ಸೂರ್ಯಗ್ರಹಣ 2023 : ದ್ವಾದಶ ರಾಶಿಗಳ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್‌ 20 ರಂದು ಸಂಭವಿಸಲಿದೆ. ಮೊದಲಿನಿಂದಾನೂ ಜನರಿಗೆ ಗ್ರಹಣ ಅಂದರೇನೆ ಒಂದು ರೀತಿ ಭಯ. ಅದ್ರಲ್ಲೂ ಗ್ರಹಣವು ಕೆಲವೊಂದು ರಾಶಿಗಳ ಮೇಲೆ ತೀವ್ರವಾದ ಪ್ರಭಾವವನ್ನು ಉಂಟು ಮಾಡಲಿದೆ. ಹಾಗಾದ್ರೆ ದ್ವಾದಶ ರಾಶಿಗಳ ಮೇಲೆ ಗ್ರಹಣದ ಪ್ರಭಾವ ಹೇಗಿದೆ ಅನ್ನೋದನ್ನ ತಿಳಿಯೋಣ :

ಸೂರ್ಯ,ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದು ನಿಂತಾಗ ಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣದ ವೇಳೆ ಸೂರ್ಯನಿಂದ ಭೂಮಿಗೆ ಬರುವ ನೇರವಾದ ಬೆಳಕನ್ನು ಚಂದ್ರನು ತಡೆಯುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಹಾಗೂ ಚಂದ್ರ ಗ್ರಹಣವು ಭೂಮಿಯಲ್ಲಿರುವ ಪ್ರತಿಯೊಂದು ಜೀವರಾಶಿಯ ಮೇಲೆ ಪರಿಣಾಮವನ್ನು ಬೀರುತ್ತದೆ.

Solar Eclipse April 2023 Astrology : Surya Grahan Effects on All Zodiac Signs in Kannada.

ಸೂರ್ಯಗ್ರಹಣ 2023 : ದಿನ ಮತ್ತು ಸಮಯ

ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್‌ 20, 2023 ರಂದು ಸಂಭವಿಸಲಿದೆ. ಸಮಯ ಬೆಳಗ್ಗೆ 7:04 ರಿಂದ ಮಧ್ಯಾಹ್ನ 12:29 ವರೆಗೂ ಇರಲಿದೆ. ಈ ಬಾರಿಯ ಸೂರ್ಯಗ್ರಹಣವು ಹಿಂದೂ ಮಹಾಸಾಗರ, ಆಸ್ಟ್ರೇಲಿಯಾ, ಫೆಸಿಫಿಕ್‌ ಸಾಗರ, ಅಂಟಾರ್ಟಿಕಾ ಮತ್ತು ದಕ್ಷಿಣ-ಪೂರ್ವ ಏಷಿಯಾದಲ್ಲಿ ಕಾಣಿಸಿಕೊಳ್ಳಲಿದೆ.

