Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಸಿಕ ಭವಿಷ್ಯ: ಸೆಪ್ಟೆಂಬರ್ ತಿಂಗಳಿನಲ್ಲಿ ಶನಿ ಪ್ರಭಾವ ಕರ್ಕ ರಾಶಿಯವರ ಮೇಲಿರಲಿದೆ
ಸೆಪ್ಟೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ಈ ತಿಂಗಳು ಕರ್ಕ ರಾಶಿಯವರಿಗೆ ಹೇಗಿರಲಿದೆ? ನಿಮ್ಮ ವೃತ್ತಿ ಜೀವನ, ವೈಯಕ್ತಿಕ ಬದುಕು, ಆರ್ಥಿಕ ಜೀವನ, ಆರೋಗ್ಯ ಜೀವನ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ:
ಕರ್ಕ ರಾಶಿಯವರ ವೃತ್ತಿ ಜೀವನ
ಕರ್ಕ ರಾಶಿಯವರು ಈ ತಿಂಗಳಿನಲ್ಲಿ ವೃತ್ತಿ ಜೀವನದಲ್ಲಿ ಒತ್ತಡವನ್ನು ಅನುಭವಿಸಬಹುದು. ವೃತ್ತಿ ಕ್ಷೇತ್ರದಲ್ಲಿ ಕೆಲಸದ ಒತ್ತಡ ಮತ್ತು ಸವಾಲುಗಳು ಎದುರಾಗಬಹುದು. 8ನೇ ಮನೆಯಲ್ಲಿ ಶನಿ ಇರುವುದರಿಂದ ಗುರಿಗಳನ್ನು ಸಾಧಿಸಲು ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. 10 ನೇ ಮನೆಯ ಅಧಿಪತಿಯಾದ ಮಂಗಳನು 3 ನೇ ಮನೆಯಲ್ಲಿ ಅನುಕೂಲಕರ ಸ್ಥಾನದಲ್ಲಿರುತ್ತಾನೆ, ಇದರಿಂದ ಉದ್ಯೋಗವನ್ನು ಬದಲಾಯಿಸಲು ಈ ಅವಧಿ ಉತ್ತಮವಾಗಿದೆ. ಮತ್ತೊಂದೆಡೆ, ಬಡ್ತಿ ಅಥವಾ ಇತರ ಪ್ರಯೋಜನಗಳನ್ನು ನಿರೀಕ್ಷಿಸುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ.

ನೀವು ವ್ಯಾಪಾರ ಕ್ಷೇತ್ರದಲ್ಲಿದ್ದರೆ ಈ ತಿಂಗಳು ಹೆಚ್ಚು ಅನುಕೂಲಕರವಲ್ಲ, ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಆದರೆ ಕಠಿಣ ಶ್ರಮವಹಿಸಿದರೆ ಫಲ ಸಿಗಬಹುದು. ಈ ಅವಧಿಯಲ್ಲಿ ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿ. ಹೊಸ ಕಾರ್ಯ ಮಾಡಿದರೆ ಬಯಸಿದ ಫಲ ಪಡೆಯಲು ಕಷ್ಟವಾಗುವುದು.
ಆರೋಗ್ಯ
ಆರೋಗ್ಯದ ಬಗ್ಗೆ ನೋಡುವುದಾದರೆ ಈ ಅವಧಿಯಲ್ಲಿ ನೀವು ಎಚ್ಚರವಹಿಸಬೇಕು, ನಾಲ್ಕನೇ ಮನೆಯಲ್ಲಿ ಕೇತು ಇರುವುದರಿಂದ, ನೀವು ನಿಮ್ಮ ತಾಯಿಯ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು, ಇದರಿಂದ ಈ ತಿಂಗಳಿನಲ್ಲಿ ಖರ್ಚು ಹೆಚ್ಚಾಗಲಿದೆ. ಶನಿಯ ಕಾರಣದಿಂದಾಗಿ ಹಲ್ಲುನೋವು ಮತ್ತು ಕಣ್ಣುಗಳಲ್ಲಿ ಸಮಸ್ಯೆ, ಪಾದಗಳಲ್ಲಿ ಸಮಸ್ಯೆಕಂಡು ಬರುವುದು.
ಕುಟುಂಬ ಜೀವನ
ಈ ಅವಧಿಯಲ್ಲಿ ಪ್ರೇಮಿಗಳ ಹಾಗೂ ವಿವಾಹಿತರ ವೈವಾಹಿಕ ಜೀವನದಲ್ಲಿ ಏರಳಿತ ಉಂಟಾಗಲಿದೆ, ಈ ತಿಂಗಳಿನಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗುವುದು. ಪ್ರೇಮ ಜೀವನದಲ್ಲಿ ವೈಫಲ್ಯಗಳನ್ನು ಎದುರಿಸಬಹುದು. ಶನಿಯು ನಿಮಗೆ ತೊಂದರೆ ನೀಡಿದರೂ ಐದನೇ ಮನೆಯ ಅಧಿಪತಿ ಮಂಗಳ ಮೂರನೇ ಮನೆಯಲ್ಲಿ ಇರುವುದರಿಂದ ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯ ಮತ್ತು ಸಂಭಾಷಣೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಬಹುದು.
ಶುಕ್ರ ಈಗ ಹಿಮ್ಮುಖ ಸ್ಥಿತಿಯಲ್ಲಿ ಇರುವುದರಿಂದ ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ. ಆಗಸ್ಟ್ 18ರ ನಂತರ ಶುಕ್ರ ಉದಯವಾಗುತ್ತಾನೆ, ಅಂದಿನಿಂದ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ.
ಪರಿಹಾರ
"ಓಂ ಚಂದ್ರಾಯ ನಮಃ" ಎಂಬ ಮಂತ್ರವನ್ನು ಪ್ರತಿದಿನ 20 ಬಾರಿ ಜಪಿಸಿ.
ಸೋಮವಾರ ಉಪವಾಸ ಮಾಡಿ ಶಿವನ ಆರಾಧಿಸಿ.



Click it and Unblock the Notifications