Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಜೂನಿಯರ್ ಹೆಂಡ್ತಿ ಬೇಕಾಗಿದ್ದಾಳೆ..! ಅನಾನುಭವಿಗಳಿಗೆ ಆದ್ಯತೆ..! ಟೆಕ್ಕಿ ಪೋಸ್ಟ್ ವೈರಲ್..!
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳಲಾಗುತ್ತದೆ. ಹಿರಿಯರು ಇದನ್ನೇ ನಂಬಿಕೊಂಡು ಬಂದಿದ್ದಾರೆ. ಹೀಗಾಗಿ ಹಿಂದೆಲ್ಲಾ ಮದುವೆ ಅನ್ನೋದು ಪವಿತ್ರ ಬಂಧನವಾಗಿತ್ತು, ಆದ್ರೆ ಇತ್ತೀಚಿಗೆ ಮದುವೆಯ ಕಲ್ಪನೆಯೇ ಬದಲಾಗಿದೆ. ಈಗೆಲ್ಲಾ ಮದುವೆಗಳು ಆನ್‌ಲೈನ್‌ನಲ್ಲೂ ನಡೆಯುತ್ತಿವೆ.
ಇತ್ತೀಚಿಗಂತು ಚಿತ್ರ ವಿಚಿತ್ರ ರೀತಿಯ ಮದುವೆಗಳನ್ನು ನಾವು ನೋಡುತ್ತಿದ್ದೇವೆ. ಇನ್ನು ಹುಡುಗ ಹುಡುಗಿಯನ್ನು ಹುಡುಕುವುದು ಸಹ ಈಗ ಸುಲಭವಾಗಿ ಬಿಟ್ಟಿದೆ.

(ಫೋಟೋ ಕೃಪೆ: FreePik)
ಇದಕ್ಕೆಂದೆ ಹತ್ತಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿವೆ. ಹತ್ತಾರು ಏಜೆಂನ್ಸಿ, ಏಜೆಂಟರು ಸಹ ಸಿಗುತ್ತಾರೆ. ಆದ್ರೆ ಕೆಲವೊಮ್ಮೆ ಆನ್‌ಲೈನ್ ಮೀಡಿಯಾದಲ್ಲಿ ಕೆಲವರು ತಮಗೆ ಹುಡುಗಿ ಬೇಕೆಂದು ಪೋಸ್ಟ್ ಹಾಕುವುದನ್ನು ಸಹ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತನಗೆ ಜೂನಿಯರ್ ಪತ್ನಿ ಬೇಕಾಗಿದ್ದಾಳೆ ಎಂದು ಲಿಂಕಡ್ ಇನ್‌ನಲ್ಲಿ ಪೋಸ್ಟ್ ಹಾಕಿ ಈಗ ಭಾರೀ ಸುದ್ದಿಯಾಗಿದ್ದಾನೆ.
ಲಿಂಕಡ್ ಇನ್ ಎಂಬುದು ಕೆಲಸ ಹುಡುಕುವ ಒಂದು ಮಾಧ್ಯಮವಾಗಿದೆ. ಇಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಸಿಇಓಗಳು ತಮ್ಮ ಕಂಪನಿಗಳಿಗೆ ಬೇಕಾದ ಅಭ್ಯರ್ಥಿಗಳನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದೊಂದು ಉದ್ಯೋಗದಾತ ಆಪ್ ಆಗಿದೆ. ಆದ್ರೆ ಇಲ್ಲೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನಗೆ ಜೂನಿಯರ್ ಪತ್ನಿ ಬೇಕು ಎಂದು ಪೋಸ್ಟ್ ಹಾಕಿ ಟೀಕೆಗೆ ಗುರಿಯಾಗಿದ್ದಾನೆ. ಆತ ತನ್ನ ಕಂಪನಿಗೆ ನೌಕರರ ಸೆಳೆಯುವ ಉದ್ದೇಶದಿಂದ ಪೋಸ್ಟ್ ಮಾಡಿರುವುದಾಗಿ ಹೇಳಿದ್ದಾನೆ. ಆದ್ರೆ ಈ ಪೋಸ್ಟ್ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದೆ.
ಜಿತೇಂದ್ರ ಸಿಂಗ್ ಎಂಬಾತ ಲಿಂಕಡ್ ಇನ್‌ನಲ್ಲಿ ಜೂನಿಯರ್ ಪತ್ನಿ ಬೇಕೆಂದು ಪೋಸ್ಟ್ ಹಾಕಿದ್ದಾರೆ. "ತುರ್ತು ನೇಮಕಾತಿ! ನನ್ನ ಜೀವನಕ್ಕೆ ಸೇರಲು ನಾನು 'ಕಿರಿಯ ಹೆಂಡತಿ'ಯನ್ನು ಹುಡುಕುತ್ತಿದ್ದೇನೆ. ಗಮನಿಸಿ - ದಯವಿಟ್ಟು ಅನುಭವಿ ಅಭ್ಯರ್ಥಿಗಳು (ಹೆಂಡತಿಯರು) ಅರ್ಜಿ ಸಲ್ಲಿಸಬೇಡಿ. ಅನುಭವಿ ಅಭ್ಯರ್ಥಿಗಳಿಗೆ ನಾನು ಪ್ರತ್ಯೇಕ ನೇಮಕಾತಿ ನಡೆಸುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಜೂನಿಯರ್ ಪತ್ನಿಗೆ ಈ ಅರ್ಹತೆ ಅಗತ್ಯವಂತೆ
2 ವರ್ಷ ಅಡುಗೆ ಮಾಡಿರುವ ಅನುಭವ
ರಾತ್ರಿ ಹೊತ್ತು ಎದ್ದು ತನಗೆ ಮಸಾಲ ಬಿರಿಯಾನಿ ಮಾಡಿಕೊಡಬೇಕು
ಒಳ್ಳೆಯ ಸಂಹವನ ಕಲೆ
ಗೌರವ ನೀಡುವುದು ಮತ್ತು ಡೀಸೆಂಟ್ ಆಗಿರಬೇಕು
ವಿಧೇಯನಾದ ಮತ್ತು ಲವಿಂಗ್
ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಆಕೆಯೂ ತಿಳಿದಿರಬೇಕು
ಹೀಗೆ ಐದಾರು ಅರ್ಹತೆಗಳಿರಬೇಕು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ. ಇದರ ಜೊತೆಗೆ ಯಾವುದೇ ಅನುಭವವ ಇಲ್ಲದವರಿಗೆ ಆಧ್ಯತೆ ನೀಡುವುದಾಗಿ ಹೇಳಿದ್ದು, ವೇತನ ಗೌಪ್ಯವಾಗಿಡಲಾಗಿದೆ ಎಂದು ಬರೆದುಕೊಂಡಿದ್ದಾನೆ. ಅಲ್ಲದೆ ಆತ ಮೂರು ಸುತ್ತುಗಳ ಸಂದರ್ಶನದ ಬಳಿಕ ಹಾಗೂ ಕೊನೆಯದಾದ ಮುಖಾಮುಖಿ ಸಂದರ್ಶನದ ಮೂಲಕ ಜೂನಿಯರ್ ಪತ್ನಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ.
ಆನ್‌ಲೈನ್‌ನಲ್ಲಿ ಟೀಕೆ ಪೋಸ್ಟ್ ಡಿಲೀಟ್
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಭಾರೀ ಟೀಕೆಗೆ ಗುರಿಯಾಗಿತ್ತು. ಆತನ ಮನಸ್ಥಿತಿಯ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಮಹಿಳೆಯರನ್ನು ಇಷ್ಟೊಂದು ಕೀಳಾಗಿ ಕಂಡಿದ್ದರಿಂದ ಆತನ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದರು. ಈ ರೀತಿಯ ಟೀಕೆಗಳು ಕೇಳಿಬಂದ ತಕ್ಷಣ ಆತ ಪೋಸ್ಟ್ ಡಿಲೀಟ್ ಮಾಡಿದ್ದಾನೆ.
ಆದ್ರೆ ಆತ ನಿಜವಾಗಲು ಆತನ ಕಂಪನಿಗೆ ಅಭ್ಯರ್ಥಿಗಳ ಸೆಳೆಯಲು ಈ ರೀತಿ ಪೋಸ್ಟ್ ಮಾಡಿದ್ದನಂತೆ. ಆದ್ರೆ ಈ ವರ್ತನೆಯಿಂದ ನೆಟ್ಟಿಗರು ಕೆರಳಿದ್ದಲ್ಲದೆ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು.
ಇನ್ನು ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಪದೇ ಪದೇ ನಡೆಯುತ್ತಲಿವೆ. ಮಹಿಳೆಯರ ಕುರಿತು ಆನ್‌ಲೈನ್‌ನಲ್ಲಿ ಕೆಟ್ಟದಾಗಿ ಬಿಂಬಿಸುವ ಕಾರ್ಯಗಳು ನಡೆಯುತ್ತಲೇ ಇವೆ. ಅದರಲ್ಲೂ ವಿವಾಹಕ್ಕೆ ಸಂಬಂಧಿಸಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಘಟನೆಗಳನ್ನು ನಾವು ನೋಡಬಹುದಾಗಿದೆ.



Click it and Unblock the Notifications

