Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗ್ರಹಣದ ವೇಳೆ ಕಾರು ಅಪಘಾತ ಹೆಚ್ಚಳ..! ವಿಜ್ಞಾನಿಗಳಿಂದಲೇ ಎಚ್ಚರಿಕೆ..!
ಮಾರ್ಚ್ 25ರಂದು ಹುಣ್ಣಿಮೆಯ ದಿನ ಚಂದ್ರಗ್ರಹಣ ಸಂಭವಿಸಿತ್ತು. ಆದರೆ ಇದು ಭಾರತದಲ್ಲಿ ಗೋಚರವಾಗಿರಲಿಲ್ಲ. ಇನ್ನು ಏಪ್ರಿಲ್ 8ರಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಸುಮಾರು 53 ವರ್ಷದ ಬಳಿಕ ಈ ರೀತಿಯ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಭಾರೀ ಕುತೂಹಲಕ್ಕೂ ಕಾರಣವಾಗಿದೆ. ಈ ಗ್ರಹಣ ಕೂಡ ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ಅದರ ಪರಿಣಾಮವನ್ನಂತೂ ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.
ಈ ಸೂರ್ಯಗ್ರಹಣವು ಯೂರೋಪಿಯನ್ ದೇಶಗಳಲ್ಲಿ ಗೋಚರವಾಗುತ್ತಿದೆ. ಇದೊಂದು ಸುದೀರ್ಘ ಸೂರ್ಯಗ್ರಹಣವಾಗಿದ್ದು 53 ವರ್ಷದ ಹಿಂದೆ ಈ ಸೂರ್ಯಗ್ರಹಣ ಸಂಭವಿಸಿದ ಉಲ್ಲೇಖವಿದೆ. ಹೀಗಾಗಿ ಈ ಸೂರ್ಯಗ್ರಹಣ ಅತ್ಯಂತ ಕೆಟ್ಟ ಮತ್ತು ಅಪಾಯಕಾರಿ ಎಂದು ನಂಬಲಾಗಿದೆ. ಇನ್ನು ಅಮೆರಿಕನ್ ವಿಜ್ಞಾನಿಗಳೇ ಹೇಳಿರುವಂತೆ ಈ ಗ್ರಹಣ ಸಮಯದಲ್ಲಿ ಕಾರು ಅಪಘಾತಗಳ ಸಂಖ್ಯೆ ಏರುಮುಖವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಏಪ್ರಿಲ್ 8 ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣವು ಮಾರಣಾಂತಿಕ ಕಾರು ಅಪಘಾತಗಳ ಸಂಖ್ಯೆ ಹೆಚ್ಚಿಸುವುದರೊಂದಿಗೆ ಅಪಾಯಕಾರಿ ಹಂತ ತಲುಪಬಹುದು ಎಂದು ವಿಜ್ಞಾನಿಗಳು ಹೊಸ ವರದಿಯಲ್ಲಿ ಎಚ್ಚರಿಸಿದ್ದಾರೆ.
ಕಾರು ಅಪಘಾತಗಳಿಗಿಂತ ಗ್ರಹಣ ಸಂಬಂಧಿತ ಕಣ್ಣಿನ ಸಮಸ್ಯೆಗಳೂ ಸಹ ಈ ವೇಳೆ ಅಧಿಕವಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಉತ್ತರ ಅಮೆರಿಕಾದಲ್ಲಿ ಕೊನೆಯ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ - 2017 ರ "ಗ್ರೇಟ್ ಅಮೇರಿಕನ್ ಎಕ್ಲಿಪ್ಸ್" ವೇಳೆ ಅಪಾಯಗಳ ಸಂಖ್ಯೆ ಹೆಚ್ಚಳವಾಗಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಅಪಘಾತಗಳು ಗ್ರಹಣ ಸಮಯದಲ್ಲಿ ಒಂದು ಗಂಟೆಯ ಅವಧಿಯಲ್ಲಿ ಹೆಚ್ಚಳವಾಗಿರುವುದನ್ನು ಕಾಣಬಹುದು. ಹೀಗಾಗಿ ಡ್ರೈವ್ ಹೋಮ್ ವೇಳೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುವಂತೆ ನಾವು ಹೇಳುತ್ತಿದ್ದೇವೆ ಎಂದು ವಿಜ್ಞಾನಿ ರೆಡೆಲ್ಮಿಯರ್ ಹೇಳಿದ್ದಾರೆ.
ಸಂಪೂರ್ಣ ಸೂರ್ಯ ಗ್ರಹಣ ವೀಕ್ಷಿಸಲು ಸ್ಥಳ ಹುಡುಕುವ ಜನ
ಈ ಗ್ರಹಣ ವೇಳೆಯಲ್ಲಿ ಅಪಘಾತಗಳು ಹೆಚ್ಚಳಕ್ಕೆ ಮೂಲ ಕಾರಣವಾಗಿದ್ದು, ಸೂರ್ಯನಿಗೆ ಅಡ್ಡಲಾದ ನೆರಳಿನ ಕಾರಣವಲ್ಲ ಬದಲಿಗೆ ಜನರು ಸೂರ್ಯಗ್ರಹಣವನ್ನು ಆಸ್ವಾಧಿಸುವ ಸಲುವಾಗಿ ಬೇರೆ ಬೇರೆ ಕಡೆ ಪ್ರಯಾಣ ಬೆಳೆಸಿದ್ದು, ಅದು ಎತ್ತರದ ಬೆಟ್ಟಗಳು, ಸಮುದ್ರ ತೀರ, ಬಯಲು ಪ್ರದೇಶ ಹೀಗೆ ಉತ್ತಮ ಸ್ಥಳ ಹುಡುಕಾಟಕ್ಕಾಗಿ ಹೈವೆಯಲ್ಲಿ ವೇಗದ ಚಾಲನೆ ಮಾಡಿರುವುದು ಸಹ ಕಾರುಗಳ ಅಪಘಾತ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ವಿವರಿಸಲಾಗಿದೆ.
