ಶನಿ, ರಾಹು, ಕೇತು 3 ಗ್ರಹಗಳ ಹಿಮ್ಮುಖ ಚಲನೆ: 6 ತಿಂಗಳವರೆಗೆ 4 ರಾಶಿಯವರು ತುಂಬಾನೇ ಜಾಗ್ರತೆ

ಈ ಜೂನ್ 17ಕ್ಕೆ ಅಂದರೆ ಶನಿವಾರ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ತುಂಬಾ ಪ್ರಮುಖವಾಗಿದೆ. ಏಕೆಂದರೆ ಈ ದಿನ ಪ್ರಮುಖ ಗ್ರಹಗಳು ಹಿಮ್ಮುಖ ಚಲನೆ ಮಾಡುತ್ತಿದೆ. ಈ ದಿನ ಶನಿ, ರಾಹು ಮತ್ತು ಕೇತುಗಳ ಹಿಮ್ಮುಖ ಚಲನೆಯು ಪ್ರಾರಂಭವಾಗಲಿದೆ. ಜೂನ್ 17 ರಂದು ರಾತ್ರಿ 10.56 ಕ್ಕೆ ಶನಿದೇವನು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಶನಿಯು ನವೆಂಬರ್ 3, ಮಧ್ಯಾಹ್ನ 12.31 ರವರೆಗೆ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದೆ.

ಅಲ್ಲದೆ ರಾಹುವು ಮೇಷದಲ್ಲಿ ಹಿಮ್ಮೆಟ್ಟುವುದು, ಕೇತುವು ತುಲಾದಲ್ಲಿ ಹಿಮ್ಮೆಟ್ಟಲಿದೆ. ರಾಹು ಮತ್ತು ಕೇತು 6 ತಿಂಗಳವರೆಗೆ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಈ ಪ್ರಮುಖ ಗ್ರಹಗಳ ಹಿಮ್ಮುಖ ಚಲನೆ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲೂ ಈ ಗ್ರಹಗಳ ಹಿಮ್ಮುಖ ಚಲನೆ ಈ ರಾಶಿಗಳ ಮೇಲೆ ಋಣಾತ್ಮಕ ಪ್ರಭಾವ ಬೀರಲಿದ್ದು ಈ ರಾಶಿಯವರು ಮುಂದಿನ 6 ತಿಂಗಳು ಜಾಗ್ರತೆ ಶನಿ, ರಾಹು-ಕೇತು ಹಿಮ್ಮುಖ ಚಲನೆ: ಯಾವೆಲ್ಲಾ ರಾಶಿಗಳು ಜಾಗ್ರತೆ?

Shani, Rahu, Kethu Retrograde: Unlucky To These Zodiac Signs In Kannada

ಕರ್ಕ ರಾಶಿ:

ಶನಿ, ರಾಹು ಮತ್ತು ಕೇತುಗಳ ಹಿಮ್ಮುಖ ಚಲನೆಯಿಂದಾಗಿ ಕರ್ಕ ರಾಶಿಯವರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಬಹುದು, ನೀವು ಕೆಲಸ ಬಿಡಲು ಕೂಡ ಯೋಚಿಸಬಹುದು, ಆದರೆ ಆತುರ ಪಡಬೇಡಿ ಎಂಬ ಸಲಹೆ ನೀಡಲಾಗುವುದು. ಇದಲ್ಲದೆ ಈ ಮೂರು ಗ್ರಹಗಳ ಹಿಮ್ಮುಖ ಚಲನೆ ಸಂಸಾರದ ಮೇಲೆ ಕೂಡ ಋಣಾತ್ಮಕ ಪ್ರಭಾವ ಬೀರುವುದು. ಈ ಸಮಯದಲ್ಲಿ ಪತಿ, ಪತ್ನಿ ನಡುವೆ ಸಮಸ್ಯೆ ಉಂಟಾಗುವುದು. ಸಂಸಾರದಲ್ಲಿ ನೆಮ್ಮದಿ ದೂರಾಗುವುದು. ಮುಂದಿನ 6 ತಿಂಗಳುಗಳನ್ನು ನೀವು ಎಚ್ಚರಿಕೆಯಿಂದ ಕಳೆಯಬೇಕಾಗುತ್ತದೆ. ಈ ಅವಧಿಯಲ್ಲಿ ಆರ್ಥಿಕವಾಗಿ ಕೂಡ ಪ್ರಭಾವ ಬೀರಲಿದೆ. ಈ ಅವಧಿಯಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಸಾಲ ಮಾಡಿದ್ದರೆ ಸಾಲ ಮರುಪಾವತಿ ಬಗ್ಗೆ ಕೂಡ ಒತ್ತಡ ಬರಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.

ಸಿಂಹ ರಾಶಿ :