ದ್ವಾದಶ ರಾಶಿಗಳ ಮೇಲೆ ಸೂರ್ಯಗ್ರಹಣದ ಪ್ರಭಾವ

ಮೇಷ ರಾಶಿ

ಮೇಷ ರಾಶಿ

ಸೂರ್ಯಗ್ರಹಣದ ಪ್ರಭಾವ ಮೇಷ ರಾಶಿಯ ಮೇಲೆ ಹೇಗಿದೆ ಅಂತ ನೋಡೋದಾದ್ರೆ ಅನಿರೀಕ್ಷಿತ ವೆಚ್ಚಗಳು ಆಗುತ್ತದೆ. ತಮ್ಮ ಸಂಪತ್ತಿನ ಬಗ್ಗೆ ಜಾಗರೂಕರಾಗಿರಬೇಕು. ನೀವೇನಾದರೂ ಸಲಹಾ ಅಥವಾ ಸಂವಹನಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಹೊಂದಿದ್ದರೆ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಇನ್ನೂ ವ್ಯಾಪಾರ ಹಾಗೂ ಕೆಲಸಕ್ಕಾಗಿ ದೂರದ ಊರಿಗೆ ತೆರಳಿದರೆ ಅಭಿವೃದ್ಧಿಯಾಗುತ್ತದೆ. ವ್ಯಾಪಾರ ಸಂಬಂಧಿಸಿದ ಕಿರು ಪ್ರವಾಸಗಳನ್ನು ಮಾಡುವ ಸಾಧ್ಯತೆಯೂ ಕೂಡ ಇದೆ. ನೀವೇನಾದರೂ ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಪ್ರಯತ್ನಕ್ಕೆ ಕೈ ಹಾಕಿದರೆ ಅದು ದುಬಾರಿಯಾಗಬಹುದು ಅಥವಾ ನಿಧಾನವಾಗಿ ಸಾಗಬಹುದು. ಆರೋಗ್ಯ ಸಮಸ್ಯೆಗಳನ್ನು ಹೆಚ್ಚುವರಿಯಾಗಿ ಎದುರಿಸುವ ಸಾಧ್ಯತೆ ಇದೆ. ಕಣ್ಣುಗಳು, ದವಡೆ ಸಮಸ್ಯೆಗಳು ಇದರ ಜೊತೆಗೆ ಹತಾಶೆ, ಆತಂಕ ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ಸೂರ್ಯಗ್ರಹಣದ ಪರಿಣಾಮದಿಂದಾಗಿ ಆರೋಗ್ಯ ಮತ್ತು ಸಂಪತ್ತಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ನಷ್ಟವು ಸೂರ್ಯಗ್ರಹಣದ ಪ್ರಭಾವದಿಂದಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಂತ ನಿಮ್ಮಲ್ಲಿ ಹಣಕಾಸಿನ ಕೊರತೆ ಉಂಟಾಗುವುದಿಲ್ಲ ಆದರೆ ಖರ್ಚಿನ ಮೇಲೆ ನಿಗಾ ಇಡುವುದು ಉತ್ತಮ. ಇನ್ನೂ ಆತ್ಮಸ್ಥೈರ್ಯ ಕಡಿಮೆ ಇರುವ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಕುಟುಂಬದ ವಿಚಾರಕ್ಕೆ ಬಂದರೆ ಸಾಮರಸ್ಯವು ಅದೇ ರೀತಿ ಮುಂದುವರಿಯಲಿದೆ. ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಕೆಲವೊಂದು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಮಕ್ಕಳಿಗೆ ಅನುಕೂಲಕರ ಸಮಯವಾಗಿದ್ದು, ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ ಹಾಗೆಯೇ ಯಶಸ್ಸು ಸಾಧಿಸುತ್ತಾರೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿದೆ ಅಂತ ನೋಡೋದಾದ್ರೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಆಗಲಿದೆ. ಮಿಥುನ ರಾಶಿಯವರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರ ಜೊತೆಗೆ ನಿರ್ದಿಷ್ಟವಾಗಿ ಹಣದ ನಷ್ಟ ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕುಟುಂಬ ಮತ್ತು ಅವರ ಹಣಕಾಸಿನ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ. ಇನ್ನೂ ನಿಮ್ಮ ಕುಟುಂಬ ಸದಸ್ಯರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ನೀವು ಕಣ್ಣುಗಳು, ಹೊಟ್ಟೆ, ಬೆನ್ನು, ಇತ್ಯಾದಿಗಳ ವೈದ್ಯಕೀಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಇನ್ನೂ ಸಂತಾನ ಹೊಂದಲು ಪ್ರಯತ್ನಿಸುತ್ತಿದ್ದರೆ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಶೇರು ಮಾರುಕಟ್ಟೆ ವಿಚಾರಕ್ಕೆ ಬಂದಾಗ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಕ್ಕಾಗಿ ಕಾಯಬೇಡಿ ಮತ್ತು ಕೊಂಚ ಲಾಭ ಪಡೆದ ತಕ್ಷಣ ಕರೆನ್ಸಿಗಳನ್ನು ಮಾರಾಟ ಮಾಡಿದರೆ ಉತ್ತಮ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಈ ಸೂರ್ಯಗ್ರಹಣದ ಪ್ರಭಾವದಿಂದ ಕರ್ಕಾಟಕ ರಾಶಿಯವರು ಕಷ್ಟ ಹಾಗೂ ಸುಖ ಎರಡನ್ನು ಅನುಭವಿಸುತ್ತಾರೆ. ನಿಮ್ಮ ಆಸ್ತಿ ಸಂಬಂಧಿತ ಸಮಸ್ಯೆಗಳು ಪರಿಹಾರವಾಗುತ್ತದೆ. ಇಷ್ಟು ದಿನ ನಿಮ್ಮ ಹಳೆಯ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಈಗ ಮಾರಾಟ ಮಾಡಬಹುದು ಮತ್ತು ಹೊಸ ಆಸ್ತಿಯನ್ನು ಖರೀದಿಸಬಹುದು. ಇನ್ನೂ ಪೂರ್ವಜರ ಆಸ್ತಿ ನಿಮ್ಮ ಪಾಲಾಗುವ ಸಾಧ್ಯತೆ ಇರುತ್ತದೆ. ಕೌಟುಂಬಿಕ ಸಮಸ್ಯೆಯಿಂದಾಗಿ ನೀವು ಅಶಾಂತಿ ಮತ್ತು ಆತಂಕವನ್ನು ಅನುಭವಿಸಬೇಕಾಗುತ್ತದೆ. ಹಿರಿಯರು ಅಥವಾ ನಿಮ್ಮ ಒಡಹುಟ್ಟಿದವರ ಜೊತೆಗೆ ವಾದ ಮಾಡಲು ಹೋಗಬೇಡಿ ಇದು ನಿಮ್ಮ ನಡುವಿನ ಭಾಂದವ್ಯವನ್ನು ಹಾಳು ಮಾಡಬಹುದು. ನಿಮ್ಮ ಸ್ನೇಹಿತರ ನಡುವೆ ಘರ್ಷಣೆಗಳು ಅಥವಾ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಎಂತಹ ಪರಿಸ್ಥಿತಿ ಎದುರಾದ್ರು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಸೂರ್ಯಗ್ರಹಣದ ಪ್ರಭಾವದಿಂದಾಗಿ ಸಿಂಹ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹೊಟ್ಟೆ, ಕೆಳ ಬೆನ್ನು, ಕಣ್ಣುಗಳು ಅಥವಾ ಮೂಳೆಗಳ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ, ವಿಶೇಷವಾಗಿ ನಿಮ್ಮ ತಂದೆಯ ಬಗ್ಗೆ ನೀವು ಮತ್ತಷ್ಟು ಕಾಳಜಿ ವಹಿಸಿದರೆ ಉತ್ತಮ. ಇನ್ನೂ ನೀವು ಕೌಟುಂಬಿಕ ಸಮಸ್ಯೆಯಿಂದಾಗಿ ಬಳಲುವ ಸಾಧ್ಯತೆ ಇರುತ್ತದೆ. ನೆರೆಹೊರೆಯವರೊಂದಿಗೆ ಮತ್ತು ಸ್ಥಳೀಯರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಬೇಕು. ಇನ್ನೂ ಸ್ನೇಹಿತರು ಮತ್ತು ಹಿರಿಯ ಒಡಹುಟ್ಟಿದವರೊಂದಿಗೆ ನಿಮ್ಮ ಸಂಬಂಧ ಮತ್ತಷ್ಟು ಮಧುರವಾಗುತ್ತದೆ. ಮದುವೆಗೆ ಸಿದ್ಧವಾಗಿರುವವರು ನಿಮ್ಮ ನಿಜವಾದ ಪ್ರೀತಿಯನ್ನೇ ಪಡೆಯುತ್ತೀರಿ.

