Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಾದಕ ವಸ್ತು ವ್ಯಸನಿಗಳಾಗಿ ಬದಲಾದ ಶಾರ್ಕ್‌ಗಳು..! ಇದು ಹೇಗೆ ಸಾಧ್ಯ.!?
ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತೆ ಅನ್ನೋದು ನಿಮಗೆಲ್ಲಾ ತಿಳಿದೆಯೇ ಇದೆ. ಈಗ ಜಗತ್ತಿನ ಅತ್ಯಂತ ದೊಡ್ಡ ಪಿಡುಗು ಈ ಮಾದಕ ದ್ರವ್ಯ ಕಳಸಾಗಾಣಿಕೆ, ಸೇವನೆಯಾಗಿದೆ. ಯುವ ಸಮುದಾಯವೀಗ ಇಂತಹ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಾನಾ ರೀತಿಯ ಸಮಸ್ಯೆ ಎರದುರಿಸುತ್ತಿದ್ದಾರೆ.
ಈ ಮಾದಕ ದ್ರವ್ಯ ಸೇವನೆ ತಡೆಗೆ ಸರ್ಕಾರಗಳು, ಸಂಘ ಸಂಸ್ಥೆಗಳು ನಿರಂತರ ಹೋರಾಡುತ್ತಲೇ ಇವೆ. ಆದರೆ ಇದೊಂದು ಅಂತಾರಾಷ್ಟ್ರೀಯ ಜಾಲವಾಗಿ ಪರಿಣಮಿಸಿ ಇದರ ತಡೆ ಸಹ ಸವಾಲುಗಳಿಂದ ಕೂಡಿದೆ. ಇತ್ತೀಚಿನ ವರದಿಯ ಪ್ರಕಾರ ಈ ದೇಶಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬ್ರೆಜಿಲ್, ಅಮೆರಿಕ, ಪ್ಯಾರೀಸ್, ಅಫ್ಘಾನಿಸ್ತಾನ್, ಬಾಮಾಸ್, ಬರ್ಮಾ, ಕೋಸ್ಟರಿಕಾ, ಜಮೈಕಾ, ಪನಾಮಾ, ಪಾಕಿಸ್ತಾನ್, ಪೆರು, ಭಾರತ ಹೀಗೆ ಈ ಸಾಲು ಬೆಳೆಯುತ್ತಲೇ ಹೋಗುತ್ತದೆ.

ಆದ್ರೆ ಈಗೊಂದು ಅಚ್ಚರಿಯ ವಿಚಾರದಲ್ಲಿ ಸಮುದ್ರದಲ್ಲಿರುವ ಅಪಾಯಕಾರಿ ದಾಳಿಕೋರರಾದ ಶಾರ್ಕ್ ಮೀನುಗಳು ಸಹ ಈ ಮಾದಕ ವ್ಯಸನಕ್ಕೆ ಒಳಗಾಗಿವೆಯಂತೆ. ಈ ಸುದ್ದಿ ಕೇಳಿದ್ರೆ ನಿಮಗೂ ಅಚ್ಚರಿ ಎನಿಸಬಹುದು. ಬ್ರೆಜಿಲ್ ಕರಾವಳಿಯಲ್ಲಿರುವ ಶಾರ್ಕ್‌ಗಳು ಕೊಕೇನ್ ಅನ್ನು ಸೇವಿಸುತ್ತಿವೆ ಎಂಬ ಅಚ್ಚರಿಯ ವಿಚಾರ ತಿಳಿದುಬಂದಿದೆ.
ರಿಯೊ ಡಿ ಜನೈರೊ ಬಳಿಯ ಸಮುದ್ರದಲ್ಲಿ 13 ಬ್ರೆಜಿಲಿಯನ್ ಶಾರ್ಪ್‌ನೋಸ್ ಶಾರ್ಕ್‌ಗಳ ಮೇಲೆ ಸಮುದ್ರ ಜೀವಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದೆ. ಅವು ತಮ್ಮ ಸ್ನಾಯುಗಳು ಮತ್ತು ಯಕೃತ್ತಿನಲ್ಲಿ ಹೆಚ್ಚಿನ ಮಟ್ಟದ ಕೊಕೇನ್ ಅನ್ನು ಹೊಂದಿವೆ ಎಂದು ತಿಳಿದುಬಂದಿದೆ.
ಶಾರ್ಕ್‌ಗಳಿಗೆ ಕೊಕೇನ್ ಸಿಕ್ಕಿದ್ದು ಹೇಗೆ?
