Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಇದು ವಿಶ್ವದ ಚಿಕ್ಕ ನದಿ: ಒಂದು ಹೆಜ್ಜೆಯಲ್ಲಿ ನೀವು ದಡ ಮುಟ್ಟಬಹುದು! ಎಲ್ಲಿದೆ ಗೊತ್ತಾ?
ನದಿಗಳು ಅಂದ್ರೆ ಇಡೀ ಒಂದು ರಾಜ್ಯ, ದೇಶಕ್ಕೆ ನೀರು ನೀಡುವ ಮೂಲವಾಗಿರುತ್ತೆ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರದಲ್ಲಿ ನದಿಗಳು ಹರಿಯುತ್ತವೆ. ಆದ್ರೆ ಸೌದಿ ಅರೇಬಿಯಾ, ವ್ಯಾಟಿಕನ್ ಸಿಟಿ, ಕುವೈತ್ ಸೇರಿ ಕೆಲವ ದೇಶಗಳಲ್ಲಿ ಯಾವುದೇ ನದಿಗಳಿಲ್ಲ. ಇದನ್ನು ಹೊರತುಪಡಿಸಿದ್ರೆ ಉಳಿದೆಲ್ಲಾ ರಾಷ್ಟ್ರಗಳಲ್ಲೂ ನದಿಗಳು ಹರಿಯುವುದು ನೋಡಬಹುದು.
ಜಗತ್ತಿನ ಅತ್ಯಂತ ದೊಡ್ಡ ನದಿ ಯಾವುದು ಅಂದ್ರೆ ಎಲ್ಲರೂ ನೈಲ್ ನದಿ ಎನ್ನುತ್ತಾರೆ. ಸುಮಾರು 6,650 ಕಿ.ಮೀ ದೂರದ ವರೆಗೂ ಹರಿಯುವ ಈ ನದಿ ಆಫ್ರಿಕಾ ಖಂಡದ ಜೀವನಾಡಿಯಾಗಿದೆ. ಹಾಗೆ ವಿಶ್ವದ ಅತ್ಯಂತ ಚಿಕ್ಕ ನದಿ ಯಾವುದು ಎಂದು ಕೇಳಿದ್ರೆ ಹಲವು ಉತ್ತರಗಳು ನಿಮಗೆ ಹೊಳೆಯಬಹುದು.

ಸಾಮಾನ್ಯವಾಗಿ ಅಮೆರಿಕದಲ್ಲಿ ಹರಿಯುವ ರಿಯೋ ನದಿ ವಿಶ್ವದ ಸಣ್ಣ ನದಿ ಎನ್ನಲಾಗುತ್ತದೆ. ಇದು ಕೇವಲ 61 ಮೀಟರ್ ದೂರವಷ್ಟೇ ಹರಿಯುತ್ತದೆ. ಆದ್ರೆ ವಿಶ್ವದ ಅತ್ಯಂತ ಕಡಿಮೆ ಅಗಲ ಹೊಂದಿರುವ ನದಿ ಯಾವುದು ಅನ್ನೋದು ನಿಮಗೆ ಗೊತ್ತಾ? ವಿಶ್ವದ ಬಹುತೇಕ ನದಿಗಳು ಬಹಳ ವಿಶಾಲವಾಗಿ ಹರಿಯುತ್ತವೆ. ಒಂದು ದಡದಿಂದ ಇನ್ನೊಂದು ದಡ ಸೇರಲು ನೀವು ದೋಣಿ, ಹಡಗು, ಬಳಸುವುದು ನೋಡಬಹುದು.
ಹಾಗೆ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಲು ವಿಸ್ತಾರವಾದ ಸೇತುವೆ ನಿರ್ಮಿಸುವುದು ಕೂಡ ಸಹಜ. ಆದ್ರೆ ಇಲ್ಲೊಂದು ನದಿಗೆ ಸೇತುವೆ ಇಲ್ಲ, ದೋಣಿಯನ್ನು ಈ ನದಿಯಲ್ಲಿ ಹೋಗಲು ಕೂಡ ಆಗಲ್ಲ. ಆದ್ರೆ ನೀವು ಒಂದು ಹೆಜ್ಜೆಯಲ್ಲಿ ಈ ನದಿಯನ್ನು ದಾಟಬಹುದು. ಇದು ವಿಶ್ವದ ಅತ್ಯಂತ ಕಡಿಮೆ ಅಗಲ ಹೊಂದಿರುವ ನದಿಯಾಗಿದೆ.
ಚೀನಾದಲ್ಲಿರುವ ಒಂದು ನದಿ ಕೇವಲ ಒಂದು ಹೆಜ್ಜೆಯಲ್ಲಿ ಎರಡೂ ದಡವನ್ನು ನೀವು ತಲುಪಬಹುದು. ಅಷ್ಟು ಸಣ್ಣದಾಗಿದೆ. ಚೀನಾದ ಹುವಾಲೈ ನದಿಯು ಈ ರೀತಿಯ ವಿಚಿತ್ರ ರಚನೆ ಹೊಂದಿದೆ. ಒಳ ಮಂಗೋಲಿಯಾ ಪ್ರಸ್ಥಭೂಮಿಯಾದ್ಯಂತ ವಿಸ್ತರಿಸಿರುವ ಈ ಅಸಾಧಾರಣ ಜಲಮಾರ್ಗವು ನದಿಯ ರಚನೆಯ ಮೇಲೆ ಅಚ್ಚರಿ ಹುಟ್ಟಿಸುವಂತಿದೆ.
