ್ಟೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆವಿರಬಹುದು. ಈ ಅವಧಿಯಲ್ಲಿ ಖರ್ಚಿನಲ್ಲಿ ಮಿತಿ ಇರಲಿ, ಇಲ್ಲದಿದ್ದರೆ ಆರ್ಥಿಕ ಸಂಕಷ್ಟ ಉಂಟಾಗಬಹುದು. ಸಂಬಂಧದ ವಿಷಯದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಹೊರ ದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಕರ್ಕ ರಾಶಿ
ಈ ಅವಧಿಯಲ್ಲಿ ಇತರರು ಸಹಾಯ ಮಾಡುತ್ತಾರೆ ಎಂದು ಕೂರದೆ, ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದುವರೆಯಿರಿ. ಈ ಅವಧಿಯಲ್ಲಿ ಕುಟುಂಬದಲ್ಲಿ ಸಮಸ್ಯೆಗಳಿರಬಹುದು. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯ ಜನರು ಕೂಡ ಈ ಗ್ರಹಣದ ಸಮಯದಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸಿ, ಪ್ರಯಾಣ ಮಾಡುವಾಗ ಎಚ್ಚರವಹಿಸಿ.
ಕನ್ಯಾ ರಾಶಿ
ಈ ಸೂರ್ಯಗ್ರಹಣದ ಪರಿಣಾಮದಿಂದಾಗಿ ಕನ್ಯಾ ರಾಶಿಯವರಿಗೆ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ, ನೀವು ಪ್ರಯಾಣಿಸುವಾಗ ಜಾಗರೂಕರಾಗಿರಬೇಕು. ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಅಲ್ಲದೆ ಹಣವನ್ನು ಬಹಳ ಎಚ್ಚರಿಕೆಯಿಂದ ಬಳಸಿ.
ತುಲಾ ರಾಶಿ
ಈ ಸೂರ್ಯಗ್ರಹಣ ನಿಮಗೆ ಮಿಶ್ರಫಲ ನೀಡಲಿದೆ. ಆರ್ಥಿಕವಾಗಿ ನೋಡುವುದಾದರೆ ಈ ಅವಧಿ ತುಂಬಾನೇ ಒಳ್ಳೆಯದಿದೆ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಆದರೆ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು, ಆರೋಗ್ಯದ ಬಗ್ಗೆ ಜಾಗ್ರತೆ.
ವೃಶ್ಚಿಕ ರಾಶಿ
ಈ ಸೂರ್ಯಗ್ರಹಣ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಲ್ಲ. ಈ ಗ್ರಹಣದ ಪ್ರಭಾವದಿಂದಾಗಿ ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಹೆಚ್ಚಾಗುವ ಸಾಧ್ಯತೆಯಿದೆ ಅಲ್ಲದೆ ಆರ್ಥಿಕ ಸಮಸ್ಯೆಗಳು ಸಹ ಹೆಚ್ಚಾಗಬಹುದು. ಬಜೆಟ್ ಪ್ರಕಾರ ಹಣ ಖರ್ಚು ಮಾಡಿ.
ಧನು ರಾಶಿ
ಆರೋಗ್ಯದ ದೃಷ್ಟಿಯಿಂದ ಈ ಗ್ರಹಣ ತುಂಬಾ ಒಳ್ಳೆಯದಿದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೂ ಈ ಗ್ರಹಣ ನಿಮ್ಮ ರಾಶಿಗೆ ಒಳ್ಳೆಯ ಫಲಿತಾಂಶ ನೀಡಿದೆ. ಆರ್ಥಿಕವಾಗಿ ಈ ಅವಧಿಯಲ್ಲಿ ಸದೃಢವಾಗಿರುತ್ತೀರಿ. ಈ ಗ್ರಹಣ ಧನು ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಮಕರ ಸಂಕ್ರಾಂತಿ
ಸೂರ್ಯಗ್ರಹಣವು ಮಕರ ರಾಶಿಯವರಿಗೆ ಕುಟುಂಬದಲ್ಲಿ ಸಮಸ್ಯೆಗಳನ್ನು ತರಬಹುದು. ಈ ಗ್ರಹಣದ ದುಷ್ಪರಿಣಾಮಗಳಿಂದ ಕುಟುಂಬ ಸದಸ್ಯರಲ್ಲಿ ಕಲಹ ಉಂಟಾಗಬಹುದು. ಇದಲ್ಲದೆ, ತಾಯಿಯ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಕುಂಭ ರಾಶಿ
ಈ ಅವಧಿಯಲ್ಲಿ ನೀವು ಮತ್ತಷ್ಟು ಬುದ್ಧಿವಂತಿಕೆಯಿಂದ ವರ್ತಿಸುತ್ತೀರಿ. ಈ ಅವಧಿಯಲ್ಲಿ ತಾಳ್ಮೆ ಹೆಚ್ಚಾಗಲಿದೆ. ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ, ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿದೆ.
ಮೀನ ರಾಶಿ
ಈ ಸಮಯ ನಿಮಗೆ ಆರ್ಥಿಕವಾಗಿ ಒಳ್ಳೆಯದಿದೆ. ಏನಾದರೂ ಆಸ್ತಿ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಈ ಸೂರ್ಯ ಗ್ರಹಣದ ಬಳಿಕ ವೈವಾಹಿಕ ಅಥವಾ ಕುಟುಂಬ ಜೀವನದ ಸಮಸ್ಯೆ ಬಗೆಹರಿಸಲು ಅಧಿಕ ಗಮನ ಕೊಡಬೇಕಾಗಿದೆ.
ಸೂರ್ಯಗ್ರಹಣದ ಕೆಟ್ಟ ಪ್ರಭಾವ ತಡೆಯಲು ಜ್ಯೋತಿಷ್ಯ ಪರಿಹಾರ
* ನಿರ್ಗತಿಕರಿಗೆ ದಾನ ಮಾಡಿ
* ಸೂರ್ಯ ಅಷ್ಟಕಂ ಸ್ತೋತ್ರ ಪಠಿಸಿ.



Click it and Unblock the Notifications
