Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಮಾಸಿಕ ಭವಿಷ್ಯ: ಸೆಪ್ಟೆಂಬರ್ ಮಿಥುನ ರಾಶಿಯವರಿಗೆ ಈ ಕಾರಣಕ್ಕೆ ಅದೃಷ್ಟದ ತಿಂಗಳಾಗಿದೆ
ಸೆಪ್ಟೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ಈ ತಿಂಗಳು ಮಿಥುನ ರಾಶಿಯವರಿಗೆ ಹೇಗಿರಲಿದೆ? ನಿಮ್ಮ ವೃತ್ತಿ ಜೀವನ, ವೈಯಕ್ತಿಕ ಬದುಕು, ಆರ್ಥಿಕ ಜೀವನ, ಆರೋಗ್ಯ ಜೀವನ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ:
ವೃತ್ತಿ ಜೀವನ
ನೀವು ವೃತ್ತಿ ಕ್ಷೇತ್ರದಲ್ಲಿ ಮಿಥುನ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು, ಏಕೆಂದರೆ ಈ ತಿಂಗಳು ವೃತ್ತಿ ಗ್ರಹವಾದ ಶನಿಯು ಒಂಬತ್ತನೇ ಮನೆಯಲ್ಲಿ ಕುಳಿತಿದ್ದಾನೆ, ಈ ಕಾರಣದಿಂದಾಗಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು, ಗುರು ಕೂಡ ಅನುಕೂಲಕರವಾದ ಸ್ಥಾನದಲ್ಲಿ ಇರುವುದರಿಂದ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಬಹುದು ಮತ್ತು ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.

ರಾಹು ಮತ್ತು ಗುರುಗಳ ಸಂಯೋಜನೆಯಿಂದಾಗಿ ವೃತ್ತಿಜೀವನದಲ್ಲಿಅನೇಕ ಉತ್ತಮ ಅವಕಾಶಗಳನ್ನುಪಡೆಯುವಿರಿ. ಬುಧನು ನಾಲ್ಕನೇ ಮನೆಯಲ್ಲಿ ಕುಳಿತಿದ್ದಾನೆ, ಇದರ ಪರಿಣಾಮವಾಗಿ ವ್ಯಾಪಾರ ಕ್ಷೇತ್ರದಲ್ಲಿ ಲಾಭವನ್ನು ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಲಾಭ ಗಳಿಸುತ್ತೀರಿ. ಈ ತಿಂಗಳಿನಲ್ಲಿ ಹೊಸ ವ್ಯವಹಾರ ಯೋಜನೆ ಮಾಡುವಿರಿ
ಆರ್ಥಿಕ ಜೀವನ
ಈ ತಿಂಗಳಿನಲ್ಲಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ವಿತ್ತೀಯ ಪ್ರಯೋಜನಗಳನ್ನು ಪಡೆಯಬಹುದು, ಗುರುವಿನ ಅನುಕೂಲಕರ ಸ್ಥಾನದಿಂದಾಗಿ ಸಂಪತ್ತು ಹೆಚ್ಚಾಗುವ ಸಾಧ್ಯತೆಯಿದೆ. ಹನ್ನೊಂದನೇ ಮನೆಯಲ್ಲಿ ರಾಹು ಇರುವುದರಿಂದ ಹಠಾತ್ ಹಣದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಪೂರ್ವಜರ ಆಸ್ತಿಯಿಂದ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ ಈ ಅವಧಿಯಲ್ಲಿ ಲಾಭವನ್ನು ಗಳಿಸಬಹುದು, ಆದರೆ ರಾಹುವಿನ ಅನುಕೂಲಕರ ಸ್ಥಾನದಿಂದಾಗಿ, ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.
