Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಾಲುಗಳಿರುವ ಹಾವನ್ನು ಎಂದಾದ್ರು ನೋಡಿದ್ದೀರಾ? ಇದು ಸತ್ಯನಾ?
ಸಾಮಾಜಿಕ ಜಾಲತಾಣದಲ್ಲಿ ಎಂತಹ ವಿಚಿತ್ರ ವಿಡಿಯೋಗಳು ಹರಿದಾಡುತ್ತವೆ ಅಂದ್ರೆ ನೀವು ಅದನ್ನ ನೋಡಿಯೂ ನಂಬಲಾಗದಷ್ಟು ನಿಗೂಢವಾಗಿರುತ್ತವೆ. ಕೆಲವೊಂದನ್ನ ನೀವು ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇಲ್ಲೊಂದು ವಿಡಿಯೋ ಎಲ್ಲರ ಗಮನ ಸೆಳೆದಿದ್ದು, ಅಚ್ಚರಿಗೂ ಕಾರಣವಾಗಿದೆ.
ಅದೆನೆಂದರೆ ಇಲ್ಲೊಂದು ಕಾಲುಗಳಿರುವ ಹಾವಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಸ್ತನಿ ಜಾತಿಗೆ ಸೇರಿದ ಹಾವಿಗೆ ಕಾಲುಗಳಿಲ್ಲ ಎಂಬುದನ್ನ ನಾವು ಕೇಳಿದ್ದೇವೆ, ಆದ್ರೆ ಇಲ್ಲೊಂದು ವಿಡಿಯೋ ಇದಕ್ಕೆ ತದ್ವಿರುದ್ಧವಾಗಿದ್ದು ನೋಡಿಗರು ಅಕ್ಷರಶಃ ದಂಗಾಗಿದ್ದಾರೆ.

ಹಾವು ಎಂದ ಕೂಡಲೆ ಭಯದಿಂದ ಮಾರುದ್ದ ಓಡಿಹೋಗುತ್ತಾರೆ. ಏಕೆಂದರೆ ಹಾವುಗಳು ಅತ್ಯಂತ ವಿಷಕಾರಿ ಹಾಗೂ ಮಾನವರ ಸಾವಿಗೆ ಕಾರಣವಾಗುವ ಪ್ರಾಣಿಗಳು, ಹೀಗಾಗಿ ಹಾವುಗಳೆಂದರೆ ಎಲ್ಲರಿಗೂ ಭಯ ಕಾಡುತ್ತಿರುತ್ತದೆ. ಅಪಾಯಕಾರಿ ಹಾವುಗಳ ವಿಷದಿಂದ ಸಾವಿರಾರು ಜನರನ್ನು ಒಟ್ಟಿಗೆ ಸಾಯಿಸಬಹುದು, ಅಲ್ಲದೆ ಹಾವು ಕಡಿತಕ್ಕೆ ಇನ್ನೂ ಸರಿಯಾದ ಚಿಕಿತ್ಸೆಯೂ ಇಲ್ಲದಿರುವುದು ಹಾವು ಎಂದರೆ ಎಲ್ಲರುಗೂ ಭಯ ತರುತ್ತದೆ.
ಇನ್ನು ಈ ವಿಡಿಯೋದಲ್ಲಿ ಆ ಹಾವಿಗೆ ಎರಡು ಕಾಲುಗಳಿರುವುದನ್ನು ನಾವು ಗಮನಿಸಬಹುದು. ಈ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಮ್‌ನ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಯಾವ ಜಾತಿಯ ಹಾವು ಎಂದು ಗುರುತಿಸುವಿರಾ ಎಂದು ಪ್ರಶ್ನೆ ಕೇಳಲಾಗಿದೆ. ಆದರೆ ಜನರು ಈ ವಿಡಿಯೋ ನೋಡಿ ಇದು ಹಾವು ಹೌದೋ ಅಲ್ಲವೋ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
@balichannel ಹೆಸರಿನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಾಗಿಲ ಬಳಿ ಉದ್ದನೆಯ ಹಾವು ಕಾಣಿಸಿಕೊಂಡಿದೆ. ಆದರೆ ಅದರ ತಲೆಯ ಭಾಗದ ಕೆಳಗೆ ಕಾಲುಗಳಿರುವುದು ಕಾಣುತ್ತದೆ. ಆದರೆ ಅದು ಎಲ್ಲಿಯೂ ಚಲಿಸದೆ ಅಲ್ಲಿಯೇ ನಿಂತು ನೋಡುತ್ತಿದೆ.
