Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಕುಸಿಯಲಿದೆ ಬೆಳ್ಳಿ ದರ; ಕಿಯೋಸಾಕಿ ಭವಿಷ್ಯ!
ಚಿನ್ನ ಬೆಳ್ಳಿ ದರ ಗಗನದತ್ತ ಮುಖ ಮಾಡಿವೆ. ಅದ್ರಲ್ಲೂ ಹಲವು ತಿಂಗಳಿನಿಂದ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದೆ. ಇದು ಹೂಡಿಕೆದಾರರಿಗೆ ಅನುಕೂಲಕರ ದಿನಗಳ ತರುತ್ತಿದ್ದರೆ ಇನ್ನೊಂದು ಕಡೆ ಆಭರಣ ಪ್ರಿಯರಿಗೆ ತಲೆನೋವು ತಂದಿದೆ. ಚಿನ್ನ ಮಾತ್ರವಲ್ಲ ಬೆಳ್ಳಿ ದರ ಕೂಡ ಇತಿಹಾಸದಲ್ಲೇ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡು ದಾಖಲೆ ಬರೆದಿದೆ. ಕಳೆದ ವರ್ಷದಿಂದ ದುಪ್ಪಟ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಕಂಡಿದ್ದು, ಹೂರಿಕೆದಾರರಲ್ಲಿ ಸಂತಸವಿದ್ದರೆ ಆಭರಣ ಹಾಗೂ ಬೆಳ್ಳಿ ವಸ್ತು ಖರೀದಿದಾರರಿಗೆ ಇದು ಬಿಸಿ ತುಪ್ಪವಾಗಿದೆ.
ಆದ್ರೆ ಹಲವರ ಪ್ರಕಾರ ಚಿನ್ನ ಹಾಗೂ ಬೆಳ್ಳಿಯ ದರ ಮತ್ತಷ್ಟು ಏರಿಯಾಗುತ್ತದೆ ಎನ್ನುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಲೆ ಏರಿಕೆಯು ಈಗ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಗೆ ಕಾರಣಗಾಗುತ್ತಿದೆ ಎಂದು ಹೇಳಲಾಗಿದೆ. ಅದಲ್ಲದೆ ಭಾರತದ ರೂಪಾಯಿ ಮೌಲ್ಯದ ಅಪಮೌಲೀಕರಣವು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮತ್ತಷ್ಟು ಏರಿಕೆಗೆ ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಅಂದಹಾಗೆ ಇನ್ನೊಂದು ಕಡೆ ಭವಿಷ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆಯಾಗಲಿದೆ ಎಂಬ ವಾದವೂ ಇದೆ. ಅದಕ್ಕೆ ತಕ್ಕಂತಹ ಸಿದ್ದಾಂತಗಳನ್ನು ಸಹ ಮುಂದಿಡುತ್ತಿರುವುದು ನೀವು ಸಹ ಗಮನಿಸಿರಬಹುದು. ಆದ್ರೆ ಇದಕ್ಕೆ ಪೂರಕ ಎಂಬಂತೆ ಈಗ ರಾಬರ್ಟ್ ಕಿಯೋಸಾಕಿ ಕೂಡ ಈ ಕುರಿತಾಗಿ ಭವಿಷ್ಯ ನುಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಳ್ಳಿ ದರ ಕುಸಿಯಲಿದೆ ಎಂಬ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಬೆಳ್ಳಿಯ ಬೆಲೆಗಳು ಚಿನ್ನಕ್ಕಿಂತ ಹೆಚ್ಚು ಜಿಗಿದಿವೆ. ದೇಶೀಯ ಮಾರುಕಟ್ಟೆಯ ಹೊರತಾಗಿ ಬಿಳಿ ಲೋಹವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಳ್ಳಿ ಸುಮಾರು ಶೇ.150 ರಷ್ಟು ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ ಸಣ್ಣ ಸ್ಕ್ವೀಝ್‌ಗಳು ಮತ್ತು ಲಂಡನ್‌ನಲ್ಲಿ ಪೂರೈಕೆಯ ಕೊರತೆಯು ಬೆಲೆಗಳಲ್ಲಿ ಮತ್ತಷ್ಟು ಏರಿಕೆಗೆ ಕಾರಣವಾಗಿದೆ.
