Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ತುಲಾ ರಾಶಿಯಲ್ಲಿ ಸಂಭವಿಸಲಿದೆ ಸೂರ್ಯಗ್ರಹಣ: ರಾಶಿಗಳ ಮೇಲೆ ಈ ಗ್ರಹಣದ ಪ್ರಭಾವ ಹೇಗಿರಲಿದೆ?
ಅಕ್ಟೋಬರ್ 14ರ ಅಮವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣವನ್ನು ಜ್ಯೋತಿಷ್ಯದಲ್ಲಿ ಶುಭವೆಂದು ಪರಿಗಣಿಸುವುದಿಲ್ಲ. ಅದರ ಪ್ರಭಾವ 12 ರಾಶಿಗಳ ಮೇಲೆ ಬೀರಲಿದೆ, ಈ ಸೂರ್ಯಗ್ರಹಣ ತುಲಾ ರಾಶಿಯಲ್ಲಿ ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್ ಸೂರ್ಯಗ್ರಹಣ ಎಂದು ಕರೆಯಲಾಗುವುದು. ಸೂ ರ್ಯಗ್ರಹಣದ ವೇಳೆ ಸೂರ್ಯ ಗ್ರಹಣದ ಸುತ್ತಲು ಉಂಗುರುದ ರೀತಿಯಲ್ಲಿ ಗೋಚರಿಸುತ್ತಾರೆ.
ಸೂರ್ಯ ಮತ್ತು ಭೂಮಿಯ ಮಧ್ಯ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಸಂಭವಿಸುವುದು. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೆ ಗ್ರಹಣದ ವೇಳೆಯಲ್ಲಿ ಋಣಾತ್ಮಕ ಶಕ್ತಿ ಅಧಿಕವಾಗುವುದು. ಆದ್ದರಿಂದ ಈ ಸಮಯ ಒಳ್ಳೆಯದಲ್ಲ ಎಂದು ಪರಿಗಣಿಸಲಾಗುವುದು.

ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ ಸೂರ್ಯಗ್ರಹಣ
ಈ ಬಾರಿ ಸೂರ್ಯಗ್ರಹಣ ತುಲಾ ರಾಶಿಯಲ್ಲಿ ಸಂಭವಿಸಲಿದೆ. ಈ ಗ್ರಹಣದ ಪ್ರಭಾವದಿಂದಾಗಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ಅಲ್ಲದೆ ಸಂಬಂಧದಲ್ಲಿ ಸಮತೋಲನ ಕಾಪಾಡಿಕೊಂಡು ಹೋಗಲು ಕಷ್ಟವಾಗಬಹುದು, ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಸಮಸ್ಯೆಗಳನ್ನು ಮುಕ್ತವಾಗಿ ಮಾತನಾಡುವ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು. ಇದು ಪ್ರತಿಯೊಂದು ರಾಶಿಯ ಹೇಗೆ ಪ್ರಭಾವ ಬೀರಲಿದೆ ಎಂದು ನೋಡುವುದಾದರೆ
ಮೇಷ ರಾಶಿ, ಕರ್ಕ ರಾಶಿ, ತುಲಾ ರಾಶಿ, ಮಕರ ರಾಶಿ
ಈ ರಾಶಿಯವರು ಈ ಗ್ರಹಣದ ಬಳಿಕ ತಮ್ಮ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಹೊಸ ಶಕ್ತಿಯೊಂದಿಗೆ ಮುನ್ನೆಡೆಯುತ್ತೀರಿ, ನೀವು ನಿಮ್ಮ ಆಸಕ್ತಿಯ ವಿಷಯದಲ್ಲಿ ಮುಂದೆ ಬರಲು ಸಾಧ್ಯವಾಗುವುದು. ಹೊಸ ವಿಷಯವನ್ನು ಕಲಿಯುವುದರ ಕಡೆಗೆ ಆಸಕ್ತಿ ತೋರಿಸುತ್ತೀರಿ.
ವೃಷಭ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ
ಈ ರಾಶಿಗಳ ಈ ತುಲಾ ಸುರ್ಯ ಗ್ರಹಣ ದೊಡ್ಡ ಪ್ರಭಾವವೇನು ಬೀರುವುದಿಲ್ಲ. ಆದರೆ ಅಕ್ಟೋಬರ್ 28 ಚಂದ್ರಗ್ರಹಣದ ಬಳಿಕ ಅತ್ಯುತ್ತಮವಾದ ಅವಕಾಶಗಳು ದೊರೆಯಲಿದೆ. ನೀವು ತುಂಬಾ ಲವಲವಿಕೆಯಿಂದ ಇರುತ್ತೀರಿ.