ಹೀಗಾಗಿ ಶಾರ್ಕ್‌ಗಳು ಸಾಮಾನ್ಯಕ್ಕಿಂತ ಹೆಚ್ಚು ಆಕ್ರಮಣಕಾರಿ, ಹೆಚ್ಚು ಚಲನಶೀಲತೆಯಲ್ಲಿ ಕಂಡುಬಂದಿವೆಯಂತೆ. ಆದರೆ ಶಾರ್ಕ್‌ಗಳು ಈ ಕೊಕೇನ್ ಅನ್ನು ಹೇಗೆ ಸೇವಿಸುತ್ತಿವೆ ಎಂಬುದು ನಿಖರವಾಗಿ ಪತ್ತೆ ಮಾಡಲು ಆಗಿಲ್ಲ. ಕೊಕೇನ್ ಮಾದಕ ದ್ರವ್ಯಗಳನ್ನು ಉತ್ಪಾದಿಸುವ ಅಕ್ರಮ ಪ್ರಯೋಗಾಲಯಗಳ ಒಳಚರಂಡಿಯಿಂದ ಅಥವಾ ಸಂಸ್ಕರಿಸದ ಒಳಚರಂಡಿ ಮೂಲಕ ಈ ಡ್ರಗ್ ಸಮುದ್ರ ಸೇರಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ ಈ ಡ್ರಗ್‌ಗಳನ್ನು ಕಳ್ಳಸಾಗಣೆ ಮಾಡುವಾಗ ಸಮುದ್ರದಲ್ಲಿ ಮುಳುಗುವುದು, ಸಮುದ್ರಕ್ಕೆ ಎಸೆಯಲ್ಪಡುವುದು ಹೀಗೆ ಹಲವು ಕಾರಣದಿಂದ ಸಮುದ್ರ ಸೇರಿದ ಕೊಕೇನ್ ಅನ್ನು ಈ ಶಾರ್ಕ್‌ಗಳು ತಿನ್ನುತ್ತಿವೆ ಎನ್ನಲಾಗಿದೆ. ಮತ್ತೆ ಕೆಲವೊಂದು ಕಡೆ ಸಮುದ್ರದ ತೀರಗಳು ಮಾದಕ ವಸ್ತು ಸೇವನೆಯ ತಾಣವಾಗಿ ಬದಲಾಗಿವೆ. ಸೇವನೆ ಮಾಡುವಾಗ ಎಸೆದಿರುವ ಮಾದಕ ವಸ್ತುಗಳನ್ನು ಈ ಶಾರ್ಕ್‌ಗಳು ಸೇವಿಸುತ್ತಿವೆ ಎಂದಿದ್ದಾರೆ.
ಕೊಕೇನ್ ಪ್ರಾಣಿಗಳಿರಲಿ ಅಥವಾ ಮಾನವರೇ ಆಗಿರಲಿ ನೇರವಾಗಿ ಮೆದುಳನ್ನು ಗುರಿಯಾಗಿಸುತ್ತದೆ, ಮತ್ತು ಇತರ ಪ್ರಾಣಿಗಳಲ್ಲಿ ಹೈಪರ್ಆಕ್ಟಿವ್ ಮತ್ತು ಅನಿಯಮಿತ ನಡವಳಿಕೆಯನ್ನು ಗುರುತಿಸಲಾಗಿದೆ. ಇದು ಒಂದು ಸಾಧ್ಯತೆ ಮತ್ತು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ ಎಂದು ಪರಿಸರವಿಜ್ಞಾನಿ ಡಾ ಎನ್ರಿಕೊ ಮೆಂಡೆಸ್ ಸಗ್ಗಿಯೊರೊ ಹೇಳಿದ್ದಾರೆ.
ರಿಯೊ ಡಿ ಜನೈರೊ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರದಿಂದ ಶಾರ್ಕ್‌ನ ಮರಿಗಳನ್ನು ಹಿಡಿದು ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಸಮುದ್ರದ ಬೇರೆ ಪ್ರಾಣಿಗಳಿಗಿಂತ ಈ ಶಾರ್ಕ್‌ಗಳಲ್ಲಿ ಶೇ.100ರಷ್ಟು ಅಧಿಕ ಕೊಕೇನ್ ಇರುವುದು ಕಂಡುಬಂದಿತ್ತು.
ಅಚ್ಚರಿತ ವಿಚಾರ ಏನೆಂದರೆ ಈ ಮಾದಕ ವಸ್ತು ಹೆಚ್ಚಾಗಿ ಪತ್ತೆಯಾಗಿದ್ದ ಶಾರ್ಕ್‌ಗಳಲ್ಲಿ ದೃಷ್ಟಿ ಸಂಬಂಧಿ ಸಮಸ್ಯೆಗೆ ಅವು ಒಳಗಾಗಿರುವುದು ಪತ್ತೆಯಾಗಿದೆ. ಅವುಗಳ ದೃಷ್ಟಿ ಮಂದವಾಗುವುದು ಇದರ ಅಡ್ಡಪರಿಣಾಮದಲ್ಲಿ ಒಂದಾಗಿದೆ. ಹೀಗಾಗಿ ಅವುಗಳ ಆಹಾರ ಕ್ರಮದಲ್ಲಿ ಬದಲಾವಣೆಯ ಸಾಧ್ಯತೆಯನ್ನ ಗುರುತಿಸಲಾಗಿದೆ.



Click it and Unblock the Notifications
