Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶುಭಾಂಶು ಶುಕ್ಲಾ ಭೂಮಿಗೆ ವಾಪಸ್..ಸಮಯ..ಎಲ್ಲಿ ನೇರ ಪ್ರಸಾರ ವೀಕ್ಷಿಸಬೇಕು: ಇಲ್ಲಿದೆ ಮಾಹಿತಿ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಬರಲು ತಯಾರಿ ನಡೆಸಿದ್ದಾರೆ. ಬಾಹ್ಯಾಕಾಶದಲ್ಲಿ ತಮ್ಮ ಪ್ರಯೋಗಗಳು ಯಶಸ್ವಿಯಾದ ಬಳಿಕ ಅವರು ಭೂಮಿಗೆ ಬರಲು ತಯಾರಿ ನಡೆದಿದೆ. ಸದ್ಯ ಅಂತರಿಕ್ಷದಲ್ಲಿ ಅವರು, ಹೆಸರು ಕಾಳು, ಮೆಂತ್ಯ ಬೀಜಗಳ ಮೊಳಕೆ ಬರಿಸುವ ಪ್ರಯೋಗ ನಡೆಸಿದ್ದರು. ಈ ಪ್ರಯೋಗದಲ್ಲಿ ಯಶಸ್ವಿಯೂ ಆಗಿದ್ದಾರೆ.
ಆಕಾಶ ಗಂಗಾ ಎಂಬ ಯಶಸ್ವಿ ಕಾರ್ಯಾಚರಣೆಯ ನಂತರ ಭೂಮಿಗೆ ಮರಳಲು ಸಿದ್ಧರಾಗುತ್ತಿದ್ದಂತೆ. ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿ ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊರಟು ಜೂನ್ 26 ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು.

ಇಂದು ಬಾಹ್ಯಾಕಾದಲ್ಲಿ ಅವರ ಭೂಮಿಗೆ ಪ್ರಯಾಣಿಸುವ ಅಂತಿಮ ಹಂತದ ತಯಾರಿ ನಡೆಸಲಿದ್ದಾರೆ. ಬಳಿಕ ಅವರು ಜುಲೈ 15ರಂದು ಸುರಕ್ಷಿತವಾಗಿ ಭೂಮಿಗೆ ಬಂದಿಳಿಯಲಿದ್ದಾರೆ. ನಾಳೆ ಮಧ್ಯಾಹ್ನ ಸುಮಾರು 3 ಗಂಟೆಗೆ ಅವರು ಸುರಕ್ಷಿತವಾಗಿ ಸಮುದ್ರದಲ್ಲಿ ಲ್ಯಾಂಡ್ ಆಗಲಿದ್ದಾರೆ. ಇದರ ತಯಾರಿಯಾಗಿ ಮೂವರು ಗಗನಯಾತ್ರಿಗಳ ಹೊತ್ತ ಡ್ರ್ಯಾಗನ್ ಕ್ಯಾಪ್ಸುಲ್ ಗ್ರೇಸ್ ಜುಲೈ 14ರ ಸಂಜೆ 4:30ಕ್ಕೆ ಬಾಹ್ಯಾಕಾಶದಿಂದ ಹೊರಡಲಿದೆ.
ಈ ಸುದೀರ್ಘ ಪ್ರಯಾಣಕ್ಕಾಗಿ ಶುಕ್ಲಾ ತಯಾರಿ ನಡೆಸಿದ್ದು, ನಾಳೆ ಮಧ್ಯಾಹ್ನ ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯಾಗಿರುವ ಪೆಸಿಫಿಕ್ ಮಹಾಸಾಗರದಲ್ಲಿ ಬಂದಿಳಿಯಲಿದೆ. ಈ ಕಾರ್ಯಾಚರಣೆಯಲ್ಲಿ ನಾಲ್ವರು ಭಾಗಿಯಾಗುತ್ತಿದ್ದಾರೆ. ಬಾಹ್ಯಾಕಾಶ ಹಾರಾಟ ನಿರ್ದೇಶಕಿ ಪೆಗ್ಗಿ ವಿಟ್ಸನ್, ಶುಭಾಂಶು ಶುಕ್ಲ, ಸ್ಲಾವೋಸ್ಜ್ ಉಜ್ನಾನ್ಸ್ಕಿ, ಟಿಬೋರ್ ಕಪು ಸಹ ಸೇರಿದ್ದಾರೆ.
ಭೂಮಿಗೆ ಬಂದ ತಕ್ಷಣ ಏನೆಲ್ಲಾ ನಡೆಯಲಿದೆ
ಹಲವು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದಿರುವ ಗಗನಯಾತ್ರಿಗಳು ಭೂಮಿಯ ಮೇಲೆ ಬರುತ್ತಿದ್ದಂತೆ ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಈ ಹಿಂದೆ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿದಾಗಲೂ ಹಲವು ರೀತಿಯ ಪರೀಕ್ಷೆಗಳಿಗೆ ಒಳಗಾಗಿದ್ದರು. ಈಗ ಇಸ್ರೋದ ವಿಮಾನ ಶಸ್ತ್ರಚಿಕಿತ್ಸಕರು ಕಾರ್ಯಾಚರಣೆಯ ಸಮಯದಲ್ಲಿ ಶುಭಾಂಶು ಅವರ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರು ಉತ್ತಮ ಆರೋಗ್ಯ ಮತ್ತು ಹೆಚ್ಚಿನ ನೈತಿಕತೆಯಲ್ಲಿದ್ದಾರೆ ಎಂದು ವರದಿಗಳು ದೃಢಪಡಿಸುತ್ತವೆ.
