ಶ್ರಾವಣ ಮಾಸ 2023 : ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ಇಷ್ಟಾರ್ಥ ಸಿದ್ಧಿ!

ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ-ಮಾನವನ್ನು ಕಲ್ಪಿಸಲಾಗಿದೆ. ಈ ಮಾಸದಲ್ಲಿ ಶಿವನ ಜೊತೆಗೆ ಪಾರ್ವತಿಯನ್ನು ಪೂಜಿಸೋದ್ರಿಂದ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿದೆ. ಅದ್ರಲ್ಲೂ ನಮ್ಮ ಕಷ್ಟಗಳು ಕಳೆದು, ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಬೇಕೆಂದರೆ ಕೆಲವೊಂದು ವಿಶೇಷ ಪೂಜೆ-ಪುನಸ್ಕಾರಗಳನ್ನು ಮಾಡಬೇಕು.

ಇದರ ಜೊತೆಗೆ ನಮ್ಮ ರಾಶಿಗೆ ಅನುಸಾರವಾಗಿ ಕೆಲವೊಂದು ವಸ್ತುಗಳನ್ನು ಶಿವನಿಗೆ ಅರ್ಪಣೆ ಮಾಡಿದ್ರೆ ಒಳ್ಳೆಯದಾಗುತ್ತಂತೆ. ಅಷ್ಟಕ್ಕು ನಮ್ಮ ರಾಶಿಗೆ ಅನುಗುಣವಾಗಿ ಯಾವ ವಸ್ತುಗಳನ್ನು ಅರ್ಪಣೆ ಮಾಡಿದ್ರೆ ಒಳ್ಳೆಯದಾಗುತ್ತೆ ಅನ್ನೋದನ್ನು ತಿಳಿಯೋಣ.

Shravan 2023: Best Gifts for Lord Shiva Devotees According to Their Zodiac Signs in Kannada

ಮೇಷ ರಾಶಿ

ಮೇಷ ರಾಶಿಯವರು ಧೈರ್ಯಶಾಲಿಗಳು. ಮತ್ತು ಯಾವಾಗಲೂ ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ಈ ಶ್ರಾವಣ ಮಾಸದಲ್ಲಿ ಮೇಷ ರಾಶಿಯವರಿಗೆ ತ್ರಿಶೂಲವನ್ನು ಉಡುಗೊರೆಯಾಗಿ ನಿಡದರೆ ಒಳ್ಳೆಯದಾಗುತ್ತದೆ. ಇದು ನಿಮಗೆ ಬಿಕ್ಕಟ್ಟು ಅಥವಾ ಪ್ರತಿಕೂಲತೆಯನ್ನು ಎದುರಿಸಿ, ಬಲಶಾಲಿಯಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೇ, ಇದು ನಿಮ್ಮ ಶಕ್ತಿಯ ಮೂಲವಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರು ಯಾವಾಗಲೂ ಸ್ಥಿರ ಮತ್ತು ಶಾಂತವಾಗಿರುತ್ತಾರೆ. ಮತ್ತು ಕಠಿಣ ಪರಿಸ್ಥಿತಿಯು ಉದ್ಭವಿಸಿದಾಗಲೆಲ್ಲಾ ಅವರು ತಾರ್ಕಿಕ ಮತ್ತು ಪ್ರಾಯೋಗಿಕ ಪರಿಹಾರಗಳೊಂದಿಗೆ ಮುನ್ನುಗುತ್ತಾರೆ. ಈ ಶ್ರಾವಣ ಮಾಸದಲ್ಲಿ ಕಾರಂಜಿಯೊಂದಿಗಿನ ಶಿವಲಿಂಗ ವಿಗ್ರಹವನ್ನು ವೃಷಭ ರಾಶಿಯವರಿಗೆ ಉಡುಗೊರೆಯಾಗಿ ನೀಡಬಹುದು.

