Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಉಪವಾಸದ ಮಹತ್ವದ ಬಗ್ಗೆ ಧರ್ಮ ಗ್ರಂಥಗಳು ಹೇಳೋದೇನು?
ಉಪವಾಸ ವ್ರತ ಸಾಮಾನ್ಯವಾಗಿ ದೇವರಿಗಾಗಿ ಉಪವಾಸ ವ್ರತವನ್ನು ಮಾಡಲಾಗುತ್ತದೆ. ಕೆಲವರು ಅನ್ನ ನೀರು ಬಿಟ್ಟು ಉಪವಾಸ ಮಾಡಿದ್ರೆ, ಇನ್ನೂ ಕೆಲವರು ಹಣ್ಣು-ಹಂಪಲು, ಪಲಾಹಾರ ಸೇವಿಸಿ ಉಪವಾಸ ಮಾಡುವವರು ಇದ್ದಾರೆ.
ಉಪವಾಸ ಮಾಡೋದಕ್ಕೆ ಅನೇಕ ಕಾರಣಗಳಿದೆ. ಮುಸ್ಲಿಂ ಧರ್ಮದಲ್ಲೂ ಕೂಡ ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕಾಲ ಉಪವಾಸ ವ್ರತ ಮಾಡಲಾಗುತ್ತದೆ. ಇನ್ನೂ ಕೆಲವರು ತೂಕ ಇಳಿಸೋದಕ್ಕಾಗಿ ಒಂದು ಹೊತ್ತು ಊಟ ಬಿಡುತ್ತಾರೆ. ಆದರೆ ಹಿಂದೂಗಳಲ್ಲಿ ಅನೇಕ ಹಬ್ಬ, ಸಂಕಷ್ಟ ಚತುರ್ಥಿ, ವ್ರತ ಹೀಗೆ ಹತ್ತು ಹಲವಾರು ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಸುಖ, ಸಮೃದ್ಧಿ, ಕಷ್ಟ ನಿವಾರಣೆ ಹೀಗೆ ಅನೇಕ ಕಾರಣಗಳಿಗಾಗಿ ಉಪವಾಸ ಮಾಡುವವರು ಇದ್ದಾರೆ.

ಹಿಂದೂ ಧರ್ಮದಲ್ಲಿ ಯಾವ ಕಾರಣಕ್ಕಾಗಿ ಉಪವಾಸ ವ್ರತ ಕೈಗೊಳ್ಳಲಾಗುತ್ತದೆ? ಇದರ ಮಹತ್ವವೇನು? ಇದರ ಹಿಂದಿರೋ ಕಾರಣಗಳೇನು? ಉಪವಾಸ ವ್ರತ ಕೈಗೊಳ್ಳೋದು ಅಗತ್ಯಾನಾ? ಇದರಿಂದ ಆರೋಗ್ಯಕ್ಕೆ ಯಾವ ರೀತಿ ಉಪಯೋಗ ಇದೆ ಅನ್ನೋದನ್ನ ತಿಳಿಸಿಕೊಡ್ತೀವಿ.
ಉಪವಾಸ ವ್ರತದ ಮಹತ್ವ
ವೇದ, ಉಪನಿಷತ್, ಪುರಾಣಗಳಲ್ಲಿ ಉಪವಾಸ ವ್ರತದ ಬಗ್ಗೆ ಉಲ್ಲೇಖವಿದೆ. ಇದರ ಪ್ರಕಾರ ಒರ್ವ ಮನುಷ್ಯ ಉಪವಾಸ ಕೈಗೊಳ್ಳುವುದರಿಂದ ಆತನ ಮನಸ್ಸು, ದೇಹ ಹಾಗೂ ಆತ್ಮ ಪರಿಶುದ್ಧಗೊಳ್ಳುತ್ತಂತೆ. ಉಪವಾಸವನ್ನು ತ್ಯಾಗ ಅಂತಲೂ ಕರೆಯಲಾಗುತ್ತದೆ. ಅಂದರೆ ಒರ್ವ ವ್ಯಕ್ತಿ ತನ್ನ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಆಹಾರವನ್ನು ತ್ಯಾಗ ಮಾಡಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುವುದು.
ಯಾವ ಸಮಯದಲ್ಲಿ ಉಪವಾಸ ಮಾಡಲಾಗುತ್ತದೆ?
ಭಕ್ತರು ನವರಾತ್ರಿ, ಮಹಾಶಿವರಾತ್ರಿ, ಏಕಾದಶಿ ಹಾಗೂ ಅನೇಕ ಹಬ್ಬಗಳಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಅದ್ರಲ್ಲೂ ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಗೆ ಒಂಬತ್ತು ದಿನಗಳ ಕಾಲ ಭಕ್ತರು ಉಪವಾಸ ವ್ರತ ಮಾಡುತ್ತಾರೆ. ಇದೇ ರೀತಿ ಮಹಾಶಿವರಾತ್ರಿಗೆ ಶಿವನಿಗೆ ವಿಶೇಷವಾಗಿ ವ್ರತ ಕೈಗೊಳ್ಳಲಾಗುತ್ತದೆ. ಇನ್ನೂ ಪವಿತ್ರ ಮಾಸವಾದ ಶ್ರಾವಣದಲ್ಲೂ ಅನೇಕ ಮಂದಿ ಉಪವಾಸ ಮಾಡುವವರು ಇದ್ದಾರೆ.
