Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸಿಕ ಭವಿಷ್ಯ: ಶನಿಯು ಮೊದಲ ಮನೆಯಲ್ಲಿ ಇರುವಾಗ ಕುಂಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ?
ಸೆಪ್ಟೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ಈ ತಿಂಗಳು ಕುಂಭ ರಾಶಿಯವರಿಗೆ ಹೇಗಿರಲಿದೆ? ನಿಮ್ಮ ವೃತ್ತಿ ಜೀವನ, ವೈಯಕ್ತಿಕ ಬದುಕು, ಆರ್ಥಿಕ ಜೀವನ, ಆರೋಗ್ಯ ಜೀವನ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ:
ವೃತ್ತಿ ಜೀವನ
ಕುಂಭ ರಾಶಿಯವರ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ಸವಾಲಿನಿಂದ ಕೂಡಿರಲಿದೆ. ಶನಿಯು ನಿಮ್ಮ ಮೊದಲನೇ ಮನೆಯಲ್ಲಿ ಇರುವುದರಿಂದ ಈ ಅವಧಿಯಲ್ಲಿ ಸಾಕಷ್ಟು ಸವಾಲುಗಳು ಎದುರಾಗುವುದು. ಕೆಲಸದಲ್ಲಿ ತುಂಬಾನೇ ಒತ್ತಡ ಅನುಭವಿಸಬೇಕಾಗುವುದು. ಕೆಲಸದ ವಿಷಯಕ್ಕೆ ಮಾಡುವ ಪ್ರಯಾಣಗಳಿಂದ ಹೆಚ್ಚಿನ ಫಲ ಸಿಗುವುದಿಲ್ಲ. ಅದಲ್ಲದೆ ಕೆಲಸದಲ್ಲೂ. ಸ್ವಂತ ವ್ಯವಹಾರ ಮಾಡುತ್ತಿರುವವರು ಈ ಅವಧಿಯಲ್ಲಿ ನಿರೀಕ್ಷಿತ ಲಾಭ ಒಡೆಯಲು ಕಷ್ಟವಾಗುವುದು. ಅತ್ತ ಲಾಭವೂ ಇರಲ್ಲ, ಇತ್ತ ನಷ್ಟವೂ ಇರುವುದಿಲ್ಲ. ಈ ತಿಂಗಳು ಪಾಲುದಾರಿಕೆಯಲ್ಲಿ ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಡಿ.

ಆರ್ಥಿಕ ಸ್ಥಿತಿ
ಹಣಕಾಸಿನ ಬಗ್ಗೆ ನೋಡುವುದಾದರೆ ಈ ತಿಂಗಳು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಮೂರನೇ ಮನೆಯಲ್ಲಿ ಗುರು ಇರುವುದರಿಂದ ನೀವು ಸುಲಭವಾಗಿ ಹಣ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ, ನಿಮ್ಮ ವೆಚ್ಚಗಳು ತೀವ್ರವಾಗಿ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕಾಗುತ್ತದೆ , ಇಲ್ಲದಿದ್ದರೆ ಆರ್ಥಿಕ ತೊಂದರೆ ಉಂಟಾಗುವುದು. ಶುಕ್ರ ಹಿಮ್ಮುಖ ಸ್ಥಿತಿಯಲ್ಲಿ ಇರುವುದರಿಂದ ಖರ್ಚುಗಳು ಅಧಿಕವಿರಲಿದೆ. ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಉಳಿಸಲು ಸಹ ವಿಫಲರಾಗಬಹುದು. ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯ ಸಾಧ್ಯತೆಯಿರುವುದರಿಂದ ಸ್ವಂತ ವ್ಯವಹಾರವನ್ನು ನಡೆಸುತ್ತಿರುವವರು ಲಾಭ ಗಳಿಸಲು ಮತ್ತಷ್ಟು ಶ್ರಮ ಹಾಕಬೇಕು.
ಆರೋಗ್ಯ
ಆರೋಗ್ಯದ ದೃಷ್ಟಿಯಿಂದ, ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಈ ಅವಧಿಯಲ್ಲಿ ಮಾನಸಿಕ ಒತ್ತಡ, ಬೆನ್ನು ನೋವು, ಚಡಪಡಿಕೆ, ಗೊಂದಲ, ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ತಲೆನೋವು ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಬಲಿಯಾಗಬಹುದು. ನಿಮಗೆ ಶೀತ, ಕೆಮ್ಮು ಮತ್ತು ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಉತ್ತಮ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ ಮತ್ತು ಧ್ಯಾನ ಇತ್ಯಾದಿಗಳನ್ನು ಅಭ್ಯಾಸ
ಪ್ರೀತಿ, ಮದುವೆ, ಕುಟುಂಬ ಜೀವನ
ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಶನಿಯು ಮೊದಲ ಮನೆಯಲ್ಲಿ ಇರುವುದರಿಂದ ನೀವು ಈ ತಿಂಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಪ್ರೀತಿಯ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಅಶಾಂತಿಯನ್ನು ಎದುರಿಸಬಹುದು. ಇನ್ನೂ ಮದುವೆಯಾಗದೇ ಇರುವವರ ಮದುವೆ ತಡವಾಗಬಹುದು. ವಿವಾಹಿತರು, ಮೂರನೇ ಮನೆಯಲ್ಲಿ ರಾಹು ಗುರು ಸ್ಥಿತರಿರುವುದರಿಂದ ಅವರ ದಾಂಪತ್ಯ ಜೀವನದಲ್ಲಿ ಸಾಮರಸ್ಯದ ಕೊರತೆ ಕೂಡ ಕಂಡು ಬರುವುದು. ಅಲ್ಲದೆ ಈ ತಿಂಗಳು ಮದುವೆ ಮಾತುಕತೆಗೆ ಕೂಡ ಅನುಕೂಲಕರವಲ್ಲ.
ಕುಟುಂಬ ಜೀವನದಲ್ಲಿ ಕೂಡ ತಪ್ಪು ಕಲ್ಪನೆಯಿಂದಾಗಿ ಕುಡುಂಬ ಸದಸ್ಯರ ನಡುವೆ ಬಿರುಕು ಇರಬಹುದು. ಈ ಅವಧಿಯಲ್ಲಿ ನಿಮ್ಮ ಅಹಂ ಹಾಗೂ ಕೋಪ ನಿಯಂತ್ರಿಸಿದರೆ ಮನೆಯ ಪರಿಸ್ಥಿತಿ ಸುಧಾರಿಸಬಹುದು.
ಪರಿಹಾರ
ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ಅರ್ಪಿಸಿ.
ಮಂಗಳ ಹನುಮಂತನ ಪೂಜಿಸಿ
ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
