ಶ್ರಾವಣ ಮಾಸ 2023 ಭವಿಷ್ಯ: ಈ ಅವಧಿ ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ಹಿಂದೂಗಳ ಪವಿತ್ರ ಮಾಸವಾದ ಶ್ರಾವಣ ಮಾಸ ಜುಲೈ 18ರಿಂದ ಪ್ರಾರಂಭ, ಅದರಲ್ಲೂ ಈ ಬಾರಿ ಅಧಿಕ ಮಾಸ ಕೂಡ ಇರುವುದರಿಂದ ಶಿವ ಭಕ್ತರಿಗೆ ಈ ವರ್ಷ ತುಂಬಾ ವಿಶೇಷವಾಗಿರಲಿದೆ. ಸೆಪ್ಟೆಂಬರ್ 15ರವರೆಗೆ ಈ ವರ್ಷ ಶ್ರಾವಣ ಮಾಸವಿದೆ. ವೈದಿಕ ಶಾಸ್ತ್ರದ ಪ್ರಕಾರ ಶ್ರಾವಣ ಮಾಸ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡುವುದಾದರೆ....

Shravan Masa 2023

ಮೇಷ ರಾಶಿ
ಶ್ರಾವಣ ಮಾಸವು ಮೇಷ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ತಿಂಗಳು ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿದೆ, ಉದ್ಯೋಗಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಈ ತಿಂಗಳು ನಿಮ್ಮ ಕೆಲಸದಲ್ಲಿ ಬಡ್ತಿಯಾಗುವ ಸಾಧ್ಯತೆಗಳಿವೆ. ನೀವು ಬಹಳ ದಿನಗಳಿಂದ ಬಯಸಿದ ಸ್ಥಾನವನ್ನು ನೀವು ಪಡೆಯಬಹುದು. ವ್ಯವಹಾರಸ್ಥರು ಲಾಭ ಗಳಿಸುತ್ತೀರಿ, ಹಣದ ಸ್ಥಿತಿ ಚೆನ್ನಾಗಿರಲಿದೆ. ಈ ಸಮಯದಲ್ಲಿ ಧನಲಾಭ ಸಿಗಲಿದೆ.

ವೃಷಭ ರಾಶಿ
ಶ್ರಾವಣ ತಿಂಗಳು ವೃಷಭ ರಾಶಿಯವರಿಗೆ ಮಿಶ್ರಫಲ. ಕೆಲವು ಹಳೆಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದರೆ ಶಿವನ ಕೃಪೆಯಿಂದ ವೃತ್ತಿಯಲ್ಲಿ ಉತ್ತಮ ಪ್ರಗತಿ ಕಾಣಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಅನೇಕ ಮೂಲಗಳ ಮೂಲಕ ಹಣಗಳಿಸಬಹುದು. ನಿಮ್ಮಲ್ಲಿ ಕೆಲವರು ಆಸ್ತಿ ಖರಿದಿಸಬಹುದು. ಆದರೆ ಮಧ್ಯದಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ ಕಾಡಬಹುದು. ಉದ್ಯೋಗಸ್ಥರು ಮತ್ತು ಉದ್ಯಮಿಗಳಿಗೆ ಈ ತಿಂಗಳು ಏರಿಳಿತಗಳಿಂದ ತುಂಬಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ಈ ಅವಧಿಯಲ್ಲಿ ಲಾಭವನ್ನು ಗಳಿಸುತ್ತೀರಿ, ಅದೃಷ್ಟದ ಬೆಂಬಲ ನಿಮಗಿರಲಿದೆ, ಇದರಿಂದಾಗಿ ಕನಸುಗಳು ನನಸಾಗುವ ಸಾಧ್ಯತೆಯಿದೆ. ನೀವು ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಈ ಸಮಯವು ವ್ಯಾಪಾರಕ್ಕೂ ಒಳ್ಳೆಯದಿದೆ. ಈ ಸಮಯದಲ್ಲಿ ಹೊಸ ಉದ್ಯೋಗವಕಾಶ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರೂ ಯಶಸ್ಸನ್ನು ಪಡೆಯಬಹುದು. ಒಟ್ಟಾರೆಯಾಗಿ ಈ ತಿಂಗಳು ನಿಮಗೆ ಅನುಕೂಲಕರವಾಗಿದೆ.