ಕನ್ಯಾ ರಾಶಿ

ಕನ್ಯಾ ರಾಶಿ

ಸೂರ್ಯಗ್ರಹಣವು ಕನ್ಯಾರಾಶಿಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಅಂತ ನೋಡೋದಾದ್ರೆ ಕನ್ಯಾ ರಾಶಿಯವರಿಗೆ ಒತ್ತಡ, ಚಿಂತೆ ಮತ್ತು ಚಡಪಡಿಕೆ ಸಾಮಾನ್ಯವಾಗಿರುತ್ತದೆ. ಕುಟುಂಬ ಸಂಬಂಧಿತ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಖಬಹುದು. ಖರ್ಚು ವೆಚ್ಚಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಉದ್ಯೋಗ ಮಾರುಕಟ್ಟೆ, ವ್ಯವಹಾರಗಳು ಮತ್ತು ದೀರ್ಘಾವಧಿಯ ಹೂಡಿಕೆಗಳು ಎಲ್ಲವೂ ಉತ್ತಮವಾಗಲಿದೆ. ಇನ್ನೂ ನೀವೇನಾದರೂ ಹೊಸ ಪ್ರಯತ್ನಗಳನ್ನು ಮಾಡುವುದಾದರೆ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸೋದಾದರೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇನ್ನೂ ಪಾಲುದಾರಿಕೆಯಲ್ಲಿ ಸಣ್ಣ ಘರ್ಷಣೆಗಳನ್ನು ಅನುಭವಿಸುತ್ತೀರಿ. ಇನ್ನೂ ನಿಮ್ಮ ಬಾಳ ಸಂಗಾತಿಯನ್ನು ಹುಡುಕುವಾಗ ತಾಳ್ಮೆಯಿಂದಿರಬೇಕು.

