Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಮನೆಯಲ್ಲೇ ಕುಳಿತು ಪಾಸ್‌ಪೋರ್ಟ್ ಸೈಜ್ ಫೋಟೋ ತರಿಸಿಕೊಳ್ಳಿ..! ಇದು ಬ್ಲಿಂಕ್ ಇಟ್ ಹೊಸ ಐಡಿಯಾ..!!
ಆಧುನಿಕ ಯುಗದಲ್ಲಿ ಎಲ್ಲವೂ ಆನ್‌ಲೈನ್‌ನಲ್ಲೇ ಸಿಗುವ ಕಾಲವಿದು. ಶಾಪಿಂಗ್ ಇಂದ ಹಿಡಿದು ಮನೆಗೆ ಬೇಕಾದ ಪ್ರತಿಯೊಂದು ವಸ್ತುಗಳು ಸಹ ಆನ್‌ಲೈನ್‌ನಲ್ಲಿ ನಮಗಿಂದು ಸಿಗುತ್ತವೆ. ಅದ್ರಲ್ಲೂ 10 ನಿಮಿಷದ ಒಳಗೆ ಮನೆ ಬಾಗಿಲ ಮುಂದೆ ಬರುತ್ತದೆ. ಹೀಗಾಗಿ ನಾವಿಂದು ಯಾವುದಕ್ಕೂ ಹೊರಗೆ ಅಂಗಡಿಗೆ ಹೋಗಿ ಖರೀದಿಸಬೇಕು, ಸಮಯ ಹಾಳು ಮಾಡಬೇಕು ಎಂಬ ನಿಯಮವೇ ಈಗಿಲ್ಲ.
ಇನ್ನು ಆನ್‌ಲೈನ್ ಡೆಲಿವರಿ ಆಪ್ ಬ್ಲಿಂಕ್ ಇಟ್ ಬಗ್ಗೆ ನೀವು ಕೇಳಿರುತ್ತೀರಿ. ಬೆಂಗಳೂರು ಮೂಲದ ಬ್ಲಿಂಕ್ ಇಟ್ ಕಂಪನಿ ಹೊಸದೊಂದು ಐಡಿಯಾ ಹೊತ್ತು ಜನರ ಮುಂದೆ ಬಂದಿದೆ. ಬ್ಲಿಂಕ್ ಇಟ್‌ನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು 5 ನಿಮಿಷದಲ್ಲಿ ಮನೆ ಬಾಗಿಲಿಗೆ ತರಿಸಬಹುದು. ಆದ್ರೆ ಈಗ ನಿಮಗೆ ಪಾಸ್ ಪೋರ್ಟ್ ಸೈಜ್‌ನ ಫೋಟೋ ಬೇಕಾದರೂ ಆನ್‌ಲೈನ್‌ನಲ್ಲಿ ತರಿಸಬಹುದು.

ನಿಮಗೆ ಪಾಸ್ ಪೋರ್ಟ್ ಸೈಜ್ ಫೋಟೋ ಬೇಕಾದರೆ ಬ್ಲಿಂಕ್ ಇಟ್ ಮೂಲಕ 1ಒ ನಿಮಿಷದಲ್ಲಿ ಮನೆಗೆ ತರಿಸಬಹುದು. ಈ ರೀತಿಯ ವಿನೂತನ ಐಡಿಯಾದೊಂದಿಗೆ ಬ್ಲಿಂಕ್ ಇಟ್ ಗ ಸುದ್ದಿಯಾಗುತ್ತಿದೆ. ನಿತ್ಯದ ಕೆಲಸಗಳ ನಡುವೆ ನಮಗೆ ಪಾಸ್ ಪೋರ್ಟ್ ಸೈಜ್ ಫೋಟೋಗಳ ಅಗತ್ಯ ಬಂದೇ ಬರುತ್ತದೆ. ಹೀಗಾಗಿ ಬ್ಲಿಂಕ್ ಇಟ್ ಈ ಐಡಿಯಾ ಹೊರತಂದಿದೆ.