ಕರ್ಕ ರಾಶಿ
ಕರ್ಕಾಟಕ ರಾಶಿಯವರಿಗೆ ಶ್ರಾವಣ ತಿಂಗಳು ಒತ್ತಡದಿಂದ ಕೂಡಿರಬಹುದು, ನಿಮ್ಮ ಮೇಲೆ ಕೆಲಸದ ಹೊರೆ ಹೆಚ್ಚಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ನೀವು ಬಯಸಿದ ಯಶಸ್ಸು ಪಡೆಯಲು ಕಷ್ಟವಾಗುವುದು. ನ್ಯಾಯಾಲಯ ಪ್ರಕರಣವಿದ್ದರೆ ಈ ಸಮಯದಲ್ಲಿ ತುಂಬಾ ಓಡಾಡಬೇಕಾಗುತ್ತದೆ.

ಸಿಂಹ ರಾಶಿ
ಶ್ರಾವಣ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಶಿವನ ವಿಶೇಷ ಕೃಪೆ ಇರಲಿದೆ. ಹಠಾತ್ ಹಣದ ಲಾಭಕ್ಕಾಗಿ ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ನೀವು ಜೀವನದಲ್ಲಿ ಪ್ರಗತಿ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆದರೆ ಇದ್ದಕ್ಕಿದ್ದಂತೆ ಕೆಲವು ದೊಡ್ಡ ಖರ್ಚುಗಳು ನಿಮ್ಮ ಮೇಲೆ ಬರಬಹುದು, ಇದರಿಂದಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ, ಈ ತಿಂಗಳು ನಿಮಗೆ ಪಾಲುದಾರರ ಸಂಪೂರ್ಣ ಸಹಕಾರ ಸಿಗುತ್ತದೆ , ವ್ಯಾಪಾರ ಬೆಳೆಯಲಿದೆ.

ಕನ್ಯಾ ರಾಶಿ
ಶ್ರಾವಣ ತಿಂಗಳು ನಿಮಗೆ ಏರಿಳಿತಗಳಿಂದ ಕೂಡಿರಬಹುದು. ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಜಾಗ್ರತೆವಹಿಸಿ. ಶ್ರಾವಣ ಮಾಸದಲ್ಲಿ ಅಂದರೆ ಆಗಸ್ಟ್‌ 16ರ ಬಳಿಕ ನೀವು ಮಾಡುವ ಕೆಲ ಒಪ್ಪಂದಗಳು ಭವಿಷ್ಯದಲ್ಲಿ ಪ್ರಯೋಜನ ನೀಡಲಿದೆ. ನೀವು ದೀರ್ಘಕಾಲದಿಂದ ಕಾಯುತ್ತಿದ್ದ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

ತುಲಾ ರಾಶಿ
ಶ್ರಾವಣ ಮಾಸ ತುಲಾ ರಾಶಿಯವರಿಗೆ ಮಿಶ್ರಫಲ. ನಿಮ್ಮ ಕುಟುಂಬದಲ್ಲಿ ಒಂದು ದೊಡ್ಡ ಧಾರ್ಮಿಕ ಕಾರ್ಯವನ್ನು ಆಯೋಜಿಸಬಹುದು. ಈ ಸಮಯದಲ್ಲಿ ಉದ್ಯೋಗದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಶ್ರಾವಣ ಮಾಸದಲ್ಲಿ ಸಮಸ್ಯೆ ಎದುರಿಸಬಹುದು.

