Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಡೇ ಕೇರ್‌ನಲ್ಲಿ ನಿಮ್ಮ ಮಕ್ಕಳು ಸುರಕ್ಷಿತವೇ? ವೈರಲ್ ವೀಡಿಯೋ ನೋಡಿದವರು ಫುಲ್ ಶಾಕ್!
ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಡೇಕೇರ್‌ವೊಂದರ ವೀಡಿಯೋವೊಂದು ತುಂಬಾನೇ ವೈರಲ್ ಆಗುತ್ತಿದೆ. ಆ ವೀಡಿಯೋ ನೋಡಿದರೆ ಯಾರಾದರೂ ಒಂದು ಕ್ಷಣ ಬೆಚ್ಚಿ ಬೀಳುವುದು ಖಂಡಿತ. ಅಷ್ಟು ಚಿಕ್ಕ ಮಗುವಿನಲ್ಲಿ ಅಷ್ಟೊಂದು ಕ್ರೂರತೆ ಇರಲು ಹೇಗೆ ತಾನೆ ಸಾಧ್ಯ ಎಂದು ಅಚ್ಚರಿಪಡುವಷ್ಟರ ಮಟ್ಟಿಗಿದೆ ಆ ಮಗುವಿನ ವರ್ತನೆ.
ಸಾಮಾಜಿಕ ತಾಣದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದರೆ. ಡೇ ಕೇರ್‌ನ ನಿರ್ಲಕ್ಷ್ಯ ಎದ್ದು ಕಾಣುತ್ತಿರುವುದು ಎಷ್ಟು ಸತ್ಯವೋ ಆ ಮಗುವಿನಲ್ಲಿ ಆ ರೀತಿಯ ನಡವಳಿಕೆ ಕಂಡು ಬರುತ್ತಿದೆ ಎಂದಾದರೆ ಆ ಮಗು ಮನೆಯಲ್ಲಿ ಬೆಳೆಯುತ್ತಿರುವ ವಾತಾವರಣ ಸರಿಯಿರಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಮಗುವಿನ ವರ್ತನೆಗೆ ಕಾರಣವೇನು?
ಆ ವೀಡಿಯೋ ನೋಡಿದಾಗ ಅಷ್ಟು ಚಿಕ್ಕ ಮಗು ಆ ರೀತಿ ವರ್ತಿಸಲು ಹೇಗೆ ತಾನೆ ಸಾಧ್ಯ? ಎಂದನಿಸದೆ ಇರಲ್ಲ. ಮಕ್ಕಳೆಂದರೆ ಹೊಡೆದಾಟ, ಕಿತ್ತಾಟ ಸಾಮಾನ್ಯ. ಕೆಲವೊಮ್ಮೆ ಒಂದು ಮಗು ಇನ್ನೊಂದು ಮಗುವನ್ನು ತಳ್ಳಿ ಹಾಕುತ್ತೆ, ಆದರೆ ಈ ಮಗು ನಡೆದುಕೊಂಡ ರೀತಿ ಇದೆಯೆಲ್ಲಾ ತುಂಬಾನೇ ಕ್ರೂರವಾಗಿದೆ, ಅಲ್ಲದೆ ಈ ಮಗು ಆಯಾ ರೂಂನಿಂದ ಹೊರ ಹೋಗುವವರೆಗೆ ಕಾದು ನಂತರ ಚಿಕ್ಕ ಮಗುವಿನ ಮೇಲೆ ಅಟ್ಯಾಕ್ ಮಾಡಿದೆ. ಮಗುವನ್ನು ಹಿಡಿದೆಳದು ಕಚ್ಚಿ, ನಂತರ ಒದೆಯುತ್ತದೆ, ಹೊಡೆಯುತ್ತದೆ, ದೂಡಿ ಹಾಕುತ್ತದೆ. ಆ ರೀತಿ ಮಾಡಿದಾಗ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ನೆನಸಿಕೊಳ್ಳಲೇ ಭಯವಾಗುತ್ತೆ.
ಮಗುವಿನಲ್ಲಿ ಅಷ್ಟೊಂದು ಕ್ರೂರ ಸ್ವಭಾವಕ್ಕೆ ಈ ಕೆಳಗಿನ ಕಾರಣಗಳಿರಬಹುದು?
ಮನೆಯ ಪರಿಸರ: ನಾವೇನು ಮಾಡುತ್ತೇವೆ ಅದನ್ನು ನೋಡಿ ಮಕ್ಕಳು ಕಲಿಯುತ್ತಾರೆ ಅಥವಾ ಆ ಮಗು ಎಂಥ ಮಕ್ಕಳ ಜೊತೆ ಬೆರೆಯುತ್ತದೆ ಎಂಬುವುದು ಕೂಡ ಮುಖ್ಯವಾಗಿರುತ್ತೆ.
