Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
Solar Eclipse 2026: ನಾಳೆ ಕಂಕಣ ಸೂರ್ಯ ಗ್ರಹಣ, ಇನ್ನುಳಿದ ಮೂರು ಗ್ರಹಣದ ದಿನಾಂಕ ಯಾವುದು ಗೊತ್ತಾ?
Solar Eclipse 2026: 2026ರಲ್ಲಿ ಖಗೋಳ ವಿಜ್ಞಾನಿಗಳು ಹಾಗೆ ಆಕಾಶಕಾಯಗಳ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಅಚ್ಚರಿಯಿಂದ ಕಾಯುವ ಗ್ರಹಣ ಹತ್ತಿರ ಬಂದಿದೆ. ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು ಅಪರೂಪದ ರಿಂಗ್ ಆಫ್ ಫೈರ್ ಅಥವಾ ಕಂಕಣ ಸೂರ್ಯ ಗ್ರಹಣ ಎಂದು ಕರೆಯಲಾಗುವ ವಿಶೇಷ ವಿದ್ಯಮಾನ ಆಗಿರಲಿದೆ. ಹೀಗಾಗಿ ಎಲ್ಲರ ಆಸಕ್ತಿ ಕೆರಳಿಸಿದೆ.
ಪ್ರಪಂಚದಾದ್ಯಂತ ಬಹುತೇಕ ದೇಶಗಳಲ್ಲಿ ಈ ಸೂರ್ಯ ಗ್ರಹಣ ಗೋಚರವಾಗುತ್ತಿದೆ. ಹೀಗಾಗಿ ಬಹಳಷ್ಟು ಕಡೆ ಈ ಗ್ರಹಣ ವೀಕ್ಷಣೆಗೆ ಸಿದ್ದತೆಗಳು ಆರಂಭವಾಗಿದೆ. ಸೂರ್ಯ, ಚಂದ್ರ ಹಾಗೆ ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಮಾತ್ರ ಈ ಕಂಕಣ ಸೂರ್ಯ ಗ್ರಹಣ ಉಂಟಾಗುತ್ತದೆ. ಈ ರೇಖೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಅದು ಪಾರ್ಶ್ವ ಗ್ರಹಣ ಎಂದು ಕರೆಯಲಾಗಿದೆ.

ಈ ವಿದ್ಯಮಾನದಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿ ನಡುವೆ ಹಾದು ಹೋಗುತ್ತಾನೆ. ಚಂದ್ರನ ನೆರಳು ಭೂಮಿಯನ್ನು ಆವರಿಸುವ ವಿಶೇಷ ಪ್ರಕ್ರಿಯೆ ಇದಾಗಿರಲಿದೆ. ಈ ಸಮಯದಲ್ಲಿ ಭೂಮಿಯನ್ನು ಸಂಪೂರ್ಣವಾಗಿ ನೆರಳು ಆಕ್ರಮಿಸಿದಾಗ ಸೂರ್ಯನು ಉಂಗುರದಂತೆ ಕಾಣಲಿದ್ದಾನೆ. ಹೀಗಾಗಿ ಇದಕ್ಕೆ ಕಂಕಣ ಸೂರ್ಯ ಗ್ರಹಣ ಎನ್ನಲಾಗಿದೆ.
ರಿಂಗ್ ಆಫ್ ಫೈರ್ ವಿದ್ಯಮಾನ ಉಂಟಾಗುವುದು ಹೇಗೆ?
'ರಿಂಗ್ ಆಫ್ ಫೈರ್' ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಅಥವಾ ಹತ್ತಿರದಲ್ಲಿದ್ದಾಗ ಸಂಭವಿಸುತ್ತದೆ. ಚಂದ್ರ ದೂರದ ಬಿಂದುವಿನಲ್ಲಿದ್ದರೆ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೂರ್ಯನ ಕಿರಣಗಳು ಚಂದ್ರನ ಸುತ್ತಲೂ ಕಾಣಿಸುತ್ತವೆ. ಇದು ಉಂಗುರದಂತಹ ರಚನೆಯನ್ನ ಸೃಷ್ಟಿಸುತ್ತದೆ. ಹಾಗೆ ಇದು ಸುತ್ತಲೂ ಉರಿಯುತ್ತಿರುವ ಬೆಂಕಿಯಂತೆಯೂ ಕಾಣಿಸುತ್ತದೆ.
