Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಶನಿ ಜಯಂತಿ 2023 : ದಿನಾಂಕ, ಸಮಯ ಮತ್ತು ಶನಿದೋಷ ನಿವಾರಣೆ ಮಾಡೋದು ಹೇಗೆ?
ಶನಿ ದೇವನನ್ನು ಸ್ಮರಣೆ ಮಾಡುವ ಸಲುವಾಗಿ ಶನಿ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ ಶನಿ ಜಯಂತಿಯನ್ನು ಜೇಷ್ಠ ತಿಂಗಳಿನಲ್ಲಿ ಆಚರಣೆ ಮಾಡಲಾಗುತ್ತದೆ. ಈ ವರ್ಷ ಮೇ 19, 2023 ರಂದು ಆಚರಣೆ ಮಾಡಲಾಗುತ್ತಿದೆ. ನಮ್ಮ ಜೀವನದಲ್ಲಿ ಸಂಕಷ್ಟಗಳು ನಿವಾರಣೆಯಾಗಬೇಕಾದರೆ ಶನಿ ದೇವನನ್ನು ಸ್ತುತಿಸುವುದು ತುಂಬಾನೇ ಮುಖ್ಯವಾಗುತ್ತದೆ.
ಶನಿ ದೇವನು ವ್ಯಕ್ತಿಯೊಬ್ಬನ ಜೀವನದಲ್ಲಿ ಅಗಾಧವಾದ ಪರಿಣಾಮವನ್ನು ಬೀರುತ್ತಾನೆ. ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶನಿಯನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲಾ ಪರಿಹಾರವಾಗಲಿದೆ ಅನ್ನೋ ನಂಬಿಕೆಯಿದೆ. ಇನ್ನೂ ಸಾಡೇಸಾತಿ ಸಮಸ್ಯೆ ಇರುವವರು ಶನಿ ಜಯಂತಿಯನ್ನು ಸರಿಯಾದ ವಿಧಿ ವಿಧಾನಗಳನ್ನು ಅನುಸರಿಸಿ ಶನಿದೇವನನ್ನು ಪೂಜಿಸಿದರೆ ಸಮಸ್ಯೆಗಳೆಲ್ಲಾ ಬಗೆಹರಿದು ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿದೆ.

ಶನಿ ಜಯಂತಿಯ ಸಮಯ ಹಾಗೂ ಮುಹೂರ್ತ :
ತಿಂಗಳು ಮತ್ತು ದಿನ : ಜೇಷ್ಠ ತಿಂಗಳು ಮತ್ತು ಅಮಾವಾಸ್ಯೆ ದಿನ
ದಿನಾಂಕ : ಮೇ 19, ಶುಕ್ರವಾರ
ಮುಹೂರ್ತ : ಬೆಳಗ್ಗೆ 09:42 ಕ್ಕೆ ಆರಂಭ ರಾತ್ರಿ 09:22 ಕ್ಕೆ ಅಂತ್ಯ
ಶನಿ ಜಯಂತಿಯ ಮಹತ್ವ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ಕರ್ಮಫಲಾದಿಪತಿ ಎಂದು ಕರೆಯಲಾಗುತ್ತದೆ. ಹಾಗೂ ಈತನಿಗೆ ನ್ಯಾಯದ ಸ್ಥಾನ ನೀಡಲಾಗಿದೆ. ಶನಿ ಸಾಡೇಸತಿಯು ವಿವಿಧ ರಾಶಿಚಕ್ರಗಳ ಮೇಲೆ ಪ್ರಭಾವ ಬರಲಿದೆ. ಪ್ರತಿಯೊಂದು ರಾಶಿಗಳ ಮೇಲೆ ಸಾಡೇಸಾತಿಯ ಪ್ರಭಾವ ಸುಮಾರು ಎರಡುವರೆ ವರ್ಷಗಳ ಇರಲಿದೆ. ಇದರಿಂದಾಗಿ ಈ ಸಮಯದಲ್ಲಿ ಮನುಷ್ಯ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಯಾರ ಜೀವನದಲ್ಲಿ ಸಾಡೇ ಸಾತಿದೋಷ ಇದೆ ಅವರು ಇದರ ಪರಿಣಾಮವನ್ನು ಕಡಿಮೆ ಮಾಡಲು ಶನಿ ಜಯಂತಿಯಂದು ಶನಿದೇವನನ್ನು ಪೂಜಿಸಿದ್ರೆ ಅದರ ಪ್ರಭಾವವನ್ನು ಕಡಿಮೆ ಮಾಡಬಹುದಂತೆ.
