Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಾಶ್ಮೀರದಲ್ಲಿ ಅಪರೂಪಕ್ಕೆ ಬೀಳುವ ಹಿಮದ ಸೌಂದರ್ಯ ವರ್ಣಿಸಿದ ದೇವತೆಗಳು: ವೀಡಿಯೋ ವೈರಲ್
ಕಾಶ್ಮೀರ ಎಷ್ಟೊಂದು ಪ್ರಕೃತಿ ರಮಣೀಯ ಸ್ಥಳ ಎಂಬುವುದು ಅಲ್ಲಿದ್ದವರಿಗೆ, ಅಲ್ಲಿಗೆ ಹೋಗಿ ಬಂದವರಿಗೆ ತಿಳಿದಿರುತ್ತದೆ, ಅಲ್ಲದೆ ಫೋಟೋ, ವೀಡಿಯೋಗಳನ್ನು ನೋಡುವಾಗಂತೂ ಭೂಲೋಕದ ಸ್ವರ್ಗ ಎಂದನಿಸವಷ್ಟು ಸುಂದರವಾಗಿದೆ. ಇದೀಗ ಅಲ್ಲಿ ಮಂಜುಗಡ್ಡೆ ಬೀಳುವ ಸಮಯ, ಈ ಬಾರಿ ಸ್ವಲ್ಪ ತಡವಾಗಿ ಬಂದಿದೆ.

ಮಂಜುಗಡ್ಡೆಯಿಂದ ಆವೃತವಾಗಿರುವ ಕಾಶ್ಮೀರವನ್ನು ನೋಡುವುದೇ ಕಣ್ಣಿಗೆ ಆನಂದ, ಸ್ವಲ್ಪ ಚಳಿ ಅಧಿಕ ಅನಿಸಿದರೂ ಕಣ್ಣಿಗೆ ಹಿತ ತುಂಬುವ ಆ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಲ್ಲಿಯ ನಿವಾಸಿಗಳು ಕಾಯುತ್ತಿರುತ್ತಾರೆ. ಪ್ರವಾಸಿಗರು ಈ ಸುಂದರ ದೃಶ್ಯ ನೋಡಲು ಹೋಗುತ್ತಾರೆ.
ಈ ಬಾರಿ ಮಂಜುಗಡ್ಡೆ ರಾಶಿ ಬಿದ್ದಿರುವ ಪ್ರಕೃತಿ ಸೌಂದರ್ಯವನ್ನು ವರ್ಣಿಸುತ್ತಿರುವ ಎರಡು ಪುಟಾಣಿ ಸಹೋದರಿಗಳ ವೀಡಿಯೋ ವೈರಲ್ ಆಗಿದೆ, ಆನಂದ್ ಮಹೇಂದ್ರರವರು ಕೂಡ ಈ ವೀಡಿಯೋ ಶೇರ್ ಮಾಡಿದ್ದಾರೆ, ಈ ಸುಂದರ ವೀಡಿಯೋ ಅದರಲ್ಲೂ ಈ ಪುಟಾಣಿಗಳ ಮಾತು ಕೇಳುತ್ತಿದ್ದಾರೆ ವಾವ್ ಕಾಶ್ಮೀರ.. ಎಷ್ಟೊಂದು ಸೊಗಸು ನೀನು ಎಂದನಿಸುವುದು.
ಇಬ್ಬರು ಪುಟಾಣಿ ಬಾಲಕಿಯರಲ್ಲಿ ಒಬ್ಬಳು ಆ ಮಂಜುಗಡ್ಡೆ ಬಗ್ಗೆ ಹೇಳುತ್ತಿದ್ದರೆ ಮತ್ತೊಬ್ಬಳು ಕ್ಯೂಟ್ ಎಕ್ಸ್‌ಪ್ರೆಷನ್ ನೀಡುತ್ತಿದ್ದಾಳೆ. ಆ ದೃಶ್ಯ ನೋಡಿ ಒಬ್ಬ ಹುಡುಗಿ ಜನ್ನತ್ತ್ ಎಂದರೆ ಮತ್ತೊಬ್ಬಳು ದೂದ್ ಕಿ ಲೆಹೆರೈನ್ ಎಂದು ಹೇಳುತ್ತಾ ಅಲ್ಲಿ ಮಂಜುಗಡ್ಡೆ ಬಿದ್ದಿರುವ ಸುಂದರ ದೃಶ್ಯವನ್ನು ವರ್ಣಿಸುತ್ತಿದ್ದಾಳೆ.
