Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸೆಪ್ಟೆಂಬರ್ 10ಕ್ಕೆ ರವಿ ಪುಷ್ಯ ಯೋಗ: ಈ ಕಾರ್ಯಗಳಿಗೆ ತುಂಬಾನೇ ಶುಭ
ವೈದಿಕ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ 27 ನಕ್ಷತ್ರಪುಂಜಗಳಲ್ಲಿ ಪುಷ್ಯ ನಕ್ಷತ್ರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪುಷ್ಯ ನಕ್ಷತ್ರವು ಭಾನುವಾರದಂದು ಬಂದರೆ ಅದನ್ನು ರವಿ ಪುಷ್ಯ ನಕ್ಷತ್ರ ಎಂದು ಕರೆಯಲಾಗುವುದು. ಗುರುವಾರದಂದು ಬೀಳುವ ಪುಷ್ಯ ನಕ್ಷತ್ರವನ್ನು ಗುರು ಪುಷ್ಯ ನಕ್ಷತ್ರ ಎಂದು ಕರೆಯಲಾಗುವುದು. ಈ ಪುಷ್ಯ ನಕ್ಷತ್ರದ ಸಮಯ ಅತ್ಯಂತ ಶುಭವಾಗಿರುವುದರಿಂದ ಈ ಯೋಗದಲ್ಲಿ ವಾಹನ, ಮನೆ, ಚಿನ್ನ, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದು ತುಂಬಾನೇ ಶುಭ.
ಈ ಕಾರಣಕ್ಕೆ ರವಿಪುಷ್ಯ ಹಾಗೂ ಗುರು ಪುಷ್ಯದ ದಿನದಂದು ಹೊಸ ಉದ್ಯಮ ಪ್ರಾರಂಭಿಸುವುದು, ಅಂಗಡಿ ಪ್ರಾರಂಭಿಸುವುದು ಮಾಡುತ್ತಾರೆ.ಈ ಸೆಪ್ಟೆಂಬರ್ 10ಕ್ಕೆ ರವಿ ಪುಷ್ಯ ಯೋಗವಿದೆ, ಅದೇ ದಿನದಂದು ಅಜ ಏಕಾದಶಿ ಕೂಡ ಬಂದಿದೆ. ಅಜ ಏಕಾದಶಿಯಂದು ಶ್ರೀ ವಿಷ್ಣುವನ್ನು ಪೂಜಿಸಲಾಗುವುದು.

ರವಿ ಪುಷ್ಯ ನಕ್ಷತ್ರ ಎಂದರೇನು?
27 ನಕ್ಷತ್ರಪುಂಜಗಳಲ್ಲಿ ರವಿ ಪುಷ್ಯ ನಕ್ಷತ್ರ 8ನೇ ಸ್ಥಾನದಲ್ಲಿದೆ. ವೈದಿಕ ಶಾಸ್ತ್ರದ ಪ್ರಕಾರ ಈ ನಕ್ಷತ್ರದ ರಚನೆಯು ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಶನಿಯು ರವಿ ಪುಷ್ಯ ನಕ್ಷತ್ರದ ಅಧಿಪತಿ, ಅದರ ಸ್ವಭಾವವು ಗುರುವಿನಂತಿದೆ. ಈ ಯೋಗವು ಸಂತೋಷ, ಸಮೃದ್ಧಿ, ಕೀರ್ತಿ ಮತ್ತು ಯಶಸ್ಸನ್ನು ತರುತ್ತದೆ, ಆದ್ದರಿಂದ ಈ ಯೋಗದಲ್ಲಿ ಏನಾದರು ಶುಭ ಕಾರ್ಯ ಮಾಡಲು ಜನರು ಇಚ್ಛೆ ಪಡುತ್ತಾರೆ.
ಪುಷ್ಯ ನಕ್ಷತ್ರದ ದಿನದಂದು ಇದನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ರವಿ ಪುಷ್ಯ ನಕ್ಷತ್ರದ ದಿನ ಈ ಮೂರು ರಾಶಿಯವರಿಗೆ ಅತ್ಯಂತ ಶುಭವಾಗಿದೆ ನೋಡಿ:
ಮಿಥುನ ರಾಶಿ: ರವಿ ಪುಷ್ಯ ನಕ್ಷತ್ರವು ಮಿಥುನ ರಾಶಿಯವರಿಗೆ ತುಂಬಾ ಶುಭವಾಗಿದೆ. ನಿಮಗೆ ಶ್ರೀ ವಿಷ್ಣು ಹಾಗೂ ಲಕ್ಷ್ಮಿ ವಿಶೇಷ ಅನುಗ್ರಹ ಉಂಟಾಗಲಿದೆ. ಈ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ, ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹಣದ ಸ್ಥಿತಿ ಚೆನ್ನಾಗಿರಲಿದೆ. ಹೊಸ ಉದ್ಯಮ ಅಥವಾ ಹೊಸ ಯೋಜನೆಗೆ ಕೈ ಹಾಕುವ ಆತ್ಮವಿಶ್ವಾಸ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಸಂವಹನದಿಂದ ಕೂಡ ನೀವು ಇತರರನ್ನು ಸೆಳೆಯಲು ಸಾಧ್ಯವಾಗುವುದು.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ರವಿ ಪುಷ್ಯ ನಕ್ಷತ್ರ ಅದೃಷ್ಟವನ್ನು ತರಲಿದೆ. ಈ ಯೋಗ ನಿಮಗೆ ಲಾಭವನ್ನು ತರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ತಮ್ಮ ಕೆಲಸದಲ್ಲಿ ಎದುರಿಸುತ್ತಿರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಎ ನೀವು ಹೂಡಿಕೆ ಮಾಡಬೇಕೆಂದಿದ್ದರೆ ಆಸ್ತಿ, ಮನೆಗೆ ಹೂಡಿಕೆ ಮಾಡಲು ಈ ದಿನ ತುಂಬಾನೇ ಶುಭವಾಗಿದೆ. ವಾಹನಗಳು ಮತ್ತು ಆಸ್ತಿಯನ್ನು ಸಹ ಖರೀದಿಸಬಹುದು. ಪೆಂಡಿಂಗ್ ಆಗಿರುವ ಕೆಲಸಗಳು ಮತ್ತೆ ಶುರುವಾಗಲಿದೆ.
ತುಲಾ ರಾಶಿ: ರವಿ ಪುಷ್ಯ ನಕ್ಷತ್ರದಿಂದ ತುಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳು ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವುದರಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ, ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುವುದು.



Click it and Unblock the Notifications