Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಈಕೆ ಜಗತ್ತಿನ ಮೋಸ್ಟ್ ವಾಂಟೆಡ್ ಮಹಿಳೆ..! ರಾತ್ರೋರಾತ್ರಿ ಸಾವಿರಾರು ಕೋಟಿ ವಂಚನೆ.!
ಈ ಜಗತ್ತಿನಲ್ಲಿ ಮೋಸ್ಟ್ ವಾಂಟೆಡ್ ಡಾನ್ ಆಗಿದ್ದ ದಾವುದ್ ಇಬ್ರಾಹಿಂ ಬಗ್ಗೆ ಕೇಳಿರುತ್ತೀರಿ. ಆತ ದೂರದ ದೇಶದಲ್ಲೇ ಕುಳಿತು ತನ್ನ ಕೆಲಸ ಮಾಡಿಕೊಳ್ಳುತ್ತಿದ್ದ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆತನ ಹಿಂಬಾಲಕರಿದ್ದರು. ಹತ್ತು ಹಲವು ದೇಶಗಳಿಗೆ ಬೇಕಾಗಿದ್ದ ಡಾನ್ ಆಗಿದ್ದ. ಆದ್ರೆ ನೀವು ಎಂದಾದ್ರು ಮೋಸ್ಟ್ ವಾಂಟೆಡ್ ಮಹಿಳಾ ಡಾನ್ ಬಗ್ಗೆ ಕೇಳಿದ್ದೀರಾ?
ಅಮೆರಿಕದ ತನಿಖಾ ಸಂಸ್ಥೆಯ ಎಫ್‌ಬಿಐ ಪಟ್ಟಿ ಮಾಡಿದ್ದ ಮೋಸ್ಟ್ ವಾಂಟೆಡ್ ಮಹಿಳಾ ಡಾನ್ ಆಗಿದ್ದ ಆಕೆ ಅಗ್ರ 10 ಡಾನ್‌ಗಳ ಪೈಕಿ ಏಕೈಕಾ ಮಹಿಳಾ ಡಾನ್ ಆಗಿದ್ದಳು. ಆಕೆ ಸುದ್ದಿಯಾಗಿದ್ದು, ಮೋಸ್ಟ್ ವಾಂಟೆಡ್ ಕೇಸ್ ಆಗಿದ್ದ ಕ್ರಿಪ್ಟೋ ಕರೆನ್ಸಿ ವಂಚನೆ ಕೇಸ್‌ನಿಂದಾಗಿ.

ವಂಚನೆಯ ಕ್ರಿಪ್ಟೋಕರೆನ್ಸಿ OneCoin ನ ಹಿಂದಿನ ಮಾಸ್ಟರ್‌ಮೈಂಡ್ ರೂಜಾ ಇಗ್ನಾಟೋವಾ ವಿಶ್ವದ ಮೋಸ್ಟ್ ವಾಂಟೆಡ್ ಮಹಿಳೆ ಎಂಬ ಕುಖ್ಯಾತ ಪಡೆದಿದ್ದರು. "ಮಿಸ್ಸಿಂಗ್ ಕ್ರಿಪ್ಟೋಕ್ವೀನ್" ಎಂದು ಕರೆಯಲ್ಪಡುವ ಇಗ್ನಾಟೋವಾ ವಿಶ್ವದಾದ್ಯಂತ ಹೂಡಿಕೆದಾರರಿಂದ $4.5 ಶತಕೋಟಿ (ರೂ. 37,000 ಕೋಟಿ) ವಂಚಿಸಿದ ಆರೋಪ ಹೊತ್ತಿದ್ದಾರೆ. ಜೊತೆಗೆ ಎಫ್‌ಬಿಐ ಸಂಸ್ಥೆ ಆಕೆಯನ್ನು ಮೋಸ್ಟ್ ವಾಂಟೆಡ್ ಪರ್ಸನ್ ಲೀಸ್ಟ್ ನಲ್ಲಿ ಸೇರಿಸಿ ಹುಡುಕುತ್ತಿದೆ.
ವಂಚನೆಯ ಪ್ರಕರಣ 2014 ರಲ್ಲಿ ಪ್ರಾರಂಭವಾಯಿತು, ಇಗ್ನಾಟೋವಾ ತನ್ನ ಹೊಸ ಕಂಪನಿ ಒನ್‌ಕಾಯಿನ್‌ನೊಂದಿಗೆ ಜಾಗತಿಕವಾಗಿ ಹೂಡಿಕೆದಾರರನ್ನು ಆಕರ್ಷಿಸಿದರು. 2016 ರಲ್ಲಿ, ಅವರು ಲಂಡನ್‌ನ ವೆಂಬ್ಲಿ ಅರೆನಾದಲ್ಲಿ ವೇದಿಕೆಯನ್ನು ಪಡೆದರು, ಬೆಳೆಯುತ್ತಿರುವ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಬಿಟ್‌ಕಾಯಿನ್‌ಗೆ ಲಾಭದಾಯಕ ಪ್ರತಿಸ್ಪರ್ಧಿಯಾಗಿ OneCoin ಅನ್ನು ಪ್ರಚಾರ ಮಾಡಿದರು.
