Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Vastu for Bedroom: ವಾಸ್ತು ಶಾಸ್ತ್ರ : ಬೆಡ್ ರೂಂನಲ್ಲಿ ಈ ವಾಸ್ತು ದೋಷಗಳು ಇರಲೇಬಾರದು!
ಮನೆಯಲ್ಲಿ ಬೆಡ್ ರೂಂ ತುಂಬಾನೇ ಮುಖ್ಯ ಪಾತ್ರ ವಹಿಸುತ್ತದೆ. ನಾವು ನೆಮ್ಮದಿಯಿಂದ ನಿದ್ದೆ ಮಾಡುವ ಜಾಗವೇ ನಮ್ಮ ಬೆಡ್ ರೂಂ. ನಮ್ಮ ಆಲೋಚನೆಗಳನ್ನೆಲ್ಲಾ ಬದಿಗೊತ್ತಿ ಕಣ್ತುಂಬ ನಿದ್ದೆ ಮಾಡುತ್ತೇವೆ. ಕೆಲವೊಂದು ಸಲ ಬಿಟ್ಟು ಬಿಡದೇ ಕಾಡುವ ಆಲೋಚನೆಗಳು ಕಣ್ಣಿಗೆ ನಿದ್ದೆ ಹತ್ತೋದಕ್ಕೆ ಅವಕಾಶವನ್ನೇ ನೀಡೋದಿಲ್ಲ.

ಇದಕ್ಕೆಲ್ಲಾ ವಾಸ್ತು ಸಮಸ್ಯೆಯೂ ಕಾರಣವಾಗುತ್ತದೆ. ನಾವು ಮಲಗುವ ಕೋಣೆಯ ವಾಸ್ತು ಸರಿಯಾಗಿರಬೇಕು. ವಾಸ್ತು ತಪ್ಪಿದರೂ ಕೂಡ ಜೀವನದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳೋದಕ್ಕೆ ಕಾರಣವಾಗುತ್ತದೆ. ಅಷ್ಟಕ್ಕು ವಾಸ್ತು ಪ್ರಕಾರ ಮನೆಯ ಬೆಡ್ ರೂಂ ಹೇಗಿರಬೇಕು? ಬೆಡ್ ರೂಂ ನ ವಾಸ್ತು ಹೇಗಿದ್ದರೆ ಮನೆಗೆ ಒಳ್ಳೆಯದಾಗುತ್ತೆ ಅನ್ನೋದನ್ನು ತಿಳಿಯೋಣ.
1. ಬೆಡ್ ರೂಂ ಯಾವ ದಿಕ್ಕಿನಲ್ಲಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಗೆ ಸೂಕ್ತವಾದ ದಿಕ್ಕು ಮನೆಯ ನೈಋತ್ಯ ದಿಕ್ಕಾಗಿದೆ. ಈ ನಿಯೋಜನೆಯು ಮನೆಯ ಭದ್ರತೆ ಹೆಚ್ಚಾಗುತ್ತದೆ. ಮಲಗುವ ಕೋಣೆಯನ್ನು ಈಶಾನ್ಯ ಮೂಲೆಯಲ್ಲಿ ಮಾಡೋದಕ್ಕೆ ಹೋಗಬೇಡಿ. ಏಕೆಂದರೆ ಇದು ಧನಾತ್ಮಕ ಶಕ್ತಿ ಹರಿದು ಬರೋದಕ್ಕೆ ಅಡ್ಡಿಪಡಿಸುತ್ತದೆ.
2. ಮಲಗುವ ಕೋಣೆಯ ಬಾಗಿಲು ದಿಕ್ಕಿನಲ್ಲಿರಬೇಕು?
ಮಲಗುವ ಕೋಣೆಯ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂದು ಗಮನಿಸಿಕೊಳ್ಳಿ. ಇನ್ನೂ ಹಾಸಿಗೆಯ ಎರಡೂ ಬದಿಗಳಲ್ಲಿ ಅವಕಾಶ ಇರುವಂತೆ ನೋಡಿಕೊಳ್ಳಿ. ಹಾಸಿಗೆಯನ್ನು ಗೋಡೆಗೆ ತಾಗುವಂತೆ ಇಡೋದಕ್ಕೆ ಹೋಗಬೇಡಿ.
3. ಬೆಡ್ ರೂಂ ನ ಕಲರ್ ಹೇಗಿರಬೇಕು?
ಮಲಗುವ ಕೋಣೆಗೆ ಬಣ್ಣಗಳನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿ ಇರಬೇಕು. ಹೆಚ್ಚು ಡಾರ್ಕ್ ಬಣ್ಣಗಳನ್ನು ಬಳಸೋದಕ್ಕೆ ಹೋಗಬೇಡಿ. ಬಣ್ಣಗಳು ಆದಷ್ಟು ಲೈಟ್ ಆಗಿರಲಿ. ಮಲಗುವ ಕೋಣೆಯ ಬಣ್ಣಗಳು ಶಾಂತಿಯುತ ವಾತಾವರಣವನ್ನು ಸೃಷ್ಟಿಸುವಂತಿರಬೇಕು. ಬಣ್ಣಗಳನ್ನು ನೋಡಿದ ತಕ್ಷಣ ಅದು ನಮ್ಮ ಕಣ್ಣಿಗೆ ಹೊಡೆಯುವಂತಿರಬಾರದು.
4. ನಕಾರಾತ್ಮಕ ನೆನಪುಗಳನ್ನು ತೆಗೆದು ಹಾಕಿ
ನಾವು ಮಲಗುವ ಕೋಣೆ ಶಾಂತಿಯುತವಾಗಿರೋದು ತುಂಬಾನೇ ಅಗತ್ಯವಾಗಿ ಇರಬೇಕಾಗಿದೆ. ಸರಿಯಾದ ಪೀಠೋಪಕರಣಗಳು ಮತ್ತು ಅಲಂಕಾರಗಳೊಂದಿಗೆ ಜಾಗವನ್ನು ಆಯೋಜಿಸಿ. ನಕಾರಾತ್ಮಕ ಭಾವನೆಗಳು ಅಥವಾ ನೆನಪುಗಳನ್ನು ಉಂಟುಮಾಡುವ ಯಾವುದೇ ವಸ್ತುಗಳನ್ನು ಕೋಣೆಯಲ್ಲಿ ಇಡೋದಕ್ಕೆ ಹೋಗಬೇಡಿ.
5. ಗಾಳಿ, ಬೆಳಕು ಚೆನ್ನಾಗಿರಬೇಕು
ಮಲಗುವ ಕೋಣೆಯಲ್ಲಿ ಗಾಳಿ ಮತ್ತು ಬೆಳಕು ಉತ್ತಮವಾಗಿ ಇರಬೇಕು. ಮನೆಯ ಯಾವುದೋ ಒಂದು ಮೂಲೆಯಲ್ಲಿ ಮಲಗುವ ಕೋಣೆ ಮಾಡುವುದಲ್ಲ. ಕಿಟಕಿ ಹಾಗೂ ಬಾಗಿಲು ತೆರೆದ ತಕ್ಷಣ ಸಮೃದ್ಧವಾದ ಗಾಳಿ ಹಾಗೂ ಬೆಳಕು ಬೀಸುವಂತಿರಬೇಕು. ಇನ್ನೂ ಕಿಟಕಿಯ ಬಳಿ ಕರ್ಟನ್ ಅಳವಡಿಸಿದರೆ ತುಂಬಾನೇ ಉತ್ತಮ.
6. ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿರಿ!
