Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಶ್ರಾವಣ ಮಾಸ 2023: ಈ 5 ರಾಶಿಯವರು ಮುಟ್ಟಿದೆಲ್ಲಾ ಚಿನ್ನ ಆಗಲಿದೆ!
ಶ್ರಾವನ ಮಾಸ ಹಿಂದೂಗಳಿಗೆ ವಿಶೇಷ ತಿಂಗಳು ಅಂತಾನೇ ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಶರಾಜಯೋಗ, ಗಜಕೇಸರಿ ಯೋಗ, ಬುಧ ಮತ್ತು ಶುಕ್ರನ ಸಂಯೋಜನೆಯೊಂದಿಗೆ ಲಕ್ಷ್ಮೀ ನಾರಾಯಣ ಯೋಗ ಮತ್ತು ಸೂರ್ಯ ಮತ್ತು ಬುಧದ ಸಂಯೋಗದೊಂದಿಗೆ ಬುಧಾದಿತ್ಯ ಯೋಗವೂ ಸಹ ಶ್ರಾವಣ ಮಾಸದಲ್ಲಿ ಅಂದರೆ ಜುಲೈ 4 ರಿಂದ ಆಗಸ್ಟ್ 31 ರ ನಡುವೆ ರೂಪುಗೊಳ್ಳುತ್ತಂತೆ.
ಶ್ರಾವಣ ಮಾಸದಲ್ಲಿ ಈ ಬಾರಿ ಹಲವು ರಾಜ ಯೋಗಗಳು ರೂಪುಗೊಂಡಿರುವುದು ಅಪರೂಪ ಅಂತಾನೇ ಹೇಳಬಹುದು. ಇನ್ನೂ ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಐದು ರಾಶಿಯವರಿಗೆ ತುಂಬಾನೇ ಒಳ್ಳೆಯದಾಗಲಿದೆ. ಅಷ್ಟಕ್ಕು ಯಾವ ರಾಶಿಯವರಿಗೆ ಶ್ರಾವಣ ಮಾಸದಲ್ಲಿ ಉತ್ತಮ ಯಶಸ್ಸು ಹಾಗೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗುತ್ತೆ ಅನ್ನೋದನ್ನು ತಿಳಿಯೋಣ.

ಮಿಥುನ ರಾಶಿ
ಶ್ರಾವಣ ಮಾಸವು ಮಿಥುನ ರಾಶಿಯವರಿಗೆ ಅತ್ಯಂತ ಶುಭ ಫಲವನ್ನು ನೀಡಲಿದೆ. ಶಿವನ ಅನುಗ್ರಹದಿಂದ ಜೀವನದಲ್ಲಿ ಸಕಾರಾತ್ಮಕತೆ, ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ವಿದೇಶಕ್ಕೆ ಹೋಗುವ ಅಥವಾ ದೀರ್ಘ ಪ್ರಯಾಣ ಮಾಡುವ ಸಾಧ್ಯತೆಗಳಿದೆ. ಈ ಸಮಯದಲ್ಲಿ ನಿಮ್ಮ ಯೋಜನೆಯನ್ನು ಪೂರ್ಣಗೊಳಿಸಲು ಅಥವಾ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣುವ ಸಾಧ್ಯತೆಯಿದೆ. ಜೀವನದಲ್ಲಿ ಪ್ರಗತಿ ಕಾಣಲಿದ್ದೀರಿ. ಜೀವನದಲ್ಲಿ ಹೊಸ ಸ್ಥಾನ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರು ಶ್ರಾವಣ ತಿಂಗಳಿನಲ್ಲಿ ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವಿದ್ಯಾರ್ಥಿ ವರ್ಗಕ್ಕೆ ಉತ್ತಮ ಸಮಯವಿದು. ಸರಕಾರಿ ವಲಯದಿಂದ ನಿಮಗೆ ಲಾಭವಾಗಲಿದೆ. ಪರೀಕ್ಷೆಯಲ್ಲಿ ಯಶಸ್ಸು ಕಾಣುತ್ತೀರಿ. ಹಣ ಮತ್ತು ಲಾಭ ದೊರೆಯಲಿದೆ. ಆಸ್ತಿ ಗಳಿಸುವ ಸಾಧ್ಯತೆಯಿದೆ. ವ್ಯಾಪರ ಮಾಡುವವರಿಗೆ ಇದು ಉತ್ತಮ ಸಮಯ. ಅದೃಷ್ಟದ ಸಹಾಯದಿಂದ ನೀವು ಅಂದುಕೊಂಡಿರುವ ಯಾವುದೇ ದೊಡ್ಡ ಆಸೆ ಈಡೇರುತ್ತದೆ.
ತುಲಾ ರಾಶಿ
ಶ್ರಾವಣ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಇದುವರೆಗೂ ಈಡೇರದ ಆಸೆಗಳು ಈಡೇರುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಪ್ರಗತಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಉನ್ನತ ಸ್ಥಾನವನ್ನು ಪಡೆಯಬಹುದು. ನಿಮ್ಮ ಪ್ರಭಾವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಸಂಬಂಧಿಕರಿಂದ ಸಹಾಯ ದೊರೆಯಲಿದೆ. ಮನಸ್ಸಿಗೆ ಸಂತೋಷವಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.
ಧನು ರಾಶಿ
ಶ್ರಾವಣ ಮಾಸದಲ್ಲಿ ಧನು ರಾಶಿಯವರು ಶಿವನ ಕೃಪೆಯಿಂದ ಅಪಾರ ಸಂಪತ್ತನ್ನು ಗಳಿಸಲು ಸಾಧ್ಯವಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ. ದಾಂಪತ್ಯ ಜೀವನದಲ್ಲಿ ಇದ್ದ ಸಮಸ್ಯೆಗಳು ಈಗ ದೂರವಾಗುತ್ತವೆ. ಅಧಿಕಾರಿಗಳ ಸಹಕಾರ ದೊರೆಯಲಿದೆ. ನಿಮ್ಮ ಸಂಬಳ ಹೆಚ್ಚಾಗಬಹುದು. ಕಷ್ಟ ಕಾಲದಲ್ಲಿ ಜನ ನಿಮಗೆ ಸಹಾಯ ಮಾಡುತ್ತಾರೆ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸಿದ್ದರೆ ಇದು ಉತ್ತಮ ಸಮಯ.
ಮೀನ ರಾಶಿ
ಶ್ರಾವಣ ಮಾಸವು ಮೀನ ರಾಶಿಯವರಿಗೆ ವಿದೇಶಿ ಪ್ರವಾಸಕ್ಕೆ ಹೋಗುವ ಅವಕಾಶವನ್ನು ಮಾಡಿಕೊಡುತ್ತದೆ. ನಿಮ್ಮ ಯಾವುದೇ ಹಳೆಯ ಆಸೆಗಳನ್ನು ಈಡೇರಿಸಬಹುದು. ವೃತ್ತಿಜೀವನದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳಿವೆ. ಯಾವುದೇ ಪ್ರಮುಖ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ವಿತ್ತೀಯ ಲಾಭ ಪಡೆಯುವ ಅವಕಾಶ ಸಿಗಲಿದೆ. ನಿಮ್ಮ ಪ್ರತಿಸ್ಪರ್ಧಿಗಳು ಹಿಂದೆ ಉಳಿಯುತ್ತಾರೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ.



Click it and Unblock the Notifications












