Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೆಪ್ಟೆಂಬರ್ 15-21ರವರೆಗಿನ ವಾರ ಪಂಚಾಂಗ: ಗಾಡಿ, ಆಸ್ತಿ ಖರೀದಿಗೆ ಯಾವೆಲ್ಲಾ ದಿನ ಶುಭ ಮುಹೂರ್ತವಿದೆ
ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಸಮೀಪಿಸುತ್ತಿದೆ.... ಮುದ್ದಾದ ಗಣಪನನ್ನು ತಂದು ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲು ಈಗಾಗಲೇ ಸಿದ್ಧತೆ ಶುರುವಾಗಿದೆ. ಇನ್ನು ಈ ವಾರ ಜ್ಯೋತಿಷ್ಯದ ದೃಷ್ಟಿಯಿಂದ ಕೆಲವು ಪ್ರಮುಖ ಗ್ರಹಗಳು ಕೂಡ ರಾಶಿ ಬದಲಾಯಿಸಲಿದೆ. ಸೂರ್ಯ ಕನ್ಯಾ ರಾಶಿಗೆ ಸಂಚರಿಸಲಿದೆ. ಹಬ್ಬದ ಸಮಯದಲ್ಲಿ ನೀವು ಏನಾದರೂ ಶುಭ ಕಾರ್ಯ ಮಾಡಬೇಕು ಅಥವಾ ಗಾಡಿ ಖರೀದಿಸಬೇಕು ಎಂದು ಯೋಚಿಸುತ್ತಿದ್ದರೆ ಈ ವಾರ ಶುಭ ಮುಹೂರ್ತ ಯಾವೆಲ್ಲಾ ದಿನವಿದೆ ಎಂದು ನೋಡೋಣ ಬನ್ನಿ:

ಈ ವಾರದಲ್ಲಿರುವ ಶುಭ ಮುಹೂರ್ತ
ಈ ವಾರ ವಿವಾಹ ಮುಹೂರ್ತ: ಈ ವಾರ ವಿವಾಹಕ್ಕೆ ಯಾವುದೇ ಶುಭ ಮುಹೂರ್ತವಲ್ಲ, ಭಾದ್ರಪದ ಸಮಯದಲ್ಲಿ ಮದುವೆ, ನಾಮಕರಣ ಈ ರೀತಿಯ ಯಾವುದೇ ಶುಭಕಾರ್ಯ ಮಾಡುವುದಿಲ್ಲ
ಗೃಹ ಪ್ರವೇಶ: ನೀವು ಹೊಸ ಮನೆಗೆ ಹೋಗಲು ಅಥವಾ ಹೊಸ ಮನೆ ಕಟ್ಟಿದರೆ ಅದರ ಗೃಹ ಪ್ರವೇಶಕ್ಕೆ ಯಾವುದೇ ಶುಭ ಮುಹೂರ್ತವಲ್ಲ.
ಆಸ್ತಿ ಖರೀದಿಸಲು: ನೀವು ಆಸ್ತಿ ಖರೀದಿಸಲು ಬಯಸುವುದಾದರೆ ಈ ವಾರ 21ನೇ ತಾರೀಕು ಶುಭ ಮುಹೂರ್ತವಿದೆ ( ಬೆಳಗ್ಗೆ 06:27ರಿಂದ 03:35ರವರೆಗೆ)
ಗಾಡಿ ಖರೀದಿಸಲು ಮುಹೂರ್ತ: ನೀವು ಗಾಡಿ ಖರೀದಿಸಲು ಈ ವಾರ ಈ ದಿನಾಂಕಗಳಲ್ಲಿ ಶುಭ ಮುಹೂರ್ತವಿದೆ
ಸೆಪ್ಟೆಂಬರ್ 17
ಸಮಯ ( ಬೆಳಗ್ಗೆ 11:08ರಿಂದ 06:26ರವರೆಗೆ)
ಸೆಪ್ಟೆಂಬರ್ 18
ಸಮಯ ಬೆಳಗ್ಗೆ 06:26ರಿಂದ ಮಧ್ಯಾಹ್ನ 12:39ರವರೆಗೆ
ಸೆಪ್ಟೆಂಬರ್ 20
ಮಧ್ಯಾಹ್ನ 02:59ರಿಂದ ಸೆಪ್ಟೆಂಬರ್ 21 ಬೆಳಗ್ಗೆ 06:27ರವರೆಗೆ
ಈ ವಾರ ಯಾವೆಲ್ಲಾ ಗ್ರಹಗಳ ಸಂಚಾರವಿದೆ?