ತುಲಾ ರಾಶಿ

ತುಲಾ ರಾಶಿ

ಸೂರ್ಯಗ್ರಹಣ ಪ್ರಭಾವದಿಂದಾಗಿ ಆಸ್ತಿ ಸಂಬಂಧಿತ ಸಮಸ್ಯೆಗಳಿಂದ ಗೊಂದಲ ಉಂಟಾಗಬಹುದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ದೊಡ್ಡ ಆರ್ಥಿಕ ಲಾಭಗಳನ್ನು ನಿರೀಕ್ಷಿಸಬಹುದು. ಒಂದರಿಂದ ಎರಡು ವರ್ಷಗಳ ಕಾಲ ಹೂಡಿಕೆ ಮಾಡಿದರೆ ಲಾಭದಾಯಕವಾಗಿರುತ್ತದೆ. ಇನ್ನೂ ಗರ್ಭಪಾತಗಳು ಮತ್ತು ಇತರ ಹೊಟ್ಟೆ-ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಜೀರ್ಣಕಾರಿ ತೊಂದರೆಗಳು, ಗ್ಯಾಸ್, ಆಸಿಡ್ ರಿಫ್ಲಕ್ಸ್, ಒತ್ತಡ ಅಥವಾ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ಹೊಸ ಕಂಪನಿಯನ್ನು ಸೇರಲು ಉತ್ತಮ ಸಮಯವಲ್ಲ. ಇದಿಷ್ಟೇ ಅಲ್ಲ, ಉದ್ಯೋಗದ ವಿಚಾರದಲ್ಲಿ ನಿಮ್ಮ ಪ್ರೇರಣೆ ಅಥವಾ ಉತ್ಸಾಹವು ಕ್ಷೀಣಿಸಬಹುದು. ಕುಟುಂಬದ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವ ಸಾಧ್ಯತೆ ಇರುತ್ತದೆ. ಪಿರ್ತಾರ್ಜಿ ಆಸ್ತಿ ವ್ಯಾಜ್ಯದಲ್ಲೂ ಸಮಸ್ಯೆ ಎದುರಾಗುತ್ತದೆ. ಇನ್ನೂ ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾಲವಾಗಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಯಾವುದೇ ನಿರ್ಣಾಯಕ ದಾಖಲೆಗಳಿಗೆ ಸಹಿ ಮಾಡುವ ಮೊದಲು ಹಾಗೂ ವ್ಯಾಪಾರ-ಸಂಬಂಧಿತ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಬೇಕು. ನೀವು ಹೊಸತನ್ನೇನಾದರೂ ಕೊಂಡು ಕೊಳ್ಳ ಬಯಸಿದರೆ ಯಶಸ್ವಿಯಾಗುತ್ತೀರಿ. ಈ ಬಾರಿ ಆಸ್ತಿ ಹೂಡಿಕೆಗಳು ನಿಮಗೆ ತುಂಬಾ ಲಾಭದಾಯಕವಾಗಬಹುದು. ಕೆಲವೊಂದು ಅನವಶ್ಯಕ ಖರ್ಚುಗಳನ್ನು ಮಾಡಬೇಕಾಗುತ್ತದೆ. ನಿಮ್ಮ ವ್ಯಾಪಾರ ಪಾಲುದಾರಿಕೆಯಾಗಿದ್ದರೆ ಕೆಲವೊಂದು ಮನಸ್ಥಾಪಗಳು ಉಂಟಾಗುತ್ತದೆ. ಇನ್ನೂ ಉದ್ಯೋಗಿಗಳಾದರೆ ನಿಮ್ಮ ಸಂಸ್ಥೆಯೊಂದಿಗೆ ಜಾಗರೂಕರಾಗಿರಿ ಏಕೆಂದರೆ ನೀವು ವಂಚನೆಗೆ ಬಲಿಯಾಗಬಹುದು. ನೀವೇನಾದರೂ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ನಿರೀಕ್ಷಿತ ಲಾಭವನ್ನು ಪಡೆಯುವುದಿಲ್ಲ. ಆದರೆ ದೀರ್ಘಾವಧಿಯ ಹೂಡಿಕೆಗಳ ಮೇಲೆ ಭವಿಷ್ಯದ ಆದಾಯವು ಅನುಕೂಲಕರವಾಗಿರುತ್ತದೆ.

ಧನು ರಾಶಿ

ಧನು ರಾಶಿ

ಸೂರ್ಯಗ್ರಹಣದ ಪ್ರಭಾವ ಧನು ರಾಶಿಯವರ ಮೇಲೆ ಯಾವ ರೀತಿ ಇದೆ ಅಂತ ನೋಡೋದಾದ್ರೆ ನೀವು ನಿಮ್ಮ ಶತ್ರುಗಳನ್ನು ಸೋಲಿಸಬಹುದು. ಧನು ರಾಶಿಯವರಿಗೆ ಆರೋಗ್ಯದ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಆದರೆ ಸೂರ್ಯ ಗ್ರಹಣದ ನಂತರ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೀರಿ. ಪೋಷಕರ ಆರೋಗ್ಯದ ಮೇಲೆ ವಿಶೇಷವಾಗಿ ತಾಯಿಯ ಆರೋಗ್ಯ ಸಮಸ್ಯೆಗಳು ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಒಂದು ವೇಳೆ ಅವರು ವಿದ್ಯಾರ್ಥಿಗಳಾಗಿದ್ದರೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಇನ್ನೂ ಜೀವನ ಸಂಗಾತಿಯನ್ನು ಹುಡುಕುತ್ತಿರುವ ಯಶಸ್ವಿಯಾಗುವ ಸಾಧ್ಯತೆ ಇದೆ.

ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ

ಮಕರ ರಾಶಿಯವರು ನಿಮ್ಮ ಮಗುವಿನ ಶಿಕ್ಷಣದ ಕಾರಣಕ್ಕಾಗಿ ಚಿಂತೆಗೊಳಗಾಗುತ್ತೀರಿ. ನಿಶ್ಚಿತಾರ್ಥ ಮಾಡಿಕೊಳ್ಳಲು ಅಥವಾ ಮಕ್ಕಳನ್ನು ಹೊಂದಲು ಬಯಸುತ್ತಿರುವವರಿಗೆ ಕೊಂಚ ಸಂಕಷ್ಟ ಎದುರಾಗಲಿದೆ. ಹೊಸ ವ್ಯಾಪಾರ ಪ್ರಯತ್ನಗಳು ವಿಳಂಬವಾಗಬಹುದು. ಯಾವುದೇ ಕಾನೂನು ಒಪ್ಪಂದಗಳನ್ನು ಕಾರ್ಯಗತಗೊಳಿಸುವ ಮೊದಲು ಎಚ್ಚರಿಕೆಯಿಂದ ಹೆಜ್ಜೆಯಿಡಿ. ನಿಮಗೆ ಆರ್ಥಿಕ ಸಮಸ್ಯೆಯಿದ್ದರೆ ಅದನ್ನು ನಿಭಾಯಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಿಗೆ ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಕೆಲ ಕಾಲದಿಂದ ನೀವು ಅನುಭವಿಸುತ್ತಿರುವ ವಿಚಿತ್ರ ಕಾಯಿಲೆಯು ಶಮನವಾಗಬಹುದು. ನಿಮ್ಮ ಖರ್ಚಿನ ಬಗ್ಗೆ ನೀವು ಜಾಗರೂಕರಾಗಿರಬೇಕು ಯಾಕಂದ್ರೆ ಅದು ನೀವು ನಿಗದಿಪಡಿಸಿದ ಮೊತ್ತವನ್ನು ಮೀರಬಹುದು. ನಿಮ್ಮ ತಾಯಿಯ ಬಗ್ಗೆಯೂ ನೀವು ಕಾಳಜಿ ವಹಿಸಿ. ಸ್ನೇಹಿತರೊಂದಿಗಿನ ಸ್ನೇಹವು ನಿಮಗೆ ಈ ಸಮಯದಲ್ಲಿ ಪ್ರಯೋಜನಕಾರಿಯಾಗಿದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಎಚ್ಚರಿಕೆಯಿಂದಿರಬೇಕು. ಇನ್ನೂ ಆಸ್ತಿಗೆ ಸಂಬಂಧಿಸಿದ ಕಾನೂನು ವಿವಾದದಲ್ಲಿ ಸಿಲುಕುವ ಸಾಧ್ಯತೆ ಇದೆ. ಹಳೆಯ ಮನೆಯನ್ನು ಮಾರಾಟ ಮಾಡಲು ಇದು ಉತ್ತಮ ಸಮಯವಾಗಿದೆ. ನಿಮ್ಮ ಇತ್ತೀಚಿಗಿನ ಹೊಸ ಹೂಡಿಕೆ ಅಪಾಯಕಾರಿಯಾಗಿ ಕೊನೆಗೊಳ್ಳಬಹುದು. ಹೀಗಾಗಿ ಹೊಸ ಹೂಡಿಕೆ ಮಾಡುವಾಗ ಜಾಗರೂಕರಾಗಿರಿ. ಆಸ್ತಿಗೆ ಸಂಬಂಧಿಸಿದಂತೆ ಹೆಚ್ಚು ಉದ್ವಿಗ್ನತೆ ಮತ್ತು ನಿರಾಶೆಯನ್ನು ಅನುಭವಿಸುವ ಸಾಧ್ಯತೆಗಳಿದೆ.