ಸಿಂಹ ರಾಶಿಯವರು ಶನಿ, ಕೇತು, ರಾಹು ಗ್ರಹಗಳ ಹಿಮ್ಮುಖ ಚಲನೆ ಸಮಯದಲ್ಲಿ ತೊಂದರೆಗೊಳಗಾಗಬಹುದು ಏಕೆಂದರೆ ಈ ಸಮಯದಲ್ಲಿ ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗುವುದು. ಹೊಸ ಉದ್ಯೋಗ ಪ್ರಾರಂಭಿಸಲು ಈ ಸಮಯ ಸೂಕ್ತವಲ್ಲ. ಅದೇ ಸಮಯದಲ್ಲಿ, ಉದ್ಯಮಿಗಳು ಹೂಡಿಕೆ ಮತ್ತು ಹಣದ ಕಾರಣಕ್ಕೆ ತುಂಬಾ ಚಿಂತೆಗೊಳಗಾಗುತ್ತಾರೆ. ನ್ಯಾಯಾಲಯದಲ್ಲಿ ಏನಾದರೂ ಪ್ರಕರಣವಿದ್ದರೆ ತುಂಬಾ ಒತ್ತಡ ಉಂಟು ಮಾಡಲಿದೆ. ಅಲ್ಲದೆ ಈ ಅವಧಿಯಲ್ಲಿ ಕಾನೂನುಬಾಹಿರ ಚಟುವಟಿಕೆಯಿಂದ ದೂರವಿರಬೇಕು. ಈ ಸಮಯದಲ್ಲಿ, ನೀವು ಯೋಗ ಮತ್ತು ಪ್ರಾಣಾಯಾಮವನ್ನು ಮಾಡಬೇಕು, ಇದು ಒತ್ತಡವನ್ನು ನಿವಾರಿಸಲು ಸಹಕಾರಿ. ಈ ಅವಧಿಯಲ್ಲಿ ಯೋಚಿಸದೆ ಯಾವುದೇ ಹೂಡಿಕೆ ಮಾಡಲು ಯೋಗಬೇಡಿ. ಅಲ್ಲದೆ ಈ ಅವಧಿಯಲ್ಲಿ ಆರ್ಥಿಕ ತೊಂದರೆ ಕೂಡ ಉಂಟಾಗಬಹುದು. ಬರಬೇಕಾಗಿದ್ದ ಹಣ ಕೈ ಸೇರದೆ ಚಿಂತೆ ಹೆಚ್ಚಾಗಬಹುದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಆತುರಪಡಬೇಡಿ, ಎಚ್ಚರಿಕೆಯಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ವೃಶ್ಚಿಕ ರಾಶಿ:

ಶನಿ, ರಾಹು ಮತ್ತು ಕೇತುಗಳ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯವರಿಗೆ ತೊಂದರೆಯನ್ನು ಉಂಟು ಮಾಡಬಹುದು. ಈ ಅವಧಿಯಲ್ಲಿ ಪಾಲುದಾರಿಕೆಯಲ್ಲಿ ಯಾವುದೇ ಕೆಲಸ ಮಾಡಬೇಡಿ. ಪಾಲುದಾರಿಕೆಯಲ್ಲಿ ಈಗಾಗಲೇ ವ್ಯಾಪಾರ ಮಾಡುತ್ತಿದ್ದರೆ ಅನಗ್ಯತ ಚರ್ಚೆಯಿಂದ ದೂರವಿರಿ. ಯಾವುದೇ ಕಾಗದಕ್ಕೆ ಸಹಿ ಮಾಡುವ ಮೊದಲು ಸರಿಯಾಗಿ ಓದಿ ನಂತರವಷ್ಟೇ ಮಾಡಿ, ಅರ್ಥವಾಗದ ವಿಚಾರಗಳಿದ್ದರೆ ಕೇಳಿ ತಿಳಿದುಕೊಂಡ ಬಳಿಕವಷ್ಟೇ ಮಾಡಿ. ಈ ಸಮಯದಲ್ಲಿ, ನೀವು ದುಂದುಗಾರಿಕೆಯನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಆರ್ಥಿಕ ಸ್ಥಿತಿಯು ದುರ್ಬಲವಾಗಬಹುದು. ಉಳಿತಾಯದ ಕೊರತೆಯಿಂದ ಹಣದ ಚಿಂತೆ ಕಾಡಬಹುದು. ಹಣದ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ, ಇಲ್ಲದಿದ್ದರೆ ಹಣ ನಷ್ಟವಾಗಬಹುದು.

ಮೀನ ರಾಶಿ:

ಶನಿ, ರಾಹು ಮತ್ತು ಕೇತುಗಳ ಹಿಮ್ಮುಖ ಚಲನೆಯಿಂದಾಗಿ ಈ ಅವಧಿಯಲ್ಲಿ ಮೀನ ರಾಶುಯವರು ಹಲವು ಸವಾಲುಗಳನ್ನು ಎದುರಿಸಬಹುದು. ಅಲ್ಲದೆ ಮೀನ ರಾಶಿಯವರಿಗೆ ಶನಿ ಸಾಡೇಸಾತಿ ಕೂಡ ಇದೆ. ಇದರಿಂದಾಗಿ ಆರೋಗ್ಯ, ಹಣಕಾಸು, ಸಂಬಂಧದ ಮೇಲೆ ಪರಿಣಾಮ ಬೀರುವುದು. ಮೊದಲನೆಯದಾಗಿ, ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ. ನಿಮ್ಮ ಮಾತು ಮತ್ತು ನಡವಳಿ ಕಡೆ ಗಮನಹರಿಸಿ, ಸಂಯಮದಿಂದ ವರ್ತಿಸಿ, ಇಲ್ಲದಿದ್ದರೆ ಸಂಬಂಧವು ಹಳಿಸಬಹುದು. ನಿಮ್ಮ ನಿಯಂತ್ರಣದಲ್ಲಿಲ್ಲದ ಯಾವುದರ ಬಗೆ ಕೂಡ ಅತಿಯಾಗಿ ಯೋಚಿಸದಿರುವುದು ಒಳ್ಳೆಯದು. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಧಾರ್ಮಿಕ ಕಾರ್ಯಗಳಲ್ಲಿ ಸಮಯ ಕಳೆಯಬಹುದು. ಇದರಿಂದ ಒತ್ತಡ ಕಡಿಮೆಯಾಗಿ ಮಾನಸಿಕ ನೆಮ್ಮದಿಯೂ ಸಿಗುತ್ತದೆ.

English summary

Shani, Rahu, Kethu Retrograde: Unlucky To These Zodiac Signs In Kannada

Shani, Rahu, Kethu Retrograde: Unlucky to these zodiac signs, read on.
X
Desktop Bottom Promotion