ಉಪವಾಸ ವ್ರತ ಮಾಡುವುದರಿಂದ ಅನೇಕ ಲಾಭಗಳಿದೆ. ಉಪವಾಸ ಮಾಡುವುದರಿಂದ ನಮ್ಮ ಆಲೋಚನೆಗಳು ನಿಯಂತ್ರಣಕ್ಕೆ ಬರುತ್ತದೆ ಹಾಗೂ ಮನಸ್ಸು ಹದ್ದುಬಸ್ತಿನಲ್ಲಿರುತ್ತದೆ. ಹಾಗೂ ನಿಧಾನವಾಗಿ ನಮ್ಮಲ್ಲಿರುವ ದೈವೀಕ ಚಿಂತನೆಗಳು ಹೆಚ್ಚುತ್ತಾ ಸಾಗುತ್ತದೆ.
ಉಪವಾಸ ವ್ರತ ಮಾಡುವುದು ಅಗತ್ಯನಾ?
ಉಪವಾಸ ವ್ರತವು ಹಿಂದೂ ಧರ್ಮದ ಸಂಸ್ಕೃತಿಯ ಭಾಗವಾಗಿದೆ. ಇದು ಹಿಂದೂ ಧರ್ಮದಲ್ಲಿ ಕಡ್ಡಾಯ ಅಂತಾನೇ ಹೇಳಬಹುದು. ಇದು ನಿಮ್ಮ ವಯಕ್ತಿಕ ಆಯ್ಕೆ. ಉಪವಾಸ ವ್ರತ ಮಾಡಲೇಬೇಕು ಎಂದು ಯಾರು ನಿಮ್ಮ ಮೇಲೆ ಒತ್ತಡ ಹೇರೋದಿಲ್ಲ. ಇದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ. ಉಪವಾಸ ವ್ರತದ ಮೇಲೆ ನಂಬಿಕೆ ಇದ್ದವರು ಇದನ್ನು ಪಾಲಿಸಬಹುದು.
ಉಪವಾಸ ವ್ರತದಿಂದ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಗಳಿದೆ?
ಉಪವಾಸ ವ್ರತ ಕೈಗೊಳ್ಳೋದ್ರಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಹತ್ತು ಹಲವಾರು ಪ್ರಯೋಜನಗಳಿದೆ.
* ಉಪವಾಸ ಮಾಡುವುದರಿಂದ ತೂಕ ಇಳಿಸಬಹುದು. ಇದರಿಂದ ನಮ್ಮ ದೇಹದ ಕೊಬ್ಬು ಕರಗೋದಕ್ಕೆ ಸಹಾಯವಾಗುತ್ತದೆ. ಆದರೆ ಇದನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆಗಳಿದೆ.
* ಉಪವಾಸ ಮಾಡುವುದರಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಬಹುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರಿಂದ ಮಧುಮೇಹ ರೋಗಿಗಳಿಗೆ ತುಂಬಾನೇ ಒಳ್ಳೆಯದು.
* ಉಪವಾಸ ವ್ರತ ಮಾಡುವುದರಿಂದ ಉರಿಯೂತವನ್ನು ಕಡಿಮೆಗೊಳಿಸಬಹುದು.
* ಉಪವಾಸ ವ್ರತ ಮಾಡುವುದರಿಂದ ನಮ್ಮ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ.
ಸೂಚನೆ : ನಮಗಿಷ್ಟ ಬಂದ ಹಾಗೆ ಉಪವಾಸ ಕೈಗೊಳ್ಳುವುದು ಒಳ್ಳೆಯದಲ್ಲ. ಮುಖ್ಯವಾಗಿ ಆರೋಗ್ಯ ಸಮಸ್ಯೆ ಇರುವವರು ಮಕ್ಕಳು, ವಯೋ ವೃದ್ಧರು, ಗರ್ಭಿಣಿಯರು ಉಪವಾಸ ಮಾಡಬಾರದು. ಉಪವಾಸ ಮರಿದ ನಂತರ ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಒಟ್ಟಿನಲ್ಲಿ ಯಾರಾದರೂ ತಿಳಿದವರ ಸಹಾಯ ಪಡೆದು ಉಪವಾಸ ಕೈಗೊಳ್ಳುವುದು ಉತ್ತಮ.



Click it and Unblock the Notifications














