Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶೂ ಧರಿಸುವಾಗ ಒಳಗಿತ್ತು ನಾಗರಹಾವು.! ಆಮೇಲೆ ಆಗಿದ್ದೇನು?
ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗಲಿದೆ ಎಂಬುದು ನಮಗೆ ತಿಳಿದ ವಿಚಾರ. ಅದ್ರಲ್ಲೂ ಹಾವುಗಳು ಮನೆಯೊಳಗೆ ಬರುವುದು, ಇಲ್ಲವೆ ಬೆಚ್ಚಗಿನ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಹೀಗಾಗಿ ಮಳೆಗಾಲದಲ್ಲಿ ಹಾವುಗಳ ಕುರಿತು ತುಸು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ.
ಈಗೊಂದು ವಿಡಿಯೋದಲ್ಲೂ ಕೂಡ ಹಾವೊಂದು ಮಕ್ಕಳ ಚಪ್ಪಲಿಯಲ್ಲಿ ಅವಿತು ಕುಳಿತಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾಗರಹಾವಿನ ಮರಿಯೊಂದು ಚಪ್ಪಲಿಯಲ್ಲಿ ಅಡಗಿರುವುದು ನೋಡಬಹುದು.
ಯುವತಿ ಶೂ ಹಾಕಿಕೊಳ್ಳಲು ಮುಂದಾದಾದ ಅದರಲ್ಲಿ ಚಿಕ್ಕ ಹಾವಿನ ಮರಿ ಅವಿತು ಕುಳಿತಿರುವುದು ಕಂಡುಬಂದಿದೆ. ಆಕೆ ಬೆಚ್ಚಿಬಿದ್ದಿದ್ದು, ಕೂಗಿಕೊಂಡಿದ್ದಾಳೆ. ಆದರೆ ಹಾವಿನ ಮರಿ ಶೂನಿಂದ ಹೊರಬಾರದೆ ಅಲ್ಲಿಯೇ ಅವಿತು ಕುಳಿತಿದೆ. ಬಳಿಕ ಉರಗ ರಕ್ಷಕರಿಗೆ ಕರೆ ಮಾಡಲಾಗಿದೆ.

ಪ್ರತಿ ಬಾರಿ ಚಪ್ಪಲಿ, ಶೂ ಧರಿಸುವಾಗ ಎಷ್ಟು ಎಚ್ಚರಿಕೆ ವಹಿಸಿದರು ಸಾಲದು, ಏಕೆಂದರೆ ಹಾವುಗಳು ಇಂತಹ ಸ್ಥಳದಲ್ಲೇ ಅವಿತು ಕುಳಿತುಕೊಳ್ಳುತ್ತವೆ. ಏಕೆಂದರೆ ಹಾವುಗಳು ಮಳೆಗಾಲದಲ್ಲಿ ಬೆಚ್ಚಗಿನ ಜಾಗ ಹುಡುಕುತ್ತಿರುತ್ತವೆ. ಹೀಗಾಗಿ ಮನೆಯಲ್ಲಿ ಬೆಚ್ಚಗಿರುವ ಶೂ, ಚಪ್ಪಲಿ, ವಾಹನಗಳ ಅಡಿ ಇಂತಹ ಕಡೆಗಳಲ್ಲಿ ಅಡಗಿ ಕುಳಿತುಕೊಳ್ಳುತ್ತವೆ.
ನೀವು ಶೂ, ಚಪ್ಪಲಿ ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ನೋಡಿಕೊಳ್ಳದಿದ್ದರೆ ಅಪಾಯ ಯಾವಾಗ ಬೇಕಾದರು ಎದುರಾಗಬಹುದು. ಇಲ್ಲಿಯೂ ಸಹ ಹಾವಿನ ಮರಿ ಶೂ ಒಳಗೆ ಬೆಚ್ಚಗೆ ಕುಳಿತಿದೆ, ಬಳಿಕ ಯುವತಿ ಶೂ ಧರಿಸುವಾಗ ಹಾವಿನ ಮರಿ ಇರುವುದನ್ನು ಆಕೆ ನೋಡಿದ್ದಾಳೆ.
ಉರಗ ರಕ್ಷಕರು ಹಾವಿನ ಮರಿ ರಕ್ಷಣೆಗೆ ಮುಂದಾದಾಗ ಅದು ಕೋಪಗೊಂಡಿರುವುದು ನೋಡಬಹುದು. ಸಿಟ್ಟಿನಲ್ಲಿ ಬುಸುಗುಡುತ್ತಿದೆ. ಇದು ಹಾವಿನ ಮರಿಯಾಗಿಯಾಗಿದ್ದರು ಅವುಗಳ ವಿಷ ಅತ್ಯಂತ ಅಪಾಯಕಾರಿಯೇ. ಜೊತೆಗೆ ಅದು ಕೋಪಗೊಂಡಿರುವುದು ಸಹ ದಾಳಿ ಮಾಡುವ ಮುನ್ಸೂಚನೆ ನೀಡುತ್ತಿದೆ.
@MindhackD ಎಂಬ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ನೋಡಿದ ಮಂದಿ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಮಳೆಗಾಲದಲ್ಲಿ ಹಾವುಗಳ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸುವ ಅಗತ್ಯತೆಯ ಕುರಿತು ಮಾತನಾಡಿದ್ದಾರೆ. ಅಲ್ಲದೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಶೂ, ಚಪ್ಪಲಿ, ಹೆಲ್ಮೆಟ್, ಬಟ್ಟೆ ಧರಿಸುವ ಮುನ್ನ ಕೆಲ ಹೊತ್ತು ಚೆನ್ನಾಗಿ ಗಮನಿಸಬೇಕು, ಅಲ್ಲದೆ ಬಹಳ ಎಚ್ಚರಿಕೆ ವಹಿಸಬೇಕು ಎಂಬ ಸಲಹೆ ನೀಡಿದ್ದಾರೆ.
ಇದಕ್ಕೂ ಮೊದಲು ನಾವು ಹಾವುಗಳು ಈ ರೀತಿ ಸ್ಕೂಟಿಯಲ್ಲಿ, ಹೆಲ್ಮೆಟ್ ಒಳಗೆ, ಬಾತ್ ರೂಮ್‌ನಲ್ಲಿ, ಪೂಜಾ ಕೊಠಡಿಯಲ್ಲಿ ಸೇರಿಕೊಂಡಿದ್ದ ಹಲವು ಘಟನೆಗಳ ನೋಡಿದ್ದೆವು. ಹಾವುಗಳು ಹೆಚ್ಚಾಗಿ ಮಂದ ಬೆಳಕಿರುವ ಕಡೆಗಳಲ್ಲಿ, ಬೆಚ್ಚಗಿರುವ ಜಾಗ ಹುಡುಕುತ್ತವೆ. ಹೀಗಾಗಿ ಮನೆಯಲ್ಲಿ ಕತ್ತಲೆ ಇರುವ ಜಾಗ ಹಾಗೂ ಚಪ್ಪಲಿ, ಹೆಲ್ಮೆಟ್ ಇಟ್ಟಿರುವ ಜಾಗಗಳಲ್ಲಿ ಎಚ್ಚರಿಕೆ ಯಾವಾಗಲು ಪರೀಕ್ಷಿಸುತ್ತಲೇ ಇರಿ. ಹಾವು ಎಲ್ಲಿಂದ ಬರುತ್ತವೆ ಎಂದು ಅಂದಾಜು ಮಾಡಲಾಗುವುದಿಲ್ಲ.



Click it and Unblock the Notifications
