Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಶನಿವಾರದಂದು ಬಂದಿದೆ ಷಟಿಲಾ ಏಕಾದಶಿ: ಈ 2 ಕಾರ್ಯ ಮಾಡಿದರೆ ಸಂಪತ್ತು ವೃದ್ಧಿಸುವುದು
ವರ್ಷದಲ್ಲಿ ಒಟ್ಟು 24 ಏಕಾದಶಿ, ತಿಂಗಳಿಗೆ 2 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಇವತ್ತು ಅಂದರೆ ಜನವರಿ 25ಕ್ಕೆ ಶಟಿಲಾ ಏಕಾದಶಿಯನ್ನು ಆಚರಿಸಲಾಗುವುದು. ಈ ದಿನ ಏಕಾದಶಿ ವ್ರತವನ್ನು ಮಾಡುವವರು ಬೆಳಗ್ಗೆ ಎದ್ದು ಸ್ನಾನ ಮಾಡಿ ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಿರುತ್ತಾರೆ. ಆದರೆ ಈ ದಿನ ಶನಿವಾರದಂದು ಈ ಷಟಿಲಾ ಏಕಾದಶಿ ಬಂದಿರುವುದರಿಂದ ಈ ಎರಡು ಕಾರ್ಯ ಮಾಡಿದರೆ ಈ ಏಕಾದಶಿಯಿಂದ ಮತ್ತಷ್ಟು ಪ್ರಯೋಜನ ಪಡೆಯುತ್ತೀರಿ....

ಎಳ್ಳು ಪರಿಹಾರ
ಹೌದು ಈ ದಿನ ನೀವು ಕಪ್ಪು ಎಳ್ಳನ್ನು ಕಳಸದಲ್ಲಿ ಹಾಕಿಟ್ಟು ಪೂಜಿಸಿ, ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಸ್ವಲ್ಪ ಎಳ್ಳು ಹಾಕಿ, ಇನ್ನು ಸ್ವಂತ ವ್ಯವಹಾರ ಮಾಡುತ್ತಿದ್ದರೆ ಆಫೀಸ್‌ನಲ್ಲಿಯೂ ಎಳ್ಳನ್ನು ಹಾಕಿ, ಹೀಗೆ ಮಾಡುವುದರಿಂದ ಶ್ರೀ ವಿಷ್ಣು ಹಾಗೂ ಶನಿಯ ಕೃಪೆ ನಿಮ್ಮ ಮೇಲಿರುತ್ತದೆ, ಇದರಿಂದ ಕಷ್ಟಗಳು ಕಡಿಮೆಯಾಗುವುದು.
ದಾನ ಮಾಡಿ
ಈ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ ಹಾಗಾಗಿ ಈ ದಿನ ನಿಮ್ಮ ಕೈಲ್ಲಾದಂತೆ ದಾನ ಧರ್ಮಗಳನ್ನು ಮಾಡಿ, ಹೀಗೆ ದಾನ ಮಾಡುವಾಗ ಆ ವಸ್ತುಗಳ ಜೊತೆಗೆ ಸ್ವಲ್ಪ ಕಪ್ಪು ಎಳ್ಳು ಕೂಡ ದಾನ ಮಾಡಿ, ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ದೂರಾಗುವುದು.
ಈ ದಿನ ಅನ್ನದಾನಕ್ಕೆ ತುಂಬಾನೇ ಮಹತ್ವವಿದೆ
ಇದರ ಮಹತ್ವ ಹೇಳುವ ಪೌರಾಣಿಕ ಕತೆ ಕೂಡ ಇದೆ
ಒಬ್ಬಾಕೆ ಮಹಾವಿಷ್ಣುವಿನ ದೊಡ್ಡ ಭಕ್ತೆಯಾಗಿದ್ದಳು. ಪ್ರತಿ ಏಕಾದಶಿಯನ್ನು ಬಹಳ ಕಠಿಣವಾಗಿ ಆಚರಿಸುತ್ತಿದ್ದಳು, ಉಪವಾಸ ಮಾಡುತ್ತಿದ್ದಳು, ಮಂತ್ರಗಳನ್ನು ಪಠಿಸುತ್ತಿದ್ದಳು, ತನಗೆ ಮೋಕ್ಷ ಬೇಕೆಂದು ಸದಾ ಶ್ರೀವಿಷ್ಣುವಿನ ಜಪ ಮಾಡುತ್ತಲೇ ಇರುತ್ತಾಳೆ. ನಾನು ಶ್ರೀ ವಿಷ್ಣುವಿನ ಭಕ್ತೆಯಾಗಿರುವುದರಿಂದ ಖಂಡಿತನನಗೆ ಮೋಕ್ಷ ಸಿಗುತ್ತದೆ ಎಂದು ನಂಬಿರುತ್ತಾಳೆ. ಆಕೆ ಇಹಲೋಕ ತ್ಯಜಿಸಿದ ಬಳಿಕ ವೈಕುಂಠಕ್ಕೆ ಹೋಗುತ್ತಾಳೆ, ಆದರೆ ಅಲ್ಲಿ ಅವಳಿಗೆ ಖಾಲಿ ಗುಡಿಸಲು ನೀಡಲಾಗುತ್ತೆ.
