Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಜೂನ್ 4ಕ್ಕೆ ಸಿದ್ಧಯೋಗ: ಯಾವೆಲ್ಲಾ ಕಾರ್ಯಕ್ಕೆ ಈ ಯೋಗ ತುಂಬಾ ಶುಭ
ವೈದಿಕ ಶಾಸ್ತ್ರದ ಪ್ರಕಾರ ಸಿದ್ಧಯೋಗ ಎಂಬುವುದು ಅತ್ಯಂತ ಶುಭ ಯೋಗವಾಗಿದೆ. ತಿಥಿ, ನಕ್ಷತ್ರ ಹಾಗೂ ನಿಗದಿತ ಸಮಯ ಸೇರಿದಾಗ ಈ ಯೋಗ ಏರ್ಪಡುವುದು. ಈ ಯೋಗ ಯಾವುದೇ ಶುಭ ಕಾರ್ಯಕ್ಕೆ ತುಂಬಾನೇ ಯೋಗ್ಯವಾಗಿದೆ. ಯಾರು ಈ ಶುಭ ಯೋಗದಲ್ಲಿ ಏನಾದರೂ ಹೊಸ ಕೆಲಸ ಮಾಡುತ್ತಾರೋ ಅವರು ಅದರಲ್ಲಿ ಯಶಸ್ಸು ಪಡೆಯುತ್ತಾರೆ ಎಂದು ಹೇಳಲಾಗುವುದು.

ಯಾವುದೇ ರಾಶಿಯವರು ಈ ಸಿದ್ಧಯೋಗದಲ್ಲಿ ಹೊಸ ಕಾರ್ಯವನ್ನು ಪ್ರಾರಂಭಿಸಬಹುದು. ನೀವು ಏನಾದರೂ ಹೊಸ ಕಾರ್ಯ ಪ್ರಾರಂಭ ಮಾಡಲು ಬಯಸುವುದಾದರೆ ಈ ಶುಭ ಯೋಗದಲ್ಲಿ ಪ್ರಾರಂಭಿಸಿದರೆ ಒಳ್ಳೆಯದು. ಜೂನ್ 4ಕ್ಕೆ ಸಿದ್ಧಯೋಗ ಏರ್ಪಟ್ಟಿದೆ.
ಅದರಲ್ಲೂ ಕೆಲವೊಂದು ರಾಶಿಯವರಿಗೆ ಈ ಯೋಗ ತುಂಬಾನೇ ವಿಶೇಷವಾಗಿದೆ. ಅವರು ಈ ಸಮಯದಲ್ಲಿ ಏನಾದರು ಹೊಸ ಕಾರ್ಯ ಮಾಡಿದರೆ ತುಂಬಾನೇ ಒಳ್ಳೆಯದಾಗುವುದು. ಈ ರಾಶಿಯವರು ಈ ಯೋಗದಲ್ಲಿ ಏನಾದರೂ ಶುಭ ಕಾರ್ಯ ಮಾಡುವುದಾದರೆ ವಿಶೇಷ ಫಲ ಸಿಗಲಿದೆ.
ವೃಷಭ ರಾಶಿ
ನೀವು ಏನಾದರೂ ಗಾಡಿ ಅಥವಾ ಆಸ್ತಿಯನ್ನು ಈ ಯೋಗದಲ್ಲಿ ಖರೀದಿಸಿದರೆ ಒಳ್ಳೆಯದು. ಇನ್ನು ಏನಾದರೂ ಡಾಕ್ಯೂಮೆಂಟ್ ಮಾಡುವುದಾದರೆ ಈ ದಿನ ಶುಭವಾಗಿದೆ. ಯಾವುದಾದರೂ ಶುಭ ಕಾರ್ಯಕ್ಕೆ ಮಾತುಕತೆ ನಡೆಸಲು, ಮನೆ ಕಟ್ಟಲು ಅಡಿಪಾಯ ಹಾಕಲು, ಏನಾದರೂ ವ್ಯವಹಾರ ಮಾಡಲು ಈ ಸಿದ್ಧಯೋಗ ತುಂಬಾನೇ ಶುಭವಾಗಿದೆ.