ಶನಿ ಜಯಂತಿಯಂದು ಪೂಜೆ ಮಾಡುವ ವಿಧಾನ
ಶನಿ ಜಯಂತಿಯ ದಿನ ಬೆಳಗ್ಗೆ ಬೇಗ ಎದ್ದು ಪುಣ್ಯಸ್ನಾನ ಮಾಡಿ ನಂತರ ಧ್ಯಾನ ಮಾಡಿ. ಇದಾದ ಬಳಿಕ ಸೂರ್ಯ ದೇವರನ್ನು ಪೂಜಿಸುವಾಗ ತಾಮ್ರದ ಪಾತ್ರೆಯಿಂದ ಅರ್ಘ್ಯವನ್ನು ಅರ್ಪಿಸಬೇಕು. ಇನ್ನೂ ಶನಿ ದೇವರಿಗೆ ಸಾಸಿವೆ ಎಣ್ಣೆ, ನೀಲಿ ಹೂವುಗಳು ಮತ್ತು ಕಪ್ಪು ಎಳ್ಳನ್ನು ಅರ್ಪಿಸಿ. ಇದಾದ ನಂತರ ಶನಿ ದೇವರಿಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ 'ಓಂ ಶಾನ ಶನಿಶ್ಚರಾಯ ನಮಃ' ಎಂಬ ಮಂತ್ರವನ್ನು ಜಪಿಸಿ.
ಶನಿ ದೋಷ ನಿವಾರಣೆಗೆ ಈ ರೀತಿ ಪೂಜೆ ಮಾಡಿ
ಯಾರ ಜಾತಕದಲ್ಲಿ ಶನಿ ದೋಷವಿದೆಯೋ ಅವರು ಶನಿ ಜಯಂತಿಯಂದು ಶನಿದೇವನಿಗೆ ಪೂಜೆ ಸಲ್ಲಿಸಬೇಕು. ಧಾರ್ಮಿಕ ನಂಬಿಕೆಯ ಪ್ರಕಾರ ಶನಿ ಜಯಂತಿಯ ದಿನದಂದು ನೀವು ಸಾಸಿವೆ ಎಣ್ಣೆಯನ್ನು ಶನಿ ದೇವರಿಗೆ ಅರ್ಪಿಸಿ, ನಿಮ್ಮ ಮನಸ್ಸಿನಲ್ಲಿ ಶನಿ ಮಂತ್ರವನ್ನು ಜಪಿಸಬೇಕು. ನಂತರ ಏಳು ಬಾರಿ ಪ್ರದಕ್ಷಿಣೆ ಹಾಕಬೇಕು. ಶನಿ ಜಯಂತಿಯ ದಿನ ಈ ರೀತಿ ಪೂಜೆ ಸಲ್ಲಿಕೆ ಮಾಡುವುದರಿಂದ ಶನಿ ಸಾಡೇಸಾತಿಯ ಪ್ರಭಾವ ಕಡಿಮೆಯಾಗುತ್ತೆ ಎಂಬ ನಂಬಿಕೆಯಿದೆ.
ಒಟ್ಟಿನಲ್ಲಿ ಶನಿ ಜಯಂತಿಯ ದಿನ ಈ ರೀತಿ ಪೂಜಾ ವಿಧಿ ವಿಧಾನಗಳನ್ನು ಭಕ್ತಿಯಿಂದ ನೆರವೇರಿಸಿದರೆ ಯಾವುದೇ ರೀತಿ ಸಮಸ್ಯೆ ಎದುರಾಗೋದಿಲ್ಲವಂತೆ.



Click it and Unblock the Notifications