ಕೆಲವೊಮ್ಮೆ ಪಾಸ್‌ಪೋರ್ಟ್ ಸೈಜ್ ಫೋಟೋಗಾಗಿ ನಾವು ಸಹ ಅಲೆದಾಡಿರುತ್ತೇವೆ. ವಾರಗಳ ವರೆಗೂ ಕಾದಿರುತ್ತೇವೆ. ಈಗ ಬ್ಲಿಂಕ್ ಇಟ್ ದೆಹಲಿ ಮಯತ್ತು ಗುರುಗ್ರಾಮ್‌ನಲ್ಲಿ ಈ ಸೇವೆ ಆರಂಭಿಸಿದೆ. ಇದರಲ್ಲಿ ಕೇವಲ 10 ನಿಮಿಷದಲ್ಲಿ ನಿಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ ಲಭ್ಯವಾಗುತ್ತದೆ. ವೀಸಾ ದಾಖಲಾತಿ, ಐಡಿ ಕಾರ್ಡ್ ಅಥವಾ ಕೊನೆಯ ಕ್ಷಣದಲ್ಲಿ ಬಾಡಿಗೆ ಒಪ್ಪಂದಗಳಿಗೆ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು ಅಗತ್ಯವಾಗಿ ಬೇಕಾಗುತ್ತೆ. ಆದರೆ ತಕ್ಷಣಕ್ಕೆ ಮಾಡಿಸುವ ಅವಕಾಶವಿದ್ದರೂ ನಮ್ಮ ದೌರ್ಬಲ್ಯ ತಿಳಿದ ಸ್ಟುಡಿಯೋಗಳು ನಮ್ಮ ಬಳಿ ಹೆಚ್ಚುವರಿ ಹಣ ಪಡೆದು ವಸೂಲಿಗೆ ಇಳಿಯುತ್ತವೆ.
"ಈ ಹೊಸ ಸೇವೆಯನ್ನು ಹೊರತರಲು ನಾವು ಉತ್ಸುಕರಾಗಿದ್ದೇವೆ ಮತ್ತು ಅದನ್ನು ಪರಿಪೂರ್ಣಗೊಳಿಸಲು ನಮಗೆ ಸಹಾಯ ಮಾಡಲು ನಿಮ್ಮ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ನಾವು ಸೇವೆ ಸಲ್ಲಿಸುವ ಎಲ್ಲಾ ನಗರಗಳಿಗೆ ಇದನ್ನು ಕ್ರಮೇಣವಾಗಿ ವಿಸ್ತರಿಸಲಾಗುವುದ ಎಂದು ಬ್ಲಿಂಕ್ ಇಟ್ ಮುಖ್ಯಸ್ಥ ಅಲ್ಬಿಂದರ್ ದಿಂಡ್ಸಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗ್ರಾಹಕರು ಹೇಗೆ ಸುಲಭವಾಗಿ ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಬಹುದು ಎಂಬುದನ್ನು ದಿಂಡ್ಸಾ ವಿವರಿಸಿದ್ದಾರೆ. ಗ್ರಾಹಕರು ತಮ್ಮ ಹಳೆಯ ಪಾಸ್‌ಪೋರ್ಟ್ ಸೈಜ್‌ನ ಫೋಟೋವನ್ನು ಬ್ಲಿಂಕ್ ಇಟ್ ಆಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ನಿಮ್ಮ ಫೋನ್‌ನಲ್ಲಿ ಸಹ ಫೋಟೋ ತೆಗೆದು ಅಪ್‌ಲೋಡ್ ಮಾಡಬಹುದು.
ಒಮ್ಮೆ ನೀವು ನಿಮ್ಮ ಫೋಟೋ ಅಪ್‌ಲೋಡ್ ಮಾಡಿದ ಬಳಿಕ ಬ್ಲಿಂಕ್ ಇಟ್‌ನ ಸಿಸ್ಟಮ್ ಸ್ವಯಂಚಾಲಿತವಾಗಿ ಫೋಟೋವನ್ನು ಜನರೇಟ್ ಮಾಡಲಿದೆ. ಪಾಸ್‌ಪೋರ್ಟ್ ಸೈಜ್‌ಗೆ ಸರಿಹೊಂದುವಂತೆ ಅದನ್ನು ಮಾರ್ಪಾಡು ಮಾಡಲಿದೆ. ನೀವು ಎಷ್ಟು ಫೋಟೋ ಗಳು ಬೇಕು ಎಂಬುದನ್ನು ಆರ್ಡರ್ ಮಾಡುವಾಗಲೇ ನಮೂದಿಸಲಬಹುದು. ಅಂದರೆ 8, 16, ಅಥವಾ 32 ಫೋಟೋಗಳನ್ನು ನೀವು ಆರ್ಡರ್ ಮಾಡಬಹುದು ಎಂದು ದಿಂಡ್ಸಾ ಮಾಹಿತಿ ಹಂಚಿಕೊಂಡಿದ್ದಾರೆ.
ಬ್ಲಿಂಕ್ ಇಟ್fನ ಈ ಹೊಸ ಐಡಿಯಾಗೆ ಜನ ಮೆಚ್ಚುಗೆ ಹೊರಹಾಕಿದ್ದಾರೆ, ಮನೆಯಲ್ಲೇ ಕುಳಿತು ಪಾಸ್‌ಪೋರ್ಟ್ ಸೈಜ್ ಫೋಟೋ ಪಡೆಯಬಹುದು ಎಂಬುದು ನಾವಿಂದು ಯೋಚಿಸಲು ಸಾಧಗ್ಯವಿಲ್ಲ ಎಂದು ಬಳಕೆದಾರರೊಬ್ಬರು ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications
