Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಒಂದೇ ರೇಖೆ ಮೇಲೆ ಗ್ರಹಗಳ ಸಂಚಾರ: ಬರಿಗಣ್ಣಿಗೆ ಕಾಣಲಿದೆ ವಿಸ್ಮಯ..!
ಆಕಾಶದಲ್ಲಿ ಎಷ್ಟೆಲ್ಲಾ ವಿಚಿತ್ರಗಳು ನಡೆಯುತ್ತವೆ ಅಂದ್ರೆ ಇಂದಿಗೂ ಆಕಾಶ ಮೇಲಿನ ವಿಜ್ಞಾನಿಗಳ ಕೌತುಕ ಒಂಚೂರು ಕಡಿಮೆಯಾಗಿಲ್ಲ. ಖಗೋಳಶಾಸ್ತ್ರಜ್ಞರಿಗೆ ಆಕಾಶ ಇಂದಿಗೂ ನಿಗೂಢತೆ ಹೊಂದಿರುವ ಪುಸ್ತಕವ. ಕಳೆದೆರಡು ದಿನಗಳ ಹಿಂದೆ ಯುವತಿಯೊಬ್ಬಳು ಧೂಮಕೇತು ಬೀಳುತ್ತಿರುವ ವಿಡಿಯೋ ಸೆರೆಹಿಡಿದಿದ್ದಳು.
ಸ್ಪೇನ್ ಮತ್ತು ಪೋರ್ಚುಗಲ್‌ನ ಭಾಗದಲ್ಲಿ ಇಡೀ ಆಕಾಶ ಒಮ್ಮೆ ಬೆಳಕಾಗಿತ್ತು. ಈ ವಿಶೇಷ ವಿದ್ಯಮಾನವನ್ನು ಆಕಸ್ಮಿಕವಾಗಿ ಯುವತಿಯೊಬ್ಬಳು ಸೆರೆಹಿಡಿದಿದ್ದಳು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದರ ಜೊತೆಗೆ ಧೂಮಕೇತು ಕುರಿತು ಅಚ್ಚರಿ ಹುಟ್ಟಿಸುವ ಮಾಹಿತಿಗಳು ಹೊರಬಿದ್ದವು.

ಆದರೆ ಇದೀಗ ಯಾರು ಸಹ ಊಹಿಸದ, ಅಚ್ಚರಿಗೆ ಕಾರಣವಾಗುವಂತಹ ವಿದ್ಯಮಾನವೊಂದು ಜರುಗುವ ಮುನ್ಸೂಚನೆ ಸಿಕ್ಕಿದೆ. ಹೌದು ಆಕಾಶದಲ್ಲಿರುವ ಬಹುತೇಕ ಎಲ್ಲಾ ಗ್ರಹಗಳು ಒಂದೇ ನೇರ ಸಮಾನಾಂತರಕ್ಕೆ ಬಂದು ಸೇರುವ ಅಪರೂಪದ ಘಟನೆಯೊಂದು ನಮ್ಮ ಕಣ್ಣ ಎದುರಲ್ಲೇ ಸಂಭವಿಸಲಿದೆ.
ಮುಂದಿನದನ್ನು ಜೂನ್ 3 ರಂದು ರಾತ್ರಿ ಆರು ಗ್ರಹಗಳು ಒಂದೇ ರೇಖೆಯ ಮೇಲೆ ಕಾಣಿಸಲಿದೆ. ಗುರು, ಬುಧ, ಮಂಗಳ ಮತ್ತು ಶನಿ ಎಲ್ಲವೂ ಬರಿಗಣ್ಣಿಗೆ ಗೋಚರಿಸುತ್ತದೆ. ಜೊತೆಗೆ ಇವು ಗೆರೆ ಎಳೆದಂತೆ ಒಂದೇ ಸಾಲಿನಲ್ಲಿ ಇರಲಿವೆ.
ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಹೊಂದಿರುವವರು ಯುರೇನಸ್ ಗ್ರಹವನ್ನೂ ಸಹ ಅಂದು ನೋಡಬಹುದು. ಇದು ಬುಧಕ್ಕೆ ಹತ್ತಿರದಲ್ಲಿದೆ, ಹಾಗೆಯೇ ನೆಪ್ಚೂನ್ ಅನ್ನು ಶನಿಯ ಸಮೀಪದಲ್ಲಿದೆ. ನೀವು ಬರಿಗಣ್ಣಿನಿಂದಲೇ ಗುರು, ಶುಕ್ರ, ಶನಿ ಮತ್ತು ಮಂಗಳವನ್ನು ನೋಡಬಹುದು, ಆದರೂ ಮಂಗಳ ಮತ್ತು ಶನಿ ನೋಡಲು ಹೆಚ್ಚು ಕಷ್ಟಕರವಾಗಿರಬಹುದು.
