Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಶ್ರಾವಣ ಶನಿವಾರ: ಶನಿಸಾಡೇಸಾತಿ, ಶನಿ ಧೈಯ್ಯ ಇದ್ದರೆ ಈ ಪರಿಹಾರ ಒಳ್ಳೆಯದು
ಶನಿ ಸಾಡೇಸಾತಿ ಎಂದು ಕೇಳಿದರೆ ಸಾಕು ಜನ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಅದು ಬೀರುವ ಪ್ರಭಾವ ಅಂಥದ್ದು. ಶನಿಸಾಡೇಸಾತಿ ಸಮಯದಲ್ಲಿ ಶನಿ ದೇವ ಒಂದರ ನಂತರ ಒಂದು ಎಂಬಂತೆ ಸಂಕಷ್ಟಗಳನ್ನು ನೀಡುತ್ತಲೇ ಇರುತ್ತಾನೆ, ಆದರೆ ಏನಾದರೂ ಪರಿಹಾರ ಮಾಡಿದರೆ ಇದರ ಪ್ರಭಾವ ಕಡಿಮೆಯಾಗಲಿದೆ.
ಇದೀಗ ಶನಿಯು ಕುಂಭ ರಾಶಿಯಲ್ಲಿದೆ, ಶನಿಯು ಕುಂಭ ರಾಶಿಯಲ್ಲಿರುವಾಗ ತುಲಾ, ವೃಶ್ಚಿಕ, ಮಕರ, ಕುಂಭ , ಮೀನ ರಾಶಿಗಳಲ್ಲಿ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯದ ಪ್ರಭಾವವಿದೆ. ಶನಿಯ ಕಾಟದಿಂದ ಪಾರಾಗಲು ಈ ಶ್ರಾವಣ ಮಾಸದಲ್ಲಿ ಶನಿವಾರ ಈ ಪರಿಹಾರಗಳನ್ನು ಮಾಡಿದರೆ ಒಳ್ಳೆಯದು:

ಶನಿವಾರ ಶಿವಲಿಂಗಕ್ಕೆ ಗಂಗಾಜಲ ಅರ್ಪಿಸಿ
ಶನಿ ಸಾಡೇಸಾತಿ ಇರುವವರು ಶನಿಯ ಕಾಟದಿಂದ ಪಾರಾಗಲು ಶನಿದೇವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿಸಬೇಕು. ಹೀಗೆ ಮಾಡುವುದರಿಂದ ಶಿವನ ಕೃಪೆಯಿಂದ ಶನಿಯ ಕಾಟ ಪಾರಾಗುವುದು. ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡುವಾಗ ' ಓಂ ನಮಃ ಶಿವಾಯ' ಎಂಬ ಮಮತ್ರ ಪಠಿಸಿ.
ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡಿ
ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುವಿರಿ.ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡಿದ ಬಳಿಕ ನೀರಿನಿಂದ ಅಭಿಷೇಕ ಮಾಡಬೇಕು.
ಈ ದಿನ ಶಿವಲಿಂಗಾಷ್ಟಕಂ ಸ್ತೋತ್ರ ಪಠಿಸಿ
ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್ |
ಜನ್ಮಜದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || 1 ||
ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಮ್ |
ರಾವಣದರ್ಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ ||2 ||
ಸರ್ವಸುಗಂಧಸುಲೇಪಿತ ಲಿಂಗಂ
ಬುದ್ಧಿವಿವರ್ಧನಕಾರಣ ಲಿಂಗಮ್ |
ಸಿದ್ಧಸುರಾಸುರವಂದಿತ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ ||3||
ಕನಕಮಹಾಮಣಿಭೂಷಿತ ಲಿಂಗಂ
ಫಣಿಪತಿವೇಷ್ಟಿತಶೋಭಿತ ಲಿಂಗಮ್ |
ದಕ್ಷಸುಯಜ್ಞವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || 4 ||
ಕುಂಕುಮಚಂದನಲೇಪಿತ ಲಿಂಗಂ
ಪಂಕಜಹಾರಸುಶೋಭಿತ ಲಿಂಗಮ್ |
ಸಂಚಿತಪಾಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || 5 ||
ದೇವಗಣಾರ್ಚಿತಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಮ್ |
ದಿನಕರಕೋಟಿಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || 6 ||
ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವಕಾರಣ ಲಿಂಗಮ್ |
ಅಷ್ಟದರಿದ್ರವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || 7 ||
ಸುರಗುರುಸುರವರಪೂಜಿತ ಲಿಂಗಂ
ಸುರವನಪುಷ್ಪಸದಾರ್ಚಿತ ಲಿಂಗಮ್ |
ಪರಮಪದಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || 8||
ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||
ಇತಿ ಶ್ರೀ ಲಿಂಗಾಷ್ಟಕಂ ||



Click it and Unblock the Notifications