ಆದ್ರೆ ಈಗ ಖ್ಯಾತ ಬರಹಗಾರ ಮತ್ತು ಹೂಡಿಕೆ ಗುರು ರಾಬರ್ಟ್ ಕಿಯೋಸಾಕಿ ಹೇಳಿರುವ ಒಂದು ಮಾತು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಬೆಳ್ಳಿ ಔನ್ಸ್‌ಗೆ $100 ತಲುಪುತ್ತದೆ ಎಂದು ಭವಿಷ್ಯ ನುಡಿದಿದ್ದರು, ಆದರೆ ಈಗ ಅವರು ಬೆಳ್ಳಿಯ ಬಗ್ಗೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳ್ಳಿ ದರ ಏರಿಕೆಯ ನಡುವೆ ಹೂಡಿಕೆದಾರರು ಜಾಗರೂಕರಾಗಿರಲು ಅವರು ಸಲಹೆ ನೀಡಿದ್ದಾರೆ.
ಎಕ್ಸ್‌ನಲ್ಲಿ ಕಿಯೋಸಾಕಿ ಪೋಸ್ಟ್
ಬೆಳ್ಳಿ ದರ ಇಳಿಕೆಯ ಕುರಿತಾಗಿ ಕಿಯೋಸಾಕಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಹೂಡಿಕೆದಾರರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. 'ಬೆಳ್ಳಿ $90 ಮುರಿಯಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $4,600 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ, ಇದು ದಾಖಲೆಯ ಮಟ್ಟಕ್ಕೆ ಬಹಳ ಹತ್ತಿರದಲ್ಲಿದೆ. ಇತ್ತೀಚಿನ ಯುಎಸ್ ಹಣದುಬ್ಬರ ದತ್ತಾಂಶವು ಯುಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಮತ್ತಷ್ಟು ಕಡಿತಗೊಳಿಸಬಹುದು. ಗುರುವಾರ, ಸ್ಪಾಟ್ ಚಿನ್ನವು ಶೇಕಡಾ 0.82 ರಷ್ಟು ಕುಸಿದಿದೆ, ಇದು ಪ್ರತಿ ಔನ್ಸ್‌ಗೆ $4,592 ಕ್ಕೆ ವಹಿವಾಟು ನಡೆಸುತ್ತಿದೆ. ಅದೇ ಸಮಯದಲ್ಲಿ ಸ್ಪಾಟ್ ಬೆಳ್ಳಿ ಕೂಡ ಶೇಕಡಾ 3.74 ರಷ್ಟು ಕುಸಿದು ಪ್ರತಿ ಔನ್ಸ್‌ಗೆ 88.01 ಡಾಲರ್‌ಗಳಲ್ಲಿ ವಹಿವಾಟು ನಡೆಸಿದೆ. ಇದು ಹೂಡಿಕೆದಾರರಲ್ಲಿ ಇಳಿಕೆಯ ಮುನ್ಸೂಚನೆಗೆ ಕಾರಣವಾಗಿದೆ.
ಯಾರು ಈ ಕಿಯೋಸಾಕಿ?
ಕಿಯೋಸಾಕಿ ಹೆಸರು ನೀವು ಪುಸ್ತಕದ ಮೂಲಕ ಕೇಳಿರಬಹುದು. 'Rich Dad Poor Dad' (ರಿಚ್ ಡ್ಯಾಡ್ ಪೂರ್ ಡ್ಯಾಡ್) ಎಂಬ ಪುಸ್ತಕದ ಬರಹಗಾರರು. ಈ ಪುಸ್ತಕ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹಾಗೆ ದಾಖಲೆ ಪ್ರಮಾಣದಲ್ಲಿ ಮರುಮುದ್ರಣಗೊಂಡಿರುವ ಪುಸ್ತಕವಾಗಿದೆ. ಇವರೆಗೆ ಸುಮಾರು 32 ಮಿಲಿಯನ್ ಪುಸ್ತಕಗಳ ಮಾರಾಟವಾಗಿದೆ. ಹಾಗೆ 109 ದೇಶದಲ್ಲಿ ಸುಮಾರು 51 ಭಾಷೆಯಲ್ಲಿಯೂ ಈ ಪುಸ್ತಕ ಲಭ್ಯವಿದೆ.



Click it and Unblock the Notifications
