Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏಪ್ರಿಲ್ 20 ಸೂರ್ಯ ಗ್ರಹಣದ ಬಳಿಕ ಈ ರಾಶಿಯವರ ಅದೃಷ್ಟ ಬದಲಾಗಲಿದೆ
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ಕ್ಕೆ ಸಂಭವಿಸಲಿದೆ. ಈ ಸೂರ್ಯಗ್ರಹಣ ಅಪರೂಪದ ಗ್ರಹಣವಾಗಿದೆ. ನಾಳೆ ಅಂದರೆ ಏಪ್ರಿಲ್ 20ಕ್ಕೆ ಹೈಬ್ರಿಡ್ ನಿಂಗಲೂ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ಬೆಳಗ್ಗೆ 7.4 ರಿಂದ ಮಧ್ಯಾಹ್ನ 12.29 ರವರೆಗೆ ಇರಲಿದೆ. ಭಾರತದಲ್ಲಿ ಸೂರ್ಯಗ್ರಹಣವು ಗೋಚರಿಸುವುದಿಲ್ಲ, ಆದ್ದರಿಂದ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ.
ಜ್ಯೋತಿಷ್ಯದ ಪ್ರಕಾರ 2023ರ ಮೊದಲ ಸೂರ್ಯಗ್ರಹಣ ಮೇಷ ರಾಶಿ, ಅಶ್ವಿನಿ ನಕ್ಷತ್ರದಲ್ಲಿ ಉಂಟಾಗಲಿದೆ. 19 ವರ್ಷದ ಬಳಿಕ ಮೇಷ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವು ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಬೀರುವುದು. ಜ್ಯೋತಿಷ್ಯ ಪ್ರಕಾರ ಗ್ರಹಣದ ಬಳಿಕ ಈ ರಾಶಿಯವರಿಗೆ ಅದೃಷ್ಟದ ಸಮಯವಾಗಲಿದೆ ನೋಡಿ:

ಕರ್ಕ ರಾಶಿ
ಸೂರ್ಯಗ್ರಹಣದ ಬಳಿಕ ನೀವು ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತೀರಿ, ಅದೃಷ್ಟದ ಬೆಂಬಲ ನಿಮ್ಮೊಂದಿಗೆ ಇರುವುದರಿಂದ ನಿಮ್ಮ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಜೀವನ ದೊರೆಯಲಿದೆ. ನೀವು ಆರ್ಥಿಕವಾಗಿ ಬೆಳವಣಿಗೆ ಕಾಣುವಿರಿ. ಆದರೆ ನೀವು ಬರೀ ಅದೃಷ್ಟವನ್ನು ನಂಬಿ ಕೂರದೆ ನಿಮ್ಮ ಮೇಲೆ ನಂಬಿಕೆಯಿಟ್ಟು ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಒಳ್ಳೆಯ ಫಲ ಪಡೆಯಬಹುದು.
ಧನು ರಾಶಿ
ಗ್ರಹಣದ ಬಳಿಕ ಧನು ರಾಶಿಯವರಿಗೆ ಉತ್ತಮ ಸಮಯ. ಧನು ರಾಶಿಯ ವ್ಯಾಪಾರಸ್ಥರು ಒಳ್ಳೆಯ ಲಾಭ ಗಳಿಸಬಹುದು. ಉದ್ಯೋಗಸ್ಥರು ತಮ್ಮ ಜೀವನದಲ್ಲಿ ಪ್ರಗತಿ ಉಂಟಾಗುವುದು.ನೀವು ಉದ್ಯೋಗದಲ್ಲಿದ್ದರೆ, ಬಡ್ತಿ ಪಡೆಯಬಹುದು. ವಿವಾಹಿತರ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಈ ಗ್ರಹಣದ ಬಳಿಕ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆಯಾಗಲಿದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಗ್ರಹಣದ ಬಳಿಕ ನಿಮ್ಮ ರಾಶಿಗೆ ಒಳ್ಳೆಯ ಫಲಿತಾಂಶ ನೀಡುವುದು. ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತೀರಿ. ಈ ಗ್ರಹಣದ ಬಳಿಕ ಧನು ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕುಂಭ ರಾಶಿ
ಗ್ರಹಣದ ಬಳಿಕ ಕುಂಭ ರಾಶಿಯವರ ಕುಟುಂಬ ಜೀವನ ಉತ್ತಮವಾಗಲಿದೆ. ವಿವಾಹಿತ ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ನೀವು ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಬಹುದು, ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಾಣುವಿರಿ. . ಈ ಗ್ರಹಣದ ಬಳಿಕ ಬಹಳ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಈ ಅವಧಿಯಲ್ಲಿ ತಾಳ್ಮೆ ಹೆಚ್ಚಾಗಲಿದೆ. ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ, ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಗ್ರಹಣದ ಬಳಿಕ ಶುಭ ಸಮಯ. ಏಕೆಂದರೆ ಗುರು ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಒಳ್ಳೆಯದಾಗಲಿದೆ, ಎಲ್ಲಾ ಕಷ್ಟಗಳು ದೂರಾಗಲಿದೆ. ಮೇಷ ರಾಶಿಯವರ ಆರೋಗ್ಯ ಹೆಚ್ಚಾಗಲಿದೆ. ನೀವು ಬಾಕಿಯುಳಿದ ಕೆಲಸ ಪೂರ್ಣಗೊಳಿಸಲು ಗಮನಹರಿಸುತ್ತೀರಿ. ಈ ಗ್ರಹಣದ ಬಳಿಕ ಏಳಿಗೆಯಾಗಲಿದೆ.
ಮಿಥುನ ರಾಶಿ
ಗ್ರಹಣದ ನಂತರ ಮಿಥುನ ರಾಶಿಯವರು ಒಳ್ಳೆಯ ಲಾಭವನ್ನು ಪಡೆಯಬಹುದು. ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರಲಿದೆ. ಕೀರ್ತಿ ವೃದ್ಧಿಯಾಗಲಿದೆ. ಕೌಟುಂಬಿಕ ವಾತಾವರಣದಲ್ಲಿ ಸುಧಾರಣೆಕಾಣುವಿರಿ. ಈ ಸಾಮಾಜಿಕವಾಗಿ ತೊಡಗಿಸಿಕೊಂಡು ಹೆಸರು-ಕೀರ್ತಿ ಗಳಿಸುವಿರಿ. ಹೊರ ದೇಶಕ್ಕೆ ಹೋಗಿ ಉದ್ಯೋಗ ಮಾಡಬಯಸುವವರಿಗೆ ಒಳ್ಳೆಯ ಅವಕಾಶ ದೊರೆಯಲಿದೆ.



Click it and Unblock the Notifications