ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ 2023: ಈ 5 ರಾಶಿಯವರಿಗೆ ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿ

ಮೇ 30 ರ ರಾತ್ರಿ 7.39 ಕ್ಕೆ ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇನ್ನೂ ಜುಲೈ 7 ರವರೆಗೆ ಶುಕ್ರನು ಇದೇ ರಾಶಿಯಲ್ಲಿ ಇರಲಿದ್ದು ಆ ನಂತರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶುಕ್ರನ ಈ ಸಂಚಾರದಿಂದ ಅನೇಕ ಬದಲಾವಣೆಗಳು ಆಗಲಿದ್ದು, ಇದು ನಮ್ಮ ಹವಾಮಾನದ ಮೇಲೂ ಪರಿಣಾಮ ಬೀರಲಿದೆ. ಅದ್ರಲ್ಲೂ 5 ರಾಶಿಯವರಿಗೆ ಈ ಸಂಚಾರದಿಂದ ವಿಶೇಷವಾಗಿ ಅನುಕೂಲವಾಗಲಿದೆ. ಅಷ್ಟಕ್ಕು ಆ ರಾಶಿ ಯಾವುದು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಿರೋದ್ರಿಂದ ಈ ಸಮಯದಲ್ಲಿ ಮೇಷ ರಾಶಿಯವರ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಕುಟುಂಬಕ್ಕಾಗಿ ನೀವು ಹೊಸ ವಸ್ತುಗಳನ್ನು ಖರೀದಿಸುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಪ್ರಗತಿ ಹೊಂದುತ್ತೀರಿ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗುತ್ತದೆ. ಆಗೋಗ್ಯದ ಬಗ್ಗೆ ಗಮನವಿರಲಿ. ಯಾವುದೇ ವಿಷಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ.

Shukra Gochar In Kark 2023: 5 Zodiac Signs to Benefit from Venus Transit in Cancer

ಮಿಥುನ ರಾಶಿ
ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಿರೋದ್ರಿಂದ ಈ ಸಮಯದಲ್ಲಿ ಮಿಥುನ ರಾಶಿಯವರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ವ್ಯವಹಾರದಲ್ಲಿ ನಿಮ್ಮ ಪಾಲುದಾರರೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ. ಆದರೆ ಈ ಸಮಯದಲ್ಲಿ ಹೊಸ ವ್ಯವಹಾರ ಆರಂಭಿಸುವ ನಿರ್ಧಾರ ಬೇಡ. ಈಗಾಗಲೇ ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಲಾಭದಾಯಕ ಸಮಯ. ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತದೆ. ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಹಾಗೂ ಯಶಸ್ಸು ನಿಮ್ಮದಾಗುತ್ತದೆ.

ಕರ್ಕಾಟಕ ರಾಶಿ
ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಿರೋದ್ರಿಂದ ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ನಿಮ್ಮ ಜೀವನದಲ್ಲಿ ಮಂಗಳಕರ ಫಲಿತಾಂಶಗಳನ್ನು ಹೊತ್ತು ತರಲಿದೆ. ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ ಮತ್ತು ನಿಮ್ಮ ಸಂಗಾಂತಿಯ ಜೊತೆಗೆ ಸಂಬಂಧ ಸುಧಾರಿಸುತ್ತದೆ. ತಮ್ಮ ಪ್ರೀತಿಯನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಯೋಚಿಸುತ್ತಿರುವವರಿಗೆ ಈ ಸಮಯ ಅದ್ಭುತವಾಗಿರುತ್ತದೆ. ಕೆಲಸ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚಿ ನಿಮ್ಮನ್ನು ಹೊಗಳುತ್ತಾರೆ. ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗುತ್ತದೆ. ಭವಿಷ್ಯದಲ್ಲಿ ಇದ್ರಿಂದ ನಿಮಗೆ ಪ್ರಯೋಜನವೂ ಇದೆ.

ಕನ್ಯಾ ರಾಶಿ
ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಿರೋದ್ರಿಂದ ಈ ಸಮಯದಲ್ಲಿ ಕನ್ಯಾ ರಾಶಯವರ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಸಂಗಾತಿಗಾಗಿ ಹುಡುಕಾಡುತ್ತಿದ್ದವರಿಗೆ ಉತ್ತಮ ಬಾಳ ಸಂಗಾತಿ ಸಿಗುತ್ತಾರೆ. ನಿಮ್ಮ ವೃತ್ತಿ ಜೀವನ ಹಾಗೂ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಈ ಸಮಯದಲ್ಲಿ ಕುಟುಂಬದೊಂದಿಗೆ ಉತ್ತಮ ಸಾಮರಸ್ಯ ಇರುತ್ತದೆ. ಒಡಹುಟ್ಟಿದವರ ಸಂಪೂರ್ಣ ಬೆಂಬಲವಿರುತ್ತದೆ . ವೃತ್ತಿ ಜೀವನದಲ್ಲಿ ನಿಮಗೆ ನಿಮ್ಮ ಹಿರಿಯ ಅಧಿಕಾರಿಗಳ ಬೆಂಬಲ ಸಿಗುತ್ತದೆ.

ಮಕರ ರಾಶಿ
ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಿರೋದ್ರಿಂದ ಈ ಸಮಯದಲ್ಲಿ ಮಕರ ರಾಶಿಯವರ ಜೀವನದಲ್ಲಿ ಎಲ್ಲವೂ ಶುಭವಾಗಲಿದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನಿಮ್ಮ ಸಂಗಾತಿಯೊಂದಿಗಿನ ತುಂಬಾನೇ ಆಪ್ತವಾಗಿ ಹಾಗೂ ರೊಮ್ಯಾಂಟಿಕ್ ಆಗಿರುತ್ತೀರಿ. ನಿಮ್ಮ ವ್ಯವಹಾರದಲ್ಲಿ ಪ್ರಗತಿ ಆಗುತ್ತದೆ. ಉದ್ಯೋಗಿಗಳು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ವೇಗವಾಗಿ ಪ್ರಗತಿ ಆಗುತ್ತದೆ. ಹಾಗೂ ಉತ್ತಮ ಫಲಿತಾಂಶ ಬರುತ್ತದೆ. ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ.

English summary

Shukra Gochar In Kark 2023: 5 Zodiac Signs to Benefit from Venus Transit in Cancer

Shukra Gochar In Kark 2023: These are the 5 Zodiac Signs to Benefit from Venus Transit in Cancer.
Story first published: Wednesday, May 24, 2023, 14:30 [IST]
X
Desktop Bottom Promotion