ಮೊಬೈಲ್ ಬಳಕೆ: ಈಗೀನ ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿಡಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ, ಆದರೆ ಆ ಮೊಬೈಲ್ ಮಗುವಿನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕಲ್ಪನೆಯೂ ಬಹುತೇಕ ಪೋಷಕರಿಗಿಲ್ಲ. ಮಕ್ಕಳು ಮೊಬೈಲ್‌ನಲ್ಲಿ ನೋಡುವ ಕಾರ್ಟೂನ್‌ಗಳು ಅವರ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರುವುದು, ಅದು ಕೂಡ ಮಕ್ಕಳಲ್ಲಿ ಕ್ರೂರ ನಡವಳಿಕೆಗೆ ಕಾರಣವಾಗಬಹುದು.
ಡೇ ಕೇರ್ ಸೆಂಟರ್‌ಗಳಲ್ಲಿ ನಿಮ್ಮ ಮಗು ಸುರಕ್ಷಿತವೇ?
ಈ ಪ್ರಶ್ನೆಯನ್ನು ಪ್ರತಿಯೊಬ್ಬ ಪೋಷಕರು ಕೇಳಲೇಬೇಕಾಗಿದೆ. ನ್ಯೂಕ್ಲಿಯರ್ ಫ್ಯಾಮಿಲಿಯ ಅತೀ ದೊಡ್ಡ ಅಡ್ಡಪರಿಣಾಮ ಬೀರುತ್ತಿರುವುದು ಪುಟ್ಟ ಮಕ್ಕಳ ಮೇಲೆ. ಮದುವೆಯಾದಾಗ ಅತ್ತೆ- ಮಾವ, ಅಪ್ಪ- ಅಮ್ಮ ಯಾರೂ ಜೊತೆಗೆ ಬೇಡ, ನಾವಿಬ್ಬರೇ ಇರಬೇಕೆಂದು ಬಹುತೇಕ ಜೋಡಿ ಬಯಸುತ್ತಾರೆ. ಆದರೆ ಮಕ್ಕಳಾದ ಮೇಲೆ ಮಕ್ಕಳನ್ನು ಬೆಳೆಸಲು ಹಿರಿಯರ ಸಹಾಯ ಬೇಕಾಗಿದೆ ಎಂಬ ಅರಿವು ಮೂಡುವುದು. ಇನ್ನು ಪೋಷಕರುಗಳೂ ಅಷ್ಟೇ ಹೆಚ್ಚಿನವರು ನಮ್ಮ ಮನೆ ಬಿಟ್ಟು ಮಕ್ಕಳ ಜೊತೆ ಹೋಗಿ ಇರಲು ಇಷ್ಟಪಡುವುದಿಲ್ಲ, ಈ ಎಲ್ಲಾ ಕಾರಣಕ್ಕೆ ದುಡಿಯುವ ದಂಪತಿಗೆ ಮಕ್ಕಳನ್ನು ಬೆಳೆಸಲು ಡೇ ಕೇರ್ ಅನಿವಾರ್ಯವಾಗಿದೆ.
ಡೇ ಕೇರ್‌ಗಳು ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದೆ. ಮಕ್ಕಳನ್ನು ನಾವು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಅಶ್ವಾಸನೆ ನೀಡುತ್ತಾರೆ. ಆದರೆ ಡೇ ಕೇರ್‌ನಲ್ಲಿ ಆ ಪ್ರಾಯದಲ್ಲಿ ಮಕ್ಕಳಿಗೆ ಸಿಗಬೇಕಾದ ಪ್ರೀತಿ ಸಿಗುತ್ತಿದೆಯೇ? ದುಡಿಯುವ ಪೋಷಕರು ಎಷ್ಟು ಬ್ಯುಸಿಯಾಗಿರುತ್ತಾರೆ ಎಂಬುವುದು ಪ್ರತಿಯೊಬ್ಬರಿಗೆ ತಿಳಿದಿರುವ ವಿಷಯ, ಇತ್ತ ಡೇ ಕೇರ್‌ನಲ್ಲಿ ನೋಡಿಕೊಳ್ಳಬಹುದು ಹಾಗಂತ ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವೇ? ಖಂಡಿತ ಇಲ್ಲ ಅಲ್ವಾ? ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಹಗಲಿರಳು ಶ್ರಮಿಸುತ್ತಿರುತ್ತೇವೆ, ಆದರೆ ಮಕ್ಕಳಿಗೆ ನಾವು ಮಾಡುವ ಹಣವೊಂದೇ ಸುರಕ್ಷಿತವಲ್ಲ ಎಂಬುವುದು ತಿಳಿದಿರಲಿ.



Click it and Unblock the Notifications