ಈ ಗ್ರಹಗಳ ಸಾಲು ನೋಡಲು ನ್ಯೂಯಾರ್ಕ್ ನಗರದಲ್ಲಿ ಜೂನ್ 3 ರಂದು ಬೆಳಗ್ಗೆ 5 ಗಂಟೆಗೆ ಮತ್ತು ಸೂರ್ಯೋದಯಕ್ಕೆ ಮುಂಚೆಯೇ ಅತ್ಯುತ್ತಮವಾದ ಸ್ಥಾನವನ್ನು ಹೊಂದಿರುತ್ತಾರೆ, ಭಾರತದಲ್ಲಾದರೆ ಜೂನ್ 4ರಂದು ಕಾಣಿಸುವ ಸಂಭವವಿದೆ ಎನ್ನಲಾಗಿದೆ.
ಈ ವಿದ್ಯಮಾನವು ಬರೋಬರಿ ಒಂದು ವಾರಗಳ ಕಾಲ ನೋಡಬಹುದು. ಈ ರೀತಿಯ ವಿದ್ಯಮಾನ ನಡೆಯುತ್ತಿರುವುದು ಈ ವರ್ಷದಲ್ಲಿ ಎರಡನೇ ಬಾರಿಯಾಗಿದೆ. ಮೊದಲನೇ ಬಾರಿ ಸೂರ್ಯ ಗ್ರಹಣ ಸಂಭವಿಸಿದ ಸಮಯದಲ್ಲಿ ಕೆಲವು ಕಡೆಗಳಲ್ಲಿ ಮಾತ್ರವೇ ಕಂಡುಬಂದಿತ್ತು.
ಈ ವಿದ್ಯಮಾನ ನೋಡಲು ರಾತ್ರಿಗಿಂತಲೂ ಬೆಳಗ್ಗೆಯ ಹೊತ್ತು ಸೂಕ್ತ ಸಮಯವಂತೆ. ಈ ವೇಳೆ ಸ್ವಲ್ಪ ಸ್ಪಷ್ಟವಾಗಿಯೂ ಪ್ರಕಾಶಮಾನವಾಗಿಯೂ ಗ್ರಹಗಳ ಗೋಚರಿಸುತ್ತವೆ.
ಕಳೆದೆರಡು ದಿನ ಹಿಂದೆ ಆಕಾಶದಲ್ಲಿ ಕಾಣಿಸಿದ್ದ ಉಲ್ಕಾಶಿಲೆ ಭಾರೀ ಸುದ್ದಿಯಾಗಿತ್ತು. ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಚಂದ್ರನಿಗಿಂತಲೂ ಪ್ರಕಾಶ ಮಾನವಾದ ಬೆಳಕು ಕಂಡು ಜನರು ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದರಯ. ಅಷ್ಟಕ್ಕೂ ಈಗ ಪೋರ್ಚುಗಲ್ ದೇಶದ ಆಕಾಶದಲ್ಲಿ ಸಾಗಿರುವ ಉಲ್ಕಾಶಿಲೆ 61 ಸಾವಿರ ಕಿಲೋ ಮೀಟರ್ ವೇಗದಲ್ಲಿ ಸಾಗಿದೆ ಎನ್ನಲಾಗಿದೆ.
ಭೂಮಿಯ ಗುರುತ್ವಾಕರ್ಷಣಾ ಬಲಕ್ಕೆ ಸಿಲುಕಿದ್ದ ಉಲ್ಕೆ ವೇಗ ಪಡೆದುಕೊಳ್ಳುವುದರ ಜೊತೆಗೆ ಪ್ರಕಾಶಮಾನವಾಗಿ ಇಡೀ ಆಕಾಶವನ್ನು ಬೆಳಗಿಸಿತ್ತು. ಪೋರ್ಚುಗಲ್ ದೇಶದ ಎವೊರಾ ಜಿಲ್ಲೆಯ ಫೊರೊಸ್ ಡಿ ವೇಲ್ ಫಿಗುಯೆರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿತ್ತು. ಭೂಮಿ ಇಂದ ಸುಮಾರು 92 ಕಿ.ಮೀಟರ್ ದೂರದಲ್ಲಿ ಉಲ್ಕೆ ಕಂಡುಬಂದಿತ್ತು.



Click it and Unblock the Notifications