ಮಿಥುನ ರಾಶಿ
ಪ್ರೇಮಿಯಾಗಿದ್ದು ತಮ್ಮ ಸಂಗಾತಿಯನ್ನು ಮನೆಯವರಿಗೆ ಪರಿಚಯಿಸಲು ಈ ದಿನ ಶುಭವಾಗಿದೆ. ಇದರಿಂದ ನಿಮ್ಮಿಬ್ಬರ ಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಏನಾದರೂ ವ್ಯವಹಾರ ಮಾಡುವುದಾದರೆ ನಿಮಗೆ ಆರ್ಥಿಕವಾಗಿ ತುಂಬಾನೇ ಪ್ರಯೊಜನಕಾರಿಯಾಗಲಿದೆ. ನೀವು ಸದ್ಯದಲ್ಲಿಯೇ ಏನಾದರೂ ಹೊಸ ವ್ಯವಹಾರ ಮಾಡುವ ಯೋಜನೆಯಲ್ಲಿದ್ದರೆ ಅದಕ್ಕೆ ಜೂನ್4 ಸಿದ್ಧ ಯೋಗದಂತೆ ಸಿದ್ಧತೆ ಮಾಡಿ, ಎಲ್ಲವೂ ಶುಭವಾಗುವುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಬೆಳೆಯಲು ಹೊಸ ಪ್ರಯತ್ನ ಮಾಡಲು ಈ ದಿನ ಶುಭವಾಗಿದೆ. ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ಸಿಗಲಿದೆ. ವೀಸಾಗೆ ಪ್ರಯತ್ನಿಸುತ್ತಿದ್ದರೆ ಎಲ್ಲಾ ಕಾರ್ಯಗಳು ತುಂಬಾನೇ ಸುಗಮವಾಗಿ ನಡೆಯಲಿದೆ.
ಸಿದ್ಧ ಯೋಗದ ಮಹತ್ವವೇನು?
ಸಿದ್ಧ ಯೋಗದಲ್ಲಿ ಏನಾದರೂ ಕಾರ್ಯ ಮಾಡಿದರೆ ಅದರಲ್ಲಿ ಯಶಸ್ಸು ಸಿಗುವುದು. ಆರ್ಥಿಕವಾಗಿ ತುಂಬಾ ಒಳ್ಳೆಯದಾಗುವುದು.
ಗಣೇಶನು ಸಿದ್ಧಿ ಯೋಗದ ಗುರು. ಮತ್ತು ಈ ಯೋಗದಲ್ಲಿ ಜನಿಸಿದ ಜನರು ದೈವಿಕ ಶಕ್ತಿಯನ್ನು ಹೊಂದಿರುತ್ತಾರೆ.
ಈ ಯೋಗದಲ್ಲಿ ಮಾಡಿದ ಕೆಲಸವು ಯಾವಾಗಲೂ ಯಶಸ್ವಿಯಾಗುತ್ತದೆ. ಅದಕ್ಕಾಗಿಯೇ ಯಾವುದೇ ರೀತಿಯ ಶುಭ ಕಾರ್ಯಗಳಿಗೆ ಈ ಯೋಗವು ಆದ್ಯತೆಯಾಗಿದೆ.
ಮತ್ತೊಂದೆಡೆ, ಈ ಯೋಗದಲ್ಲಿ ಜನಿಸಿದ ಜನರು ಸಾಮಾನ್ಯವಾಗಿ ಸಲಹೆಗಾರರ ಪಾತ್ರವನ್ನು ವಹಿಸುತ್ತಾರೆ.
ಇದರೊಂದಿಗೆ ಸಿದ್ಧಿ ಯೋಗವು ಅತ್ಯಂತ ಮಂಗಳಕರ ಸಮಯವಾಗಿದೆ.
ಅದೇ ಸಮಯದಲ್ಲಿ ಈ ಯೋಗದಲ್ಲಿ ಮನೆ ಖರೀದಿ, ವಾಹನ ಖರೀದಿ, ಚಿನ್ನ ಬೆಳ್ಳಿ ಆಭರಣ ಇತ್ಯಾದಿ ಖರೀದಿ ಮಾಡುವುದು ಶುಭ.
ಇದರೊಂದಿಗೆ ಮನೆ ಮತ್ತು ವಾಹನಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಮತ್ತು ಅಂಗಡಿ ಅಥವಾ ಕಚೇರಿಯನ್ನು ಪ್ರಾರಂಭಿಸುವುದು ಕೂಡ ಈ ಯೋಗದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
ಇದೇ ವೇಳೆ ಮನೆ ನೋಂದಣಿ ಮಾಡಿಸುವಂತಹ ಕೆಲಸಗಳನ್ನು ಈ ಯೋಗದಲ್ಲಿ ಮಾಡಲಾಗುತ್ತದೆ.
ಏನು ಮಾಡಬಾರದು?
ಸಿದ್ಧಿ ಯೋಗದಲ್ಲಿ ಮದುವೆ ಮಾಡಬಾರದು.



Click it and Unblock the Notifications