ಗ್ರಹಗಳ ರಾಶಿ ಬದಲಾವಣೆ ನಮ್ಮ ಮೇಲೆ ತುಂಬಾ ಪ್ರಭಾವ ಬೀರಲಿದೆ. ಈ ಗ್ರಹಗಳು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಅದೃಷ್ಟದ ಬೆಂಬಲವಿರುತ್ತದೆ, ಈ ಅವಧಿ ನಮಗೆ ಅನುಕೂಲಕರವಾಗಿರುತ್ತದೆ, ಅದೇ ದುರ್ಬಲ ಸ್ಥಾನದಲ್ಲಿದ್ದರೆ ತುಂಬಾನೇ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದಿಕಶಾಸ್ತ್ರ ಹೇಳುತ್ತದೆ.
ಸೂರ್ಯ ಸಂಚಾರ
ಈ ವಾರ ಸೂರ್ಯ ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಸೆಪ್ಟೆಂಬರ್ 17ರಂದು ಮಧ್ಯಾಹ್ನ 01:42ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸಲಿದೆ.
ಈ ವಾರ ಯಾವೆಲ್ಲಾ ಹಬ್ಬಗಳಿವೆ
ಸಂವೇದ ಉಪಕರ್ಮ (ಸೆಪ್ಟೆಂಬರ್ 16, ಶನಿವಾರ): ಭಾದ್ರಪದ ಮಾಸದ ಶುಕ್ಲ ಪಕ್ಷದ ಮೊದಲನೇ ದಿನವನ್ನು ಸಂವೇದ ಉಪಕರ್ಮವನ್ನು ಆಚರಿಸಲಾಗುವುದು. ಈ ದಿನ ಧಾರ್ಮಿಕ ಕಾರ್ಯಗಳನ್ನು ಮಾಡಲು, ಹೊಸ ಕಾರ್ಯ ಪ್ರಾರಂಭಿಸಲು ಶುಭವಾಗಿದೆ.
ವರಹ ಜಯಂತಿ (ಸೆಪ್ಟೆಂಬರ್ 17): ಈ ದಿನ ವಿಷ್ಣು ವರಹನ ಅವತಾರವೆತ್ತಿದ ಎಂದು ಹೇಳಲಾಗುವುದು. ಈ ದಿನ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು.
ಗಣೇಶ ಚತುರ್ಥಿ (ಸೆಪ್ಟೆಂಬರ್ 19): ಈ ದಿನ ಗಣೇಶನನ್ನು ಪ್ರತಿಷ್ಠಾಪಿಸಿ 10 ದಿನಗಳವರೆಗೆ ವಿಜೃಂಭಣೆಯಿಂದ ಪೂಜೆ ಮಾಡಿ 10ನೇ ದಿನ ವಿಸರ್ಜನೆ ಮಾಡಲಾಗುವುದು.
ಈ ವಾರ ಯಾವ ಸಮಯ ಒಳ್ಳೆಯದಲ್ಲ
ಸೆಪ್ಟೆಂಬರ್ 16: ಬೆಳಗ್ಗೆ 09:30ರಿಂದ 11:02ರವರೆಗೆ
ಸೆಪ್ಟೆಂಬರ್ 17: ಸಂಜೆ 05:08ರಿಂದ 06:40ರವರೆಗೆ
ಸೆಪ್ಟೆಂಬರ್ 18: ಬೆಳಗ್ಗೆ 07:58ರಿಂದ 09:30ರವರೆಗೆ
ಸೆಪ್ಟೆಂಬರ್ 18: ಮಧ್ಯಾಹ್ನ 03:35ರಿಂದ 05:06ರವರೆಗೆ
ಸೆಪ್ಟೆಂಬರ್ 20: ಮಧ್ಯಾಹ್ನ 12:32ರಿಂದ 02:03ರವರೆಗೆ
ಸೆಪ್ಟೆಂಬರ್ 21: ಬೆಳಗ್ಗೆ 02:03ರಿಂದ 03:34ರವರೆಗೆ



Click it and Unblock the Notifications