ಮಿಥುನ ರಾಶಿ

ಮಿಥುನ ರಾಶಿಯವರು ತುಂಬಾನೇ ಧೈರ್ಯಶಾಲಿಗಳು. ಮತ್ತು ಸ್ನೇಹಪರ ವ್ಯಕ್ತಿತ್ವಗಳು. ಅವರ ಆಕರ್ಷಕ ವ್ಯಕ್ತಿತ್ವ ಇತರರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ. ಅವರು ಯಾವಾಗಲೂ ಕುತೂಹಲದಿಂದ ಇರುತ್ತಾರೆ. ಆದ್ದರಿಂದ ಶಿವ ಪ್ರೇರಿತ ಕನಸಿನ ಕ್ಯಾಚರ್ ಇವರಿಗೆ ಸೂಕ್ತವಾಗಿರುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಯೂ ಇವರಿಂದ ದೂರ ಉಳಿಯುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಭಾವನಾತ್ಮಕ ಸ್ವಾಭಾವ, ಅತ್ಯಂತ ನಿಷ್ಠಾವಂತರು ಮತ್ತು ಭಕ್ತಿ ಇವರಲ್ಲಿ ಹೆಚ್ಚಾಗಿರುತ್ತದೆ. ಭಗವಾನ್ ಶಿವನ ವಿಗ್ರಹ ಅಥವಾ ಅಗರಬತ್ತಿ ಹೋಲ್ಡರ್ ಗಳು ಇವರಿಗೆ ಉಡುಗೊರೆಯಾಗಿ ನೀಡಬಹುದು. ಏಕೆಂದರೆ ಇದು ಇವರ ಸುತ್ತ ಧನಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರು ಯಾವಾಗಲೂ ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಮತ್ತು ಯಾವಾಗಲೂ ಸಂತೋಷದಿಂದಿರುತ್ತಾರೆ.ಇದಲ್ಲದೆ ಇವರು ತಮ್ಮ ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದ ಇವರಿಗೆ ಭಗವಾನ್ ಶಿವ ಪ್ರೇರಿತ ಕಂಕಣವು ಉತ್ತಮ ಉಡುಗೊರೆಯಾಗಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರು ಎಲ್ಲಾ ವಿಚಾರದಲ್ಲೂ ತಮ್ಮದೇ ಆದ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಕನ್ಯಾ ರಾಶಿಯವರಿಗೆ ಅಮೃತ ಶಿಲೆಯಿಂದ ಮಾಡಿದ ಭಗವಾನ್ ಶಿವನ ವಿಗ್ರಹವನ್ನು ಅಥವಾ ನಂದಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಇದು ಅವರ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ನ್ಯಾಯಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಈ ಶ್ರಾವಣ ಮಾಸದಲ್ಲಿ ತುಲಾ ರಾಶಿಯವರಿಗೆ ನೀವು ಶಿವನ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಬಹುದು.ಇದರಿಂದ ತುಲಾ ರಾಶಿಯವರ ಕಷ್ಟಗಳು ಪರಿಹಾರವಾಗುತ್ತದೆ. ಜೊತೆಗೆ ಎಂತಹದೇ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಯಾವಾಗಲೂ ದುರ್ಬಲ ವರ್ಗದವರ ಪರವಾಗಿ ನಿಲ್ಲುತ್ತಾರೆ. ಇವರು ಇತರರ ಯುದ್ಧಗಳಲ್ಲಿ ಅವರಿಗೆ ಸಹಕಾರ ನೀಡುತ್ತಾರೆ. ಹೀಗಾಗಿ ಇವರಿಗೆ ರುದ್ರಾಕ್ಷಿ ಮಾಲೆಯನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ಇವರಿಗೆ ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಅಲ್ಲದೆ, ಅವರಿಗೆ ತೊಂದರೆ ನೀಡುವ ಎಲ್ಲಾ ಕೆಟ್ಟ ಶಕ್ತಿಗಳಿಂದ ಅವರು ರಕ್ಷಿಸಲ್ಪಡುತ್ತಾರೆ.