ಚೀನಾದಲ್ಲಿ ಹರಿಯುವ ಈ ಹುವಾಲೈ ನದಿಯು ಸುಮಾರು 17 ಕಿ.ಮೀ ದೂರ ಹರಿಯುತ್ತದೆ. ಆದ್ರೆ ಕೇವಲ 15 ಸೆಂಟಿ ಮೀಟರ್‌ನಷ್ಟು ಅಗಲ ಹೊಂದಿದೆ. ಕೆಲ ಕಡೆ ಈ ಅಗಲ ಕೊಂಚ ಹಿಗ್ಗಿರಬಹುದು ಆದ್ರೆ ಇದು ಹರಿಯುವ 17 ಕಿ.ಮೀ ಉದ್ದಕ್ಕೂ ನೀವು ಬರಿಗಾಲಿನಲ್ಲಿ ದಾಟಬಹುದಾದಷ್ಟು ಅಗಲ ಮಾತ್ರವೇ ಹೊಂದಿದೆ.
ಈ ವಿಚಿತ್ರ ಕಾರಣದಿಂದಾಗಿಯೇ ಈ ನದಿಯನ್ನು ವಿಶ್ವದ ಅತ್ಯಂತ ಕಿರಿದಾದ ನದಿ ಎಂದು ಹಾಗೆ ವಿಭಿನ್ನ ರಚನೆಯ ನದಿ ಎಂದು ಕರೆಯಲಾಗಿದೆ. ಚೀನೀ ತಜ್ಞರ ಪ್ರಕಾರ ಈ ಸಣ್ಣ ನದಿ ಕನಿಷ್ಠ 10,000 ವರ್ಷಗಳಿಂದ ಗೊಂಗರ್ ಹುಲ್ಲುಗಾವಲು ಪ್ರದೇಶದಾದ್ಯಂತ ನಿರಂತರವಾಗಿ ಹರಿಯುತ್ತಿದೆ. ಹಾಗೆ ಈ ನದಿಯ ಮೂಲ ಕೂಡ ಒಂದು ದೊಡ್ಡ ನಿಗೂಢತೆ ತನ್ನಲ್ಲಿಟ್ಟುಕೊಂಡಿದೆ. ಹೆಕ್ಸಿಗ್ಟನ್ ಹುಲ್ಲುಗಾವಲು ಪ್ರಕೃತಿ ಮೀಸಲು ಪ್ರದೇಶದಲ್ಲಿರುವ ದಲೈ ನೂರ್ ಸರೋವರಕ್ಕೆ ವಿಲೀನಗೊಳ್ಳುವ ಮೊದಲು ಬುಗ್ಗೆಯಾಗಿ ಭೂಮಿಯಿಂದ ಬರಬರುತ್ತದೆ. ಅಲ್ಲಿಂದ 50 ಸೆಂ.ಮೀ ಆಳವಾಗಿ 15 ಸೆಂ.ಮೀ ಅಗಲವಾಗಿ 17 ಕಿ.ಮೀ ಹರಿಯುತ್ತದೆ.
ಇದು ಸಣ್ಣ ಚರಂಡಿಗಿಂತಲೂ ಸಣ್ಣದಾದ ವಿಸ್ತೀರ್ಣ ಹೊಂದಿದೆ. ಆದ್ರೆ 17 ಕಿ.ಮೀ ಹರಿಯುತ್ತದೆ. ಹಾಗೆ ಕೃತಕವಾಗಿ ನಿರ್ಮಾಣಗೊಂಡ ನೀರನ ಮೂಲವಲ್ಲ, ಬದಲಿಗೆ ಸರೋವರದ ಬಳಿಕ ಹುಟ್ಟಿಕೊಂಡಿದ್ದರಿಂದ ನದಿಯ ಸ್ಥಾನಮಾನ ನೀಡಲಾಗಿದೆ. ಈ ನದಿಯನ್ನು ಉಳಿಸಲು ಅಲ್ಲಿನ ಸ್ಥಳೀಯರು ಈ ನೀರನ್ನು ಯಾವುದೇ ಕೆಲಸಕ್ಕೆ ಬಳಸುವುದಿಲ್ಲ. ನೈಸರ್ಗಿಕವಾಗಿ ಹರಿಯಲು ಬಿಡಲಾಗಿದೆ. ಈ ವಿಶೇಷಗಳ ಹೊಂದಿರುವ ನದಿಯನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಇಂದಿಗೂ ಈ ನದಿ ಜೀವಂತವಾಗಿ ಉಳಿದಿದೆ.



Click it and Unblock the Notifications