ಆದರೆ ಕೇವಲ ಹದಿನಾರು ತಿಂಗಳ ನಂತರ, ಅಕ್ಟೋಬರ್ 2017 ರಲ್ಲಿ, ಇಗ್ನಾಟೋವಾ ಎಂಬಾಕೆ ಮರೆಯಾದಳು. ಅವಳು ಬಲ್ಗೇರಿಯಾದ ಸೋಫಿಯಾದಲ್ಲಿ ವಿಮಾನ ಹತ್ತಿ ಕೋಟಿ ಕೋಟಿ ರೂಪಾಯಿಯೊಂದಿಗೆ ದೇಶ ತೊರೆದಳು. ಆದ್ರೆ ಆಕೆಯ ಕಂಪನಿಗೆ ಹೂಡಿಕೆ ಮಾಡಿದ್ದವರು ಆಕೆ ಹಿಂದೆ ಬಿದ್ದರು. ಅಮೆರಿಕದಲ್ಲಿ ಎಫ್‌ಬಿಐ ತನಿಖೆ ಆರಂಭಿಸಿ ದೋಷಾರೋಪ ಪಟ್ಟಿ ಹಾಗೂ ವಾರಂಟ್ ಜಾರಿ ಮಾಡಿತ್ತು.
ಅಂದಿನಿಂದ ಆಕೆ ಎಲ್ಲಿ ನೆಲೆಸಿದ್ದಾಳೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈವರೆಗೆ ಸಣ್ಣದೊಂದು ಕುರುಹು ಪತ್ತೆಗೂ ಈ ತನಿಖಾ ಸಂಸ್ಥೆಗಳು ಪರದಾಡುತ್ತಿವೆ. FBI ಅವಳನ್ನು ಸಕ್ರಿಯವಾಗಿ ಹುಡುಕುತ್ತಿದೆ, ಅವರ ಪಟ್ಟಿಯಲ್ಲಿರುವ 529 ಪರಾರಿಯಾದವರಲ್ಲಿ, ಇಗ್ನಾಟೋವಾ ಕೇವಲ 11 ಮಹಿಳೆಯರಲ್ಲಿ ಒಬ್ಬರು ಮತ್ತು ಅಗ್ರ 10 ರಲ್ಲಿ ಏಕೈಕ ಮಹಿಳೆಯಾಗಿದ್ದಾರೆ.
ರುಜಾ ಇಗ್ನಾಟೋವಾ ಜರ್ಮನ್ ಪ್ರಜೆ, ಬಲ್ಗೇರಿಯಾದಲ್ಲಿ ಜನಿಸಿದರು. ಆಕೆಯ ತಂದೆ ಇಂಜಿನಿಯರ್ ಮತ್ತು ಆಕೆಯ ತಾಯಿ ಶಿಕ್ಷಕಿಯಾಗಿದ್ದರು. ಆಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಯುರೋಪಿಯನ್ ಕಾನೂನನ್ನು ಅಧ್ಯಯನ ಮಾಡಿದ ನಂತರ, ಇಗ್ನಾಟೋವಾ ಸೋಫಿಯಾದಲ್ಲಿ ಮೆಕಿನ್ಸೆ ಮತ್ತು ಕಂಪನಿಯ ಸಲಹೆಗಾರರಾಗಿ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.
ಅಕ್ಟೋಬರ್ 25, 2017 ರಂದು ಇಗ್ನಾಟೋವಾ ಸೋಫಿಯಾದಿಂದ ಅಥೆನ್ಸ್‌ಗೆ ಪ್ರಯಾಣಿಸಿದರು. ಇದಾದ ಬಳಿಕ ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ ಎಂದು ಎಫ್‌ಬಿಐ ತಿಳಿಸಿದೆ. ಅಕೆ ಪ್ರಯಾಣಕ್ಕಾಗಿ ಜರ್ಮನ್ ಪಾಸ್‌ಪೋರ್ಟ್ ಅನ್ನು ಬಳಸುತ್ತಾಳೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್, ಬಲ್ಗೇರಿಯಾ, ಜರ್ಮನಿ, ರಷ್ಯಾ, ಗ್ರೀಸ್ ಮತ್ತು/ಅಥವಾ ಪೂರ್ವ ಯುರೋಪ್‌ಗೆ ಪ್ರಯಾಣಿಸಬಹುದು ಎಂದು ನಂಬಲಾಗಿದೆ. ಜರ್ಮನಿ ಪಾಸ್‌ಪೋರ್ಟ್ ವಿಶ್ವದಲ್ಲೇ ಅತ್ಯಂತ ಶಕ್ತಿಯುತ ಪಾಸ್‌ಪೋರ್ಟ್ ಆಗಿದೆ. ಅಲ್ಲದೆ ಆಕೆ ಮಾರುವೇಷದಲ್ಲಿಯೂ ಹಲವು ಬಾರಿ ಪ್ರಯಾಣಿಸಿರಬಹುದು ಎಂದು ಎಫ್‌ಬಿಐ ಶಂಕಿಸಿದೆ.
OneCoin ಎಂಬ ಸಂಸ್ಥೆ ಆರಂಭವಾದಾಗ ಇದು ಬಿಟ್‌ಕಾಯಿನ್ ಸಂಸ್ಥೆಯನ್ನೇ ಮೀರಿಸಲಿದೆ ಎಂಬ ನಕಲಿ ಅಂಕಿ ಅಂಶ ತೋರಿಸಿ ಹಣ ಹೂಡಿಕೆ ಮಾಡುವಂತೆ ಮಾಡಲಾಗಿತ್ತು. ಇದ್ನು ನಂಬಿದ್ದ ಹೂಡಿಕೆದಾರರು ಸಾವಿರಾರು ಕೋಟಿ ರೂಪಾಯಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.



Click it and Unblock the Notifications