ಸದ್ಯ ಈ ಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲ. ಆದ್ರೆ ಫೆಬ್ರವರಿ 17 ಮಧ್ಯಾಹ್ನ 12:31ಕ್ಕೆ ಗ್ರಹಣ ಆರಂಭದ ಸಮಯ ಆಗಿದೆ. ಹಾಗೆ 5:42ಕ್ಕೆ ಉತ್ತುಂಗಕ್ಕೆ ತಲುಪಿ ಬಳಿಕ 7:47ಕ್ಕೆ ಅಂತ್ಯವಾಗುತ್ತದೆ. ಸುಮಾರು 2 ನಿಮಿಷ ಮತ್ತು 20 ಸೆಕೆಂಡುಗಳ ಕಾಲ ಚಂದ್ರನ ನೆರಳು ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ.
ಇನ್ನುಳಿದ ಮೂರು ಗ್ರಹಣಗಳ ದಿನಾಂಕ ಮತ್ತು ಸಮಯದ ಮಾಹಿತಿ
ಹಾಗೆ ಈ ವರ್ಷ ಒಟ್ಟಾರೆ 4 ಗ್ರಹಣಗಳು ಸಂಭವಿಸುತ್ತಿದೆ, ಅದ್ರಲ್ಲಿ 2 ಸೂರ್ಯ ಗ್ರಹಣ ಹಾಗೆ ಇನ್ನೆರಡು ಚಂದ್ರಗ್ರಹಣ ಆಗಿರಲಿದೆ. ಈಗ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಹಾಗಾದ್ರೆ ಇನ್ನುಳಿದ ಮೂರು ಗ್ರಹಣಗಳು ಯಾವಾಗ ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳಿ.
ಚಂದ್ರ ಗ್ರಹಣ- ಮಾರ್ಚ್ 3
ಮಾರ್ಚ್ 3ರಂದು ವರ್ಷದ ಎರಡನೇ ಹಾಗೂ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಇದು ವಿಶ್ವದ ಬಹುತೇಕ ದೇಶಗಳಲ್ಲಿ ಕಾಣಿಸಲಿರುವ ಗ್ರಹಣ ಹಾಗೆ ಭಾರತದಲ್ಲಿ ಗೋಚರವಾಗುವ ಏಕೈಕ ಗ್ರಹಣವಾಗಿದೆ.
- ಸಮಯ
- ಮಧ್ಯಾಹ್ನ 02:14 ಕ್ಕೆ ಗ್ರಹಣ ಆರಂಭ
- ಉಚ್ಛ ಸ್ಥಿತಿ 04:34
- ಮುಕ್ತಾಯ 07:53
ಸೂರ್ಯ ಗ್ರಹಣ- ಆಗಸ್ಟ್ 12
ಭಾರತದಲ್ಲಿ ಗೋಚರ ಆಗದೆ ಇರುವ ಎರಡನೇ ಸೂರ್ಯ ಗ್ರಹಣ ಆಗಿದೆ.
- ಗ್ರಹಣ ಸಮಯ
- ರಾತ್ರಿ 09:04
- ಉಚ್ಛ ಸ್ಥಿತಿ 11:16
- ಮುಕ್ತಾಯ- ಆಗಸ್ಟ್ 13- 01:27
ಚಂದ್ರ ಗ್ರಹಣ- ಆಗಸ್ಟ್ 28
2026ರ ಎರಡನೇ ಹಾಗೂ ವರ್ಷದ ಕೊನೆಯ ಚಂದ್ರಗ್ರಹಣವು ಆಗಸ್ಟ್ 23ರಂದು ಸಂಭವಿಸುತ್ತಿದೆ, ಇದು ಕೂಡ ಭಾರತದಲ್ಲಿ ಗೋಚರ ಆಗುವುದಿಲ್ಲ.
- ಗ್ರಹಣ ಸಮಯ
- ಬೆಳಗ್ಗೆ 06:53
- ಉಚ್ಛ ಸ್ಥಿತಿ 09:42
- ಮುಕ್ತಾಯ 12:31



Click it and Unblock the Notifications