ವೃಶ್ಚಿಕ ರಾಶಿ
ಶ್ರಾವಣ ತಿಂಗಳು ನಿಮಗೆ ತುಂಬಾ ಮಂಗಳಕರವಾಗಿದೆ. ಶಿವನ ವಿಶೇಷ ಕೃಪೆಯಿಂದ ನಿಮ್ಮ ಎಲ್ಲಾ ಕೆಲಸಗಳು ಬಹುಬೇಗ ಪೂರ್ಣಗೊಳ್ಳಲಿವೆ. ಈ ತಿಂಗಳು ನಿಮ್ಮ ಸಂಬಳ ಮತ್ತು ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುವ ಉತ್ತಮ ಅವಕಾಶಗಳಿವೆ. ಮಹಾದೇವನ ಕೃಪೆಯಿಂದ ಹೊಸ ಕೆಲಸಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಕೆಲಸದಲ್ಲಿದ್ದ ಅಡೆತಡೆಗಳು ದೂರಾಗುವುದು. ಈ ಸಮಯದಲ್ಲಿ ಹೊಸ ಗಾಡಿ ಅಥವಾ ಆಸ್ತಿ ಖರೀದಿಸಬಹುದು.

ಧನು ರಾಶಿ
ಶ್ರಾವಣ ಮಾಸ ಧನು ರಾಶಿಯವರಿಗೆ ಅದೃಷ್ಟದ ತಿಂಗಳಾಗಿದೆ. ಕೆಲಸದ ಸ್ಥಳದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಉತ್ತಮ ಲಾಭ ಮತ್ತು ಉತ್ತಮ ವ್ಯವಹಾರವನ್ನು ಅಂತಿಮಗೊಳಿಸಬಹುದು. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ವ್ಯಾಪಾರದಲ್ಲಿಯೂ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆಗಳಿವೆ. ಇದರೊಂದಿಗೆ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

ಮಕರ ರಾಶಿ
ಮಕರ ರಾಶಿಯವರು ಶ್ರಾವಣ ಮಾಸದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಉದ್ಯೋಗ ಅಥವಾ ವ್ಯವಹಾರವನ್ನು ಬದಲಾಯಿಸುವ ಅಗತ್ಯವಿರಬಹುದು. ನಿಮ್ಮ ಖರ್ಚುಗಳು ಹೆಚ್ಚಾಗಬಹುದು, ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬದ ಸದಸ್ಯರೊಬ್ಬರ ಆರೋಗ್ಯ ಚಿಂತೆ ಕಾಡಬಹುದು.

ಕುಂಭ ರಾಶಿ
ಕುಂಭ ರಾಶಿಯವರು ಈ ತಿಂಗಳಿನಲ್ಲಿ ಎಚ್ಚರವಹಿಸಬೇಕಾಗಿದೆ. ಈ ತಿಂಗಳು ನಿಮಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ನಷ್ಟ ಮತ್ತು ಒತ್ತಡವನ್ನು ಸಹ ಎದುರಿಸಬಹುದು. ಒಟ್ಟಿನಲ್ಲಿ ಈ ಇಡೀ ತಿಂಗಳು ಸ್ವಲ್ಪ ಜಾಗ್ರತೆ ವಹಿಸಬೇಕು. ಶಿವನ ಆರಾಧನೆ ಮಾಡಿ ಪರಿಹಾರ ಸಿಗಲಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಶ್ರಾವಣ ಮಾಸವು ತುಂಬಾ ಅನುಕೂಲಕರವಾಗಿರುತ್ತದೆ. ಕೆಲಸದ ಜಾಗದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ, ಭವಿಷ್ಯದಲ್ಲಿ ಕೆಲವು ಪ್ರಮುಖ ಕೆಲಸಗಳಲ್ಲಿ ನಿಮ್ಮನ್ನು ಬೆಂಬಲಿಸುವ ಹೊಸ ವ್ಯಕ್ತಿಯನ್ನು ನೀವು ಭೇಟಿ ಮಾಡಬಹುದು.

English summary

Shravan Masa 2023 Prediction: Affects On 12 Zodiac Signs In Kannada

Shravan Masa 2023 Prediction: Here are prediction of 12 zodiac signs read on...
Story first published: Friday, July 14, 2023, 20:50 [IST]
X
Desktop Bottom Promotion