Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೃಷಭ ರಾಶಿಗೆ ಶುಕ್ರನ ಪ್ರವೇಶ 2023 : ಹನ್ನೆರಡು ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಏಪ್ರಿಲ್ 06 ರ ಬೆಳಿಗ್ಗೆ 11 ಗಂಟೆಯ ನಂತರ ಶುಕ್ರ ಗ್ರಹವು ತನ್ನದೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರ ಗ್ರಹವು ಮೇ 02ವರೆಗೆ ವೃಷಭ ರಾಶಿಯಲ್ಲಿ ಸಾಗಲಿದ್ದು, ನಂತರ ಮಿಥುನ ರಾಶಿಗೆ ತೆರಳಲಿದೆ. ಶುಕ್ರನು ವೃಷಭ ರಾಶಿಯಲ್ಲಿ ಸಾಗೋದ್ರಿಂದ ಇದು ಹನ್ನೆರಡು ರಾಶಿ ಚಕ್ರಗಳ ಮೇಲೆ ಪರಿಣಾಮವನ್ನು ಬೀರಲಿದೆ.
ಹಾಗಾದರೆ ಇದರ ಪ್ರಭಾವ ಹನ್ನೆರಡು ರಾಶಿಯ ಮೇಲೆ ಹೇಗಿರಲಿದೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

ಮೇಷ ರಾಶಿ
ಶುಕ್ರನು ವೃಷಭ ರಾಶಿಗೆ ಪ್ರವೇಶ ಪಡೋಯೋದ್ರಿಂದ ಮೇಷ ರಾಶಿಯವರು ಅಂದುಕೊಂಡಂತೆ ನಿರೀಕ್ಷಿತ ಕೆಲಸ ಪೂರ್ಣಗೊಳ್ಳಲಿದೆ. ನೀವು ಸಾಲವಾಗಿ ಕೊಟ್ಟಿದ್ದ ಹಣ ವಾಪಾಸ್ಸ್ ಬರಲಿದೆ. ನಿಮ್ಮ ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯಲಿವೆ. ಆಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳಿಗಾಗಿ ಹೆಚ್ಚು ಖರ್ಚು ಮಾಡುವಿರಿ. ಗೌಪ್ಯವಾಗಿ ಮಾಡಿದ ಕೆಲಸಗಳು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ. ಕೆಲಸದ ಸ್ಥಳದಲ್ಲಿ ಪಿತೂರಿಗೆ ಬಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದಿರಿ.
ವೃಷಭ ರಾಶಿ
ನಿಮ್ಮ ರಾಶಿಗೆ ಶುಕ್ರ ಪ್ರವೇಶಿಸಿರುವುದು ನಿಮಗೆ ವರದಾನ ಅಂತಾನೇ ಹೇಳಬಹುದು. ನೀವು ಯಾವುದಾದರೂ ದೊಡ್ಡ ಕೆಲಸ ಮಾಡ ಬಯಸಿದರೆ ಖಂಡಿತ ಯಶಸ್ವಿಯಾಗುತ್ತೀರಿ. ನೀವು ಯಾವುದೇ ರೀತಿಯ ಹೊಸ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಯಶಸ್ವಿಯಾಗುತ್ತೀರಿ. ಪ್ರೀತಿ, ಪ್ರೇಮದ ವಿಚಾರದಲ್ಲಿ ಉತ್ತಮ ಕಾಲ. ಪ್ರೇಮ ವಿವಾಹದ ನಿರ್ಧಾರ ತೆಗೆದುಕೊಳ್ಳಬಹುದು.