ಮತ್ತೊಂದೆಡೆ, ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಈ ತಿಂಗಳು ಉತ್ತಮವಾಗಿದೆ. ಹನ್ನೊಂದನೇ ಮನೆಯಲ್ಲಿ ಗುರು ಮತ್ತು ರಾಹುಗಳ ಸಂಯೋಗದಿಂದಾಗಿ ಉತ್ತಮ ಲಾಭ ಗಳಿಸಬಹುದು. ಈ ತಿಂಗಳು ವ್ಯಾಪಾರಸ್ಥರು ಅನೇಕ ಅವಕಾಶಗಳನ್ನು ಪಡೆಯಬಹುದು. ಹೊರಗುತ್ತಿಗೆ ವ್ಯವಹಾರ ಮಾಡಲು ಅವಕಾಶ ಸಿಗಬಹುದು. .
ಶುಕ್ರನು ಐದನೇ ಮನೆಯ ಅಧಿಪತಿಯಾಗಿ ಮೂರನೇ ಮನೆಯಲ್ಲಿ ಕುಳಿತಿದ್ದಾನೆ, ಈ ಕಾರಣದಿಂದಾಗಿ ನೀವು ಕೆಲಸದ ವಿಷಯಕ್ಕೆ ಪ್ರಯಾಣದ ಮಾಡಿದರೆ ಅದರಿಂದ ಧನಲಾಭವಾಗಲಿದೆ.
ಆರೋಗ್ಯ
ಈ ತಿಂಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಗುರುವು ಮೇಷ ರಾಶಿಯ ಹನ್ನೊಂದನೇ ಮನೆಯಲ್ಲಿ ರಾಹು ಜೊತೆ ಅನುಕೂಲಕರ ಸ್ಥಾನದಲ್ಲಿದೆ, ಐದನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯ ಪರಿಣಾಮವಾಗಿ, ಆರೋಗ್ಯದ ವಿಷಯದಲ್ಲಿ ಆತಂಕ ಮತ್ತು ಅಭದ್ರತೆಯ ಭಾವನೆ ಉಂಟಾಗಬಹುದು. ಆದರೆ ಹನ್ನೊಂದನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯಿಂದಾಗಿ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.
ಕುಟುಂಬ ಜೀವನ
ಹನ್ನೊಂದನೇ ಮನೆಯಲ್ಲಿ ಗುರು ಮತ್ತು ರಾಹುವಿನ ಸಂಯೋಗದಿಂದಾಗಿ ಈ ತಿಂಗಳು ನಿಮಗೆ ಉತ್ತಮವಾಗಿರಲಿದೆ. ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ.
ಹನ್ನೊಂದನೇ ಮನೆಯಲ್ಲಿ ಗುರು ಮತ್ತು ರಾಹುಗಳ ಸಂಯೋಜನೆಯಿಂದಾಗಿ, ಈ ತಿಂಗಳು ಮದುವೆಯಾಗಲು ಯೋಜಿಸುವ ಜನರಿಗೆ ಫಲಪ್ರದವಾಗಬಹುದು. ಗುರು ಮತ್ತು ರಾಹುಗಳ ಸಂಯೋಗವಿರುವುದರಿಂದ ಮತ್ತು ರಾಶಿಚಕ್ರದ ಅಧಿಪತಿ ಬುಧ ನಾಲ್ಕನೇ ಸ್ಥಾನದಲ್ಲಿ ಅನುಕೂಲಕರ ಸ್ಥಾನದಲ್ಲಿ ಕುಳಿತಿರುವುದರಿಂದ ಈ ತಿಂಗಳು ಕೌಟುಂಬಿಕ ಜೀವನವು ನಿಮಗೆ ಉತ್ತಮವಾಗಿದೆ.ಈಗಾಗಲೇ ಕುಟುಂಬದಲ್ಲಿ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಬಗೆಹರಿಯುವ ಸಾಧ್ಯತೆ ಇದೆ.
ಪರಿಹಾರ
"ಓಂ ನಮೋ ಭಗವತೇ ವಾಸುದೇವಾಯ" ಎಂಬ ಮಂತ್ರ ಪಠಿಸಿ.
"ಓಂ ಬುಧಾಯ ನಮಃ" ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.



Click it and Unblock the Notifications