ನೀವು ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಹೆಚ್ಚಾಗಿ ಇಟ್ಟುಕೊಳ್ಳೋದಕ್ಕೆ ಹೋಗಬೇಡಿ. ಒಂದು ವೇಳೆ ಇದ್ದರೂ ಕೂಡ ನೀವು ಮಲಗುವ ಪ್ರದೇಶದಿಂದ ತುಂಬಾ ದೂರದಲ್ಲಿದ್ದರೆ ಒಳ್ಳೆಯದು. ನೀವು ಗೆಜೆಟ್ ಗಳಿಂದ ದೂರವಿದ್ದರೆ ಉತ್ತಮ ನಿದ್ರೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
7. ಕನ್ನಡಿಗಳ ಬಳಕೆ
ವಾಸ್ತು ಶಾಸ್ತ್ರದಲ್ಲಿ ಕನ್ನಡಿಗಳು ಶಕ್ತಿಯನ್ನು ವರ್ಧಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಹಾಸಿಗೆಗೆ ಎದುರಾಗಿ ನೇರವಾಗಿ ಕನ್ನಡಿಗಳನ್ನು ಇಡುವುದನ್ನು ತಪ್ಪಿಸಿ. ಏಕೆಂದರೆ ಕನ್ನಡಿಯನ್ನು ಕೋಣೆಗೆ ಎದುರಾಗಿ ಇಟ್ಟರೆ ಅದರಿಂದ ನಮ್ಮ ನೆಮ್ಮದಿ ಹಾಳಾಗುತ್ತಂತೆ. ಇನ್ನೂ ಕೋಣೆಯ ತುಂಬಾ ಕನ್ನಡಿ ಇಡೋದಕ್ಕೆ ಹೋಗಬೇಡಿ. ಇದು ಕೂಡ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
8. ನೈಸರ್ಗಿಕ ವಸ್ತುಗಳು ಕೋಣೆಯಲ್ಲಿರಲಿ!
ನೀವು ಮಲಗುವ ಕೋಣೆಯಲ್ಲಿ ಕೆಲವೊಂದು ಸಸ್ಯಗಳು ಇದ್ದರೆ ತುಂಬಾನೇ ಒಳ್ಳೆಯದು. ಇನ್ನೂ ಆದಷ್ಟು ನಿಮ್ಮ ಕೋಣೆಯಲ್ಲಿ ಮರದ ಪೀಠೋಪಕರಣಗಳು ಇದ್ದರೆ ಚೆಂದ. ಈ ಅಂಶಗಳು ಪ್ರಕೃತಿಯೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತವೆ. ಮತ್ತು ಹಿತವಾದ ವಾತಾವರಣವನ್ನು ಸೃಷ್ಟಿಸುತ್ತವೆ.
9. ಕೋಣೆಯ ಅಲಂಕಾರ ಹೀಗಿರಲಿ!
ಮಲಗುವ ಕೋಣೆಯ ತುಂಬಾ ಚಿತ್ರ ಪಟಗಳನ್ನು ಹಾಕಬೇಡಿ. ಕೋಣೆಯಲ್ಲಿ ಕೆಲವೇ ಕೆಲವು ಚಿತ್ರಪಟಗಳಿದ್ದರಷ್ಟೇ ಸಾಕು. ಹಿಂಸೆ, ದುಃಖ ಅಥವಾ ಪ್ರಕ್ಷುಬ್ಧತೆಯನ್ನು ಬಿಂಬಿಸುವ ಚಿತ್ರಗಳನ್ನು ಹಾಕೋದಕ್ಕೆ ಹೋಗಬೇಡಿ. ಆ ಚಿತ್ರಗಳು ಪ್ರಶಾಂತತೆಯನ್ನು ಸೃಷ್ಟಿಸುವಂತೆ ನೋಡಿಕೊಂಡರಷ್ಟೇ ಸಾಕು.
ಮಲಗುವ ಕೋಣೆಯನ್ನು ನಿರ್ಮಿಸುವ ಮೊದಲು ಹಾಗೂ ನಂತರ ಇಷ್ಟು ವಿಚಾರಗಳ ಬಗ್ಗೆ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ವಾಸ್ತು ಪ್ರಕಾರ ಮಲಗುವ ಕೋಣೆ ನಿರ್ಮಾಣವಾಗದಿದ್ದರೆ ನಿಮ್ಮ ನೆಮ್ಮದಿ ಹಾಳಾಗುತ್ತೆ ಎಂದು ನಂಬಲಾಗಿದೆ.



Click it and Unblock the Notifications
