Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮುಂಬೈ ಟ್ರೈನ್‌ನಲ್ಲಿ ಬುದ್ದಿವಂತ ನಾಯಿ: ಈ ನಾಯಿ ಬುದ್ದಿ ನೋಡಿ ಮನುಷ್ಯ ಕಲಿಯಬೇಕಾಗಿದೆ
ನಾಯಿ ಬುದ್ಧಿವಂತ ಪ್ರಾಣಿ, ಇವತ್ತಿನ ವೈರಲ್ ವೀಡಿಯೋ ಸ್ಟಾರ್ ಮುಂಬೈ ಟ್ರೈನ್‌ನಲ್ಲಿ ಪ್ರಯಾಣ ಮಾಡಿದ ನಾಯಿ. ಅದರ ಬುದ್ಧಿವಂತಿಕೆ ನೋಡಿದವರು ಫುಲ್ ಫಿದಾ.
ಈ ವೀಡಿಯೋದಲ್ಲಿ ಅಲ್ಲಿ ನಾಯಿ ಜೊತೆ ಹಾಗೆ ವರ್ತಿಸಿದ ಜನರಿಗಿಂತ ನಾಯಿನೇ ಬುದ್ಧಿಶಾಲಿ
ನಾಯಿ ಲೋಕನ್ ಟ್ರೈನ್‌ನಲ್ಲಿ ಹತ್ತಿದಾಗ ಜನರು ಅದನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ, ಟ್ರೈನ್ ನಿಂತಿಲ್ಲ ಚಲಿಸುತ್ತಲೇ ಇದೆ, ಇನ್ನೂ ಫ್ಲಾಟ್‌ಫಾರಂಗೆ ಬಂದಿಲ್ಲ, ಜನರು ಅದನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಾಯಿ ಮಾತ್ರ ಈ ಮುಠಾಳರು ದೂಡುತ್ತಿದ್ದಾರೆ ಎಂದು ನಾನು ಈಗ ಹೋದರೆ ಪ್ರಾಣ ಹೋಗುತ್ತೆ ಎಂಬುವುದು ಚೆನ್ನಾಗಿ ಗೊತ್ತಿದೆ, ಹಾಗಾಗಿ ಆ ನಾಯಿ ಟ್ರೈನ್ ಫ್ಲಾಟ್‌ಫಾರಂಗೆ ಬರುವವರೆಗೆ ಕಾದು ನಂತರ ಹೊರ ಹೋಗಿದೆ, ನಾಯಿಗಿರುವ ಬುದ್ಧಿ ಮನುಷ್ಯನಿಗೆ ಇಲ್ವಲ್ಲ ಎಂಬುವುದು ಈ ವೀಡಿಯೋ ನೋಡಿದಾಗ ಅನಿಸುತ್ತೆ.
ಟ್ರೈನ್ ನಿಂತ ಮೇಲಷ್ಟೇ ಟ್ರೈನ್‌ನಿಂದ ಇಳಿಯಬೇಕೆಂಬುವುದು ಆ ನಾಯಿಗೆ ಗೊತ್ತಿದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಈ ನಾಯಿ ಮುಂಬಯಿನ ಅನೇಕ ನಿವಾಸಿಗಳಿಗಿಂತ ಬುದ್ಧಿವಂತ ನಾಯಿ ಎಂದು ಕಮೆಂಟ್ ಮಾಡಿದ್ದಾರೆ.

ಈ ವೀಡಿಯೋ ತೋರಿಸಿ ಜನರಿಗೆ ಬುದ್ಧಿ ಹೇಳಬೇಕು
ಈ ವೀಡಿಯೋ ಜನರಿಗೆ ತೋರಿಸಬೇಕು, ಆವಾಗ ಅವರಿಗೆ ಬುದ್ಧಿ ಬರುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ, ಹೌದು ಎಷ್ಟೋ ಜನರು ಟ್ರೈನ್ ನಿಲ್ಲುವ ಮೊದಲಿಗೆ ಇಳಿಯುವ ಸಾಹಸ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ, ಆವಾಗ-ಆವಾಗ ಟ್ರೈನ್ ಇಳಿಯುವ ಕೆಳಗೆ ಬಿದ್ದರು ಎಂಬ ಸುದ್ದಿಯನ್ನು ನೋಡುತ್ತಿರುತ್ತೇವೆ.
ಈ ವೀಡಿಯೋ ನೋಡಿದ ಮೇಲಾದರೂ ಜನರು ಟ್ರೈನ್ ಫ್ಲಾಟ್‌ಫಾರಂ ತಲುಪುವ ಮೊದಲೇ ಇಳಿಯುವ ಪ್ರಯತ್ನ ಮಾಡಲ್ಲ ಎಂದು ನಂಬಬಹುದೇ?
ನಾಯಿ ಮುದ್ದಾಗಿದೆ, ಪಾಪ ಕೂಡ ಇದೆ
ಆ ನಾಯಿ ನೋಡಿದರೆ ಬೀದಿ ನಾಯಿಯಂತೆ ಕಾಣುತ್ತದೆ, ಆದರೆ ತುಂಬಾನೇ ಮುದ್ದಾಗಿದೆ, ಬಿಳಿ-ಕಪ್ಪು ಬಣ್ಣದ ಆ ನಾಯಿ ತುಂಬನೇ ಬುದ್ಧಿವಂತ ನಾಯಿ. ನಾಯಿಯನ್ನು ನೋಡಿ ಮನುಷ್ಯಕಲಿಯ ಬೇಕಾಗಿದೆ.
ನೀತಿ ಪಾಠವೂ ಹೌದು
ಈ ವೀಡಿಯೋ ನೀತಿ ಪಾಠವೂ ಇದೆ, ಆ ನಾಯಿಯನ್ನು ಹೆದರಿಸಿ ಬೆದರಿಸಿ ಓಡಿಸಲು ಪ್ರಯತ್ನಿಸಿದರು, ಆದರೂ ಅದು ತಾನು ಇಳಿಯಲು ಸುರಕ್ಷಿತ ಅನಿಸುವವರೆಗೆ ಇಳಿಯಲೇ ಇಲ್ಲ. ನಾವು ಕೂಡ ಅಷ್ಟೇ ನಮ್ಮ ಬದುಕಿನಲ್ಲಿ ಏನೇ ಪರಿಸ್ಥಿತಿ ಬರಲಿ ಯಾರೇ ಹೆದರಿಸಲಿ ನಮ್ಮ ಸುರಕ್ಷತೆ ಕಡೆಗೆ ಗಮನ ಕೊಡಬೇಕು ಎಂಬ ನೀತಿ ಪಾಠವನ್ನು ಈ ವೀಡಿಯೋ ಹೇಳುತ್ತದೆ.



Click it and Unblock the Notifications