ಈ ವರ್ಷ ಕಾಶ್ಮೀರಿಗರು ಈ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಸ್ವಲ್ಪ ಸಮಯ ಕಾಯಬೇಕಾಯ್ತು, ಸಾಮಾನ್ಯವಾಗಿ ಜನವರಿಯಲ್ಲಿ ಈ ರೀತಿಯ ದೃಶ್ಯ ಕಂಡು ಬರುತ್ತಿತ್ತು, ಆದರೆ ಈ ಬಾರಿ ಫೆಬ್ರವರಿಗೆ ಬಂದಿದೆ. ಅಲ್ಲಿಯ ಗಿಡಗಳು, ನೆಲ ಎಲ್ಲವೂ ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಐಸ್‌ನಲ್ಲಿ ಈ ಸಮಯದಲ್ಲಿ ಆಡಲು ತುಂಬಾನೇ ಇಷ್ಟಪಡುತ್ತಾರೆ.
Sleds on Snow
— anand mahindra (@anandmahindra) February 4, 2024
Or
Shayari on Snow.
My vote goes to the second…#Sunday
pic.twitter.com/qajdrVYyr7
ಚಿಕ್ಕ ಮಕ್ಕಳಂತೂ ಐಸ್ ಮೇಲೆ ಜಾರುಬಂಡಿ ಆಡಲು ಇಷ್ಟಪಡುತ್ತಾರೆ, ಸ್ನೋಮ್ಯಾನ್, ಸ್ನೋ ಬಾಲ್ ಅಂತೆಲ್ಲಾ ಆಡುತ್ತಾರೆ. ಅದು ನೋಡಲು ತುಂಬಾನೇ ಸುಂದರವಾಗಿರುತ್ತದೆ, ಇದೇ ದೃಶ್ಯವನ್ನು ಆ ಬಾಲಕಿಯರು ವರ್ಣಿಸಿರುವುದು, ಇದೀಗ ಆ ಬಾಲಕಿಯರ ವೀಡಿಯೋ ವೈರಲ್ ಆಗಿದ್ದು ಹಲವಾರು ಮಾಧ್ಯಮಗಳು ಕೂಡ ಈ ಬಾಲಕಿಯರ ಪ್ರಕೃತಿ ವರ್ಣನೆಯನ್ನು ಶ್ಲಾಘಿಸಿದ್ದಾರೆ.
ಅಂದ ಹಾಗೆ ನೀವು ಕಾಶ್ಮೀರದಲ್ಲಿ ಈ ರೀತಿ ಮಂಜು ಆವರಿಸಿರುವ ಸಮಯದಲ್ಲಿ ಹೋಗಿದ್ದೀರಾ? ಈ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಸಾಲದು, ಆದರೆ ಆ ಸಮಯದಲ್ಲಿ ಅಲ್ಲಿಯ ಜನರು ಹಲವಾರು ತೊಂದರೆಗಳನ್ನು ಕೂಡ ಅನುಭವಿಸುತ್ತಾರೆ, ಏಕೆಂದರೆ ನೀರು ತುಂಬಿಟ್ಟರೆ ಅದು ಕೂಡ ಐಸ್ ಆಗಿರುತ್ತದೆ. ಆದರೂ ಅಪರೂಪದ ಈ ದೃಶ್ಯಕ್ಕೆ ಕಾಶ್ಮೀಗರು ಹಂಬಲಿಸುವುದಂತೂ ಅಷ್ಟೇ ನಿಜ.



Click it and Unblock the Notifications