ಮಿಥುನ ರಾಶಿ
ಐಷಾರಾಮಿ ವಸ್ತುಗಳಿಗಾಗಿ ಹಣ ಖರ್ಚು ಮಾಡುವ ಸಂಭವ ಎದುರಾಗೋದಿಲ್ಲ. ಆದರೆ ಪ್ರಯಾಣಕ್ಕಾಗಿ ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ. ಆರ್ಥಿಕವಾಗಿ ಯಾವುದೇ ರೀತಿ ಸಮಸ್ಯೆ ಎದುರಾಗೋದಿಲ್ಲ. ಈ ಅವಧಿಯ ಮಧ್ಯದಲ್ಲಿ ನೀವು ಬೇರೆ ದೇಶಕ್ಕೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದರೆ ಅದರಲ್ಲಿ ಯಶಸ್ವಿಯಾಗುತ್ತೀರಿ. ಆದರೆ ಆರೋಗ್ಯದ ಬಗ್ಗೆ ಜಾಳಜಿ ವಹಿಸೋದು ಉತ್ತಮ. ಇನ್ನೂ ಯಾರಿಗೂ ಸಾಲ ನೀಡಲು ಹೋಗಬೇಡಿ ಸಾಲದ ಹಣ ವಾಪಾಸ್ಸ್ ಬರುವ ನಂಬಿಕೆ ಇಲ್ಲ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸಗಳಿಗೆ ಬೇರೆಯವರಿಂದ ಮೆಚ್ಚುಗೆ ಪಡೆಯುತ್ತೀರಿ. ನೀವು ಕಷ್ಟದ ಸಮಯದಲ್ಲಿ ಕುಟುಂಬ ಸದಸ್ಯರಿಂದ ಸಹಕಾರ ಸಿಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಈ ಸಮಯ ಅದ್ಭುತವಾಗಿದೆ. ಹೊಸ ಕೆಲಸಕ್ಕೆ ಕೈ ಹಾಕುತ್ತೀರಿ ಎಂದಾದರೆ ವಿಳಂಬ ಮಾಡಲೇಬೇಡಿ. ಇದರಿಂದ ನಿಮಗೆ ಒಳ್ಳೆಯದಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಸರ್ಕಾರಿ ಸೇವೆಗೆ ಅರ್ಜಿ ಸಲ್ಲಿಸಬಹುದು. ಭೂ ಆಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗುತ್ತವೆ. ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ ಯಾವುದೇ ಅಡ್ಡಿ ಆತಂಕಗಳಿಲ್ಲ. ನಿಮಗೆ ಕೊಟ್ಟ ಹೊಸ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತೀರಿ. ರಾಜಕೀಯದಲ್ಲಿ ಅದೃಷ್ಟ ಪರೀಕ್ಷೇಗಿಳಿಯಬಹುದು. ಯಾಕಂದ್ರೆ ಇದು ನಿಮಗೆ ಸೂಕ್ತ ಕಾಲ.
ಕನ್ಯಾರಾಶಿ
ಶುಕ್ರನು ಕನ್ಯಾರಾಶಿಯವರ ಅದೃಷ್ಟವನ್ನು ಹೆಚ್ಚಿಸಲಿದ್ದಾನೆ. ನಿಮಗೆ ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ವಿಯಾಗುತ್ತೀರಿ. ನೀವು ಸೃಜನಶೀಲ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಕ್ಕಳ ಸಂಬಂಧಿ ಆತಂಕ ಕಡಿಮೆಯಾಗಲಿದೆ. ಪ್ರೀತಿಯ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ನಿಮಗೆ ವಿದೇಶಿ ಪ್ರಯಾಣದ ಯೋಗವಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯದಲ್ಲಿ ಆರೋಗ್ಯದ ಸಮಸ್ಯೆ ಎದುರಾಗೋದಿಲ್ಲ. ಆದರೆ ನಿಮ್ಮವರು ಅನ್ನಿಸಿಕೊಂಡವರೇ ನಿಮ್ಮ ಹಿಂದೆ ಪಿತೂರಿ ಮಾಡುತ್ತಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳಿಂದ ಯಾವುದೇ ಪ್ರಮುಖ ಗೌರವ ಅಥವಾ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಸಮಯದಲ್ಲಿ ದಾಂಪತ್ಯ ಜೀವನ ಚೆನ್ನಾಗಿರಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯವಿದೆ. ನೀವು ಪಾರ್ಟರ್‌ಶಿಪ್‌ನಲ್ಲಿ ವ್ಯವಹಾರಕ್ಕೆ ಕೈ ಹಾಕಬಹುದು. ಹೊಸ ಯೋಜನೆಗೆ ಕೈ ಹಾಕಲು ಬಯಸಿದರೆ ವಿಳಂಬ ಮಾಡಬೇಡಿ. ವಿದೇಶದಲ್ಲಿರುವ ಸ್ನೇಹಿತರು ಹಾಗೂ ಸಂಬಂಧಿಕರಿಂದ ನೆರವು ಸಿಗುವ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿಯವರ ಮೇಲೆ ಶುಕ್ರನ ಪ್ರಭಾವವು ಮಿಶ್ರವಾಗಿರುತ್ತದೆ. ಈ ಅವಧಿಯಲ್ಲಿ ಸಾಲದ ವಹಿವಾಟುಗಳಿಗೆ ಕೈ ಹಾಕಬೇಡಿ. ನಿಮ್ಮವರೇ ನಿಮ್ಮನ್ನು ಹೀಯಾಳಿಸಬಹುದು ಈ ಬಗ್ಗೆ ಹುಷಾರಾಗಿರಿ. ಪ್ರಯಾಣ ಮತ್ತು ಐಷಾರಾಮಿ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಯಾವುದೇ ಕೆಲಸವನ್ನು ಅದು ಪೂರ್ಣಗೊಳ್ಳುವವರೆಗೆ ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಹೇಳಿಕೊಳ್ಳಬೇಡಿ.
ಮಕರ ರಾಶಿ
ಮಕರ ರಾಶಿಯ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದ ನಿಮ್ಮ ಚಿಂತೆ ದೂರವಾಗುತ್ತದೆ. ಪ್ರೇಮ ವಿವಾಹ ಯಶಸ್ವಿಯಾಗುತ್ತದೆ. ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆಗಳಿದೆ. ನಿಮ್ಮ ಆದಾಯ ಹೆಚ್ಚುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರ ಮೇಲೆ ಶುಕ್ರನ ಪ್ರಭಾವ ಅನುಕೂಲಕರವಾಗಲಿದೆ ಅಂತಾನೇ ಹೇಳಬಹುದು. ಭೂ ಆಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗುತ್ತವೆ. ನೀವು ಮನೆ ಅಥವಾ ವಾಹನವನ್ನು ಸಹ ಖರೀದಿಸಬಹುದು. ವಿದೇಶಿ ಸ್ನೇಹಿತರು ಮತ್ತು ಸಂಬಂಧಿಕರಿಂದಲೂ ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆ. ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಅವಕಾಶವಿರುತ್ತದೆ. ಮದುವೆಗಾಗಿ ಕಾಯುತ್ತಿರುವವರಿಗೆ ಕಂಕಣ ಭಾಗ್ಯವಿದೆ.
ಮೀನ ರಾಶಿ
ಶುಕ್ರನು ಮೀನರಾಶಿಯವರಿಗೆ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಲಿದ್ದಾನೆ. ಸಾಮಾಜಿಕ ಸ್ಥಾನಮಾನ ಹೆಚ್ಚಲಿದೆ. ನೀವು ತೆಗೆದುಕೊಂಡ ನಿರ್ಧಾರಗಳು ಮತ್ತು ಮಾಡಿದ ಕೆಲಸಗಳನ್ನು ಪ್ರಶಂಸಿಸಲಾಗುತ್ತದೆ. ಧರ್ಮ ಮತ್ತು ಆಧ್ಯಾತ್ಮದ ಕಡೆಗೆ ಆಸಕ್ತಿಯೂ ಹೆಚ್ಚಾಗುತ್ತದೆ. ವಿದೇಶ ಪ್ರಯಾಣದ ಯೋಗವಿದೆ. ಬೇರೆ ದೇಶಗಳಿಗೆ ಹೋಗಲು ವೀಸಾ ಸಲ್ಲಿಸಲು ಪ್ರಯತ್ನಿಸಿದರೆ ಯಶಸ್ವಿಯಾಗುವ ಸಾಧ್ಯತೆ ಇದೆ. ಕಷ್ಟಕಾಲದಲ್ಲಿ ಸಹೋದರರ ಸಹಕಾರ ಸಿಗುತ್ತದೆ.



Click it and Unblock the Notifications
