Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಾಗರದ ದೈತ್ಯ ಶಾರ್ಕ್‌ಗಳಿಗೆ ಮೂಳೆಗಳಿಲ್ಲ ಎಂಬ ಅಚ್ಚರಿ ನಿಮಗೆ ಗೊತ್ತಾ?
ಸಾಗರದಾಳದಲ್ಲಿ ಎಷ್ಟೊಂದು ವಿಚಿತ್ರಗಳು ಇಂದಿಗೂ ನಮಗೆ ಅಚ್ಚರಿ ತರುತ್ತವೆ. ಇನ್ನು ಸಾಗರದ ದೈತ್ಯ ಜೀವಿಗಳ ಕುರಿತ ಮಾಹಿತಿಗಳು ಕೆಲವೊಮ್ಮೆ ಕುತೂಹಲ ಹಾಗೂ ಅಚ್ಚರಿ ಹುಟ್ಟಿಸುತ್ತವೆ. ನೀವು ಶಾರ್ಕ್‌ಗಳ ಬಗ್ಗೆ ಕೇಳಿರುತ್ತೀರಿ. ಸಾಗರದಲ್ಲಿ ಅತ್ಯಂತ ಅಪಾಯಕಾರಿ ಮೀನಿನ ಜಾತಿಗೆ ಸೇರಿದವು. ಅವುಗಳ ವೇಗ ಹಾಗೂ ಹಲ್ಲುಗಳ ರಚನೆಯ ಜೊತೆಗೆ ದೈತ್ಯ ದೇಹ ಅವುಗಳನ್ನು ಅಪಾಯಕಾರಿ ಮೀನುಗಳ ಪಟ್ಟಿಯಲ್ಲಿ ಇರುವಂತೆ ಮಾಡಿದೆ.
ಶಾರ್ಕ್‌ಗಳಲ್ಲಿ ಹಲವು ಬಗೆಗಳಿವೆ. ವಿಶ್ವದಲ್ಲಿ ಶಾರ್ಕ್‌ಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹಾಗೂ ಶಾಶ್ವತ ಅಂಗವೈಖಲ್ಯದಂತಹ ಅಪಾಯಗಳಿಗೆ ಒಳಗಾಗುವವರ ಸಂಖ್ಯೆ ಲಕ್ಷದಲ್ಲಿದೆ. ಆದ್ರೆ ಶಾರ್ಕ್‌ಗಳ ಕುರಿತ ಕೆಲವು ಅಚ್ಚರಿಯ ವಿಚಾರಗಳು ನಿಮಗೆ ಅಚ್ಚರಿ ಮೂಡಿಸಲದೆ.

ದೈತ್ಯ ದೇಹದ ಈ ಶಾರ್ಕ್‌ಗಳು ಮೂಳೆಗಳ ಹೊಂದಿವೆಯೇ? ಈ ರೀತಿ ಪ್ರಶ್ನೆ ಕೇಳಿದರೆ ಮೂಳೆಗಳಿಲ್ಲದೆ ಇಷ್ಟೊಂದು ದೊಡ್ಡ ಜೀವಿ ಹೇಗೆ ಬದುಕಲು ಸಾಧ್ಯ ಎಂಬ ಉತ್ತರ ಬರಬಹುದು, ಆದ್ರೆ ನಿಜಾಂಶವೇನೆಂದರೆ ಈ ಶಾರ್ಕ್‌ಗಳಿಗೆ ಮೂಳೆ ಇರುವುದಿಲ್ಲ. ಹೌದು ಈ ಉತ್ತರ ನಿಮಗೂ ಅಚ್ಚರಿ ಹುಟ್ಟಿಸಬಹುದು. ಅಷ್ಟೊಂದು ದೈತ್ಯ ಜೀವ ಹೊಂದಿದ್ದರೂ ಶಾರ್ಕ್‌ಗಳಿಗೆ ಮೂಳೆಗಳಿಲ್ಲ.
ಮೂಳೆ ಇಲ್ಲದೆ ಹೇಗೆ ಬದುಕಿವೆ?
ಶಾರ್ಕ್‌ಗಳು ತಮ್ಮ ದೇಹದಲ್ಲಿ ಮೂಳೆಗಳ ಹೊಂದಿಲ್ಲ ಬದಲಿಗೆ ಕಾರ್ಟಿಲೆಜ್ ಹೊಂದಿರುತ್ತವೆ. ಕಾರ್ಟಿಲೆಜ್ ಅಂದರೆ ಸಾಮಾನ್ಯ ಭಾಷೆಯಲ್ಲಿ ನಾವು ಮೃದ್ವಸ್ಥಿ ಎಂದು ಕರೆಯಬಹುದು. ಇನ್ನೂ ಸರಳೀಕರಿಸುವುದಾದರೆ ಅದನ್ನು ಮೃದು ಮೂಳೆಗಳು ಎಂದು ಕರೆಯಬಹುದು. ಕಾರ್ಟಿಲೆಜ್‌ಗಳನ್ನು ಮಾಂಸ ಮತ್ತು ಮೂಳೆಗಳ ಸಾಲಿಗೆ ಸೇರಿಸುವುದಿಲ್ಲ. ಏಕೆಂದರೆ ಮೂಳೆಗಳಂತೆ ಇದು ಗಟ್ಟಿಯಾಗಿರುವುದಿಲ್ಲ.