ಅಚ್ಚರಿ ಎಂದರೆ ಹಾವಿಗೆ ಕಾಲುಗಳಿರುವುದಿಲ್ಲ. ಯಾವ ಜಾತಿಯ ಹಾವಿಗೂ ಕಾಲುಗಳಿಲ್ಲ. ಆದರೆ ಈ ಹಾವಿಗೆ ಕಾಲುಗಳಿರಲು ಕಾರಣವೇನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಈ ವಿಡಿಯೋ ವೈರಲ್ ಆಗಿದೆ. ಸಾವಿರಾರು ಮಂದಿ ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಪ್ರಾಣಿಯನ್ನು ಗುರುತಿಸುವಂತೆ ಪ್ರಶ್ನೆ ಮಾಡಿದ್ದಾರೆ.
ಆದರೆ ಕೆಲವರ ಪ್ರಕಾರ ಇದೊಂದು ನಕಲಿ ವಿಡಿಯೋ ಆಗಿದೆ. ಹಾವಿಗೆ ಕಾಲುಗಳಿರಲು ಸಾಧ್ಯವಿಲ್ಲ ಇದರಲ್ಲಿ ಎರಡು ಪ್ರಾಣಿಗಳ ವಿಡಿಯೋವನ್ನು ತೆಗೆದು ಒಂದುಗೂಡಿಸಿ ವೈರಲ್ ಮಾಡಲಾಗಿದೆ ಎನ್ನುತ್ತಿದ್ದಾರೆ. ಏಕೆಂದರೆ ಈ ವಿಡಿಯೋದಲ್ಲಿ ಆ ಹಾವಿನ ತಲೆಯಿಂದ ಕಾಲುಗಳಿರುವ ಭಾಗದ ವರೆಗೆ ಒಂದು ಬಣ್ಣದ ಅದರ ಕೆಳಗೆ ಮತ್ತೊಂದು ಬಣ್ಣ ಹೊಂದಿದೆ. ಹೀಗಾಗಿ ಇದು ಎರಡು ವಿಡಿಯೋ ಸೇರಿಸಿ ಹಾವುವಿಗೆ ಕಾಲುಗಳಿರುವಂತೆ ತೋರಿಸಲಾಗಿದೆ ಎಂದು ವಾದಿಸಲಾಗಿದೆ.
ಇನ್ನೊಂದು ಕಡೆ ಈ ಹಾವನ್ನು ಗಮನವಿಟ್ಟು ನೋಡಿದಾಗ ಅದರ ತಲೆಯ ಭಾಗ ಬೇರೆ ಪ್ರಾಣಿಯದ್ದು ಎನಿಸುತ್ತದೆ. ಹಾವಿನ ತಲೆ ಆಕಾರದಲ್ಲಿ ಅದು ಕಾಣಿಸುತ್ತಿಲ್ಲ ಬದಲಾಗಿ ಬೇರೆ ಪ್ರಾಣಿಯ ಭಾಗವನ್ನು ಇದಕ್ಕೆ ಜೋಡಿಸಿದ್ದಾರೆ. ಇದೆಲ್ಲಾ ವಿಡಿಯೋ ಎಡಿಟ್ ಮಾಡಿರುವ ಮಹಿಮೆ ಎಂದು ಒಬ್ಬ ಬಳಕೆದಾರ ಬರೆದುಕೊಂಡಿದ್ದಾರೆ. ಆದರೆ ಈ ವಿಡಿಯೋ ನೋಡಿದ ಬಹುಪಾಲು ಮಂದಿ ಇದು ಅಸಲಿ ಎಂದು ಇದೊಂದು ವಿಚಿತ್ರ ಹಾವಿನ ಜಾತಿಗೆ ಸೇರಿದ ಪ್ರಾಣಿ ಎಂದು ಹೇಳುತ್ತಿದ್ದಾರೆ. ಆದರೆ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ನೋಡುಗರಿಗೆ ಬಿಟ್ಟಿದ್ದು. ಆದ್ರೆ ಈ ರೀತಿಯ ಹಾವು ಏನಾದರೂ ಇದ್ದರೆ ನಿಜವಾಗಲು ಅದ್ಭುತವೇ ಸರಿ. ಆದ್ರೆ ಮೇಲ್ನೋಟಕ್ಕೆ ಇದೊಂದು ಎಡಿಟ್ ಮಾಡಲಾದ ವಿಡಿಯೋ ಆಗಿರಬಹುದು ಎನ್ನಲಾಗಿದೆ.



Click it and Unblock the Notifications