2017ರಲ್ಲಿ ಸಂಭವಿಸಿದ ಈ ಗ್ರಹಣದ ಸಮಯದಲ್ಲಿ ಉಂಟಾದ ಎಲ್ಲಾ ಅಪಘಾತಗಳ ಪರಿಶೀಲನೆ ನಡೆಸಿದರೆ ಅಲ್ಲಿ ಒಂದೇ ಮಾದರಿಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗ್ರಹಣದ ಸುತ್ತ, ಪ್ರತಿ ಗಂಟೆಗೆ ಸುಮಾರು 10.3 ಜನರು ಮಾರಣಾಂತಿಕ ಅಪಘಾತಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಉಳಿದ ದಿನದಲ್ಲಿ ಅಂದರೆ ವಾರಾಂತ್ಯದಲ್ಲಿ ಈ ಪ್ರಮಾಣ ಗಂಟೆಗೆ 7.9 ಜನರು ಅಪಘಾತದಲ್ಲಿ ಭಾಗಿಯಾಗುತ್ತಾರೆ ಎಂದು ವಿವರಿಸಿದೆ.
ಇನ್ನೊಂದು ವರದಿಯಲ್ಲಿ ಈ ಅಪಘಾತಗಳ ಸಂಖ್ಯೆ ಪ್ರಮುಖ ಸ್ಥಳಗಳ ಬಳಿ ಹೆಚ್ಚಾಗಿರುವುದು ಕಂಡುಬಂದಿದೆ. ಅಂದರೆ ಅಪಘಾತಗಳು ಹೆಚ್ಚಿರುವ ಸ್ಥಳದಲ್ಲಿ ಅಂದಿನ ಹವಾಮಾನ ವರದಿ ನೋಡಿದಾಗ ಅಲ್ಲಿ ಮೋಡ ಕವಿದ ವಾತಾವರಣ ಇಲ್ಲದೆ ಸೂರ್ಯನ ಬಿಸಿಲಿನ ಪ್ರಮಾಣ ಅಧಿಕವಿರುವ ಕಡೆ ಅಧಿಕ ಅಪಘಾತ ಸಂಭವಿಸಿವೆ. ಅಂದರೆ ಜನ ಸೂರ್ಯ ಗ್ರಹಣ ನೋಡಲೆಂದು ಸ್ಥಳ ಹುಡುಕುವ ಸಂದರ್ಭ ಅಪಘಾತಗಳು ಹೆಚ್ಚಾಗಿವೆ ಎಂದು ತಜ್ಞರ ವಿವರಣೆಯಾಗಿದೆ.
ಇನ್ನೂ ಅಚ್ಚರಿ ಎಂದರೆ ಈ ಅಪಘಾತಗಳಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞರು, ಕಾಲೇಜು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಖಗೋಳ ಶಾಸ್ತ್ರದಲ್ಲಿ ಹೆಚ್ಚು ಉತ್ಸಾಹಿಗಳು ಭಾಗಿಯಾಗುತ್ತಿದ್ದಾರೆ. ಹೀಗಾಗಿ ಈ ವರ್ಷದ ಸೂರ್ಯಗ್ರಹಣದ ವೇಳೆ ಈ ರೀತಿ ಕಾರುಗಳಲ್ಲಿ ಹೆಚ್ಚು ಜಾಗರುಕತೆಯ ಚಾಲನೆ ಮಾಡಲು ಮನವಿ ಮಾಡಲಾಗಿದೆ.
ಈ ಸೂರ್ಯ ಗ್ರಹಣ ವಿಶೇಷ ಏಕೆ?
ಈ ಏಪ್ರಿಲ್ 8ರಂದು ಸಂಭವಿಸುತ್ತಿರುವ ಸೂರ್ಯಗ್ರಹಣವು ಅಪರೂಪದ ಗ್ರಹಣ ಎಂದು ಕರೆಯಲಾಗಿದೆ. ಏಕೆಂದರೆ ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಿಕೊಳ್ಳುತ್ತಾನೆ. ಇದರಿಂದ ಭೂಮಿಯ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಕತ್ತಲೆ ಆವರಿಸಿಕೊಳ್ಳಲಿದೆ. ಜೊತೆಗೆ ಚಂದ್ರ ಎಂದಿಗಿಂತ ದೊಡ್ಡದಾಗಿ ಗೋಚರವಾಗುತ್ತದೆ. ಗ್ರಹಣದ ಹಿಂದಿನ ದಿನದಂದು ಚಂದ್ರನು ಭೂಮಿಗೆ ಕೇವಲ 3,60,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು, ಇದು ಚಂದ್ರ ಅತ್ಯಂತ ಸಮೀಪಕ್ಕೆ ಬರುವ ದಿನವಾಗಿದೆ.
ಉತ್ತರ ಅಮೆರಿಕಾ ಮತ್ತು ಮಧ್ಯ ಅಮೆರಿಕದಾದ್ಯಂತ ಈ ಗ್ರಹಣ ಗೋಚರಿಸುತ್ತದೆ. ಸಂಪೂರ್ಣ ಸೂರ್ಯಗ್ರಹಣವು ಸಂಪೂರ್ಣ ಕತ್ತಲೆಯ ಹಾದಿಯಲ್ಲಿ 4 ನಿಮಿಷ ಮತ್ತು 28 ಸೆಕೆಂಡುಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.



Click it and Unblock the Notifications