ವೈಕುಂಠ ಎಂದರೆ ಸ್ವರ್ಗದ ಬಾಗಿಲು ನಮಗಾಗಿ ತೆರೆದಿರುತ್ತದೆ ಆದರೆ ಇಲ್ಲಿ ನನಗೆ ಗುಡಿಸಲು ನೀಡಲಾಗಿದೆ ಎಂದು ದುಃಖ ಪಡುತ್ತಾಳೆ. ಆಕೆ ಶ್ರೀ ವಿಷ್ಣುವಿನ ಬಳಿ ನಿನ್ನ ಸದಾ ಜಪ ಮಾಡುತ್ತಿದ್ದೆ, ಎಲ್ಲಾ ಏಕಾದಶಿಯಂದು ಉಪವಾಸ ಇರುತ್ತಿದ್ದೆ, ಆದರೆ ನನಗ್ಯಾಕೆ ಹೀಗೆ ಎಂದಾಗ ನಿನ್ನ ಪೂಜೆಯ ಫಲದಿಂದ ನೀನು ವೈಕುಂಠಕ್ಕೆ ಬಂದಿದ್ದೀಯ, ಆದರೆ ನೀನು ಅನ್ನ ದಾನ ಮಾಡಿಲ್ಲ, ಒಮ್ಮೆ ನಾನೇ ನಿನ್ನ ಬಳಿ ಆಹಾರ ಕೇಳಲು ಬಂದಾಗ ನೀನು ನಮಗೆ ಅನ್ನದ ಬದಲಿಗೆ ಮಣ್ಣು ನೀಡಿದೆ ಎಂದು ಹೇಳಿದಾಗ ಆಕೆ ಕಣ್ಣೀರು ಹಾಕಿ ನನಗೆ ನನ್ನ ತಪ್ಪನ್ನು ಸರಿಪಡಿಸುವ ಮಾರ್ಗ ಕೇಳುತ್ತಾಳೆ. ಆಗ ಶ್ರೀ ವಿಷ್ಣುವು ದೇವ ಕನ್ಯೆಯರು ಬರುತ್ತಾರೆ ಅವರು ಹೇಳಿ ಶಟಿಲಾ ಏಕಾದಶಿಯ ಕತೆಕೇಳು ಅಂತಾರೆ, ಅದರಂತೆ ಆಕೆಯ ಗುಡಿಸಲಿಗೆ ದೇವ ಕನ್ಯೆಯರು ಬರುತ್ತಾರೆ. ಅವರು ದಾನ ಮಹತ್ವ, ಷಟಿಲಾ ಏಕಾದಶಿಯ ವ್ರತ ನಿಯಮ ಹೇಳುತ್ತಾರೆ, ಆಕೆ ಅದನ್ನೆಲ್ಲಾ ಭಕ್ತಿಯಿಂದ ಕೇಳುತ್ತದೆ, ಅವರು ಹೇಳಿದ ಕತೆಯಲ್ಲಿ ಅವರು ಅನ್ನ ದಾನದ ಮಹತ್ವ ಬಗ್ಗೆ ಹೇಳುತ್ತಾರೆ. ನಂತರ ನೋಡಿದರೆ ಗುಡಿಸಲು ಮಾಯವಾಗಿರುತ್ತದೆ, ಆಕೆಗೆ ಸ್ವರ್ಗದ ಬಾಗಿಲು ತೆರೆಯುತ್ತದೆ.



Click it and Unblock the Notifications
