Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶನಿ ಜಯಂತಿ 2023: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ಮೇ 19 ರಂದು ಈ ಬಾರಿಯ ಶನಿ ಜಯಂತಿಯನ್ನು ಆಚರಣೆಯನ್ನು ಮಾಡಲಾಗುತ್ತದೆ. ಶನಿ ಜಯಂತಿಯ ದಿನದಂದು ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿದ್ದುಈ ಬಾರಿಯ ಶನಿ ಜಯಂತಿಯಿಂದ ಕೆಲವು ರಾಶಿಯವರು ಶುಭ ಫಲವನ್ನು ಪಡೆಯಲಿದ್ದಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ಶನಿ ಜಯಂತಿಯ ಪರಿಣಾಮ ವೃಷಭ ರಾಶಿಯವರಿಗೆ ತುಂಬಾನೇ ಒಳ್ಳೆಯದಾಗಲಿದೆ. ಈ ರಾಶಿಯ ಅಧಿಪತಿ ಶುಕ್ರ ಮತ್ತು ಇದು ಶನಿಯ ಸ್ನೇಹಿ ಗ್ರಹವಾಗಿದೆ. ಹೀಗಾಗಿ ಶನಿಯ ಆಶಿರ್ವಾದ ವೃಷಭ ರಾಶಿಯವರ ಮೇಲೆ ಇರಲಿದೆ ಎಂದು ನಂಬಲಾಗಿದೆ. ವೃಷಭ ರಾಶಿಯವರಿಗೆ ಶನಿ ಜಯಂತಿಯಿಂದ ಶುಭ ಫಲ ಸಿಗಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ಸಂಪತ್ತು, ಸ್ಥಾನ ಮತ್ತು ಗೌರವವನ್ನು ಪಡೆಯಲಿದ್ದಾರೆ. ಶನಿಯ ಕೃಪೆಯಿಂದ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಶನಿ ಜಯಂತಿಯು ತುಂಬಾ ಶುಭಕರವಾಗಿರುತ್ತದೆ. ಇದರ ಪರಿಣಾಮದಿಂದಾಗಿ ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿಮ್ಮ ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ. ನಿಮಗೆ ಆರ್ಥಿಕ ಲಾಭವಾಗಲಿದೆ. ನೀವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.
ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದು ಈ ರಾಶಿಯಲ್ಲಿ ಶನಿಯು ಯಾವಾಗಲೂ ಉತ್ಕೃಷ್ಟ ಸ್ಥಿತಿಯಲ್ಲಿರುತ್ತಾನೆ. ತುಲಾ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದ ಇರುತ್ತದೆ. ತುಲಾ ರಾಶಿಯವರಿಗೆ ಶನಿ ಜಯಂತಿಯ ದಿನದಂದು ಶುಭ ಫಲಗಳು ದೊರೆಯುತ್ತವೆ. ಶನಿ ಜಯಂತಿಯ ಶುಭ ಯೋಗದಿಂದ ತುಲಾ ರಾಶಿಯವರ ಬಾಳಲ್ಲಿ ಯಶಸ್ಸು, ಧನ, ಕೀರ್ತಿ ಮತ್ತು ಸಂತೋಷ ದೊರೆಯುತ್ತದೆ. ಈ ರಾಶಿಯವರು ಯಾವಾಗಲೂ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಬೇಕು. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿ. ಶನಿ ಜಯಂತಿಯು ಕುಂಭ ರಾಶಿಯವರಿಗೆ ಸಮಾಧಾನಕರ ಸುದ್ದಿ ತರಲಿದೆ. ಈ ಮಂಗಳಕರ ಯೋಗದಿಂದ ನೀವು ಸಂಪತ್ತನ್ನು ಪಡೆಯುತ್ತೀರಿ. ನಿಮ್ಮ ಶ್ರಮದಿಂದ ನೀವು ಪ್ರೀತಿ ಮತ್ತು ಗೌರವದ ಫಲವನ್ನು ಪಡೆಯುತ್ತೀರಿ. ಕುಂಭ ರಾಶಿಯವರಿಗೆ ಶನಿ ಜಯಂತಿಯಂದು ವಿಶೇಷ ಲಾಭ ದೊರೆಯಲಿದೆ.
ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ ಮತ್ತು ಮಕರ ರಾಶಿಯವರ ಮೇಲೆ ಯಾವಾಗಲೂ ಶನಿ ದೇವನ ಕೃಪೆ ಇದ್ದೇ ಇರುತ್ತದೆ. ಶನಿಯ ಪ್ರಭಾವದಿಂದಾಗಿ ಮಕರ ರಾಶಿಯವರ ನಾಯಕತ್ವದ ಸಾಮರ್ಥ್ಯ ಸುಧಾರಿಸುತ್ತದೆ. ಶನಿ ಜಯಂತಿಯ ಶುಭ ಯೋಗದಿಂದ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದುತ್ತೀರಿ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಶನಿ ಜಯಂತಿಯ ಲಾಭವೂ ಸಿಗಲಿದೆ.



Click it and Unblock the Notifications