ಮಿಥುನ, ಕನ್ಯಾ ರಾಶಿ, ಧನು ರಾಶಿ, ಮೀನ ರಾಶಿ
ಈ ರಾಶಿಯವರು ನೀವು ನಿಮ್ಮ ಗುರಿ ಸಾಧನೆಗೆ ಗಮನಹರಿಸುವುದರ ಜೊತೆಗೆ ಮನಸ್ಸಿನ ನೆಮ್ಮದಿ ಕಡೆಯೂ ಗಮನಹರಿಸಿ. ಈ ಅವಧಿ ವೈಯಕ್ತಿವಾಗಿ ಹಾಗೂ ವೃತ್ತಿಪರವಾಗಿ ಈ ಅವಧಿ ಒಳ್ಳೆಯದಿದೆ. ನಿಮ್ಮ ಕೆಲಸಗಳಿಗೆ ಉತ್ತಮ ಫಲ ಸಿಗಲಿದೆ.
ಗ್ರಹಣದ ನಂತರ ದಾನ ಮಾಡಿದರೆ ಒಳ್ಳೆಯದು. ನಿಮ್ಮ ರಾಶಿ ಪ್ರಕಾರ ಈ ವಸ್ತಗಳನ್ನು ದಾನ ಮಾಡಿ
* ಮೇಷ ರಾಶಿ: ನೀವು ಕೆಂಪು ವಸ್ತ್ರ, ಬೆಲ್ಲ ಈ ವಸ್ತುಗಳನ್ನು ದಾನಮಾಡಿ
* ವೃಷಭ ರಾಶಿ: ನೀವು ಹಾಲು, ಮೊಸರು, ಸಕ್ಕರೆ, ಅಕ್ಕಿ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
* ಮಿಥುನ ರಾಶಿ: ನೀವು ಹಸಿರು ಸೊಪ್ಪು, ಧಾನ್ಯಗಳನ್ನು ದಾನ ಮಾಡಿ.
* ಕರ್ಕ ರಾಶಿ: ನೀವು ಬಿಳಿ ಬಣ್ಣ ವಸ್ತ್ರ, ಅಕ್ಕಿ, ಹಾಲು ಈ ವಸ್ತುಗಳನ್ನು ದಾನ ಮಾಡಿ.
* ಸಿಂಹ ರಾಶಿ: ನೀವು ಗೋಧಿ, ತಾಮ್ರದ ಪಾತ್ರೆ ಈ ವಸ್ತುಗಳನ್ನು ದಾನ ಮಾಡಿ.
* ಕನ್ಯಾ ರಾಶಿ: ನೀವು ಹಸಿರು ಬಣ್ಣದ ವಸ್ತುಗಳು, ಹೆಸರುಕಾಳು ಇವುಗಳನ್ನು ದಾನ ಮಾಡಿ.
* ತುಲಾ ರಾಶಿ: ನೀವು ಬಿಳಿ ವಸ್ತ್ರ, ಬಿಳಿ ಬಣ್ಣದ ಆಹಾರ ವಸ್ತುಗಳನ್ನು ದಾನಮಾಡಿ.
* ವೃಶ್ಚಿಕ ರಾಶಿ: ನೀವು ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡಿ.
* ಧನು ರಾಶಿ: ನೀವು ಬೆಲ್ಲವನ್ನು ದಾನ ಮಾಡಿ.
* ಮಕರ ರಾಶಿ: ನೀವು ನೀಲಿ ಬಣ್ಣದ ವಸ್ತ್ರ, ವಸ್ತುಗಳನ್ನು ದಾನ ಮಾಡಿ.
* ಕುಂಭ ರಾಶಿ: ನೀವು ಶನಿಗೆ ಸಂಬಂಧಿಸಿದ ವಸ್ತುಗಳಾದ ಎಳ್ಳೆಣ್ಣೆ, ಕಪ್ಪು ಎಳ್ಳು ದಾನ ಮಾಡಿ.
* ಮೀನ ರಾಶಿ: ನೀವು ಹಳದಿ ಬಣ್ಣದ ಬೇಳೆಕಾಳುಗಳು, ವಸ್ತ್ರಗಳನ್ನು ದಾನ ಮಾಡಿ. ತುಪ್ಪ ದಾನ ಮಾಡಿ.
ಈ ವರ್ಷದ ಕೊನೆಯ ಸೂರ್ಯಗ್ರಹಣ ಇದಾಗಿದೆ. 2024ರಲ್ಲಿ ಏಪ್ರಿಲ್ 8ಕ್ಕೆ ಮೇಷ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.ಭಾರತದ ಕಾಲಮಾನದಲ್ಲಿ ರಾತ್ರಿ ಸಮಯದಲ್ಲಿ ಗ್ರಹಣ ಸಂಭವಿಸುತ್ತಿದೆ, ಆದ್ದರಿಂದ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.



Click it and Unblock the Notifications