ಒಮ್ಮೆ ಅವರು ಭೂಮಿಗೆ ಇಳಿದ ತಕ್ಷಣ ಸುಮಾರು 7 ದಿನಗಳದ ಕಾಲ ಅವರು ಪುನರ್ವಸತಿ ಕಾರ್ಯಗಳಿಗೆ ಒಳಗಾಗುತ್ತಾರೆ. ಅವರು ಭೂಮಿಯ ಗುರುತ್ವಾಕರ್ಷಣಾ ಬಲಕ್ಕೆ ಹೊಂದಿಕೊಳ್ಳಲು ಈ ಸಮಯದಲ್ಲಿ ಪ್ರಕ್ರಿಯೆಗಳು ನಡೆಯಲಿದೆ. ಹಾಗೆ ಅವರು 7 ದಿನಗಳ ಕಾಲ ಒಂದೊಂದು ರೀತಿಯ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ಅವರನ್ನು ಸಂಪೂರ್ಣವಾಗಿ ಮೇಲ್ವಿಚಾರಣೆಯಲ್ಲಿ ಇಡಲಾಗುತ್ತದೆ.
ಡ್ರ್ಯಾಗನ್ ಬಾಹ್ಯಾಕಾಶ ನೌಕೆ 580 ಪೌಂಡ್‌ಗಳಿಗಿಂತ ಹೆಚ್ಚು ಸರಕುಗಳನ್ನು ತರಲಿದೆ. ಇದರಲ್ಲಿ ನಾಸಾ ಹಾರ್ಡ್‌ವೇರ್ ಮತ್ತು 60 ಕ್ಕೂ ಹೆಚ್ಚು ಪ್ರಯೋಗಗಳ ಡೇಟಾ ಸೇರಿರಲಿದೆ. ಈ ಪ್ರಯೋಗಗಳು ಹಾಗೆ ಡಾಟಾಗಳು ಭೂಮಿ ಮೇಲೆ ಹೊಸರ ರೀತಿಯ ಪ್ರಯೋಗಗಳ ಮಾಡಲು ಸಹಕಾರಿಯಾಗಲಿದೆ. ಹಾಗೆ ಮುಂಬರುವ ಭವಿಷ್ಯದ ಗಗನಯಾನಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಹಲವು ಪ್ರಯೋಗಗಳು ನಡೆಯಲಿವೆ.
ನೀವು ಎಲ್ಲಿ ವೀಕ್ಷಿಸಬಹುದು?
ಡ್ರ್ಯಾಗನ್ ನೌಕೆ ಭೂಮಿಗೆ ವಾಪಾಸಾಗುವುದನ್ನು ನೀವು ಸಹ ನೇರ ಪ್ರಸಾರ ವೀಕ್ಷಿಸಬಹುದು. ಜುಲೈ 14 ರಂದು ಬೆಳಗ್ಗೆ 4:30 ಕ್ಕೆ (ಭಾರತೀಯ ಸಮಯ ಸುಮಾರು 1-1:30 ರ ಸುಮಾರಿಗೆ) ಪ್ರಾರಂಭವಾಗುತ್ತದೆ. NASA+, Axiom Space ಮತ್ತು SpaceX ನ ಚಾನೆಲ್‌ಗಳಲ್ಲಿ ಸಂಜೆ 6:45 ರಿಂದ ಪ್ರತ್ಯೇಕತೆಯ ಪ್ರಸಾರ ಪ್ರಾರಂಭವಾಗುತ್ತದೆ. ತಂಡವು ಸಂಜೆ 7:05 ಕ್ಕೆ ಬೇರ್ಪಡುತ್ತದೆ. NASA ದ ಪ್ರಸಾರವು ಸುಮಾರು 30 ನಿಮಿಷಗಳ ನಂತರ ಕೊನೆಗೊಳ್ಳುತ್ತದೆ. ನಂತರ Axiom Space ತನ್ನ ವೆಬ್‌ಸೈಟ್‌ನಲ್ಲಿ ಬಾಹ್ಯಾಕಾಶ ನೌಕೆ ಸಮುದ್ರದಲ್ಲಿ ಗಗನಯಾತ್ರಿಗಳ ಹೊತ್ತು ತಂದ ನೌಕೆ ಇಳಿಯುವ ದೃಶ್ಯ ಪ್ರಸಾರ ಮಾಡಲಿದೆ.



Click it and Unblock the Notifications