ಕಾರ್ಟಿಲೆಜ್ ಮೂಳೆ ಅಲ್ಲವೇ?
ಕಾರ್ಟಿಲೆಜ್ ಅಥವಾ ಮೃದ್ವಸ್ಥಿ ಮೂಳೆಯಲ್ಲ. ಬದಲಿಗೆ ಮೂಳೆಯಂತೆ ಇರುವ ಗಡಸು ಹೊಂದಿರುವ ಅಂಶದಿಂದ ಸೃಷ್ಟಿಯಾದ ಒಂದು ಖಂಡ ಎಂದು ಕರೆಯಬಹುದು. ಮಾನವರಲ್ಲೂ ಈ ಕಾರ್ಟಿಲೆಜ್ ಕಂಡುಬರುತ್ತದೆ. ನಮ್ಮ ಮೂಗು, ಕಿವಿ ಹಾಗೂ ಕೀಲುಗಳಲ್ಲಿ ಇದು ಕಂಡುಬರುತ್ತದೆ. ಕಾರ್ಟಿಲೆಜ್ ಒಂದು ಕಠಿಣ, ಆದರೆ ಹೊಂದಿಕೊಳ್ಳುವ ಸಂಯೋಜಕ ಅಂಗಾಂಶವಾಗಿದೆ.
ಇನ್ನು ತಿಮಿಂಗಿಲ ಶಾರ್ಕ್‌ಗಳು ಮೂಳೆಗಳೇ ಇಲ್ಲದೆ 40 ಸಾವಿರ ಕೆಜಿ ವರೆಗೂ ತೂಗುತ್ತವೆ. ಹಾಗೆ 61.7 ಅಡಿ ಉದ್ದದವರೆಗೂ ಅವು ಬೆಳೆಯುತ್ತವೆ. ಆದ್ರೆ ಮೂಳೆಗಳಿಲ್ಲದೆ ಬೆಳೆಯುವುದು ವಿಶೇಷವಾಗಿದೆ. ಹೀಗಾಗಿ ಶಾರ್ಕ್‌ಗಳ ಚಲನೆ ವೇಗ ಪಡೆಯುತ್ತವೆ. ದೇಹವನ್ನು ಎಷ್ಟು ಬೇಕಾದರು ಬಗ್ಗಿಸುವ ಸಾಮರ್ಥ್ಯ ಹೊಂದಿರುತ್ತವೆ.
ಈ ಕಾರ್ಟಿಲೆಜ್ ಹೊಂದಿರುವ ಮೀನುಗಳು ಹೆಚ್ಚು ವೇಗವಾಗಿ ಈಜುತ್ತವೆ. ದೇಹದ ತೂಕ ಹಾಗೂ ನೀರಿನ ಸಾಂದ್ರತೆಯು ಕೂಡ ಈ ಮೀನುಗಳಿಗೆ ಸಾಗರದಾಳದಲ್ಲಿ ಬದುಕಲು ಅನುವು ಮಾಡಿಕೊಡುತ್ತವೆ. ಆದ್ರೆ ಶಾರ್ಕ್‌ಗಳು ಈಗ ಗಟ್ಟಿಯಾದ ಮೂಳೆಗಳನ್ನು ಅಭಿವೃದ್ಧಿ ಪಡಿಸಿವೆ, ಅವುಗಳ ದೇಹದಲ್ಲಿಯೂ ಗಟ್ಟಿಯಾದ ಮೂಳೆಗಳು ಪತ್ತೆಯಾಗಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.
ನಮ್ಮ ದೇಹದಲ್ಲಿ ಈ ಕಾರ್ಟಿಲೆಜ್‌ಗಳಿಗೆ ಹಾನಿಯಾದರೆ ದೇಹದ ಬೇರೊಂದು ಭಾಗದಿಂದ ಈ ಕಾರ್ಟಿಲೆಜ್ ರೂಪಿಸುವ ಕೋಶಗಳನ್ನು ಬಳಸಿಕೊಂಡು ಮತ್ತೆ ಕಾರ್ಟಿಲೆಜ್ ಬೆಳೆಯುವಂತೆ ಮಾಡಬಹುದು. ಆದರೆ ಮೂಳೆಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ಮುರಿದ ಮೂಳೆಯನ್ನು ಜೋಡಿಸಬಹುದೇ ಹೊರತು ಹೊಸದಾಗಿ ಮೂಳೆಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ.



Click it and Unblock the Notifications