ಮೀನ ರಾಶಿ

ಮೀನ ರಾಶಿ

ಈ ಗ್ರಹಣದ ಪರಿಣಾಮದಿಂದಾಗಿ ಮೀನ ರಾಶಿಯವರಿಗೆ ಯಶಸ್ಸು ಮತ್ತು ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆಸ್ತಿ ಸಂಬಂಧಿತ ಸಮಸ್ಯೆಗಳು ಪರಿಹಾರವಾಗಬಹುದು. ಹೊಚ್ಚ ಹೊಸ ಮನೆಯನ್ನು ಹೊಂದುವ ನಿಮ್ಮ ಬಯಕೆ ಕಾರ್ಯಸಾಧ್ಯವಾಗಬಹುದು. ನಿಮ್ಮ ನಿವಾಸಕ್ಕಾಗಿ ನೀವು ಆಸ್ತಿ, ಕಾರು ಅಥವಾ ಪೀಠೋಪಕರಣಗಳಲ್ಲಿ ಹೂಡಿಕೆ ಮಾಡಬಹುದು ತೊಂದರೆಯಿಲ್ಲ. ಹೊಸ ಪ್ರಯತ್ನಗಳಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಸಹಿ ಮಾಡುವ ಮೊದಲು ನೀವು ಯಾವುದೇ ಕಾನೂನು ದಾಖಲೆಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. ಇದಲ್ಲದೆ, ನಿಮ್ಮ ಯೋಗಕ್ಷೇಮದ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಇನ್ನೂ ಪೋಷಕರ ಆರೋಗ್ಯದಲ್ಲಿ ಏರುಪೇರುಗಳಾಗುವ ಸಾಧ್ಯತೆ ಇದೆ. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ 2023 ರಲ್ಲಿ ಮೀನ ರಾಶಿಯವರು ಸೂರ್ಯಗ್ರಹಣದ ಪ್ರಭಾವದ ಪರಿಣಾಮ ಮೀನ ರಾಶಿಯ ಜನರು ಜಠರಗರುಳಿನ ಸಮಸ್ಯೆಗಳು, ಆತಂಕ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಇನ್ನೂ ಚಿಕ್ಕ ಮಕ್ಕಳಿಗೆ ಇದು ಉತ್ತಮ ಕಾಲವಲ್ಲ. ಆದರೆ ವಿದ್ಯಾರ್ಥಿಗಳಿಗೆ ಉತ್ತಮ ಕಾಲ.

English summary

Solar Eclipse April 2023 Astrology : Surya Grahan Effects on All Zodiac Signs in Kannada. ಸೂರ್ಯ ಗ್ರಹಣ 2023 : ದ್ವಾದಶ ರಾಶಿಗಳ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ.

Surya Grahan 2023 Effects on All Zodiac Signs in Kannada : 2023 first solar eclipse will occur on April 20 from 7:04 am till 12:29 pm. Check Surya Grahan April 2023 Astrology. Read On.
X
Desktop Bottom Promotion