Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶಿವಪೂಜೆ: ಬಿಲ್ವೆಪತ್ರೆ ಜೊತೆಗೆ ಶಿವನಿಗೆ ತುಂಬಾ ಪ್ರಿಯವಾದ 8 ಹೂಗಳಿವು
ಶಿವನ ಆರಾಧನೆ ಮಾಡುವಾಗ ಶಿವ ಪೂಜೆಗಂದೇ ಕೆಲವು ವಿಶೇಷ ಹೂಗಳನ್ನು ಬಳಸಲಾಗುವುದು. ಶಿವ ಪೂಜೆಯಲ್ಲಿ ಬಿಲ್ವೆ ಪತ್ರೆ ಎಲೆಗಳನ್ನು ಬಳಸಲಾಗುವುದು. ಅದರ ಜೊತೆಗೆ ಇನ್ನು ಕೆಲವು ವಿಶೇಷ ವಸ್ತುಗಳನ್ನು ಬಳಸಲಾಗುವುದು. ಇವುಗಳನ್ನು ಶಿವಪೂಜೆಗೆ ಬಳಸಿದರೆ ತುಂಬಾ ಒಳ್ಳೆಯದೆಂದು ತಿಳಿದು ಬಂದಿದೆ. ಇವುಗಳನ್ನು ಶಿವನ ಆರಾಧನೆಯಲ್ಲಿ ಬಳಸಿದರೆ ಶಿವನಿಗೆ ತುಂಬಾ ಖುಷಿಯಾಗುವುದಂತೆ, ಆ ವಿಶೇಷ ಹೂಗಳು ಯಾವುವು ಎಂದು ನೋಡೋಣ ಬನ್ನಿ:

ಮುಟ್ಟಿದರೆ ಮುನಿ
ಮುಟ್ಟಿದರೆ ಮುದುಡಿಕೊಳ್ಳುವ ಈ ಗಿಡವನ್ನು ಗದ್ದೆಗಳಲ್ಲಿ, ಹೊಲಗಳಲ್ಲಿ ನೋಡಿರಬಹುದು, ಈ ಗಿಡ ಮುಳ್ಳಿನಿಂದ ಕೂಡಿದ್ದರು ಹೂಗಳು ತುಂಬಾ ಸುಂದರವಾಗಿರುತ್ತದೆ, ಈ ಹೂಗಳು ಶಿವನಿಗೆ ತುಂಬಾ ಪ್ರಿಯವಂತೆ, ಇದನ್ನು ತಂದು ಶಿವಪೂಜೆಯಲ್ಲಿ ಬಳಸಿ.
ಅಗಸೆ ಹೂಗಳು
ನೀವು ಅಗಸೆ ಹೂಗಳನ್ನು ಅರ್ಪಿಸುವುದರಿಂದ ಶಿವ ಸಂತುಷ್ಟನಾಗುತ್ತಾನೆ, ಈ ಹೂವನ್ನು ನೀವು ಏನಾದರೂ ಸಂಕಲ್ಪವನ್ನಿಟ್ಟುಕೊಂಡು ಅರ್ಪಿಸಿದರೆ ಅದು ನೆರವೇರುವುದು, ಈ ಹೂವ ಶಿವ ಪೂಜೆಗೆ ಶ್ರೇಷ್ಠವಾಗಿದೆ.
ಧಾತುರಾ ಹೂಗಳು
ಧಾತುರಾ ಪುಷ್ಪ ಕೂಡ ಶಿವನೊಗೆ ಪ್ರಿಯವಾದ ಹೂವಾಗಿದೆ, ಶಿವಾಲಯದಲ್ಲಿ ಈ ಗಿಡ ಸಾಮಾನ್ಯವಾಗಿ ಇದ್ದೇ ಇರುತ್ತದೆ, ಹೂಗಳನ್ನು ಶಿವನಿಗೆ ಅರ್ಪಿಸುವುದರಿಂದ ಜೀವನದಲ್ಲಿನ ಎಲ್ಲಾ ಸಂಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಪಾರಿಜಾತ ಹೂ
ಶಿವ ಪೂಜೆಯಲ್ಲಿ ಪಾರಿಜಾತ ಹೂ ಕೂಡ ಬಲಸಲಾಗುವುದು. ಪಾರಿಜಾತ ಹೂ ಅರ್ಪಿಸುವುದರಿಂದ ಶಿವ-ಪಾರ್ವತಿಯರ ಆಶೀರ್ವಾದದಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
ಸಂಪಿಗೆ ಹೂ
ಸುಗಂಧವಾಸನೆಯ ಸಂಪಿಗೆ ಹೂವುಗಳನ್ನು ಪೂಜೆಗಳಲ್ಲಿ ಬಳಸಲಾಗುವುದು. ಶಿವ ಪೂಜೆಯಲ್ಲಿ ಸಂಪಿಗೆ ಹೂ ಬಳಸಲಾಗುವುದು.
ಎಕ್ಕದ ಹೂ
ಶಿವ ಲಿಂಗದಿಂದ ಎಕ್ಕದ ಹೂಗಳನ್ನು ಅಲಂಕರಿಸಿದರೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಅಗಸೆ ಹೂ
ಶಿವ ಪೂಜೆಗೆ ಅಗಸೆ ಹೂಗಳನ್ನು ಕೂಡ ಬಳಸಲಾಗುವುದು.
ಗಂಟೆ ಹೂ
ಈ ಹೂವಿನ ಗಿಡ ಕೂಡ ಶಿವಾಲಯದ ಸಮೀಪ ಇರುತ್ತದೆ, ಇದನ್ನು ಕೂಡ ಶಿವಪೂಜೆಯಲ್ಲಿ ಬಳಸಲಾಗುವುದು.



Click it and Unblock the Notifications