ಧನು ರಾಶಿ

ಧನು ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಇವರು ತಮ್ಮ ಸುತ್ತಲಿನ ಎಲ್ಲಾ ವಿಚಾರವನ್ನೂ ಅನ್ವೇಷಿಸಲು ಇಷ್ಟಪಡುತ್ತಾರೆ. ಇವರಿಗೆ ಶಿವಪುರಾಣವು ಪರಿಪೂರ್ಣ ಕೊಡುಗೆಯಾಗಿದ್ದು ಅದು ಜೀವನದಲ್ಲಿ ಎಲ್ಲವನ್ನೂ ಜಯಿಸಲು ಮತ್ತು ಅವರ ಹಾದಿಯಿಂದ ಅಡೆತಡೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಮಕರ ರಾಶಿ

ಮಕರ ರಾಶಿಯವರು ತಮ್ಮ ಕೆಲಸವನ್ನು ಸಂಘಟಿತವಾಗಿ ಮಾಡುತ್ತಾರೆ. ಅವು ತುಂಬಾ ಪ್ರಾಯೋಗಿಕವೂ ಆಗಿವೆ. ಇವರು ಕಠಿಣ ಪರಿಶ್ರಮದಿಂದ ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ವಿಷಯಗಳ ಮೌಲ್ಯವನ್ನು ತಿಳಿದಿದ್ದಾರೆ. ಇದು ಇವರ ಬೆಳವಣಿಗೆಗೆ ಕಾರಣವಾಗುತ್ತದೆ. ಚಿನ್ನದ ಲೇಪಿತ ಶಿವನ ನಾಣ್ಯವವನ್ನು ಈ ರಾಶಿಯವರಿಗೆ ಉಡುಗೊರೆಯಾಗಿ ನೀಡಬಹುದು.

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ಅದ್ಭುತವಾಗಿದೆ. ಎಲ್ಲರಿಗಿಂತ ಭಿನ್ನವಾಗಿರುವ ಸ್ವಭಾವ ಇವರದು. ಇವರು ಗುಂಪನ್ನು ಅನುಸರಿಸುವ ಬದಲು ಹೊಸದನ್ನು ಪ್ರಾರಂಭಿಸಲು ಬಯಸುತ್ತಾರೆ. ಈ ರಾಶಿಯವರಿಗೆ ದೀಪವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಅವರಿಗೆ ಒಳ್ಳೆಯದಾಗುತ್ತದೆ.

ಮೀನ ರಾಶಿ

ಮೀನ ರಾಶಿಯವರು ಪ್ರೀತಿ ಮತ್ತು ಶಾಂತಿ ಎರಡನ್ನೂ ತುಂಬಾ ಪ್ರೀತಿಸುತ್ತಾರೆ. ಅಂತಹ ವಾತಾವರಣವನ್ನು ಅವರಿಗೆ ನಿರ್ಮಿಸಲು ನೀವು ಸಹಾಯ ಮಾಡಬಹುದು. ಮತ್ತು ಅದಕ್ಕಾಗಿ ನೀವು ಅವರಿಗೆ ಮೃತ್ಯುಂಜಯ ಮಂತ್ರವಿರುವ ಸಾಮಾಗ್ರಿಯನ್ನು ಉಡುಗೊರೆಯಾಗಿ ನೀಡಬಹುದು. ಇದ್ದರಿಂದ ಇವರ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಕೆಟ್ಟದಾಗೋದಕ್ಕೆ ಅವಕಾಶ ಇರೋದಿಲ್ಲ.

English summary

Shravan 2023: Best Gifts for Lord Shiva Devotees According to Their Zodiac Signs in Kannada

Shravan 2023: These are the Best Gifts for Lord Shiva Devotees According to Their Zodiac Signs. Read more.
Story first published: Sunday, July 23, 2023, 13:00 [IST]
X
Desktop Bottom Promotion